For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ಉಪಾಹಾರದ ಸಮಯದಲ್ಲಿ ನಮ್ಮಿಂದ ಆರಿವಿಲ್ಲದೇ ಆಗುತ್ತಿರುವ ಪ್ರಮಾದಗಳು

|

ಬೆಳಗ್ಗಿನ ಉಪಾಹಾರ, ಇದು ಅತ್ಯಂತ ಅವಶ್ಯವಾದ ಆಹಾರವಾಗಿದ್ದು ಇದನ್ನು ತಪ್ಪಿಸಿಕೊಳ್ಳಲೂಬಾರದು ಹಾಗೂ ತಡವಾಗಿಸಲೂ ಬಾರದು. ಏಕೆಂದರೆ ರಾತ್ರಿಯ ನಿದ್ದೆಯ ಹೊತ್ತಿನಲ್ಲಿ ನಮ್ಮ ದೇಹದ ಐಚ್ಛಿಕ ಕಾರ್ಯಗಳು ಸ್ಥಗಿತಗೊಂಡು ಅನೈಚ್ಛಿಕ ಕಾರ್ಯಗಳು ಜರುಗುತ್ತವೆ. ಈ ಕಾರ್ಯಗಳನ್ನು ನಿರ್ವಹಿಸಲು ಮೆದುಳು ಹಾಗೂ ಮೆದುಳುಬಳ್ಳಿಗಳು ದೇಹದ ಗರಿಷ್ಟ ಪ್ರಮಾಣದ ರಕ್ತಪರಿಚಲನೆ ಮತ್ತು ಶಕ್ತಿಯನ್ನು ಪಡೆಯುತ್ತವೆ. ಬೆಳಗ್ಗೆದ್ದ ತಕ್ಷಣ ಈ ಸ್ಥಿತಿಯಿಂದ ಜಾಗೃತ ಸ್ಥಿತಿಗೆ ಮರಳಲು ಮೆದುಳಿಗೆ ಕೆಲ ನಿಮಿಷಗಳ ಕಾಲದ ಅವಶ್ಯಕತೆ ಇದೆ. ಈ ನಿಮಿಷಗಳ ಕಾಲ ನಮ್ಮ ಕಣ್ಣು, ಮೂಗುಗಳು ಹೊರಗಿನ ವಾಸ್ತವಕ್ಕೆ ಹೊಂದಿಕೊಳ್ಳಲು ಬೇಕಾಗುವುದು ಇದೇ ಕಾರಣಕ್ಕೆ. ಬಳಿಕ ಜಾಗೃತಾವಸ್ಥೆಯ ಕಾರ್ಯಗಳನ್ನು ಹೊಸದಾಗಿ ಪ್ರಾರಂಭಿಸಬೇಕಾಗುತ್ತದೆ.

ಈ ಸಮಯದಲ್ಲಿ ದೇಹಕ್ಕೆ ಒದಗಿಸುವ ಆಹಾರ, ನೀರು, ಬೆಳಕು, ಸ್ನಾನ, ಗಾಳಿ ಎಲ್ಲವೂ ಪ್ರಕೃತಿಗೆ ಅನುಗುಣವಾಗುವಂತಿರಬೇಕು. ಆಗಲೇ ನಮ್ಮ ಆರೋಗ್ಯ ಉತ್ತಮವಾಗಿದ್ದು ದಿನದ ಎಲ್ಲಾ ಕಾರ್ಯಗಳನ್ನು ಚೈತನ್ಯದಿಂದ ಪೂರೈಸಲು ಸಾಧ್ಯವಾಗುತ್ತದೆ. ಆದರೆ ನಮಗರಿವಿಲ್ಲದೇ ನಾವು ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡಿದ್ದು ಉಪಾಹಾರದ ಸಮಯದಲ್ಲಿ ದೇಹಕ್ಕೆ ಪೂರಕವಲ್ಲದ ಪ್ರಮಾದಗಳನ್ನು ನಾವಾಗಿಯೇ ಹೇರಿಕೊಳ್ಳುತ್ತಿದ್ದಿರಬಹುದು. ಬನ್ನಿ, ಈ ಪ್ರಮಾದಗಳು ಯಾವುವು ಎಂದು ನೋಡೋಣ:

