For Quick Alerts
ALLOW NOTIFICATIONS  
For Daily Alerts

ಹಕ್ಕಿ ಜ್ವರ: ಈ ಸಮಯದಲ್ಲಿ ಚಿಕನ್, ಮೊಟ್ಟೆ ತಿನ್ನಬಹುದೇ?

|

ಇದೀಗ ಹಕ್ಕಿ ಜ್ವರ ಭೀತಿ ಶುರುವಾಗಿದೆ. ಹಿಮಾಚಲ ಪ್ರದೇಶ, ರಾಜಸ್ಥಾನ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಈಗಾಗಲೇ ವೇಗವಾಗಿ ಹರಡುತ್ತಿದ್ದು ಕರ್ನಾಟಕದಲ್ಲಿ ಕೂಡ ಇದರ ಕುರಿತು ಸರ್ಕಾರ ಎಚ್ಚರಿಕೆಯನ್ನು ರವಾನಿಸಿದೆ.

Can We Eat Chicken During Bird Flu

ಕೇರಳದಲ್ಲಿ ಕೋಳಿ, ಬಾತುಕೋಳಿ ಸೇರಿದಂತೆ 21000ಕ್ಕೂ ಹೆಚ್ಚು ಹಕ್ಕಿಗಳು ಸಾವನ್ನಪ್ಪಿವೆ. ಕರ್ನಾಟಕದಲ್ಲಿ ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಹಲವು ಕಡೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನೆ ಇಲಾಖೆ ನಿರ್ದೇಶನ ನೀಡಿದೆ.

ಹಕ್ಕಿ ಜ್ವರ ತಡೆಗಟ್ಟುವುದು ಎಂದರೆ ಸುತ್ತಮುತ್ತಲಿನ ಎಚ್‌5ಎನ್‌ ವೈರಸ್‌ಗಳನ್ನು ನಾಶಪಡಿಸುವುದಾಗಿದೆ. ಈ ವೈರಸ್ ಹರಡದಂತೆ ತಡೆಗಟ್ಟಲು ಹಕ್ಕಿ ಜ್ವರ ಕಂಡು ಬಂದ ಸುತ್ತ ಮುತ್ತಲಿನ ಪ್ರದೇಶದ ಕೋಳಿಗಳನ್ನು ಕೊಲ್ಲಲಾಗುವುದು.

ಹಕ್ಕಿ ಜ್ವರ ಬಂದಾಗ ಕೋಳಿ ತಿನ್ನಬಹುದೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಕೋಳಿ ಮಾಂಸ ತಿನ್ನುವುದರಿಂದ ರೋಗ ಹರಡುವ ಸಾಧ್ಯತೆ ಇದೆಯೇ? ಈ ಸಮಯದಲ್ಲಿ ಮಾಂಸ- ಮೊಟ್ಟೆ ತಿನ್ನುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.

WHO ಏನು ಹೇಳಿದೆ?

WHO ಏನು ಹೇಳಿದೆ?

ಚಿಕನ್ ಮತ್ತು ಪೌಲ್ಟ್ರಿ ಆಹಾರ ವಸ್ತುಗಳನ್ನು ಸೇವಿಸುವುದಾದರೆ ಚೆನ್ನಾಗಿ ಬೇಯಿಸಿ ತಿನ್ನಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಚಿಕನ್, ಬಾತು ಕೋಳಿ, ಟರ್ಕಿ ಮುಂತಾದ ಪೌಲ್ಟ್ರಿ ಆಹಾರ ವಸ್ತುಗಳನ್ನು 70 ಡಿಗ್ರಿCಗಿಂತ ಅಧಿಕ ಉಷ್ಣತೆಯಲ್ಲಿ ಬೇಯಿಸಬೇಕು. ಮಾಂಸ ಹಸಿ ಇರಬಾರದು. ಚೆನ್ನಾಗಿ ಬೇಯಸಿದ ಮಾಂಸಾಹಾರ ಸೇವಿಸಿ ರೋಗ ಹರಡಿರುವ ಯಾವುದೇ ಉದಾಹರಣೆಗಳಿಲ್ಲ, ಆದ್ದರಿಂದ ಈ ಸಮಯದಲ್ಲಿ ಮಾಂಸಾಹಾರ ಮಾಡುವಾಗ ತುಂಬಾ ಬೇಯಿಸಿ ತಿನ್ನಿ.

 ಮೊಟ್ಟೆಯಲ್ಲಿ ವೈರಸ್‌ ಇರುತ್ತದೆಯೇ?

ಮೊಟ್ಟೆಯಲ್ಲಿ ವೈರಸ್‌ ಇರುತ್ತದೆಯೇ?

