For Quick Alerts
ALLOW NOTIFICATIONS  
For Daily Alerts

ವಿಜ್ಞಾನಿಗಳ ಪ್ರಕಾರ-ವಯರ್ ಲೆಸ್‌ಹೆಡ್ ಫೋನ್‌ನಿಂದ ಕ್ಯಾನ್ಸರ್ ಅಪಾಯ!

|

ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ಮನುಷ್ಯನು ಎಷ್ಟು ಅವಲಂಬಿತವಾಗಿದ್ದಾನೆ ಎಂದರೆ ಅದನ್ನು ಬಿಟ್ಟಿರಲು ಅವನಿಗೆ ಸಾಧ್ಯವಾಗುವುದಿಲ್ಲ. ಮೊಬೈಲ್, ಟಿವಿ ಇತ್ಯಾದಿಗಳು ಮನುಷ್ಯನ ದೈನಂದಿನ ಕೆಲಸಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದರಲ್ಲೂ ಮೊಬೈಲ್ ಅನ್ನುವುದು ಜೀವನದ ಅತೀ ಮುಖ್ಯ ಸಾಧನ ಎಂದೇ ಪರಿಗಣಿಸಲಾಗಿದೆ. ಮೊಬೈಲ್ ಇಲ್ಲದೆ ಮನುಷ್ಯನ ಜೀವನವೇ ಇಲ್ಲ ಎನ್ನುವಷ್ಟು ಅದನ್ನು ಹಚ್ಚಿಕೊಂಡಿದ್ದಾನೆ. ದಿನನಿತ್ಯವೂ ಮೊಬೈಲ್ ಗೆ ಸಂಬಂಧಿಸಿದ ಏನಾದರೊಂದು ಸಾಧನಗಳು ಬಿಡುಗಡೆಯಾಗುತ್ತಲೇ ಇರುತ್ತದೆ. ಇದನ್ನು ನಾವು ಖರೀದಿ ಮಾಡಿ ಉಪಯೋಗಿಸುತ್ತೇವೆ.

ಆದರೆ ಇಂತಹ ಎಲೆಕ್ಟ್ರಾನಿಕ್ ಸಾಧನಗಳಿಂದ ಆಗುವ ಹಾನಿಯ ಬಗ್ಗೆ ಆಲೋಚನೆ ಮಾಡುವುದೇ ಇಲ್ಲ. ಇಲ್ಲಿ ನಾವು ಹೇಳಲು ಹೊರಟಿರುವುದು ಬ್ಲೂಟೂಥ್ ಹೆಡ್ ಫೋನ್ ಗಳ ಬಗ್ಗೆ. ಇದನ್ನು ಕಿವಿಗೆ ಹಾಕಿಕೊಂಡು ಮೊಬೈಲ್ ನ್ನು ಕಿಸೆಯಲ್ಲೇ ಇಟ್ಟುಕೊಂಡು ಎಷ್ಟು ಬೇಕಿದ್ದರೂ ಮಾತನಾಡಿಕೊಂಡು ಹೋಗಬಹುದು. ಇದಕ್ಕಾಗಿ ವಯರ್ ಇರುವಂತಹ ಹೆಡ್ ಫೋನ್ ಧರಿಸುವಂತಹ ಅಗತ್ಯವೂ ಇರುವುದಿಲ್ಲ. ಬ್ಲೂಟೂಥ್ ಮೂಲಕವಾಗಿ ಇದು ನಿಮಗೆ ಮಾತನಾಡಲು ಅವಕಾಶ ನೀಡುವುದು. ಆದರೆ ಇದರಿಂದ ಆರೋಗ್ಯದ ಮೇಲೆ ಆಗುವಂತಹ ಪರಿಣಾಮಗಳ ಬಗ್ಗೆ ಎಂದಾದರೂ ಆಲೋಚನೆ ಮಾಡಿದ್ದೀರಾ?

