For Quick Alerts
ALLOW NOTIFICATIONS  
For Daily Alerts

ಚೀನಾದಲ್ಲಿ ಬ್ರೂಸೆಲೋಸಿಸ್ ಕಾಯಿಲೆ ಭೀತಿ: ಪುರುಷರನ್ನು ನಪುಂಸಕರನ್ನಾಗಿಸುತ್ತೆ ಈ ವೈರಸ್

|

ಜಗತ್ತಿಗೆ ಮಹಾಮಾರಿ ಕೊರೊನಾವನ್ನು ಹರಿಡಿದ ಚೀನಾದಲ್ಲಿ ಬ್ರೂಸೆಲೋಸಿಸ್ ಎಂಬ ರೋಗ ಕಂಡು ಬಂದಿದೆ. ಇದನ್ನು ಮಲ್ಟಾ ಜ್ವರ ಅಥವಾ ಮೆಡಿಟೇರಿಯನ್‌ ಜ್ವರ ಎಂದು ಕೂಡ ಕರೆಯಲಾಗುತ್ತದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಕಾಯಿಲೆಯಾಗಿದೆ.

ಬ್ರೂಸೆಲೋಸಿಸ್ ಪ್ರಮುಖವಾಗಿ ದನ, ಹಂದಿ, ಮೇಕೆ, ಕುರಿ ಮತ್ತು ನಾಯಿಗಳಲ್ಲಿ ಕಂಡು ಬರುವ ಕಾಯಿಲೆಯಾಗಿದೆ. ಈ ಕಾಯಿಲೆ ಸೋಂಕಿರುವ ವ್ಯಕ್ತಿಗಳೊಂದಿಗೆ ನೇರ ಸಂಲರ್ಕದಿಂದ ಅಥವಾ ಪರೋಕ್ಷವಾಗಿ ಸೋಂಕಿರುವ ಪ್ರಾಣಿಗಳ ಉತ್ಪನ್ನಗಳನ್ನು ಸೇವಿಸುವುದರಿಂದ ಹರಡುತ್ತದೆ. ಕುದಿಸದ ಹಾಲು ಅಥವಾ ಕಚ್ಛಾ ಚೀಸ್ ಮುಖಾಂತರ ಈ ಕಾಯಿಲೆ ಹರಡುವುದು.

Brucellosis outbreak in China

ಚೀನಾದ ಗಾಂಝ್ಸು ಪ್ರಾಂತ್ಯದ ರಾಜಧಾನಿ ಲ್ಯಾಂಝೋದಲ್ಲಿ ಈ ಕಾಯಿಲೆ ಕಮಡು ಬಂದಿದೆ. ಈ ಕಾಯಿಲೆಗೆ ತುತ್ತಾದ ಪುರುಷರಲ್ಲಿ ನಪುಂಸಕತೆ ಉಂಟಾಗಿದೆ. ಇದುವರೆಗೆ 3245 ಜನರಿಗೆ ಈ ಕಾಯಿಲೆ ದೃಢಪಟ್ಟಿದೆ.

ಪ್ರಾಣಿಗಳಿಗೆ ಲಸಿಕೆ ತಯಾರಿಸುವ ಬಯೋಫಾರ್ಮಕ್ಯುಟಿಕಲ್ ಕಂಪನಿಯಲ್ಲಿ ಉಂಟಾದ ಸೋರಿಕೆಯಿಂದಾಗಿ ಈಶಾನ್ಯ ಚೀನಾದ ಹಲವರಲ್ಲಿ ಈ ಕಾಯಿಲೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾಯಿಲೆಯ ಅಡ್ಡ ಪರಿಣಾಮಗಳು ಭಯಾನಕವಾಗಿದ್ದು ಇದು ಬಂದರೆ ಲಿವರ್‌ಗೆ ಹಾನಿಯುಂಟಾಗುತ್ತದೆ, ಪುರುಷರಲ್ಲಿ ನಪುಂಸಕತೆ ಉಂಟು ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ಕಾಯಿಲೆಯ ಲಕ್ಷಣಗಳು. ಇದು ಹೇಗೆ ಮನುಷ್ಯರಿಗೆ ಬರುತ್ತದೆ, ಚಿಕಿತ್ಸೆ ಅಥವಾ ತಡೆಗಟ್ಟುವುದು ಹೇಗೆ ಎಂದು ನೋಡೋಣ:

ಬ್ರೂಸೆಲೋಸಿಸ್ ಎಂದರೇನು?

