Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕಂತೆ, ಯಾಕೆ ಗೊತ್ತೇ? ನೀವು ತಿಳಿಯಲೇಬೇಕಾದ ಸಂಗತಿಗಳು
ದಿನವಿಡಿ ದುಡಿದು ಬಂದು ರಾತ್ರಿ ಊಟದ ಬಳಿಕ ನಾವು ನಿದ್ರೆಗೆ ಜಾರುವುದು ಸಹಜ ಕ್ರಿಯೆ. ಇದು ಪ್ರತಿಯೊಬ್ಬ ಮನುಷ್ಯನು ಪಾಲಿಸಿಕೊಂಡು ಹೋಗುವಂತಹ ಕ್ರಮ. ದಣಿದಿರುವಂತಹ ದೇಹಕ್ಕೆ ಆರಾಮ ಸಿಗಬೇಕಾದರೆ ಆಗ ನಾವು ರಾತ್ರಿ ವೇಳೆ ನಿದ್ರಿಸಲೇಬೇಕು. ಆದರೆ ನಿದ್ರೆಯಿಂದ ಎದ್ದು ಬೆಳಗ್ಗೆ ಮೊದಲು ಮಾಡಬೇಕಾದ ಕೆಲಸ ಯಾವುದು ಎನ್ನುವಂತಹ ಪ್ರಶ್ನೆಯು ನಿಮ್ಮನ್ನು ಹಲವಾರು ಸಲ ಕಾಡಿರಬಹುದು. ಒಬ್ಬೊಬ್ಬರು ಒಂದೊಂದು ರೀತಿಯ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ಕೆಲವರು ಶೌಚಾಲಯಕ್ಕೆ ಹೋಗಬಹುದು, ಇನ್ನು ಕೆಲವರು ಹಲ್ಲುಜ್ಜಬಹುದು, ಮತ್ತೆ ಕೆಲವರು ನೇರವಾಗಿ ಚಹಾ ಅಥವಾ ಕಾಫಿ ಹೀರಬಹುದು.

ಆದರೆ ನಾವು ಬೆಳಗ್ಗೆ ಎದ್ದು ಮಾಡಬೇಕಾದ ಮೊದಲ ಕೆಲಸ ಎಂದರೆ ಅದು ಒಂದು ಲೋಟ ನೀರು ಕುಡಿಯುವುದು. ಹೀಗೆ ಮಾಡಿದರೆ ಆಗ ಸುಮಾರು ಎಂಟು ಗಂಟೆಗಳ ಕಾಲ ಆರಾಮ ಪಡೆದಿದ್ದ ದೇಹಕ್ಕೆ ಬೇಕಾಗುವಂತಹ ತೇವಾಂಶವು ಸಿಗುವುದು. ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿದರೆ ಅದರಿಂದ ಸಿಗುವಂತಹ ಲಾಭಗಳು ಏನು ಎಂದು ನಾವು ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ನಿಮ್ಮ ದಿನಕ್ಕೆ ಪರಿಪೂರ್ಣ ಆರಂಭ ನೀಡುವುದು
ದಿನದ ಆರಂಭವು ಒಳ್ಳೆಯದು ಆಗಿದ್ದರೆ ಆಗ ಸಂಪೂರ್ಣ ದಿನವು ಉತ್ತಮವಾಗಿರುವುದು ಎಂದು ಹೆಚ್ಚಿನವರು ನಂಬಿದ್ದಾರೆ. ಹೀಗೆ ಮಾಡಬೇಕಾದರೆ ನೀವು ಏನು ಮಾಡಬೇಕು ಎಂದರೆ ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ನೀರು ಕುಡಿಯಿರಿ. ಇದು ನಿಮ್ಮ ದಿನದ ಆರಂಭವನ್ನು ಉತ್ತಮ ವಾಗಿಸುವುದು.

ದುಗ್ಧರಸ
ದುಗ್ಧರಸವು ನಮ್ಮ ದೇಹದಲ್ಲಿ ತುಂಬಾ ಪ್ರಾಮುಖ್ಯ ಪಾತ್ರ ನಿರ್ವಹಿಸುವುದು. ಇದು ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಮತ್ತು ಇತರ ಕೆಲವು ನಿತ್ಯದ ಕಾರ್ಯಗಳನ್ನು ಇದು ಮಾಡುವುದು. ದುಗ್ದರಸದ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತಲಿದ್ದರೆ ಆಗ ನಿಮಗೆ ಸೋಂಕಿನ ವಿರುದ್ಧ ಹೋರಾಡಲು ತುಂಬಾ ಶಕ್ತಿ ಬರುವುದು. ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದಾಗಿ ದುಗ್ದರಸ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಮತ್ತು ಇದು ದ್ರವದ ಸಮತೋಲನವನ್ನು ಸುಧಾರಣೆ ಮಾಡುವುದು ಮತ್ತು ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು.

