For Quick Alerts
ALLOW NOTIFICATIONS  
For Daily Alerts

ಮುಟ್ಟಾದಾಗ ರಕ್ತ ಹೆಪ್ಪುಗಟ್ಟಿದಂತೆ ಹೋಗುವುದು ಅಪಾಯದ ಸೂಚನೆಯೇ?

|

ಮುಟ್ಟಿನ ಚಕ್ರ, ಮುಟ್ಟು ಮಹಿಳೆಯರ ಆರೋಗ್ಯವನ್ನು ಸೂಚಿಸುತ್ತದೆ. ಅನಿಯಮಿತ ಮುಟ್ಟು ಅಥವಾ ಮುಟ್ಟಾದಾಗ ಕಂಡು ಬರುವ ವ್ಯತ್ಯಾಸ ಇವೆಲ್ಲಾ ದೇಹಕ್ಕೆ ಏನೋ ಸಮಸ್ಯೆಯಾಗಿದೆ ಎಂದು ಸೂಚಿಸುವ ಲಕ್ಷಣಗಳಾಗಿವೆ. ಆದ್ದರಿಂದ ನಿರ್ಲಕ್ಷ್ಯ ಮಾಡಲೇಬಾರದು.

ಮುಟ್ಟಾದಾಗ ರಕ್ತಸ್ರಾವ ಉಂಟಾಗುವುದು, ಆದರೆ ಕೆಲವೊಮ್ಮೆ ರಕ್ತ ಸ್ರಾವ ಆಗುವ ಬದಲಿಗೆ ರಕ್ತ ಹೆಪ್ಪು-ಹೆಪ್ಪಾಗಿ ಹೋಗುವುದು. ಬಳಸಿದ ಪ್ಯಾಡ್‌ ಅಥವಾ menstrual ಕಪ್‌ನಲ್ಲಿ ರಕ್ತ ಹೆಪ್ಪು-ಹೆಪ್ಪಾಗಿ ಕಂಡು ಬಂದರೆ, ಮೂತ್ರ ವಿಸರ್ಜನೆಗೆ ಹೋದಾಗ ರಕ್ತ ಹೆಪ್ಪು-ಹೆಪ್ಪಾಗಿ ಹೋಗುವುದನ್ನು ಗಮನಿಸಿದರೆ ಅದು ನಿರ್ಲಕ್ಷ್ಯ ಮಾಡುವಂಥ ವಿಷಯವೇ ಅಲ್ಲ ಎಂಬುವುದು ನೆನಪಿರಲಿ. ಹೌದು ಅದು ದೇಹದ ಅನಾರೋಗ್ಯದ ಬಗ್ಗೆ ನಿಡುತ್ತಿರುವ ಮುನ್ಸೂಚನೆಯಾಗಿರಬಹುದು.

ಮುಟ್ಟಿನ ಸಮಯದಲ್ಲಿ ಅಲ್ಪ-ಸ್ವಲ್ಪ ರಕ್ತ ಹೆಪ್ಪು ಗಟ್ಟಿ ಬರುವುದು ಸಹಜ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ತುಂಬಾ ಹೋಗುತ್ತಿದ್ದರೆ ಅದು ನಿರ್ಲಕ್ಷ್ಯ ಮಾಡುವಂಥ ವಿಷಯವಲ್ಲ. ಇದನ್ನು ವೈದ್ಯಕೀಯ ಭಾಷೆಯಲ್ಲಿ (ಮೆನೋರ್ಹೇಜಿಯಾ) menorrhagia ಎಂದು ಕರೆಯಲಾಗುವುದು.

ಈ ರೀತ ರಕ್ತ ಹೆಪ್ಪುಗಟ್ಟಲು ಕಾರಣವೇನಿರಬಹುದು? ಇದನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

1.ಗರ್ಭಕೋಶದಲ್ಲಿ ಸಮಸ್ಯೆಯಿದ್ದರೆ:

1.ಗರ್ಭಕೋಶದಲ್ಲಿ ಸಮಸ್ಯೆಯಿದ್ದರೆ:

ಫೈಬ್ರಾಯ್ಡ್‌ಗಳು, ಎಂಡೊಮೆಟ್ರಿಯೊಸಿಸ್ ಮತ್ತು ಅಡೆನೊಮೈಯೋಸಿಸ್ ಮುಂತಾದ ಸಮಸ್ಯೆಯಿದ್ದರೆ ಗರ್ಭಕೋಶ ದೊಡ್ಡದಾಗಿ ಗರ್ಭಾಶಯದ ಗೋಡೆಗಳ (ಪದರಗಳ) ಮೇಲೆ ಒತ್ತಡ ಹಾಕಿವುದರಿಂದ ರಕ್ತ ಹೆಪ್ಪು-ಹೆಪ್ಪಾಗಿ ಹೋಗುವುದು.

