For Quick Alerts
ALLOW NOTIFICATIONS  
For Daily Alerts

ಅಮೆರಿಕದಲ್ಲಿ ಮೆದುಳು ತಿನ್ನುವ ಅಮೀಬಾದ ಆತಂಕ: ಈ ಕಾಯಿಲೆ ಹೇಗೆ ಬರುತ್ತದೆ?

|

2020ನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದು ಭಯಾನಕವಾದ ವರ್ಷವೆಂದೇ ಹೇಳಬಹುದು. ಇದುವರೆಗೆ ಕೇಳಿರದ ರೋಗವಾದ ಕೊರೊನಾವೈರಸ್ ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದೆ. ಅದರ ಜೊತೆಗೆ ಮತ್ತೊಂದು ವಿಚಿತ್ರ ರೋಗದ ಹೆಸರು ಕೂಡ ಬಂತು ಅದು ಹೆಚ್ಚಿನ ಜನರಿಗೇನು ಹರಡಿಲಿಲ್ಲ, ಆದರೆ ಆ ರೋಗ ಟೆಕ್ಸಾಸ್‌ನಲ್ಲಿ ಒಂದು ಬಾಲಕನನ್ನು ಬಲಿ ತೆಗೆದುಕೊಂಡಿತ್ತು. ಅದುವೇ ಮೆದುಳು ತಿನ್ನುವ ಅಮೀಬಾ.

ಇದೀಗ ಮೆದುಳು ತಿನ್ನುವ ಆ ಭೀಕರ ಅಮೀಬಾ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಅಮೆರಿಕದಲ್ಲಿ ಈ ಅಮೀಬಾದ ಭೀತಿ ಶುರುವಾಗಿದೆ.

ಮೊದಲಿಗೆ ದಕ್ಷಿಣ ಅಮೆರಿಕದಲ್ಲಿ ಮಾತ್ರ ಕಂಡು ಬಂದಿದ್ದ ಈ ಅಮೀಬಾ ವಾತಾವರಣದ ಬದಲಾವಣೆಯಿಂದಾಗಿ ಉತ್ತರ ಅಮೆರಿಕದಲ್ಲೂ ಕಂಡು ಬಂದಿದೆ.

ಟೆಕ್ಸಾಸ್‌ನಲ್ಲಿ ಬಾಲಕನ ಬಲಿ ತೆಗೆದ ಅಮೀಬಾ

ಟೆಕ್ಸಾಸ್‌ನಲ್ಲಿ ಬಾಲಕನ ಬಲಿ ತೆಗೆದ ಅಮೀಬಾ

ಸೆಪ್ಟೆಂಬರ್‌ 8ಕ್ಕೆ ಈ ಭೀಕರ ಅಮೀಬಾದ ಕಾರಣದಿಂದಾಗಿ ಟೆಕ್ಸಾಸ್‌ನ ಬಾಲಕ ಕೊನೆಯುಸಿರು ಎಳೆದ. ನೀರಿನಲ್ಲಿರುವ ಈ ಅಪಾಯಕಾರಿ ಅಮೀಬಾ ಇದ್ದರೆ ಅದು ಮೂಗಿನ ಮೂಲಕ ದೇಹವನ್ನು ಸೇರುತ್ತದೆ. ಮೊದಲಿಗೆ ಜ್ವರ ಕಾಣಿಸಿಕೊಂಡರೆ ನಂತರ ಎದ್ದು ನಿಲ್ಲಲು, ಮಾತನಾಡಲು ತೊಂದರೆಯಾಗುತ್ತದೆ. ಬಾಲಕ ಮೃತನಾದ ಬಳಿಕ ಅಲ್ಲಿಯ ಸಮುದಾಯದ ನೀರಿನಲ್ಲಿ ಈ ಅಮೀಬಾ ಕಂಡು ಬಂದಿತ್ತು. 60 ದಿನಗಳವರೆಗೆ ಅಲ್ಲಿಯ ಜನರಿಗೆ ಆ ನೀರಿನ ಬದಲಿಗೆ ಬೇರೆ ನೀರಿನ ವ್ಯವಸ್ಥೆ ಮಾಡಿ, ಆ ನೀರನ್ನು ಶುದ್ಧ ಮಾಡಲಾಯಿತು.