ಬ್ರೂಸೆಲೋಸಿಸ್ ಎಂದರೇನು?

ಬ್ರೂಸೆಲ್ಲಾ ಎಂಬ ಬ್ಯಾಕ್ಟಿರಿಯಾದಿಂದ ಬರುವ ಸೋಂಕು ಇದಾಗಿದ. ಇದು ಮನುಷ್ಯ ಹಾಗೂ ಪ್ರಾಣಿಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು. ಪ್ರಾಣಿಗಳಲ್ಲಿ ಕುರಿ, ಹಸು, ಆಡು, ಹಂದಿ, ನಾಯಿ ಮುಂತಾದ ಪ್ರಾಣಿಗಳಿಗೆ ಈ ಸೋಂಕು ಹರಡುವುದು.

ಬ್ರೂಸೆಲೋಸಿಸ್ ಲಕ್ಷಣಗಳು

ಬ್ರೂಸೆಲೋಸಿಸ್ ಲಕ್ಷಣಗಳು

* ಆಗಾಗ ಜ್ವರ ಬಂದು ಹೋಗುವುದು

* ತಲೆನೋವು

* ಕಿಬ್ಬೊಟ್ಟೆ ನೋವು

* ಸ್ನಾಯುಗಳಲ್ಲಿ ಸೆಳೆತ, ಬೆನ್ನುನೋವು

* ತಲೆಸುತ್ತು

* ಚಳಿಯಾಗುವುದು

* ಬೆವರುವುದು

* ತೂಕ ಇಳಿಕೆ

* ಹೊಟ್ಟೆ ಹಾಳಾಗುವುದು, ಹಸಿವು ಇಲ್ಲದಿರುವುದು

CDC ಪ್ರಕಾರ ಈ ಸೋಂಕು ಬಂದರೆ ಇದರ ಲಕ್ಷಣಗಳು ತುಂಬಾ ಸಮಯದವರೆಗೆ ಇರುತ್ತದೆ.

ಮನುಷ್ಯರಿಗೆ ಬ್ರೂಸೆಲೋಸಿಸ್ ಹೇಗೆ ಬರುತ್ತದೆ?

ಮನುಷ್ಯರಿಗೆ ಬ್ರೂಸೆಲೋಸಿಸ್ ಹೇಗೆ ಬರುತ್ತದೆ?

ಹಾಲನ್ನು ಕುದಿಸಿದೆ ಬಳಸುವುದರಿಂದ ಈ ರೋಗ ಹರಡುವ ಸಾಧ್ಯತೆ ಇದೆ. ಅಲ್ಲದೆ ಈ ಬ್ಯಾಕ್ಟಿರಿಯಾ ಗಾಳಿ ಮುಖಾಂತರವೂ ಹರಡುವುದು ಅಥವಾ ಸೋಂಕು ಇರುವ ಪ್ರಾಣಿಗಳ ನೇರ ಸಂಪರ್ಕದಿಂದ ಹರಡುವುದು.ಈ ಬ್ಯಾಕ್ಟಿರಿಯಾ ಗುಳ್ಳೆಗಳು ಅಥವಾ ಗಾಯಗಳಿದ್ದರೆ ಅದರ ಮೂಲಕ ದೇಹವನ್ನು ಸೇರುವುದು. ಈ ಕಾಯಿಲೆ ಮನುಷ್ಯರಿಂದ-ಮನುಷ್ಯರಿಗೆ ಹರಡುವುದು ತುಂಬಾ ಅಪರೂಪ. ಒಂದು ವೇಳೆ ತಾಯಿಗೆ ಈ ಸೋಂಕು ತಗುಲಿದರೆ ಮಗುವಿಗೆ ಎದೆಹಾಲಿನ ಮುಖಾಂತರ ಹರುಡವುದು. ಲೈಂಗಿಕ ಕ್ರಿಯೆ ಮೂಲಕ ಹರಡಿರುವ ಪ್ರಕರಣ ವರದಿಯಾಗಿರುವುದು ಅತೀ ವಿರಳ.

