For Quick Alerts
ALLOW NOTIFICATIONS  
For Daily Alerts

ಮಹಿಳೆಯರಲ್ಲಿ ರಕ್ತ ಹೀನತಗೆ ಕಾರಣವೇನು? ಇದರ ಅಪಾಯವೇನು, ಗುಣಪಡಿಸುವುದು ಹೇಗೆ?

|

ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬರುತ್ತದೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಂಪು ರಕ್ತ ಕಣಗಳು ಉತ್ಪತ್ತಿಯಾಗದೇ ಹೋದಾಗ ರಕ್ತ ಹೀನತೆ ಉಂಟಾಗುವುದು. ಕೆಂಪು ರಕ್ತಕಣಗಳು ದೇಹದ ನರಗಳಿಗೆ ಆಮ್ಲಜನಕ ಪೂರೈಕೆಯನ್ನು ಮಾಡುತ್ತದೆ. ಕೆಂಪು ರಕ್ತಕಣಗಳು ಕಡಿಮೆಯಾದರೆ ದೇಹಕ್ಕೆ ಆಮ್ಲಜನಕದ ಪೂರೈಕೆ ಕೂಡ ಕಡಿಮೆಯಾಗುವುದು.

ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದಂಶದ ಪೂರೈಕೆಯಾಗದಿದ್ದಾಗ ಕೆಂಪು ರಕ್ತಕಣಗಳು ಕಡಿಮೆಯಾಗುವುದು. ಇದರ ಪರಿಣಾಮವಾಗಿ ರಕ್ತಹೀನತೆ ಉಂಟಾಗಿ ಸುಸ್ತು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು.

ರಕ್ತ ಹೀನತೆ ಯಾರಲ್ಲಿ ಹೆಚ್ಚಾಗಿ ಕಂಡು ಬರುವುದು

ರಕ್ತ ಹೀನತೆ ಯಾರಲ್ಲಿ ಹೆಚ್ಚಾಗಿ ಕಂಡು ಬರುವುದು

ರಕ್ತಹೀನತೆ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲಿ ಇಂಥವರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

* ಗರ್ಭಿಣಿಯರಲ್ಲಿ: ಕಬ್ಬಣದಂಶದ ಕೊರತೆಯಿಂದಾಗಿ ಪ್ರತೀ 6 ಗರ್ಭಿಣಿಯರಲ್ಲಿ ಒಬ್ಬರಲ್ಲಿ ರಕ್ತ ಹೀನತೆ ಸಮಸ್ಯೆ ಕಂಡು ಬರುತ್ತಿದೆ. ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೆ ಹೆಚ್ಚಿನ ಕಬ್ಬಿಣದಂಶದ ಅಗ್ಯತವಿರುತ್ತದೆ.

* ಹೆರಿಗೆ: ಕೆಲವರಿಗೆ ಹೆರಿಗೆ ಸಂದರ್ಭದಲ್ಲಿ ಅತ್ಯಧಿಕ ರಕ್ತಸ್ರಾವ ಉಂಟಾಗಿ ರಕ್ತ ಹೀನತೆ ಉಂಟಾಗುವುದು.

* ಅತ್ಯಧಿಕ ರಕ್ತಸ್ರಾವ: ಕೆಲವು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಅತ್ಯಧಿಕ ರಕ್ತಸ್ರಾವದ ಸಮಸ್ಯೆ ಇರುತ್ತದೆ. ಅಂಥವರಲ್ಲಿ ರಕ್ತಹೀನತೆ ಸಮಸ್ಯೆ ಉಂಟಾಗುವುದು.