2. ಕ್ಯಾನ್ಸರ್

2. ಕ್ಯಾನ್ಸರ್

ಗರ್ಭಕೋಶ ಅಥವಾ ಗರ್ಭಕಂಠದಲ್ಲಿ ಕ್ಯಾನ್ಸರ್ ಇದ್ದರೆ ತುಂಬಾ ರಕ್ತಸ್ರಾವದ ಜೊತೆಗೆ ಈ ರೀತಿ ಹೆಪ್ಪು-ಹೆಪ್ಪಾಗಿ ಹೋಗುವುದು.

3. ಹಾರ್ಮೋನ್‌ಗಳ ಅಸಮತೋಲನ ಉಂಟಾದಾಗ

3. ಹಾರ್ಮೋನ್‌ಗಳ ಅಸಮತೋಲನ ಉಂಟಾದಾಗ

ಈಸ್ಟ್ರೋಜಿನ್‌, ಪ್ರೊಜೆಸ್ಟಿರಾನ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದಾಗ ಅತ್ಯಧಿಕ ರಕ್ತಸ್ರಾವ ಜೊತೆಗೆ ರಕ್ತ ಹೆಪ್ಪುಗಟ್ಟಿದಂತೆ ಹೋಗುವುದು.

4. ಪಿಸಿಒಎಸ್ (PCOS) ಇದ್ದಾಗ

4. ಪಿಸಿಒಎಸ್ (PCOS) ಇದ್ದಾಗ

ಪಿಸಿಒಎಸ್ ಕೂಡ ಹಾರ್ಮೋನ್‌ಗಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಪಿಸಿಒಎಸ್ ಸಮಸ್ಯೆ ಇದ್ದರೆ ಅದು ಅಂಡಾಣುಗಳ ಬಿಡುಗಡೆಗೆ ತಡೆಯೊಡ್ಡುವುದು. ಅನಿಯಮಿತ ಮುಟ್ಟಿನ ಸಮಸ್ಯೆ, ಮುಟ್ಟಾದಾಗ ಅತ್ಯಧಿಕ ರಕ್ತಸ್ರಾವ ಜೊತೆಗೆ ರಕ್ತ ಹೆಪ್ಪು-ಹೆಪ್ಪಾಗಿ ಹೋಗುವುದು.

5. ಥೈರಾಯ್ಡ್ ಸಮಸ್ಯೆ

5. ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಗ್ರಂಥಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ಹಾರ್ಮೋನ್‌ಗಳ ಉತ್ಪತ್ತಿಯಲ್ಲಿ ಸಮತೋಲನವಿರುತ್ತದೆ. ಥೈರಾಯ್ಡ್‌ ಸಮಸ್ಯೆ ಇರುವವರಲ್ಲಿ ಮುಟ್ಟಿನ ಸಮಯದಲ್ಲಿ ಈ ರೀತಿ ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚಾಗಿರುತ್ತದೆ.

ಈ ಕಾರಣಗಳಿಂದಲೂ ರಕ್ತ ಹೆಪ್ಪು-ಹೆಪ್ಪಾಗಿ ಹೋಗುವುದು

ಈ ಕಾರಣಗಳಿಂದಲೂ ರಕ್ತ ಹೆಪ್ಪು-ಹೆಪ್ಪಾಗಿ ಹೋಗುವುದು

* ಗರ್ಭನಿರೋಧಕ ವಿಧಾನಗಳು

ಹೊಸದಾಗಿ ಗರ್ಭನಿರೋಧಕಗಳು ಕೆಲವರಲ್ಲಿ ಅತ್ಯಧಿಕ ರಕ್ತಸ್ರಾವ, ರಕ್ತ ದೊಡ್ಡ ಹೆಪ್ಪು-ಹೆಪ್ಪಾಗಿ ಹೀಗುವುದು. IUD ಗರ್ಭನಿರೋಧಕ ಬಳಸುತ್ತಿದ್ದರೆ ತುಂಬಾ ರಕ್ತಸ್ರಾವ ಕಂಡು ಬರುವುದು. ನಿಮಗೆ ಸೂಕ್ತವಾಗುವ ಗರ್ಭನಿರೋಧಕ ವಿಧಾನಗಳನ್ನು ಅನುಸರಿಸಿ.

