For Quick Alerts
ALLOW NOTIFICATIONS  
For Daily Alerts

ಚೀನಾದಲ್ಲಿ ಮಂಕಿ ವೈರಸ್ ಭೀತಿ: ಇದರ ಲಕ್ಷಣಗಳೇನು, ಚಿಕಿತ್ಸೆ ಇದೆಯೇ?

|

ಚೀನಾದಲ್ಲಿ ಏನೇ ಕಾಯಿಲೆ ಬಂದ್ರೆ ಇತರ ದೇಶಗಳಿಗೆ ಆತಂಕ ಕಾಡುವುದು ಸಹಜ. ಏಕೆಂದರೆ ಜಗತ್ತನ್ನು ಭಯಂಕಾರವಾಗಿ ಕಾಡಿದ ಕೊರೊನಾವೈರಸ್‌ ಹುಟ್ಟಿಕೊಂಡಿದ್ದೇ ಚೀನಾದ ವುಹಾನ್‌ನಲ್ಲಿ.

ಇದೀಗ ಚೀನಾದಲ್ಲಿ ಹೊಸ ವೈರಸ್‌ ಕಂಡು ಬಂದಿದ್ದು ಅದು ಮಂಕಿ ವೈರಸ್‌ ಆಗಿದೆ. ಇದನ್ನು ಬಿ ವೈರಸ್‌ (BV) ಎಂದು ಕರೆಯಲಾಗಿದೆ. ಅಲ್ಲದೆ ಇದೀಗ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಈ ವೈರಸ್‌ಗೆ ಚೀನಾ ದೇಶದಲ್ಲೇ ಮೊಟ್ಟ ಮೊದಲಿಗೆ ಒಬ್ಬರು ಪಶುವೈದ್ಯರು ಬಲಿಯಾಗಿದ್ದಾರೆ.

2021 ಮಾರ್ಚ್‌ನಲ್ಲಿ ಮೊದಲಿಗೆ ಪತ್ತೆಯಾದ ವೈರಸ್‌
ಚೀನಾದ ಸಿಡಿಸಿ ಪ್ರಕಾರ ಈ ವೈರಸ್‌ ಮಾರ್ಚ್‌ನಲ್ಲಿ ಪತ್ತೆಯಾಗಿದೆ. ಸರ್ಜನ್‌ ಮಂಕಿ ವೈರಸ್‌ ತಗುಲಿ ಹಲವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗದೆ ಮೇ ತಿಂಗಳಿನಲ್ಲಿ ಆ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ.
ರೋಗಿಯ ರಕ್ತ, ಸ್ವ್ಯಾಬ್‌ ಹಾಗೂ ಪ್ಲಾಸ್ಮವನ್ನು ಸಂಗ್ರಹಿಸಿ ಚೀನಾದ ಸಿಡಿಸಿಯ IVDC(Viral Disease Control and Prevention) ಪರೀಕ್ಷೆಗೆ ಕಳುಹಿಸಲಾಗಿತ್ತು, ಆಗ ಆ ಸರ್ಜನ್‌ಗೆ ಮಂಕಿ ಬಿವಿ ವೈರಸ್‌ ಎಂದು ಗೊತ್ತಾಗಿದೆ.

ಮಂಕಿ ವೈರಸ್‌ (ಬಿವಿ) ಎಂದರೇನು?

ಮಂಕಿ ವೈರಸ್‌ (ಬಿವಿ) ಎಂದರೇನು?

ಮಂಕಿ ಬಿವಿ ವೈರಸ್‌ ವಯಸ್ಸಾದ ಮಂಗದ ಜೀನ್ macaquesನಿಂದ ಉಂಟಾಗುವುದು. ಈ ವೈರಸ್‌ ಮಂಗಗಳಿಗೆ, ಚಿಂಪಾಂಜಿಗಳಿಗೆ ಸೋಂಕಿದರೆ ಅವುಗಳು ಸಾವನ್ನಪ್ಪುತ್ತವೆ. ಬಿ ವೈರಸ್‌ ಅನ್ನು ಸಾಮಾನ್ಯವಾಗಿ ಹರ್ಪೀಸ್ ಬಿ, ಮಂಕಿ ಬಿ ವೈರಸ್, ಹರ್ಪಿಸ್ವೈರಸ್ ಸಿಮಿಯ ಹಾಗೂ ಹರ್ಪೀಸ್‌ವೈರಸ್ ಬಿ ಎಂದು ಕರೆಯಲಾಗುವುದು.

ಯುನೈಟೆಡ್ ಸ್ಟೇಟ್‌ನ ಸಿಡಿಸಿ ಪ್ರಕಾರ ಬಿ ವೈರಸ್‌ ಮನುಷ್ಯರಿಗೆ ತಗುಲುವುದು ತುಂಬಾ ಕಡಿಮೆ. 1932ರಲ್ಲಿ ಈ ವೈರಸ್‌ ಕಂಡು ಬಂದಿತ್ತು. ಆಗ 50 ಜನರಿಗೆ ಸೋಂಕು ತಗುಲಿತ್ತು, ಅದರಲ್ಲಿ 21 ಜನರು ಸಾವನ್ನಪ್ಪಿದ್ದರು.

 ಈ ಕಾಯಿಲೆ ಮನುಷ್ಯರಿಂದ-ಮನುಷ್ಯರಿಗೆ ಹರಡುವುದೇ?