ರಕ್ತಹೀನತೆ ಸಮಸ್ಯೆ ಉಂಟಾದರೆ ಕಂಡು ಬರುವ ಲಕ್ಷಣಗಳು

ರಕ್ತಹೀನತೆ ಸಮಸ್ಯೆ ಉಂಟಾದರೆ ಕಂಡು ಬರುವ ಲಕ್ಷಣಗಳು

* ತಲೆಸುತ್ತು

* ಸುಸ್ತು

*ತಲೆನೋವು

* ದೇಹದ ಉಷ್ಣತೆ ಕಡಿಮೆಯಾಗುವುದು

* ಬಿಳುಚಿದ ತ್ವಚೆ

* ಅತ್ಯಧಿಕ ಹೃದಯಬಡಿತ

* ಉಸಿರಾಟದಲ್ಲಿ ತೊಂದರೆ, ಎದೆಯಲ್ಲಿ ನೋವು

* ಉಗುರುಗಳು ತುಂಡಾಗುವುದು

* ಐಸ್‌ಕ್ರೀಮ್‌, ತಣ್ಣನೆಯ ಪಾನೀಯಗಳು ಬೇಕೆನಿಸುವುದು. ಕಲ್ಲು, ಪೇಪರ್, ಸುಣ್ಣ ಈ ರೀತಿ ತಿನ್ನಲು ಯೋಗ್ಯವಲ್ಲದ ವಸ್ತುಗಳನ್ನು ತಿನ್ನಬೇಕೆನಿಸುವುದು.

ಮಹಿಳೆಯರಲ್ಲಿ ಕಬ್ಬಿಣದಂಶ ಕಡಿಮೆಯಾಗಲು ಕಾರಣಗಳು

ಮಹಿಳೆಯರಲ್ಲಿ ಕಬ್ಬಿಣದಂಶ ಕಡಿಮೆಯಾಗಲು ಕಾರಣಗಳು

*ಜೀರ್ಣಕ್ರಿಯೆಯಲ್ಲಿ ತೊಂದರೆ ಅಂದರೆ ಅಲ್ಸರ್, ಕರುಳಿನ ತೊಂದರೆ ಅಥವಾ ಕರುಳಿನ ಕ್ಯಾನ್ಸರ್

* ತುಂಬಾ ಸಮಯದಿಂದ ಆಸ್ಪಿರಿನ್ ಅಥವಾ ನೋವು ನಿವಾರಕ ಮಾತ್ರೆಗಳನ್ನು ತಿನ್ನುತ್ತಿದ್ದರೆ

* ಆಗಾಗ ರಕ್ತದಾನ ಮಾಡುವುದು ಅಥವಾ ನಿಮ್ಮ ದೇಹ ರಕ್ತದಾನದ ಬಳಿಕ ಚೇತರಿಸಿಕೊಳ್ಳುವ ಮುನ್ನವೇ ರಕ್ತದಾನ ಮಾಡುವುದು.

* ಮುಟ್ಟಿನ ಸಮಯದಲ್ಲಿ ಅತ್ಯಧಿಕ ರಕ್ತಸ್ರಾವ

* ಗರ್ಭಾಶಯದ ಫೈಬ್ರಾಯ್ಡ್ (Uterine fibroids) (ಗರ್ಭಾಶಯದಲ್ಲಿ ಬೆಳೆಯುವ ಕ್ಯಾನ್ಸರ್‌ಕಾರಕವಲ್ಲದ ಗಡ್ಡೆಗಳು) ಇದರಿಂದ ಅತ್ಯಧಿಕ ರಕ್ತಸ್ರಾವ ಉಂಟಾಗುವುದು.

* ಗರ್ಭಿಣಿಯಾಗಿದ್ದಾಗ ಕಬ್ಬಿಣದಂಶ ಅಧಿಕ ಬೇಕಾಗಿರುವುದು: ಗರ್ಭಿಣಿಯಾಗಿದ್ದಾಗ ಮಗುವಿನ ಬೆಳವಣಿಗೆಗೆ ಹೆಚ್ಚಿನ ಕಬ್ಬಿಣದಂಶ ಬೇಕಾಗುವುದು. ಕಬ್ಬಿಣದಂಶದ ಕೊರತೆ ಉಂಟಾದರೆ ರಕ್ತಹೀನತೆ ಉಂಟಾಗುವುದು.

* ಆಹಾರಕ್ರಮದಲ್ಲಿ ಕಬ್ಬಿಣದಂಶದ ಆಹಾರದ ಕೊರತೆ: ಮಾಂಸ, ಚಿಕನ್‌, ಮೀನಿನಲ್ಲಿ ಕಬ್ಬಿಣದಂಶವಿರುವ ಸಸ್ಯಗಳಲ್ಲಿ ಇರುವುದಕ್ಕಿಂತ 3 ಪಟ್ಟು ಅಧಿಕ ಕಬ್ಬಿಣದಂಶವಿರುತ್ತದೆ. ಮಾಂಸಾಹಾರ ಸೇವನೆ ಮಾಡದವರು ಸೊಪ್ಪನ್ನು ಹೆಚ್ಚು ಸೇವಿಸಬೇಕು. ಇದರ ಜೊತೆಗೆ ವಿಟಮಿನ್ ಸಿ ಇರುವ ಆಹಾರ ಸೇವಿಸಬೇಕು.