ಸಾಮಾನ್ಯವಾಗಿ ಹಕ್ಕಿ ಜ್ವರ ಬಂದ ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸುತ್ತದೆ. ಒಂದು ವೇಳೆ ಮೊಟ್ಟೆ ಇಟ್ಟರೆ ಮೊಟ್ಟೆಯ ಸಿಪ್ಪೆ ಹಾಗೂ ಒಳ ಭಾಗದಲ್ಲಿ ವೈರಸ್‌ ಇರುವ ಸಾಧ್ಯತೆ ಇದೆ. ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿಂದರೆ ಹೆದರಬೇಕಾಗಿಲ್ಲ.

ಈ ಸಮಯದಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು:

ಈ ಸಮಯದಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು:

* ಕಾಯಿಲೆ ಇರುವ ಪ್ರಾಣಿಗಳು ಆಹಾರ ಸರಪರಳಿಯೊಳಗೆ ಸೇರದಂತೆ ನೋಡಿಕೊಳ್ಳಬೇಕು, ಅಂದರೆ ಒಂದು ಪ್ರದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡರೆ ಅದು ಹರಡದಂತೆ ನೋಡಿಕೊಳ್ಳಬೇಕು.

* ಪ್ರಾಣಿ ರಕ್ತ ಕುಡಿಯುವುದು, ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವುದು ಮಾಡಬಾರದು, ಅಲ್ಲದೆ ಈ ಸಮಯಲ್ಲಿ ಹಸಿ ಮೊಟ್ಟೆ ಸೇವಿಸಬೇಡಿ.

* ಈ ಸಮಯದಲ್ಲಿ ರೆಡಿ ಟು ಕುಕ್‌ ಮಾಂಸಾಹಾರ ವಸ್ತುಗಳನ್ನು ಬಳಸದೇ ಇರುವುದು ಒಳ್ಳೆಯದು.

ಆಹಾರವನ್ನು ಚೆನ್ನಾಗಿ ಬೇಯಿಸಿದರೆ ಅದರಲ್ಲಿರುವ ವೈರಸ್ ಅನ್ನು ನಿಷ್ಕ್ರಿಯೆಗೊಳಿಸಬಹುದು.

ಹಕ್ಕಿ ಜ್ವರ ಕಂಡು ಬಂದ ಪ್ರದೇಶದವರು ಏನು ಮಾಡಬೇಕು?

ಹಕ್ಕಿ ಜ್ವರ ಕಂಡು ಬಂದ ಪ್ರದೇಶದವರು ಏನು ಮಾಡಬೇಕು?

ಹಕ್ಕಿ ಜ್ವರ ಕಂಡು ಬಂದ ತಕ್ಷಣ ಎಲ್ಲಾ ಕೋಳಿಗಳನ್ನು ಕೊಲ್ಲಬೇಕು, ಈ ಪ್ರದೇಶಕ್ಕೆ ಭೇಟಿ ನೀಡುವವರು ತಮಗೆ ರೋಗ ಹರಡುವುದನ್ನು ತಡೆಗಟ್ಟಲು ಏಳು ದಿನ ಟ್ಯಾಮಿಫ್ಲೂ ಮಾತ್ರೆ ಸೇವಿಸಬೇಕು, ಇದನ್ನು ಕಾಯಿಲೆ ಹರಡುವ ಮುಂಚಿತವಾಗಿಯೇ ತೆಗೆದುಕೊಳ್ಳಬೇಕು.

ಕೋಳಿ ಸಾಕುವವರಿಗೆ ಹಕ್ಕಿ ಜ್ವರದ ಕುರಿತು ತಿಳುವಳಿಕೆ ಮೂಡಿಸಬೇಕು, ಕೋಳಿ ಸಾಕುವ ಪ್ರದೇಶವನ್ನು ಸ್ವಚ್ಛವಾಗಿ ಕಾಪಾಡಬೇಕು. ಹಕ್ಕಿ ಜ್ವರದಿಂದ ಸತ್ತ ಕೋಳಿಯನ್ನು ಗುಂಡಿ ತೋಡಿ ಸುಣ್ಣ ಹಾಕಿ ನಂತರ ಮಣ್ಣು ಹಾಕಿ ಮುಚ್ಚಬೇಕು.

ಹಕ್ಕಿ ಜ್ವರ ಕಂಡು ಬಂದಿರುವ ಈ ಸಮಯದಲ್ಲಿ ಯಾರಿಗಾದರೂ ಜ್ವರ ಕಾಣಸಿದರೆ ಕೂಡಲೇ ಆಸ್ಪತ್ರೆಗೆ ಕೊಂಡೊಯುದ್ದು ಚಿಕಿತ್ಸೆ ಕೊಡಿಸಬೇಕು.

English summary

Can We Eat Chicken During Bird Flu

Now bird flu spreading many states, can we eat chicken during bird flu, have a look.
X
Desktop Bottom Promotion