ಸಂಶೋಧನಾ ವರದಿಯು ಹೇಳಿರುವ ಪ್ರಕಾರ

ಸಂಶೋಧನಾ ವರದಿಯು ಹೇಳಿರುವ ಪ್ರಕಾರ

ಇತ್ತೀಚೆಗೆ ಒಂದು ಸಂಶೋಧನಾ ವರದಿಯು ಹೇಳಿರುವ ಪ್ರಕಾರ ವಯರ್ ಲೆಸ್ ಹೆಡ್ ಫೋನ್ ಗಳಿಂದಾಗಿ ಕ್ಯಾನ್ಸರ್ ಬರುವಂತಹ ಅಪಾಯವು ಅಧಿಕವಾಗಿರುವುದು. ವಯರ್ ಲೆಸ್ ಹೆಡ್ ಫೋನ್ ನ್ನು ಉಪಯೋಗಿಸಿದ ವೇಳೆ ಅದು ವಿಕಿರಣವನ್ನು ಮೆದುಳಿಗೆ ಕಳುಹಿಸಿಕೊಡುವುದು. ಮೀಡಿಯಂ ಎನ್ನುವ ಲೇಖನವು ಕಳೆದ ವಾರ ಪ್ರಕಟಗೊಂಡಿದ್ದು, ಇದರಲ್ಲಿ ಇರುವಂತೆ ವಯರ್ ಲೆಸ್ ಹೆಡ್ ಫೋನ್ ಗಳಿಂದಾಗಿ ಕ್ಯಾನ್ಸರ್ ನ ಅಪಾಯವು ಹೆಚ್ಚಾಗಿರುವುದು. ಅಮೆರಿಕಾದ ಕೊಲೊರಾಡೋ ಸ್ಪ್ರಿಂಗ್ಸ್ ನ ಯೂನಿವರ್ಸಿಟಿ ಆಫ್ ಕೊಲೊರಾಡೊದ ಜೀವರ ಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಂತಹ ಪ್ರಾಧ್ಯಾಪಕ ಜೆರ್ರಿ ಫಿಲಿಪ್ಸ್ ಅವರ ಹೇಳಿಕೆಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಸಂಶೋಧನಾ ವರದಿಯು ಹೇಳಿರುವ ಪ್ರಕಾರ

ಸಂಶೋಧನಾ ವರದಿಯು ಹೇಳಿರುವ ಪ್ರಕಾರ

'ಕಿವಿಯ ರಂಧ್ರದಲ್ಲಿ ವಯರ್ ಲೆಸ್ ಹೆಡ್ ಫೋನ್ ಗಳನ್ನು ಇಡುವುದರಿಂದ ತಲೆಯಲ್ಲಿರುವಂತಹ ಅಂಗಾಂಶಗಳು ರೇಡಿಯೋ ತರಂಗಾಂತರ ವಿಕಿರಣಕ್ಕೆ ತೆರೆದಿಡುವುದು ಅತಿಯಾಗಿರುವುದು'' ಎಂದು ಫಿಲಿಪ್ಸ್ ಹೇಳಿದ್ದಾರೆ. ಈ ಲೇಖನದಲ್ಲಿ ಹೇಳಿರುವ ಪ್ರಕಾರ, ಫಿಲಿಪ್ಸ್ ಅವರು ಮಾತ್ರ ವಯರ್ ಲೆಸ್ ಹೆಡ್ ಫೋನ್ ನಿಂದ ಆಗುತ್ತಿರುವಂತಹ ವಿವಿಧ ಆರೋಗ್ಯ ತೊಂದರೆಗಳ ಬಗ್ಗೆ ಚಿಂತಿರಾದದ್ದಲ್ಲ. 40 ರಾಷ್ಟ್ರಗಳು ನಡೆಸಿರುವಂತಹ ಸುಮಾರು 250 ಸಂಶೋಧನೆಗಳು ಒಂದು ಒಪ್ಪಂದಕ್ಕೆ ಸಹಿ ಮಾಡಿ ವಯರ್ ಲೆಸ್ ಹೆಡ್ ಫೋನ್ ನಿಂದ ಆಗುತ್ತಿರುವ ಅಪಾಯಗಳ ಬಗ್ಗೆ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳಿಗೆ ಅರ್ಜಿಯನ್ನು ಸಲ್ಲಿಸಿವೆ.

