For Quick Alerts
ALLOW NOTIFICATIONS  
For Daily Alerts

ಹಾರ್ಮೋನ್‌ ಪ್ರಾಬ್ಲಂ? ಹೀಗೆ ಮಾಡಿದರೆ ಆ ಸಮಸ್ಯೆಯೇ ಇಲ್ಲವಾಗುವುದು

|

ಹಿಂದಿನ ಕಾಲದಲ್ಲಿ ಪಿಸಿಓಡಿ, ಪಿಸಿಒಎಸ್‌, ಥೈರಾಯ್ಡ್‌ ಎಂಬ ಪದಗಳ ಬಗ್ಗೆ ಯಾರೂ ಕೇಳಿರಲಿಕ್ಕಿಲ್ಲ. ಯಾಕೆಂದರೆ ಅಂದಿನ ಕಾಲದಲ್ಲಿ ಎಲ್ಲವೂ ಉತ್ತಮವಾಗಿತ್ತು, ಆಧುನಿಕ ಜೀವನ ಪದ್ಧತಿ ಇನ್ನೂ ನಮ್ಮ ಮೂಲ ಆಹಾರ ಪದ್ಧತಿಯ ಮೇಲೆ ಕಣ್ಣು ಹಾಯಿಸಿರಲಿಲ್ಲ. ಇತ್ತೀಚಿನ ನಮ್ಮ ಆಧುನಿಕ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ ತಪ್ಪಾಗಲಾರದು. ಇದಲ್ಲದೇ ಒತ್ತಡಯುಕ್ತ ಜೀವನಶೈಲಿ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನಮ್ಮ ಅನಾರೋಗ್ಯಕರ ಜೀವನಶೈಲಿಯಿಂದ ಮೊದಲನೆಯದಾಗಿ ಕಾಣಿಸಿಕೊಳ್ಳುವುದೇ ಹಾರ್ಮೋನ್‌ಗಳ ಅಸಮತೋಲನ, ಇದರಿಂದಾಗಿಯೇ ಇತ್ತೀಚಿಗೆ ಹೆಚ್ಚಿನವರು ಪಿಸಿಒಡಿ, ಪಿಸಿಒಎಸ್‌,ಥೈರಾಯ್ಡ್‌ ಮುಂತಾದ ಹಾರ್ಮೋನ್‌ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಹಾರ್ಮೋನುಗಳೆಂದರೆ...

ಹಾರ್ಮೋನುಗಳೆಂದರೆ...

ಹಾರ್ಮೋನುಗಳು ನಿಮ್ಮ ದೇಹದ ರಾಸಾಯನಿಕ ಸಂದೇಶವಾಹಕಗಳಾಗಿವೆ, ಅವು ರಕ್ತದ ಮೂಲಕ ಅಂಗಾಂಶಗಳು ಅಥವಾ ಅಂಗಗಳಿಗೆ ಪ್ರಯಾಣಿಸುತ್ತವೆ ಮತ್ತು ವಿವಿಧ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ, ಅವುಗಳೆಂದರೆ, ಬೆಳವಣಿಗೆ, ಅಭಿವೃದ್ಧಿ ಮತ್ತು ಚಯಾಪಚಯ. ಇದೇ ಹಾರ್ಮೋನ್‌ ರಕ್ತದೊಂದಿಗೆ ಹೆಚ್ಚು ಅಥವಾ ಕಡಿಮೆ ದೇಹದ ಅಂಗಾಗಳಿಗೆ ಸಂಚಾರವಾದಾಗ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ.

ಹಾರ್ಮೋನುಗಳ ಅಸಮತೋಲನವು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ, ಮತ್ತು ಬಹುತೇಕ ಎಲ್ಲರೂ ಕೆಲವು ಹಂತದಲ್ಲಿ ಅದನ್ನು ಅನುಭವಿಸಬಹುದು. ಹದಿಹರೆಯದಲ್ಲಿ ಗಂಡು ಮತ್ತು ಹೆಣ್ಣು ಹಾರ್ಮೋನುಗಳು ಏರಿಳಿತಗೊಳ್ಳುತ್ತವೆ ಮತ್ತು ಪ್ರೌಢಾವಸ್ಥೆಯಲ್ಲಿ, ಮುಟ್ಟಿನ ಸಂದರ್ಭದಲ್ಲಿ, ಗರ್ಭಾವಸ್ಥೆ, ಹೆರಿಗೆ, ಹಾಲುಣಿಸುವಿಕೆ, ಇತ್ಯಾದಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಲ್ಲಿ ಹಾರ್ಮೋನ್‌ ಅಸಮತೋಲನ ಕಂಡುಬರುತ್ತದೆ. ದೇಹದಲ್ಲಿ ಸಕ್ಕರೆಯ ಮಟ್ಟಗಳ ಏರಿಳಿತ ಮತ್ತು ಕೇಂದ್ರೀಕರಿಸುವಲ್ಲಿ ತೊಂದರೆಗಳು ಕೂಡಾ ಹಾರ್ಮೋನ್ ಅಸಮತೋಲನದ ಕೆಲವು ಲಕ್ಷಣಗಳಾಗಿವೆ.

