For Quick Alerts
ALLOW NOTIFICATIONS  
For Daily Alerts

ಗರ್ಭಕಂಠದ ಕ್ಯಾನ್ಸರ್‌ ಸಂಪೂರ್ಣ ತಡೆಗಟ್ಟಲು ಭಾರತದಲ್ಲಿಯೇ ತಯಾರಾಗಿದೆ ಸರ್ವಿಕಲ್ ಕ್ಯಾನ್ಸರ್ ವ್ಯಾಕ್ಸಿನ್, ಬೆಲೆಯೆಷ್ಟು?

|

ಭಾರತದ ಮೊದಲ ಸರ್ವಿಕಲ್‌ ಕ್ಯಾನ್ಸರ್ (ಗರ್ಭಕಂಠದ) ವ್ಯಾಕ್ಸಿನ್ ಮಾರುಕಟ್ಟೆಗೆ ಬರಲಿದೆ ಎಂದು ಸೆಪ್ಟೆಂಬರ್‌ 1ರಂದು ಘೋಷಣೆ ಮಾಡಲಾಗಿದೆ. ಸೆರಂ ಇನ್ಸಿಟ್ಯೂಟ್‌ ಆಫ್‌ ಇಂಡಿಯಾ (SII) ಈ ವ್ಯಾಕ್ಸಿನ್‌ ಕಂಡು ಹಿಡಿದಿದ್ದು ದಿ ಡ್ರಗ್‌ ಕಂಟ್ರೋಲರ್‌ ಜನರಲ್‌ ಆಫ್‌ ಇಂಡಿಯಾ (DCGI)ದಿಂದ ಅನುಮತಿ ದೊರಕಿದೆ. ಇದೀಗ ಈ ಲಸಿಕೆಯನ್ನು ಬಿಡುಗಡೆ ಮಾಡುವ ಮೂಲಕ ಭಾರತದ ವೈದ್ಯಕೀಯ ರಂಗದಲ್ಲಿ ಕ್ರಾಂತಿ ಉಂಟಾಗಲಿದೆ.

ಹೆಚ್ಚಾಗಿ ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವ ಮಹಿಳೆಯರು

ಹೆಚ್ಚಾಗಿ ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವ ಮಹಿಳೆಯರು

ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ಪ್ರಮುಖವಾಗಿದೆ. ಬಾರತದಲ್ಲಿ ಸರ್ವಿಕಲ್‌ ಕ್ಯಾನ್ಸರ್‌ ಹೆಚ್ಚಾಗಿ 15-44 ವರ್ಷದವರಲ್ಲಿ ಕಂಡು ಬರುತ್ತಿದೆ.

ಈ ಲಸಿಕೆ ಭಾರತದ ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಪ್ರಮುಖವಾಗಿದೆ. ಏಕೆಂದರೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಇದು ಪ್ರಮುಖದ ಹೆಜ್ಜೆಯಾಗಿದೆ. ಈ ಲಸಿಕೆ ಪಡೆಯುವುದರ ಮೂಲಕ ಶೇ. 85-90ರಷ್ಟು ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟಬಹುದಾಗಿದೆ.

ಹದಿಹರೆಯದ ಹೆಣ್ಣು ಮಕ್ಕಳಿಗೆ ಸರ್ವಿಕಲ್‌ ಕ್ಯಾನ್ಸರ್ ಲಸಿಕೆ

ಹದಿಹರೆಯದ ಹೆಣ್ಣು ಮಕ್ಕಳಿಗೆ ಸರ್ವಿಕಲ್‌ ಕ್ಯಾನ್ಸರ್ ಲಸಿಕೆ

ಈ ಲಸಿಕೆಯನ್ನು ಹದಿಹರೆಯದ ಪ್ರಾಯದಲ್ಲಿ ಹೆಣ್ಮಕ್ಕಳಿಗೆ ನೀಡಿದರೆ ಅವರನ್ನು ಸೋಂಕಿನಿಂದ ತಡೆಗಟ್ಟಿ ಮುಂದೆ 30 ವರ್ಷಗಳಲ್ಲಿ ಈ ಗರ್ಭಗಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ.

ಆರೋಗ್ಯ ಇಲಾಖೆ qHPVಯನ್ನು 9-14 ವರ್ಷದ ಹೆಣ್ಣು ಮಕ್ಕಳಿಗೆ ನೀಡಲು ಮುಂದಾಗಿದ್ದು ಇನ್ನು 6 ತಿಂಗಳಲ್ಲಿ ಲಸಿಕೆ ದೊರೆಯಲಿದೆ.

2022 ಡಿಸೆಂಬರ್‌ನಲ್ಲಿ 1 ಕೋಟಿ qHPV ಲಸಿಕೆ ನೀಡುವುದಾಗಿ SII ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ 2019ರವರೆಗಿನ ಅಂಕಿ ಅಂಶ ನೋಡಿದಾಗ 41, 91,000 ಮಹಿಳೆಯರು ಗರ್ಭಕಂಠದ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.

ಬೆಲೆ ಎಷ್ಟಿರಲಿದೆ?

ಬೆಲೆ ಎಷ್ಟಿರಲಿದೆ?

ಸರ್ವಿಕಲ್‌ ಕ್ಯಾನ್ಸರ್ ಲಸಿಕೆಯ ಬೆಲೆ ₹200-400ರ ಒಳಗೆ ಇರಬಹುದು ಎಂದು ಹೇಳಲಾಗುತ್ತಿದೆ. ಆದರೆ ಇದರ ಬೆಲೆಯನ್ನು ಇನ್ನೂ ನಿಗದಿ ಮಾಡಿಲ್ಲ. ಪ್ರತಿಯೊಬ್ಬರಿಗೂ ಕೊಳ್ಳಲು ಅನುಕೂಲಕರವಾಗುವಂಥ ಬೆಲೆಯನ್ನು ನಿಗದಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಭಾರತದಲ್ಲಿ ₹2,800ಬೆಲೆಯ uadrivalent vaccine ಹಾಗೂ ₹3,299 ಬೆಲೆಯ bivalent vaccine ಲಭ್ಯವಿದ್ದು ಇದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬದವರಿಗೆ ಸ್ವಲ್ಪ ದುಬಾರಿಯಾಗಿದೆ.

ಇದೀಗ ಭಾರತದಲ್ಲಿ ತಯಾರಾದ ಲಸಿಕೆ ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣ ಹೋಗಲಾಡಿಸುವ ಭರವಸೆ ತಂದಿದೆ.

English summary

Cervical Cancer Vaccine: All you need to know about India's self-developed HPV vaccine in Kannada

Cervical Cancer Vaccine: How This Vaccine Helps To prevent Cervical Cancer In future, read on....
Story first published: Friday, September 2, 2022, 13:58 [IST]
X
Desktop Bottom Promotion