ಉಪಾಹಾರದಲ್ಲಿ ಕಾರ್ಬೋಹೈಡ್ರೇಟುಗಳನ್ನು ಸೇವಿಸುವುದು

ಉಪಾಹಾರದಲ್ಲಿ ಕಾರ್ಬೋಹೈಡ್ರೇಟುಗಳನ್ನು ಸೇವಿಸುವುದು

ಉಪಾಹಾರವನ್ನು ರಾಜನಂತೆಯೂ ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆಯೂ ರಾತ್ರಿಯೂಟವನ್ನು ದರಿದ್ರನಂತೆಯೂ ಸೇವಿಸಿ ಎಂದು ನಮಗೆ ಹಿಂದಿನಿಂದಲೂ ಹೇಳಲಾಗುತ್ತಾ ಬರಲಾಗಿದೆ. ಆದರೆ ಈ ವಾಕ್ಯವನ್ನು ನಾವು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ ಅನ್ನಿಸುತ್ತದೆ. ಏಕೆಂದರೆ ರಾಜ ಸೇವಿಸುವ ಉಪಾಹಾರದ ಮೌಲ್ಯ ಹೆಚ್ಚಲು ಕಾರ್ಬೋಹೈಡ್ರೇಟುಗಳು ಇದ್ದೇ ಇರುತ್ತವೆ. ಆದರೆ ಕಾರ್ಬೋಹೈಡ್ರೇಟುಗಳು ಹೆಚ್ಚಿರುವ ಆಹಾರಗಳಾದ ಬ್ರೆಡ್, ಸಕ್ಕರೆ ತುಂಬಿದ ಸಿದ್ಧ ತಿನಿಸುಗಳು ಮೊದಲಾದವು ಉಪಾಹಾರಕ್ಕೆ ಸೂಕ್ತವಲ್ಲ. ಏಕೆಂದರೆ ಈ ಕಾರ್ಬೋಹೈಡ್ರೇಟುಗಳು ಬೇಗನೇ ಜೀರ್ಣಗೊಂಡು ಕೊಂಚ ಹೊತ್ತಿನಲ್ಲಿಯೇ ಮತ್ತೆ ಹಸಿವು ಆವರಿಸುತ್ತದೆ. ಬದಲಿಗೆ ಪ್ರೋಟೀನ್ ಯುಕ್ತ ಆಹಾರಗಳು ಅಥವಾ ಒಣಫಲಗಳಿಂದ ಕೂಡಿದ ಹಣ್ಣುಗಳ ರಸವನ್ನು ಸೇವಿಸುವುದು ಉತ್ತಮ. ಇನ್ನೂ ಉತ್ತಮವೆಂದರೆ ಜೀರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವ ಆಹಾರಗಳಾದ ಓಟ್ಸ್ ಮೊದಲಾದವುಗಳನ್ನು ಸೇವಿಸಬಹುದು.

Most Read: ಇಂದಿಗೂ ಜೀವಂತವಿರುವ ಈ ಪ್ರಾಚೀನ ಪದ್ಧತಿಯ ಮನೆಮದ್ದುಗಳನ್ನು ನೀವೊಮ್ಮೆ ಪ್ರಯತ್ನಿಸಿ