ಈ ಕಾಯಿಲೆ ಮನುಷ್ಯರಿಂದ-ಮನುಷ್ಯರಿಗೆ ಹರಡುವುದೇ?

ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬುವುದರ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. 1932ರಲ್ಲಿ 50 ಜನರಲ್ಲಿ ಈ ವೈರಸ್‌ ಕಂಡು ಬಂದಿತ್ತು, ಆದರೆ ಅವರಿಗೆಲ್ಲಾ ಮಂಗ ಪರಿಚಿದ ಕಾರಣ, ಕಚ್ಚಿದ ಕಾರಣ ಅಥವಾ ಅದರ ದೇಹ ದ್ರವ ಇವರನ್ನು ತ್ವಚೆಯನ್ನು ತಾಗಿ ಬಂದಿತ್ತು.

ಈ ವೈರಸ್‌ ಎಂಜಲು, ಮೂತ್ರ, ಮೆದುಳು ಹಾಗೂ ಬೆನ್ನಿನ ಮೂಳೆಗಳಲ್ಲಿ ಕಂಡು ಬರುವುದು. ಅಲ್ಲದೆ ಈ ವೈರಸ್‌ ನೆಲದ ಮೇಲೆ ಅದರಲ್ಲೂ ತಂಪಾದ ನೆಲದ ಮೇಲೆ ಇದ್ದರೆ ಗಂಟೆಗಟ್ಟಲೆ ಜೀವಂತವಾಗಿರುತ್ತದೆ. ಈ ಕಾಯಿಲೆ ಲ್ಯಾಬ್‌ನಲ್ಲಿ ಕೆಲಸ ಮಾಡುವವರಿಗೆ, ಪಶು ವೈದ್ಯರಿಗೆ ತಗುಲುವ ಸಾಧ್ಯತೆ ಹೆಚ್ಚು

ಮಂಕಿ ಬಿ ವೈರಸ್‌ ಲಕ್ಷಣಗಳೇನು?

ಮಂಕಿ ಬಿ ವೈರಸ್‌ ಲಕ್ಷಣಗಳೇನು?

ಕೊರೊನಾವೈರಸ್‌ ರೀತಿಯೇ ಮಂಕಿ ಬಿ ವೈರಸ್‌ ತಾಗಿದಾಗ ಜ್ವರ, ಮೈಕೈ ನೋವು, ತಲೆಸುತ್ತು ಕಂಡು ಬರುವುದು. ಇನ್ನು ಕಜ್ಜಿ ಉಂಟಾಗಬಹುದು, ಜೊತೆಗೆ ಉಸಿರಾಟದಲ್ಲಿ ತೊಂದರೆ, ವಾಂತಿ, ಕಿಬ್ಬೊಟ್ಟೆ ನೋವು, ಬಿಕ್ಕಳಿಕೆ ಮುಂತಾದ ಸಮಸ್ಯೆ ಕಂಡು ಬರುವುದು.

ನಂತರ ಮೆದುಳಿನಲ್ಲಿ ಊತ, ಮೆದುಳಿಗೆ ಹಾನಿ, ಬೆನ್ನು ಮೂಳೆಯಲ್ಲಿ ತೊಂದರೆ ಉಂಟಾಗುವುದು. ರೋಗ ಲಕ್ಷಣಗಳು ಗಂಭೀರವಾದರೆ ವ್ಯಕ್ತಿ ಸಾವನ್ನಪ್ಪಬಹುದು. ಸಿಡಿಸಿ ಪ್ರಕಾರ ಈ ವೈರಸ್ ತಗುಲಿದಾಗ ಕೆಲವರಿಗೆ ಒಂದೆರಡು ದಿನವಿದ್ದರೆ ಇನ್ನು ಕೆಲವರಿಗೆ 3 ವಾರಗಳಿಗೂ ಅಧಿಕ ಸಮಯ ಇರುತ್ತದೆ.

 ಇದಕ್ಕೆ ಚಿಕಿತ್ಸೆಯೇನು?

ಇದಕ್ಕೆ ಚಿಕಿತ್ಸೆಯೇನು?

ಮಂಕಿ ಬಿ ವೈರಸ್‌ಗೆ ಯಾವುದೇ ಲಸಿಕೆ ಇಲ್ಲ. ಆ್ಯಂಟಿವೈರಲ್‌ ಔಷಧಿಗಳನ್ನೇ ಈ ಕಾಯಿಲೆಗೆ ನೀಡಲಾಗುವುದು.

ನಿಮಗೆ ಮಂಗ ಪರಚಿದರೆ ಅಥವಾ ಕಚ್ಚಿದರೆ ಏನು ಮಾಡಬೇಕು?

* ಆ ಗಾಯವನ್ನು ನೀರು ಹಾಕಿ ತೊಳೆದು ಸೋಪು ಹಚ್ಚಿ 15 ನಿಮಿಷ ತಿಕ್ಕಿ.

* ಈಗ ಹರಿಯುವ ನೀರಿನಲ್ಲಿ (ನಲ್ಲಿ) ಆ ಗಾಯವನ್ನು 15-20 ನಿಮಿಷ ಹಿಡಿಯಿರಿ.

* ನಂತರ ಕೂಡಲೇ ಚಿಕಿತ್ಸೆ ಪಡೆಯಿರಿ.

English summary

China Reports First Human Death From Monkey B Virus; Know What It Is, Symptoms And Treatment In Kannada

China reports first human death from Monkey B Virus; Know what it is, symptoms and treatment in Kannada read on...
X
Desktop Bottom Promotion