ವಯರ್ ಲೆಸ್ ಹೆಡ್ ಫೋನ್ ಗಳು ನಿಜವಾಗಿಯೂ ಹಾನಿಕಾರಕವೇ?

ವಯರ್ ಲೆಸ್ ಹೆಡ್ ಫೋನ್ ಗಳು ನಿಜವಾಗಿಯೂ ಹಾನಿಕಾರಕವೇ?

ಬ್ಲೂಟೂಥ್ ಹೆಡ್ ಫೋನ್ ಗಳು ಬಿಡುಗಡೆ ಮಾಡುವಂತಹ ವಿಕಿರಣಗಳು ಖಂಡಿತವಾಗಿಯೂ ನಿಮ್ಮ ದೇಹಕ್ಕೆ ಹಾನಿ ಉಂಟು ಮಾಡುವುದು. ಆದರೆ ಇದನ್ನು ನೀವು ಸಂಪೂರ್ಣವಾಗಿ ನಿಮ್ಮ ಜೀವನದಿಂದ ನಿಷೇಧ ಹೇರಲು ಸಾಧ್ಯವಿಲ್ಲ. ಯಾರು ಕೂಡ ಈ ವಿಕಿರಣದಿಂದ ಪಾರಾಗಲು ಸಾಧ್ಯವಿಲ್ಲ. ನೀವು ವಯರ್ ಲೆಸ್ ಹೆಡ್ ಫೋನ್ ನ್ನು ಬಿಟ್ಟರೂ ಬೇರೆ ವಿಧಾನಗಳಿಂದ ವಿಕಿರಣಗಳಿಗೆ ನೀವು ತೆರೆದಿಡಬಹುದು.

ವಯರ್ ಲೆಸ್ ಹೆಡ್ ಫೋನ್ ಗಳು ನಿಜವಾಗಿಯೂ ಹಾನಿಕಾರಕವೇ?

ವಯರ್ ಲೆಸ್ ಹೆಡ್ ಫೋನ್ ಗಳು ನಿಜವಾಗಿಯೂ ಹಾನಿಕಾರಕವೇ?

ಆದರೆ ಕೆಲವೊಂದು ವಿಧಾನಗಳಿಂದ ನೀವು ಇದನ್ನು ನಿರ್ಬಂಧಿಸಬಹುದು ಮತ್ತು ವಿಕಿರಣಗಳಿಗೆ ತೆರಲ್ಪಡದಂತೆ ನೋಡಿಕೊಳ್ಳಬಹುದು. ಹಾನಿಕಾರಕ ವಿಕಿರಣವನ್ನು ಹೊರ ಸೂಸುವಂತಹ ಮೊಬೈಲ್ ಗಳಿಂದ ಆದಷ್ಟು ಮಟ್ಟಿಗೆ ದೂರವಿರಲು ಪ್ರತಿಯೊಬ್ಬರು ಪ್ರಯತ್ನಿಸಿದರೆ ಆಗ ವಿಕಿರಣಕ್ಕೆ ದೇಹವು ತೆರೆದಿಡಲ್ಪಡುವುದು ತಪ್ಪುವುದು.

English summary

Wireless headphones could pose cancer risk! Scientists

Many daily tasks like travelling or while working seems incomplete without headphones. For some, it a source of entertainment while for others is a great way to block distraction from external sources. Technology and innovation have made everyone's life so easy that it prevents you from all the tantrums that tangled earphones can give you with the introduction of wireless headphones. These headphone use bluetooth technology which makes it possible to use them without wire. But are you aware of the various health hazards of using wireless bluetooth headphones?
X
Desktop Bottom Promotion