* ದೇಹವು ಕಬ್ಬಿಣದಂಶವನ್ನು ಹೀರಿಕೊಳ್ಳದಿದ್ದರೆ

ಕೆಲವೊಂದು ಆರೋಗ್ಯ ಸಮಸ್ಯೆಯಿಂದಾಗಿ ದೇಹವು ಕಬ್ಬಿಣದಂಶವನ್ನು ಹೀರಿಕೊಳ್ಳುವುದಿಲ್ಲ. ಹೀಗಾದಾಗ ರಕ್ತ ಹೀನತೆ ಸಮಸ್ಯೆ ಉಂಟಾಗುವುದು.

ರಕ್ತಹೀನತೆ ಸಮಸ್ಯೆಯಿದ್ದಾಗ ವೈದ್ಯರ ಬಳಿ ಇವುಗಳನ್ನು ಕೇಳಿ

ರಕ್ತಹೀನತೆ ಸಮಸ್ಯೆಯಿದ್ದಾಗ ವೈದ್ಯರ ಬಳಿ ಇವುಗಳನ್ನು ಕೇಳಿ

* ವೈದ್ಯರು ನಿಮ್ಮ ಋತುಚಕ್ರದ ಬಗ್ಗೆ ಕೇಳಬಹುದು, ವೈದ್ಯರು ಕೇಳಿದ ಪ್ರಶ್ನೆಗಳಿಗೆ ಯಾವುದೇ ಸಂಕೋಚವಿಲ್ಲದೆ ಉತ್ತರ ನೀಡಿ.

* ದೈಹಿಕ ಪರೀಕ್ಷೆ ಮಾಡಿಸಿಕೊಳ್ಳಿ

* ರಕ್ತ ಪರೀಕ್ಷೆ ಮಾಡಿ

* ನಿಮ್ಮ ಆಹಾರಕ್ರಮ ಹೇಗಿರಬೇಕೆಂದು ವೈದ್ಯರ ಬಳಿ ಕೇಳಿ ತಿಳಿದುಕೊಳ್ಳಿ.

ಐರನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳುತ್ತಿದ್ದರೆ ಅಡ್ಡಪರಿಣಾಮ ತಡೆಗಟ್ಟುವುದು ಹೇಗೆ?

ಐರನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳುತ್ತಿದ್ದರೆ ಅಡ್ಡಪರಿಣಾಮ ತಡೆಗಟ್ಟುವುದು ಹೇಗೆ?

ನಿಮ್ಮಲ್ಲಿ ಕಬ್ಬಿಣದಂಶ ಹೆಚ್ಚಾಗಲು ವೈದ್ಯರು ಐರನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳುವಂತೆ ಸೂಚಿಸಬಹುದು. ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡಪರಿಣಾಮವೂ ಉಂಟಾಗಬಹುದು, ಇದನ್ನು ತಡೆಗಟ್ಟಲು ಹೀಗೆ ಮಾಡಿ.

* ಮೊದಲು ವೈದ್ಯರು ಸೂಚಿಸಿದಕ್ಕಿಂತ ಅರ್ಧ ಮಾತ್ರೆ ತೆಗೆದುಕೊಳ್ಳಿ. ನಂತರ ನಿಧಾನಕ್ಕೆ ಫುಲ್‌ ಡೋಸ್‌ ತೆಗೆದುಕೊಳ್ಳಿ.

* ನೀವು ಎರಡು ಐರನ್‌ ಸಪ್ಲಿಮೆಂಟ್‌ ತೆಗೆದುಕೊಳ್ಳುವುದಾದರೆ ಒಂದು ಬ್ರೇಕ್‌ಫಾಸ್ಟ್ ಆದ ಮೇಲೆ ಸೇವಿಸಿದರೆ ಮತ್ತೊಂದು ರಾತ್ರಿ ಊಟವಾದ ಬಳಿಕ ಸೇವಿಸಿ.