ಉಪಾಹಾರದ ಸಮಯದಲ್ಲಿ ಈಮೇಲ್, ವಾಟ್ಸಪ್ ಪರಿಶೀಲಿಸುವುದು

ಉಪಾಹಾರದ ಸಮಯದಲ್ಲಿ ಈಮೇಲ್, ವಾಟ್ಸಪ್ ಪರಿಶೀಲಿಸುವುದು

ಬೆಳಿಗ್ಗೆದ್ದ ತಕ್ಷಣ ಏನು ಮಾಡುತ್ತೀರಿ? ಇಂದಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರ ಪ್ರಥಮ ಕಾರ್ಯವೆಂದರೆ 'ಫೋನ್ ಚೆಕ್ ಮಾಡುವುದು'ಎಂದಾಗಿದೆ. ಆದರೆ ಬೆಳಿಗ್ಗೆದ್ದ ತಕ್ಷಣವೇ ಯಾವುದೇ ಪ್ರಖರ ಬೆಳಕನ್ನು ನೋಡಬಾರದು. ರಾತ್ರಿಯ ನಿದ್ದೆಯ ಸಮಯದಲ್ಲಿ ನಮ್ಮ ಕಣ್ಣುಗಳು ಮುಚ್ಚಿದ್ದು ಕಣ್ಣೀರು ಬಹುತೇಕ ಇಲ್ಲವಾಗಿರುತ್ತದೆ. ಹಾಗಾಗಿ ಒಣಕಣ್ಣುಗಳಿಂದ ಪ್ರಖರ ಬೆಳಕನ್ನು ನೋಡುವುದು ಒಳ್ಳೆಯದಲ್ಲ ಹಾಗೂ ಕ್ರಮೇಣ ಕಣ್ಣಿಗೆ ಹಾನಿಯುಂಟುಮಾಡಬಹುದು.

ಉಪಾಹಾರದ ಬಳಿಕವೇ ಹಲ್ಲುಜ್ಜುವುದು!

ಉಪಾಹಾರದ ಬಳಿಕವೇ ಹಲ್ಲುಜ್ಜುವುದು!

ಬೆಳಿಗ್ಗೆದ್ದ ತಕ್ಷಣ ಮೊದಲು ಮಾಡಬೇಕಾದ ಕಾರ್ಯವೆಂದರೆ ಹಲ್ಲುಜ್ಜುವುದು. ಇದನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು, ಉಪಾಹಾರದ ಬಳಿಕವಂತೂ ಸರ್ವಥಾ ಅಲ್ಲ! ಒಂದು ವೇಳೆ ನಿಮ್ಮ ಉಪಾಹಾರದಲ್ಲಿ ಆಮ್ಲೀಯವಾದುದೇನಾದರೂ ಇದ್ದರೆ, (ಕಿತ್ತಳೆ, ಲಿಂಬೆರಸ, ಮೊಸರು, ಕಾಫಿ) ಉಪಾಹಾರದ ಬಳಿಕ ಈ ಆಮ್ಲೀಯತೆ ಹಲ್ಲುಗಳ ಮೇಲೆ ಅಲ್ಪ ಪ್ರಮಾಣದ ಪ್ರಭಾವ ಬೀರಿರುತ್ತದೆ. ಈಗ ಹಲ್ಲುಜ್ಜುವ ಬ್ರಶ್ ನಿಂದ ಉಜ್ಜಿಕೊಂಡರೆ ಪ್ರಭಾವ ಬೀರಿರುವ ಭಾಗದಲ್ಲಿ ಕೊಂಚ ಹಲ್ಲಿನ ಅಂಶ ಸಡಿಲಗೊಂಡು ಹೊರಬೀಳುತ್ತದೆ. ಇದನ್ನು ಹಲ್ಲಿನ ಸವೆತ ಎನ್ನುತ್ತಾರೆ. ಉಪಾಹಾರದ ಬಳಿಕ ಹಲ್ಲುಜ್ಜುವುದರಿಂದ ಹಲ್ಲಿನ ಸವೆತ ಗರಿಷ್ಟವಾಗುತ್ತದೆ.

