For Quick Alerts
ALLOW NOTIFICATIONS  
For Daily Alerts

ಮೂತ್ರಸೋಂಕು (UTI)ಗೆ ಪರಿಣಾಮಕಾರಿಯಾದ ಮನೆಮದ್ದುಗಳಿವು

|

ಮೂತ್ರ ಸೋಂಕು ಅಥವಾ UTIಎಂಬುವುದು ಯಾರಿಗೆ ಯಾವಾಗ ಬೇಕಾದರೂ ಬರಬಹುದು. ಕೆಲವರಿಗಂತೂ ಈ ಸಮಸ್ಯೆ ಆಗಾಗ ಕಾಡಲಾರಂಭಿಸುತ್ತದೆ. ಅಧ್ಯಯನಗಳ ಪ್ರಕಾರ ಅರ್ಧಕ್ಕೆ ಅರ್ಧದಷ್ಟು ಮಹಿಳೆಯರಲ್ಲಿ ಮೂತ್ರ ಸೋಂಕು ಕಂಡು ಬರುವುದು,.

ಮೂತ್ರ ಸೋಂಕು ಉಂಟಾದಾಗ ತುಂಬಾ ಕಿಬ್ಬೊಟ್ಟೆ ನೋವು ಉಂಟಾಗುವುದು. ಕಿಡ್ನಿ, ಗರ್ಭಕೋಶ, ಬ್ಲೇಡರ್‌ ಹೀಗೆ ಎಲ್ಲಾ ಕಡೆ ನೋವು ಉಂಟಾಗುವುದು.

ಸೆಲೆಬ್ರಿಟಿ ನ್ಯೂಟ್ರಿಷಿಯನಿಸ್ಟ್ ಆಗಿರುವ ರುಜುತಾ ದ್ವಿವೇಕರ್‌ ಮೂತ್ರ ಸೋಂಕಿಗೆ ಕೆಲವೊಂದು ಮನೆಮದ್ದುಗಳನ್ನು ಪರಿಹಾರವಾಗಿ ನೀಡಿದ್ದಾರೆ ನೋಡಿ:

ಹಾರ್ಮೋನ್‌ಗಳ ಸಮತೋಲನ ಹಾಗೂ ಶುಚಿತ್ವ ಮುಖ್ಯ

ಹಾರ್ಮೋನ್‌ಗಳ ಸಮತೋಲನ ಹಾಗೂ ಶುಚಿತ್ವ ಮುಖ್ಯ

ಮುಂಬಯಿ ಮೂಲದ ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್ ರುಜುತಾ ದ್ವಿವೇಕರ್ ಮೂತ್ರ ಸೋಂಕು ತಡೆಗಟ್ಟಲು ಮುಖವಾಗಿ ಹಾರ್ಮೋನ್‌ಗಳು ಹಾಗೂ ಶುಚಿತ್ವ ಮುಖ್ಯ ಎಂದಿದ್ದಾರೆ. ಪಬ್ಲಿಕ್ ಟಾಯ್ಲೆಟ್ ಬಳಸಿದಾಗ ಮೂತ್ರ ಸೋಂಕು ಹೆಚ್ಚಾಗಿ ಕಂಡು ಬರುವುದು, ಹಾಗಾಗಿ ಆದಷ್ಟೂ ಶುಚಿಯಾದ ಟಾಯ್ಲೆಟ್‌ ಬಳಸಬೇಕು. ಇದರ ಜೊತೆಗೆ ಈ ರೀತಿ ಮಾಡಿದರೆ ಮೂತ್ರ ಸೋಂಕು ತಡೆಗಟ್ಟಲು ಸಹಕಾರಿ.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ. ಹೆಚ್ಚು ನೀರು ಕುಡಿದಷ್ಟು ಮೂತ್ರ ಸೋಂಕಿನ ಅಪಾಯ ಕಡಿಮೆಯಾಗುವುದು. ದಿನದಲ್ಲಿ 8 ಲೋಟ ನೀರು ಕಡ್ಡಾಯ ಕುಡಿಯಿರಿ. ಮೂತ್ರ ಸೋಂಕು ಉಂಟಾದಾಗ ಜೀರಿಗೆ ನೀರು ಕುಡಿಯಿರಿ.

ನೀರಾ ಕುಡಿಯಿರಿ

ನೀರಾ ಕುಡಿಯಿರಿ

ಮೂತ್ರ ಸೋಂಕಿಗೆ ಅತ್ಯುತ್ತಮವಾದ ಮನೆಮದ್ದು. ಈಚಲು ಮರದಿಂದ ತೆಗೆದ ನೀರಾ ತುಂಬಾ ಒಳ್ಳೆಯದು.