* ನೀವು ತೆಗೆದುಕೊಳ್ಳುವ ಮಾತ್ರೆಯಿಂದ ಅಡ್ಡಪರಿಣಾಮವಾದರೆ ವೈದ್ಯರ ಬಳಿ ಬೇರೆ ಮಾತ್ರೆ ನೀಡುವಂತೆ ಹೇಳಿ.

* ನೀವು ಮಾತ್ರೆ ಬದಲಿಗೆ ಸಿರಪ್ ಕುಡಿಯುತ್ತಿದ್ದರೆ ಬಾಯಿ ಒಳಗಡೆ ಹಾಕಿ, ಹಲ್ಲಿಗೆ ತಾಗಿದರೆ ಹಲ್ಲು ಕಪ್ಪು-ಕಪ್ಪು ಕಾಣುವುದು.

ರಕ್ತಹೀನತೆಗೆ ಚಿಕಿತ್ಸೆ ಪಡೆಯದಿದ್ದರೆ ಏನಾಗುತ್ತೆ?

ರಕ್ತಹೀನತೆಗೆ ಚಿಕಿತ್ಸೆ ಪಡೆಯದಿದ್ದರೆ ಏನಾಗುತ್ತೆ?

ರಕ್ತಹೀನತೆಗೆ ಚಿಕಿತ್ಸೆ ಪಡೆಯದಿದ್ದರೆ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಅಂಗಾಂಗಗಳಿಗೆ ಹಾನಿಯುಂಟಾಗುವುದು. ಇದರಿಂದ ಹೃದಯಕ್ಕೆ ಕೂಡ ತೊಂದರೆ ಉಂಟಾಗುವುದು.

ರಕ್ತ ಹೀನತೆ ಸಮಸ್ಯೆಗೆ ಚಿಕಿತ್ಸೆಯೇನು?

ರಕ್ತ ಹೀನತೆ ಸಮಸ್ಯೆಗೆ ಚಿಕಿತ್ಸೆಯೇನು?

* ವೈದ್ಯರು ಸೂಚಿಸಿದ ಸಲಹೆಗಳನ್ನು ಪಾಲಿಸಿ, ಚಿಕಿತ್ಸೆ ಪಡೆಯಿರಿ

* ಕಬ್ಬಿಣದಂಶ ಅಧಿಕವಿರುವ ಆಹಾರ ಸೆವನೆ: ಕಿತ್ತಳೆ ಜ್ಯೂಸ್, ಸ್ಟ್ರಾಬೆರ್ರಿ, ಬ್ರೊಕೋಲಿ ಇತರ ವಿಟಮಿನ್ ಸಿ ಅದಿಕವಿರುವ ಆಹಾರಗಳ ಸೇವನೆ. ಇವುಗಳ ಸೇವನೆಯಿಂದ ದೇಹವು ಕಬ್ಬಿಣದಂಶವನ್ನು ಹೀರಿಕೊಳ್ಳುತ್ತದೆ.

* ಆರೋಗ್ಯಕರ ಆಹಾರ ಸೇವಿಸಿ: ಫಾಸ್ಟ್‌ ಫುಡ್‌ ತಿನ್ನುವ ಬದಲಿಗೆ ಆರೋಗ್ಯಕರ ಆಹಾರ ಸೇವಿಸಿ.

* ಕಾಫಿ, ಟೀ ಸೇವನೆ ಕಡಿಮೆ ಮಾಡಿ

ಮಹಿಳೆಯರಿಗೆ ಎಷ್ಟು ಪ್ರಮಾಣದಲ್ಲಿ ಕಬ್ಬಿಣದಂಶದ ಅಗ್ಯತವಿರುತ್ತದೆ?

ನಿಮ್ಮ ವಯಸ್ಸಿಗೆ ತಕ್ಕಂತೆ ಎಷ್ಟು ಪ್ರಮಾಣದಲ್ಲಿ ಕಬ್ಬಿಣದಂಶ ಅಗ್ಯತವಿದೆ, ಎದೆ ಹಾಲುಣಿಸುವ ತಾಯಂದಿರು, ಗರ್ಭಿಣಿಯರು, ಸಸ್ಯಾಹಾರಿ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ನೋಡಿ.

English summary

Anemia in Women Causes, Symptoms, Risks, Treatment and Prevention in Kannada

Anemia in Women Causes, Symptoms, Risks, Treatment and Prevention in Kannada, Read on...
Story first published: Friday, November 26, 2021, 11:16 [IST]
X
Desktop Bottom Promotion