ವ್ಯಾಯಾಮ ಶಾಲೆಗೆ ಹೋಗುವ ಅವಸರಕ್ಕಾಗಿ ನಿದ್ದೆಯನ್ನು ತ್ಯಜಿಸುವುದು

ವ್ಯಾಯಾಮ ಶಾಲೆಗೆ ಹೋಗುವ ಅವಸರಕ್ಕಾಗಿ ನಿದ್ದೆಯನ್ನು ತ್ಯಜಿಸುವುದು

ವ್ಯಾಯಾಮ ತುಂಬಾ ಅವಶ್ಯಕ, ಆದರೆ ರಾತ್ರಿಯ ಸವಿನಿದ್ದೆ ಇನ್ನೂ ಅವಶ್ಯಕ. ಒಂದು ವೇಳೆ ತೂಕ ಇಳಿಸಲು ನೀವು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು ಇದಕ್ಕಾಗಿ ಆರೋಗ್ಯಕರ ದಿನಚರಿಯನ್ನು ಅನುಸರಿಸುತ್ತಿದ್ದರೆ ಇದರ ಹುರುಪಿನಲ್ಲಿ ವ್ಯಾಯಮದ ಸಮಯವನ್ನು ಹೆಚ್ಚಿಸಲು ನಿದ್ದೆಯ ಸಮಯವನ್ನು ಕಳೆಯದಿರಿ. ಏಕೆಂದರೆ ಶರೀರಕ್ಕೆ ಸಾಕಷ್ಟು ವಿಶ್ರಾಂತಿ ದೊರಕದೇ ಇದ್ದರೆ ವ್ಯಾಯಾಮ ಹಾಗೂ ನಿಮ್ಮ ಕೆಲಸದಲ್ಲಿಯೂ ನಿಮ್ಮ ಪ್ರದರ್ಶನ ಕುಂಠಿತಗೊಳ್ಳುವುದನ್ನು ಗಮನಿಸಬಹುದು. ಹಾಗಾಗಿ ಉತ್ತಮ ದೇಹದಾರ್ಢ್ಯತೆಗೆ ಉತ್ತಮ ನಿದ್ದೆಯೂ ಅವಶ್ಯವಾಗಿದೆ.

Most Read: ಆಯುರ್ವೇದದ ಪ್ರಕಾರ ಮುಂಜಾನೆಯ ದಿನಚರಿ ಹೀಗಿರಬೇಕು : ಇದನ್ನೇ ತಪ್ಪದೇ ಪಾಲಿಸಿ

ಮನೆಯಲ್ಲಿ ಕತ್ತಲಾವರಿಸಿರುವಂತೆ ಮಾಡುವುದು

ಮನೆಯಲ್ಲಿ ಕತ್ತಲಾವರಿಸಿರುವಂತೆ ಮಾಡುವುದು

ನಮ್ಮಲ್ಲಿ ಹೆಚ್ಚಿನವರಿಗೆ ಬೆಳಿಗ್ಗೆದ್ದ ಬಳಿಕವೂ ಕಿಟಕಿಯ ಪರದೆಯನ್ನು ಹಾಕಿಯೇ ಇದ್ದು ಒಳಗಿನ ದೀಪವನ್ನೂ ಬೆಳಗದೇ ಕತ್ತಲಾವರಿಸಿದಂತೆಯೇ ಇರುವಂತೆ ಮಾಡುವ ಅಭ್ಯಾಸವಿರುತ್ತದೆ. ಏಕೆಂದರೆ ನಿದ್ದೆಯ ಬಳಿಕ ಪ್ರಖರ ಬೆಳಕಿಗೆ ಕಣ್ಣು ಕುಕ್ಕುವುದನ್ನು ತಪ್ಪಿಸಲು ಎಲ್ಲರೂ ಈ ಕ್ರಮಕ್ಕೆ ಮೊರೆಹೋಗುತ್ತಾರೆ. ಆದರೆ ನಮ್ಮ ದೇಹ ರಾತ್ರಿ ಹಗಲಿನ ಬೆಳಕಿನ ವ್ಯವಸ್ಥೆಗೆ ಹೊಂದಿ ಕೊಳ್ಳುವಂತೆಯೇ ರಚನೆಯಾಗಿದೆ. ಹಾಗಾಗಿ ಬೆಳಗಾಗಿದೆ ಎಂದು ಸೂಚಿಸಲು ಬೆಳಗ್ಗಿನ ಬೆಳಕು ಅವಶ್ಯವಾಗಿದ್ದು ಈ ಮೂಲಕ ನಮ್ಮ ದೇಹದ ನಿಸರ್ಗದತ್ತ ಗಡಿಯಾರ ಸೂಕ್ತ ರೂಪದಲ್ಲಿ ವ್ಯವಸ್ಥೆಗಳನ್ನು ಪ್ರಾರಂಭಿಸಲು ಹಾಗೂ ನಿಲ್ಲಿಸಲು ನೆರವಾಗುತ್ತದೆ. ತನ್ಮೂಲಕ ಇಡಿಯ ದಿನ ಉತ್ತಮ ಚೈತನ್ಯ ಪಡೆದಿರಲು ಸಾಧ್ಯವಾಗುತ್ತದೆ.