ಜಗತ್ತಿನ ಹಲವು ಕಡೆ ಈ ಕಾಯಿಲೆ ಕಂಡು ಬರುತ್ತದೆ ಅದರಲ್ಲೂ ತಾಜಾ ಚೀಸ್‌ಗಳಲ್ಲಿ ಹೆಚ್ಚಿನವು ಕುರಿ ಮತ್ತು ಮೇಕೆ ಚೀಸ್. ಇದರ ಪಕ್ಕದಲ್ಲಿ ಜಾನುವಾರು ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಇದು ಉದ್ಯೋಗದ ರೋಗವೆಂದು ಪರಿಗಣಿಸಲಾಗಿದೆ.

ಬ್ರೂಸೆಲೋಸಿಸ್ ಕಾಯಿಲೆಯ ಅಡ್ಡಪರಿಣಾಗಳು

ಬ್ರೂಸೆಲೋಸಿಸ್ ಕಾಯಿಲೆಯ ಅಡ್ಡಪರಿಣಾಗಳು

ಈ ಕಾಯಿಲೆಯನ್ನು ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದು. ಇದರಿಂದ ಚೇತರಿಸಿಕೊಳ್ಳಲು ಕೆಲವು ವರಗಳು ಅಥವಾ ತಿಂಗಳುಗಳು ತೆಗೆದುಕೊಳ್ಳಬಹುದು. ಈ ಸೋಂಕು ತಗುಲಿದಾಗ ಹೃದಯ, ಲಿವರ್ ಹಾಗೂ ನರಗಳಿಗೆ ಹಾನಿಯುಂಟಾಗುತ್ತದೆ ಅಲ್ಲದೆ ಪುರುಷರ ಸಂತಾನೋತ್ಪತ್ತಿ ಸಾಮಾರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಬ್ರೂಸೆಲೋಸಿಸ್‌ನಿಂದ ಸಾವನ್ನಪ್ಪುವವರ ಸಂಖ್ಯೆ ಶೇ. 2ರಷ್ಟಿದೆ.

ತಡೆಗಟ್ಟುವುದು ಹೇಗೆ?

ತಡೆಗಟ್ಟುವುದು ಹೇಗೆ?

ಮಾನವನಿಗೆಬ್ರೂಸೆಲೋಸಿಸ್ ಬಾರದಂತೆ ತಡೆಗಟ್ಟುವ ಅತ್ಯಂತ ತರ್ಕಬದ್ಧ ವಿಧಾನವೆಂದರೆ ಪ್ರಾಣಿಗಳಲ್ಲಿನ ಸೋಂಕಿನ ನಿಯಂತ್ರಣ ಮತ್ತು ನಿರ್ಮೂಲನೆ. ಪ್ರಾಣಿಗಳ ಆರೈಕೆ ಮಾಡುವಾಗ ಗ್ಲೌಸ್, ಏಪ್ರಾನ್ ಬಳಕೆ ಮಾಡುವುದು, ಹಾಲನ್ನು ಕುದಿಸಿ ಕುಡಿಯುವುದು, ಮಾಂಸವನ್ನು ಸರಿಯಾಗಿ ಬೇಯಿಸಿ ತಿನ್ನುವುದು, ಸಾಕು ಪ್ರಾಣಿಗಳಿಗೆ ಲಸಿಕೆ ಕೊಡಿಸುವುದು ಈ ಮೂಲಕ ಈ ಬ್ಯಾಕ್ಟಿರಿಯಾ ನಿಯಂತ್ರಿಸಬಹುದಾಗಿದೆ.

English summary

Brucellosis outbreak in China: Bacterial Infection Symptoms, transmission and prevention in Kannada

Brucellosis outbreak in China: Here are how this infection gets to human and its symptoms, prevention method, read on,
X
Desktop Bottom Promotion