ಹಾರ್ಮೋನ್‌ ಸಮತೋಲನಕ್ಕೆ ಆಯುರ್ವೇದ ಪರಿಹಾರ

ಹಾರ್ಮೋನ್‌ ಸಮತೋಲನಕ್ಕೆ ಆಯುರ್ವೇದ ಪರಿಹಾರ

ಭಾರತೀಯ ವೈದ್ಯಕೀಯ ಶಾಸ್ತ್ರವೇ ಆಯುರ್ವೇದ. ಇದರಲ್ಲಿ ವಿವರಿಸಿರುವಂತೆ ನಮ್ಮ ದೇಹದಲ್ಲಿರುವ ವಾತ, ಪಿತ್ತ, ಕಫ ಎನ್ನುವ ಅಂಶಗಳು ನಮ್ಮ ದೇಹದ ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳಲು ಸಹಕಾರಿ. ಈ ಮೂರು ಅಂಶಗಳಲ್ಲಿ ಸ್ವಲ್ಪ ಏರುಪೇರಾದರೂ ಅನಾರೋಗ್ಯ ಬಾಧಿಸುವುದು ತಪ್ಪದು. ಇತ್ತೀಚಿನ ಆಹಾರ ಶೈಲಿಯು ವಾತ,ಪಿತ್ಥ, ಕಫದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಹೀಗಾದಾಗ ಆಯುರ್ವೇದವು ಮೊದಲನೇಯದಾಗಿ ನಮ್ಮ ಜೀವನಶೈಲಿಯ ಬದಲಾವಣೆಯ ಮೇಲೆ ಗಮನ ಹರಿಸುತ್ತದೆ. ಆಹಾರವೇ ಆರೋಗ್ಯ ಎಂಬಂತೆ ಆರೋಗ್ಯಕರ ಆಹಾರ ಸೇವನೆಯ ಜೊತೆ ಆಯುರ್ವೇದದಲ್ಲಿ ತಿಳಿಸಿರುವಂತಹ ಈ ಟಿಪ್ಸ್‌ಗಳನ್ನು ಫಾಲೋ ಮಾಡಿದರೆ ಮುಖದಲ್ಲಿನ ಮೊಡವೆಗೂ ಬೈ ಬೈ ಹೇಳಬಹುದು..! ಯಾಕೆಂದರೆ ಮೊಡವೆಯೂ ಕೂಡಾ ಹಾರ್ಮೋನ್‌ ಅಸಮತೋಲನದಿಂದಲೇ ಉಂಟಾಗುತ್ತೆ ಅನ್ನೋದು.. ನಿಮಗೆ ಗೊತ್ತೇ ಇದೆ. ಹಾಗಾದರೆ ಆ ಆಯುರ್ವೇದ ಪರಿಹಾರಗಳೇನು ಎನ್ನುವುದನ್ನು ನೋಡೋಣ.

! ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

! ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

ಹಾರ್ಮೊನ್‌ ಅಸಮತೋಲನಕ್ಕೆ ಮೊದಲನೇಯ ಕಾರಣವೆಂದರೆ ಒತ್ತಡ. ನಾವು ಹೆಚ್ಚು ಒತ್ತಡವನ್ನು ಅನುಭವಿಸಿದಾಗ ಕಾರ್ಟಿಸೋಲ್ ಹಾರ್ಮೋನ್‌ಗಳು ಹೆಚ್ಚು ಬಿಡುಗಡೆಯಾಗುತ್ತವೆ, ತೀವ್ರವಾದ ಒತ್ತಡದ ಪರಿಣಾಮವಾಗಿ ಕಾರ್ಟಿಸೋಲ್ ಮಟ್ಟಗಳು ಅಸಹಜವಾಗಿ ಹೆಚ್ಚಾದಾಗ, ಎಲ್ಲಾ ಇತರ ದೈಹಿಕ ಕಾರ್ಯಗಳು ಅಪಾಯಕ್ಕೆ ಒಳಗಾಗುತ್ತವೆ. ದೇಹದಲ್ಲಿ ಈ ಹಾರ್ಮೋನ್‌ನ ಹೆಚ್ಚಳದಿಂದಾಗಿ ದೇಹದ ಶಕ್ತಿ ಇಂಗಿ ಹೋದಂತೆ ಭಾಸವಾಗಬಹುದು. ಹೇಗೆಂದರೆ ದೇಹದ ಎಲ್ಲಾ ಶಕ್ತಿಯು ಕಾರ್ಟಿಸೋಲ್ ಅನ್ನು ಬೆಂಬಲಿಸುವುದರ ಮೇಲೆ ನಿರ್ದೇಶಿಸಲ್ಪಡುತ್ತದೆ ಮತ್ತು ಎಲ್ಲಾ ಇತರ ಹಾರ್ಮೋನುಗಳನ್ನು ಇದು ನಿಯಂತ್ರಿಸುತ್ತದೆ. ಹೀಗಾಗಿ, ಒತ್ತಡವನ್ನು ಮೊದಲು ನಿರ್ವಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಒತ್ತವನ್ನು ನಿವಾರಿಸಲು ಉತ್ತಮ ನೈರ್ಮಲ್ಯದ ಜೊತೆಗೆ, ಪ್ರಕೃತಿಯೊಂದಿಗೆ ಸಮಯ ಕಳೆಯಿರಿ. ಒತ್ತಡ ನಿವಾರಣೆಗೆ ಸಾಕಷ್ಟು ನಿದ್ರೆ ಅವಶ್ಯಕ ಹಾಗಾಗಿ ಒತ್ತಡವನ್ನು ಹೆಚ್ಚಿಸುವ ಅಭ್ಯಾಸ, ಕೆಲಸಗಳನ್ನು ಕಡಿಮೆ ಮಾಡಿ, ಅದರ ಬದಲು ಮನಸ್ಸು ಸಂತೋಷವಾಗಿರುವಂತಹ ಚಟುವಡಿಟಿಕೆಯಲ್ಲಿ ತೊಡಗಿಸಿಕೊಳ್ಳಿ. ಮುಂತಾದ ಒತ್ತಡ ಕಡಿತ ತಂತ್ರಗಳನ್ನು ಅಭ್ಯಾಸ ಮಾಡುವುದು ಅತ್ಯಗತ್ಯ.

೨ ಯೋಗಭ್ಯಾಸ ಮಾಡಿ

೨ ಯೋಗಭ್ಯಾಸ ಮಾಡಿ

ಯೋಗವು ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಕೆಲವೊಂದು ಯೋಗ ಭಂಗಿಗಳು ಕೆಲವು ಗ್ರಂಥಿಗಳ ಮೇಲೆ ಕಡಿಮೆ ಒತ್ತಡ ಮತ್ತು ಹೆಚ್ಚು ಒತ್ತಡವನ್ನು ಉಂಟುಮಾಡುತ್ತವೆ. ಹಾರ್ಮೋನ್‌ ಸ್ರವಿಸುವಿಕೆಯನ್ನು ಈ ಸಾಧಾರಣ ಕಂಪ್ರೆಷನ್‌ಗಳು ಮತ್ತು ಡಿಕಂಪ್ರೆಷನ್‌ಗಳಿಂದ ನಿಯಂತ್ರಿಸಬಹುದು. ಹಾರ್ಮೋನ್‌ ಸ್ರವಿಸುವಿಕೆಯು ಯೋಗ ಭಂಗಿಗಳಿಂದ ಉತ್ತೇಜಿಸಲ್ಪಟ್ಟಿದೆ ಇದರಿಂದಾಗಿ ಹಾರ್ಮೊನ್‌ ಸಮತೋಲನಗೊಳ್ಳುತ್ತದೆ. ಭಂಗಿಗಳು, ಚಲನೆ ಮತ್ತು ಉಸಿರಾಟದ ವಿಧಾನಗಳ ಮೂಲಕ ಥೈರಾಯ್ಡ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನುಗಳನ್ನು ನಿಯಂತ್ರಿಸಲು ಯೋಗ ಸಹಾಯ ಮಾಡುತ್ತದೆ. ನಿಮಗೂ ಹಾರ್ಮೋನ್‌ ಅಸಮತೋಲನದ ಸಮಸ್ಯೆಯಿದ್ದಲ್ಲಿ ಖಂಡಿತವಾಗಿಯೂ ಇಂದಿನಿಂದಲೇ ಯೋಗ ಮಾಡಿ ನೋಡಿ ಮತ್ತು ಬದಲಾವಣೆಯನ್ನು ಗಮನಿಸಿ.