ಈ ಪಾನೀಯಗಳನ್ನು ಟ್ರೈ ಮಾಡಿ

ಈ ಪಾನೀಯಗಳನ್ನು ಟ್ರೈ ಮಾಡಿ

ಎಳನೀರು, ನಿಂಬು ಪಾನೀಯ, ಕಬ್ಬು ಜ್ಯೂಸ್‌, ಪುನರ್ಪುಳಿ, ಕೋಕಂ ಜ್ಯೂಸ್, ನೆಲ್ಲಿಕಾಯಿ ಜ್ಯೂಸ್ ಇವೆಲ್ಲಾ ಮೂತ್ರ ಸೋಂಕು ಕಡಿಮೆ ಮಾಡಲು ಸಹಕಾರಿ. ಈ ರೀತಿಯ ಪಾನೀಯಗಳನ್ನು ಕುಡಿಯುವುದರಿಂದ ಇವುಗಳಲ್ಲಿರುವ ವಿಟಮಿನ್‌ಗಳು, ಖನಿಜಾಂಶಗಳು, ಎಲೆಕ್ಟ್ರೋಲೈಟ್ಸ್, ಆ್ಯಂಟಿಆಕ್ಸಿಡೆಂಟ್ ಹೊಟ್ಟೆ ನೋವು ಕಡಿಮೆ ಮಾಡುತ್ತದೆ. ಇವುಗಳನ್ನು ಮಧ್ಯಾಹ್ನಕ್ಕಿಂತ ಮುಂಚೆ ಕುಡಿಯಿರಿ.

ಗಂಜಿ ತಿನ್ನಿ

ಗಂಜಿ ತಿನ್ನಿ

ಗಂಜಿ ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದರಲ್ಲಿರುವ ಪ್ರೀಬಯೋಟಿಕ್‌ ಮೂತ್ರ ಸೋಂಕನ್ನು ಕಡಿಮೆ ಮಾಡುವುದು.

ನಿಮ್ಮ ಆಹಾರಕ್ರಮದಲ್ಲಿ ಹುರುಳಿಕಾಳು ಹೆಚ್ಚು ಸೇರಿಸಿ ಮಹಿಳೆಯರು ತಮ್ಮ ಆಹಾರಕ್ರಮದಲ್ಲಿ ಹುರುಳಿಕಾಳನ್ನು ಸೇರಿಸುವುದರಿಂದ ಮೂತ್ರ ಓಂಕನ್ನು ತಡೆಗಟ್ಟಬಹುದು. ಇದು ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುತ್ತದೆ.

ಪಾದಗಳಿಗೆ ತುಪ್ಪ ಹಚ್ಚಿ

ಪಾದಗಳಿಗೆ ತುಪ್ಪ ಹಚ್ಚಿ

ರುಜುತಾ ಅವರು ಮಲಗುವ ಮುಂಚೆ 2 ಹನಿ ತುಪ್ಪ ತೆಗೆದು ಪಾದಗಳಿಗೆ ಮಸಾಜ್‌ ಮಾಡಿದರೆ ಮೂತ್ರ ಸೋಂಕು ಕಡಿಮೆಯಾಗುವುದು ಎಂದು ತಿಳಿಸಿದ್ದಾರೆ.

ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿ:

ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿ:

ನ್ಯೂಟ್ರಿಷಿಯನಿಸ್ಟ್ ಪ್ರಕಾರ ಹಾರ್ಮೋನ್‌ಗಳ ಅಸಮತೋಲನ ಮೂತ್ರ ಸೋಂಕಿಗೆ ಕಾರಣವಾಗಿದೆ. ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದರೆ ಈ ಸಮಸ್ಯೆ ತಡೆಗಟ್ಟಬಹುದು.

* ಮೂತ್ರ ವಿಸರ್ಜನೆಗ ಮುನ್ನ ಹಾಗೂ ನಂತರ ಕೈಗಳನ್ನು ತೊಳೆಯುವುದು.

* ಶುಚಿಯಾದ ಅಂಡರ್‌ವೇರ್ ಬಳಸುವುದು.

* ಮೂತ್ರವನ್ನು ತಡೆಗಟ್ಟಿ ಹಿಡಿಯದಿರುವುಉದ

*ನೈಸರ್ಗಿಕವಾಗಿ ಮೂತ್ರ ವಿಸರ್ಜನೆ ಮಾಡಿ, ತುಂಬಾ ಒತ್ತಡ ಹಾಕಿ ಮಾಡಬೇಡಿ.

* ವರ್ಕೌಟ್‌ ಮಾಡುವಾಗ ಸರಿಯಾದ ಬಟ್ಟೆ ಧರಿಸಿ, ಅಂಡರ್‌ವೇರ್ ತುಂಬಾ ಬಿಗಿಯಾಗಿರಬಾರು.

* ವ್ಯಾಯಾಮವಾದ ಬಳಿಕ ಸ್ನಾನ ಮಾಡಿ

* ಸರಿಯಾಗಿ ನಿದ್ದೆ ಮಾಡಿ.

English summary

Celebrity Nutritionist Rujuta Diwekar Shared Home Remedies For UTI in Kannada

Celebrity nutritionist Rujuta Diwekar shared Home Remedies for UTI in Kannada, have a look....
Story first published: Friday, December 17, 2021, 9:48 [IST]
X
Desktop Bottom Promotion