ಬಿಸಿನೀರಿನಲ್ಲಿ ಸ್ನಾನ ಮಾಡುವುದು

ಬಿಸಿನೀರಿನಲ್ಲಿ ಸ್ನಾನ ಮಾಡುವುದು

ಬೆಳಿಗ್ಗೆದ್ದ ಬಳಿಕ ಬಿಸಿನೀರಿನ ಸ್ನಾನ ಆಹ್ಲಾದಕರವೇನೋ ಸರಿ, ಆದರೆ ಇದರಿಂದ ದೇಹ ಇಡಿಯ ದಿನ ಆಲಸಿತನದಿಂದ ಕಳೆಯುವಂತಾಗುತ್ತದೆ. ಬದಲಿಗೆ ತಣ್ಣೀರಿನ ಸ್ನಾನದಿಂದ ಇಡಿಯ ದಿನ ಚೈತನ್ಯ ಇರುತ್ತದೆ. ಬಿಸಿನೀರು ನಮ್ಮ ದೇಹದ ಮೇಲೆ ಬಿದ್ದಾಕ್ಷಣ ನಮ್ಮ ಮೆದುಳು ಸ್ನಾಯುಗಳನ್ನು ಸಡಿಲಿಸುವ ಸೂಚನೆಗಳನ್ನು ನೀಡುತ್ತದೆ. ಹಾಗಾಗಿ ಇಡಿಯ ದೇಹ ಸಡಿಲಗೊಂಡು ಆಯಾಸ ಆವರಿಸುತ್ತದೆ. ಹಾಗಾಗಿ ಬೆಳಿಗ್ಗೆ ತಣ್ಣೀರಿನ ಸ್ನಾನವೇ ಉತ್ತಮ. ತಣ್ಣೀರೆಂದರೆ ಮರಗಟ್ಟುವ ತಣ್ಣೀರಲ್ಲ, ಬದಲಿಗೆ ಅತ್ತ ಬಿಸಿಯೂ ಅಲ್ಲದ, ಇತ್ತ ತಣಪೂ ಅಲ್ಲದ, ಸರಿಸುಮಾರು ನಮ್ಮ ದೇಹದ ತಾಪಮಾನಕ್ಕೆ ಕೊಂಚವೇ ಕಡಿಮೆ ಇದ್ದಷ್ಟು ಬೆಚ್ಚಗಿದ್ದರೆ ಉತ್ತಮ.

English summary

worst things you could be doing in the morning During breakfast!

We all have been told 'Eat breakfast like a king, lunch like a prince and dinner like a pauper' but we might be getting it wrong altogether. If you think loading up on carbs for breakfast is right, it is not. Having a carb loaded breakfast such as sugary cereals, breads etc. is not right as they are simple carbohydrates which will make you feel hungry faster. Instead, focus on proteins or smoothies with nuts.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X