೩ ಧ್ಯಾನ

೩ ಧ್ಯಾನ

ಧಾನ್ಯ ನಮ್ಮ ಆಂತರಿಕ ಮನಸ್ಸನ್ನು ನಿಯಂತ್ರಿಸಲು ಸಹಕಾರಿ. ಅಲ್ಲದೇ ಇದು ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರಿನಲಿನ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ತಾತ್ಕಾಲಿಕವಾಗಿ ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಮೆಲಟೋನಿನ್ ನಿಮ್ಮ ನಿದ್ರೆ ಮತ್ತು ಎಚ್ಚರದ ಚಕ್ರಗಳನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸಲು ಧ್ಯಾನ ಸಹಾಯ ಮಾಡುತ್ತದೆ. ಧ್ಯಾನದ ಸಮಯದಲ್ಲಿ ಡೋಪಮೈನ್ ಬಿಡುಗಡೆಯಾಗುತ್ತದೆ. ಇದನ್ನು ಭಾವನೆ-ಉತ್ತಮ ಹಾರ್ಮೋನ್ ಎಂದು ಕರೆಯಲಾಗುತ್ತದೆ. ಧ್ಯಾನ ಒತ್ತಡವನ್ನೂ ನಿಯಂತ್ರಿಸುವುದಲ್ಲದೇ ನಿದ್ರಾಹೀನತೆಯನ್ನು ದೂರ ಮಾಡಲು ಸಹಕಾರಿ. ಉತ್ತಮ ನಿದ್ದೆ ಮತ್ತು ಒತ್ತಡಮುಕ್ತ ಮನಸ್ಸು ಹಾರ್ಮೋನ್‌ಗಳ ಸಮತೋಲನಕ್ಕೆ ಕಾರಣ.

ಹರ್ಬಲ್ ಟೀಗಳ ಸೇವನೆ

ಹರ್ಬಲ್ ಟೀಗಳ ಸೇವನೆ

ನಮ್ಮ ದೇಹದಲ್ಲಿರುವ ಯಕೃತ್ತು ಚಯಾಪಚಯ ಮತ್ತು ನಿಮ್ಮ ದೇಹದಲ್ಲಿನ ನಿರ್ವಿಶೀಕರಣ ವ್ಯವಸ್ಥೆಯ ಉಸ್ತುವಾರಿ ವಹಿಸುತ್ತದೆ, ಇವೆರಡೂ ನಿರ್ದಿಷ್ಟ ಪೋಷಕಾಂಶಗಳು ಮತ್ತು ಖನಿಜಗಳ ಮೇಲೆ ಅವಲಂಬಿತವಾಗಿದೆ. ತುಳಸಿ ಅಥವಾ ಕಾಡು ಸೇವಂತಿಗೆ ಬೇರಿನ ಚಹಾದಂತಹ ಕೆಫೀನ್ ಇಲ್ಲದ ಹರ್ಬಲ್ ಟೀ ಸೇವನೆ ಯಕೃತ್ತಿನ ಡಿಟಾಕ್ಸ್ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಹಾರ್ಮೋನ್ ಸಮತೋಲನಕ್ಕಾಗಿ ಒತ್ತಡವನ್ನು ಕಡಿಮೆ ಮಾಡುತ್ತದೆ.