ಅಮೆರಿಕದಲ್ಲಿ ಹೆಚ್ಚಾಗುತ್ತಿದೆ ಈ ಅಮೀಬಾ ಭೀತಿ

ಅಮೆರಿಕದಲ್ಲಿ ಹೆಚ್ಚಾಗುತ್ತಿದೆ ಈ ಅಮೀಬಾ ಭೀತಿ

ಸಿಡಿಸಿ ( Centers for Disease Control and Prevention) ಪ್ರಕಾರ ಇದೀಗ ಅಮೀಬಾ ಹರಡುತ್ತಿದ್ದು ಮಧ್ಯಪಶ್ಚಿಮ ರಾಜ್ಯಕ್ಕೂ ಹರಡುವ ಸಾಧ್ಯತೆ ಇದೆ. ಬದಲಾಗುತ್ತಿರುವ ವಾತಾವರಣದಿಂದಾಗಿ ಈ ಅಮೀಬಾ ಚಟುವಟಿಕೆ ಹೆಚ್ಚುವುದು.

ಈ ಅಮೀಬಾ ಇರುವ ನೀರು ಕುಡಿಯುವುದರಿಂದ ಬರುತ್ತದೆಯೇ?

ಈ ಅಮೀಬಾ ಇರುವ ನೀರು ಕುಡಿಯುವುದರಿಂದ ಬರುತ್ತದೆಯೇ?

ಸಿಡಿಸಿ ಪ್ರಕಾರ ಈ ಅಮೀಬಾ ಇರುವ ಕಲುಷಿತ ನೀರು ಕುಡಿಯುವುದರಿಂದ ಅಮೀಬಾ ದೇಹದಿಂದ ತೊಂದರೆ ಉಂಟಾಗುವುದಿಲ್ಲ. ಆದರೆ ಈ ಅಮೀಬಾ ಇರುವ ನೀರಿನಲ್ಲಿ ಸ್ನಾನ ಮಾಡಿದಾಗ ಅಥವಾ ಈಜುವುದರಿಂದ ಮೂಗಿನ ಮೂಲಕ ದೇಹವನ್ನು ಸೇರಿದರೆ ಪರಿಸ್ಥಿತಿ ವಿಷಮವಾಗುವುದು.

 ಅಮೀಬಾ ದೇಹವನ್ನು ಸೇರಿದಾಗ ಕಂಡು ಬರುವ ಲಕ್ಷಣಗಳು

ಅಮೀಬಾ ದೇಹವನ್ನು ಸೇರಿದಾಗ ಕಂಡು ಬರುವ ಲಕ್ಷಣಗಳು

ಅಮೀಬಾ ಮೂಗಿನ ಮೂಲಕ ದೇಹವನ್ನು ಸೇರಿದಾಗ ಅದು ಮೆದುಳನ್ನು ಸೇರುತ್ತದೆ. ಇದರಿಂದಾಗಿ ವಿಪರೀತ ತಲೆನೋವು ಉಂಟಾಗುವುದು, ಕುತ್ತಿಗೆ ಬಿಗಿಯಾಗುವುದು, ವಾಂತಿ ಪ್ರಾರಂಭವಾಗುವುದು, ತಲೆಸುತ್ತು, ಸುಸ್ತು, ಗೊಂದಲ ಇವೆಲ್ಲಾ ಉಂಟಾಗುವುದು.

ಈ ಹತ್ತು ವರ್ಷದಲ್ಲಿ ಈ ರೀತಿಯ ಅಮೀಬಾ ಸೋಂಕು 34 ಜನರಿಗೆ ಕಂಡು ಬಂದಿತ್ತು. ನಾಗ್ಲೆರಿಯಾ ಫೌಲೆರಿ ಎಂಬ ಈ ಅಮೀಬಾ ಶುದ್ಧ ನೀರಿನಲ್ಲಿ ಮಣ್ಣಿನಲ್ಲಿ ಕೂಡ ಕಂಡು ಬರುತ್ತದೆ.

English summary

Brain-eating Amoeba Now Spreading Faster in US, All You Need to Know About Deadly Disease in kannada

Brain-eating Amoeba Now Spreading Faster in US, All You Need to Know About Deadly Disease in kannada.
X
Desktop Bottom Promotion