For Quick Alerts
ALLOW NOTIFICATIONS  
For Daily Alerts

ರಾಂಫಲ ಹಣ್ಣು ತಿಂದ್ರೆ ದೇಹಕ್ಕೆ ಎಷ್ಟೆಲ್ಲಾ ಒಳ್ಳೆಯದು ಗೊತ್ತಾ?

|

ಫೆಬ್ರವರಿ ಮಾರ್ಚ್‌ ತಿಂಗಳು ಬಂತೆಂದರೆ ರಾಂಫಲ ಹಣ್ಣು ಸವಿಯಲು ಸಿಗುತ್ತದೆ. ಹಳ್ಳಗಳಲ್ಲಿ, ಕಾಡುಗಳಲ್ಲಿರುವ ರಾಂಫಲ ಮರಗಳಲ್ಲಿ ಈ ಸಮಯದಲ್ಲಿ ರಾಂಫಲ ಹಣ್ಣು ಸವಿಯಲು ಸಿಗುತ್ತವೆ. ಇದೊಂದು ಸೀಸನ್‌ ಹಣ್ಣಾಗಿದೆ. ಈ ಹಣ್ಣನ್ನು ಇಂಗ್ಲಿಷ್‌ನಲ್ಲಿ bullock's heart ಎಂದು ಕರೆಯಲಾಗುವುದು.

ಇದು ಮಾರುಕಟ್ಟೆಯಲ್ಲೂ ಸಿಗುತ್ತವೆ. ಈ ಹಣ್ಣುಗಳು ಕಣ್ಣಿಗೆ ಬಿದ್ದಾಗ ಸವಿಯಲು ಮರೆಯಬೇಡಿ. ಏಕೆಂದರೆ ಈ ಹಣ್ಣು ನಿಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು. ಬನ್ನಿ ಇದರಲ್ಲಿ ಯಾವೆಲ್ಲಾ ಗುಣಗಳಿವೆ ಎಂದು ನೋಡೋಣ:

ಮಧುಮೇಹ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಮಧುಮೇಹ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ರಾಂಫಲ ಹಣ್ಣಿನಲ್ಲಿರುವ ಖನಿಜಾಂಶಗಳು ಗ್ಲೂಕೋಸ್‌ ಪ್ರಮಾಣ ಕಡಿಮೆ ಮಾಡುತ್ತದೆ. ಆದ್ದರಿಂದ ಈ ಹಣ್ಣು ಮಧುಮೇಹಿಗಳು ಕೂಡ ಸಿಯಬಹುದು. ಅಲ್ಲದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವೂ ಇದಕ್ಕಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರಾಂಫಲ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ವಾತಾವರಣ ಬದಲಾದಾಗ ಉಂಟಾಗುವ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ತಡೆಗಟ್ಟುವಲ್ಲಿ ಈ ಹಣ್ಣು ಸಹಕಾರಿಯಾಗಿದೆ. ಇದರಲ್ಲಿರುವ ವಿಟಮಿನ್ ಎ ರೋಗ ನಿರೋಧಕ ಶಕ್ತಿ ಹೆಚ್ಚಿಸಿದರೆ, ವಿಟಮಿನ್ ಬಿ ಉರಿಯೂತ ಕಡಿಮೆ ಮಾಡುತ್ತದೆ.

ಕೂದಲು ಮತ್ತು ಮುಖದ ಅಂದವೂ ಹೆಚ್ಚುವುದು

ಕೂದಲು ಮತ್ತು ಮುಖದ ಅಂದವೂ ಹೆಚ್ಚುವುದು

ಈ ಹಣ್ಣನ್ನು ತಿನ್ನುವುದರಿಂದ ಇದು ಆಂತರಿಕವಾಗಿ ಕೂದಲಿನ ಪೋಷಣೆ ಮಾಡುತ್ತದೆ. ಅಲ್ಲದೆ ಮೊಡವೆ ಕೂಡ ಕಡಿಮೆಯಾಗುವುದು, ಇನ್ನು ಸಂಧಿನೋವು ಇದ್ದರೆ ಅದು ಕೂಡ ಕಡಿಮೆಯಾಗುವುದು.

ವಿಟಮಿನ್‌ಗಳ ಆಗರ

ವಿಟಮಿನ್‌ಗಳ ಆಗರ

ಅದರಲ್ಲೂ 30 ವರ್ಷ ಮೇಲ್ಪಟ್ಟವರಲ್ಲಿ ಮೊಡವೆ ಸಮಸ್ಯೆ ಇದ್ದರೆ ದಿನಾ ಒಂದು ರಾಂಫಲ ಹಣ್ಣು ತಿನ್ನುತ್ತಾ ಬಂದರೆ ಮೊಡವೆ ದೂರವಾಗುವುದು. ಇದರಲ್ಲಿ ವಿಟಮಿನ್‌ ಸಿ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಈ ಹಣ್ಣು ಮಕ್ಕಳಿಗೆ ಕೂಡನೀಡಬಹುದಾಗಿದೆ. ಅದರ ಬೀಜ ನುಂಗಿದರೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಈ ಹಣ್ಣು ಈ ಸೀಸನ್‌ನಲ್ಲಿ ಎಲ್ಲಿ ಕಂಡರೂ ಕೊಂಡು ತಿನ್ನಿ, ಸೀಸನ್‌ನಲ್‌ ಹಣ್ಣುಗಳಲ್ಲಿ ಆ ಕಾಲಕ್ಕೆ ತಕ್ಕಂತೆ ಆರೋಗ್ಯವನ್ನು ಜೋಪಾನ ಮಾಡುವ ಗುಣವಿರುತ್ತದೆ.

English summary

Benefits of eating Ramphal Fruit every day in Kannada

Benefits of eating hyper local fruits Ramphal, read on...
X
Desktop Bottom Promotion