ಸೀಡ್‌ ಸೈಕ್ಲಿಂಗ್

ಸೀಡ್‌ ಸೈಕ್ಲಿಂಗ್

ಸೀಡ್‌ ಸೈಕ್ಲಿಂಗ್ ನಿಮ್ಮ ಹಾರ್ಮೋನುಗಳನ್ನು ಕಾಪಾಡಿಕೊಳ್ಳಲು ಸರಳವಾದ, ಆದರೆ ಅತ್ಯಂತ ಪರಿಣಾಮಕಾಗಿದೆ. ಈ ವಿಧಾನವು ಇತ್ತೀಚಿಗೆ ಹೆಚ್ಚು ಟ್ರೆಂಡಿಂಗ್‌ನಲ್ಲಿದ್ದು ಹಾರ್ಮೋನ್‌ಗಳ ಸಮತೋಲನಕ್ಕೆ ಇದು ಉತ್ತಮವಾದ ಪರಿಹಾರ ಮಾರ್ಗವಾಗಿದೆ. ಸೀಡ್‌ ಸೈಕ್ಲಿಂಗ್‌ ಎಂದರೆ ಬೀಜಗಳ ಸೇವನೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳುವುದು. ಇದರಲ್ಲಿ ಮುಖ್ಯವಾಗಿ ಅಗಸೆ ಬೀಜ( ಫ್ಲಾಕ್ಸ್‌ ಸೀಡ್ಸ್‌), ಕುಂಬಳಕಾಯಿ ಬೀಜ, ಎಳ್ಳು ಮತ್ತು ಸೂರ್ಯಕಾಂತಿ ಬೀಜದ ಸೇವನೆ ಸೇರಿದೆ. ಇದನ್ನು ತಿಂಗಳ ಕೆಲವು ದಿನಗಳ ಮಾತ್ರ ಸೇವನೆ ಮಾಡುವುದು ಈ ಸೀಡ್‌ ಸೈಕ್ಲಿಂಗ್‌ನ ನಿಯಮ.

ಮುಟ್ಟಿನ ಮೊದಲ 13-14 ದಿನಗಳಲ್ಲಿ ಅಂದರೆ ಇದನ್ನು ಫೋಲಿಕ್ಯುಲಾರ್‌ ಹಂತವೆಂದು ಕರೆಯುತ್ತಾರೆ ಈ ಅವಧಿಯಲ್ಲಿ ಫ್ಲಾಕ್ಸ್‌ ಸೀಡ್‌ ಮತ್ತು ಕುಂಬಳಕಾಯಿ ಬೀಜವನ್ನು ಪ್ರತಿದಿನ ಒಂದು ಚಮಚದಷ್ಟು ಸೇವನೆ ಮಾಡಬೇಕು. ಇದಾದ ನಂತರ ಎರಡನೇ ಅವಧಿ ಅಂದರೆ ಲೂಟಿಯಲ್‌ ಅಂದರೆ ಮುಂದಿನ ಮುಟ್ಟಾಗುವ ದಿನದವರೆಗೂ ಸೂರ್ಯಕಾಂತಿ ಬೀಜ ಮತ್ತು ಎಳ್ಳನ್ನು ನಿತ್ಯ ಒಂದು ಚಮಚದಷ್ಟು ಸೇವಿಸುವುದಾಗಿದೆ.

ಈ ಸೀಡ್‌ ಸೈಕ್ಲಿಂಗ್‌ನಸರಳ ತಂತ್ರವು ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಕಾರಿ, ಅಲ್ಲದೇ ಮುಟ್ಟಿನ ಮುಂಚಿತವಾಗಿ ಕಾಣಿಸಿಕೊಳ್ಳುವ ಮೂಡ್‌ ಸ್ವಿಂಗ್ಸ್‌, ಸ್ತನಗಳಲ್ಲಿ ನೋವು, ಬಿಗಿತ ಮುಂತಾದ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ, ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಅನಿಯಮಿತ ಮುಟ್ಟಿನ ಸಮಸ್ಯೆಗೂ ಪರಿಹಾರ ನೀಡುತ್ತದೆ. ಇದು ಮುಟ್ಟಿನ, ಮೊದಲಾರ್ಧದಲ್ಲಿ ಈಸ್ಟ್ರೊಜೆನ್ ಮತ್ತು ಎರಡನೇಯಲ್ಲಿ ಪ್ರೊಜೆಸ್ಟರಾನ್‌ ಹಾರ್ಮೋನುಗಳ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

English summary

Ayurvedic Tips to Control Hormone Imbalance in kannada

here are the ayurvedic tips to contol harmone imbalance in kannada,
X
Desktop Bottom Promotion