* ಔಷಧಗಳು

ಕೆಲವೊಂದು ಔಷಧಗಳು ಕೂಡ ಮುಟ್ಟಿನ ಸಂದರ್ಭದಲ್ಲಿ ಅತ್ಯಧಿಕ ರಕ್ತಸ್ರಾವ ಹಾಗೂ ರಕ್ತ ಹೆಪ್ಪುಗಟ್ಟಿದಂತೆ ಹೋಗಲು ಕಾರಣವಾಗಿದೆ.

* ಗರ್ಭಪಾತ

ಗರ್ಭಪಾತವಾಗ ಈ ರೀತಿ ರಕ್ತ ಹೆಪ್ಪು-ಹೆಪ್ಪಾಗಿ ಹೋಗುವುದು. ಈ ಸಮಯದಲ್ಲಿ ಸಾಮಾನ್ಯವಾಗಿ ಕಂಡು ಬರುವುದಕ್ಕಿಂತ ಹೆಚ್ಚಾಗಿ ರಕ್ತ ಹೆಪ್ಪುಗಟ್ಟಿ ಹೋಗುವುದು.

ಮುಟ್ಟಿನ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದು ಹೇಗೆ?

ಮುಟ್ಟಿನ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದು ಹೇಗೆ?

* ಕಬ್ಬಿಣದಂಶ ಅಧಿಕವಿರುವ ಆಹಾರವನ್ನು ಸೇವಿಸಿ: ಆರೋಗ್ಯಕರ ಆಹಾರ ಸೇವನೆ ಅದರಲ್ಲೂ ಕಬ್ಬಿಣದಂಶ ಅಧಿಕವಿರುವ ಆಹಾರಗಳನ್ನು ಸೇವಿಸಿ. ತರಕಾರಿಗಳು, ಬಟಾಣಿ, ಒಣದ್ರಾಕ್ಷಿ, ಏಪ್ರಿಕಾಟ್, ಬೀನ್ಸ್ ಇವುಗಳಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ. ಇದರ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.

ಪ್ರತಿದಿನ ವ್ಯಾಯಾಮ ಮಾಡಿ

ಫಿಟ್ನೆಸ್‌ ಮೈಕಟ್ಟು ಹೊಂದುವುದರಿಂದ ಅನಿಯಮಿತ ಮುಟ್ಟು ಹಾಗೂ ಇಂಥ ಸಮಸ್ಯೆ ತಡೆಗಟ್ಟಬಹುದು. ಪ್ರತಿದಿನ ವ್ಯಾಯಾಮ ಮಾಡಿ.

ಸಲಹೆ: ಮುಟ್ಟಿನ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟಿ ಹೋಗುತ್ತಿದ್ದರೆ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ.

FAQ's
  • ಮುಟ್ಟಾದಾಗ ರಕ್ತ ಎಷ್ಟು ಗಾತ್ರದಲ್ಲಿ ಹೆಪ್ಪುಗಟ್ಟಿ ಹೋದರೆ ಅಪಾಯದ ಸೂಚನೆ?

    ಸಾಧರಣ ಗಾತ್ರದಲ್ಲಿ ರಕ್ತ ಹೆಪ್ಪುಗಟ್ಟಿ ಹೋಗುವುದು ಸಹಜ. ಅದೇ ಒಂದು ದೊಡ್ಡ ನಿಂಬೆ ಹಣ್ಣಿನ ಗಾತ್ರದಲ್ಲಿ ಹೋಗುತ್ತಿದ್ದರೆ ಅದು ಪ್ರತಿಗಂಟೆಗೆ ಹೋಗುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ.

  • ಗರ್ಭಪಾತವಾದಾಗ ಎಷ್ಟು ದೊಡ್ಡ ಗಾತ್ರದಲ್ಲಿ ರಕ್ತ ಹೆಪ್ಪುಗಟ್ಟಿ ಹೋಗುವುದು?

    ಗರ್ಭಧಾರಣೆಯಾಗಿ 6 ವಾರಗಳ ಬಳಿಕ ಗರ್ಭಪಾತವಾಗುವುದಾದರೆ ಅಂಗಾಂಶಗಳು ಹೆಪ್ಪಾದ ರಕ್ತದ ರೂಪದಲ್ಲಿ ಹೊರದೂಡಲ್ಪಡುವುದು. ಅದು ಚಿಕ್ಕ ಗಾತ್ರದಿಂದ ಹಿಡಿದು ದೊಡ್ಡ ಕಿತ್ತಳೆ ಗಾತ್ರದಲ್ಲೂ ಇರಬಹುದು.

English summary

Blood Clots during periods? Here's when to see a doctor in kannada

Blood Clots during periods? Here's when to see a doctor in kannada, read on...
Story first published: Monday, October 25, 2021, 13:21 [IST]
X
Desktop Bottom Promotion