ಚರ್ಮ
ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕಲು ನೀರು ನೆರವಾಗುವುದು. ಇದರಿಂದಾಗಿ ಚರ್ಮವು ತುಂಬಾ ಕಾಂತಿಯುತ ಹಾಗೂ ಆರೋಗ್ಯವಾಗಿ ಇರುವುದು. ಬೆಳಗ್ಗೆ ಎದ್ದ ಬಳಿಕ ನೀವು ಒಂದು ಲೋಟ ನೀರು ಕುಡಿಯಿರಿ. ಇದರಿಂದ ದೇಹಕ್ಕೆ ತೇವಾಂಶ ಸಿಗುವುದು ಮತ್ತು ದೇಹವನ್ನು ನಿರ್ವಿಷಗೊಳಿಸಲು ಇದು ನೆರವಾಗುವುದು. ಈ ವಿಧಾನ ಅಳವಡಿಸಿಕೊಂಡರೆ ಆಗ ಚರ್ಮವು ಕಾಂತಿ ಹಾಗೂ ಆರೋಗ್ಯವಾಗಿ ಇರುವುದು.

ತೂಕ ಇಳಿಸಿಕೊಳ್ಳಲು
ತೂಕ ಇಳಿಸಿಕೊಳ್ಳಲು ನೀವು ಬಯಸಿದ್ದರೆ ಆಗ ನೀವು ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ನೀರು ಕುಡಿಯಬೇಕು. ಅರ್ಧ ಲೀಟರ್ ನಷ್ಟು ತಣ್ಣಗಿನ ನೀರನ್ನು ನೀವು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ಕುಡಿದರೆ ಅದರಿಂದ ತೂಕ ಇಳಿಸುವ ನಿಮ್ಮ ಕಾರ್ಯಕ್ಕೆ ಶೇ. 24ರಷ್ಟು ನೆರವಾಗುವುದು.

ಸರಿಪಡಿಸಲು ಉತ್ತಮ
ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವ ಕಾರಣದಿಂದಾಗಿ ದೇಹವು ಹೆಚ್ಚು ಹೊಸ ರಕ್ತ ಮತ್ತು ಸ್ನಾಯುಗಳ ಕೋಶವನ್ನು ಉತ್ಪತ್ತಿ ಮಾಡಲು ನೆರವಾಗುವುದು. ಇದರಿಂದ ನೀವು ಆರೋಗ್ಯವಾಗಿ ಇರಬಹುದು ಮತ್ತು ಯೌವನಯುತವಾಗಿ ಕಾಣುವಿರಿ. ಪ್ರತಿನಿತ್ಯ ನೀವು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ಅದರಲ್ಲೂ ಬೆಳಗ್ಗೆ ಎದ್ದ ಕೂಡಲೇ.

ಕರುಳನ್ನು ಶುದ್ಧೀಕರಿಸುವುದು
ಬೆಳಗ್ಗೆ ಎದ್ದ ವೇಳೆ ನಿಮ್ಮ ಹೊಟ್ಟೆಯು ಖಾಲಿಯಾಗಿ ಇರುವುದು. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ಅದರಿಂದ ಕರುಳುಗಳು ಶುದ್ಧವಾಗುವುದು. ಇದರಿಂದ ನೀವು ದಿನದಲ್ಲಿ ಯಾವುದೇ ರೀತಿಯ ಆಹಾರ ತಿಂದರೂ ಅದರ ಪೋಷಕಾಂಶಗಳನ್ನು ಹೀರಿಕೊಳ್ಳಲು ಕರುಳಿಗೆ ನೆರವಾಗುವುದು. ಖಾಲಿ ಹೊಟ್ಟೆಯಲ್ಲಿ 500 ಮಿ.ಲೀ. ನೀರು ಕುಡಿಯಿರಿ.

ಸಾಕಷ್ಟು ನೀರು ಕುಡಿಯಿರಿ
ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಅದಾಗ್ಯೂ, ಇದಕ್ಕಾಗಿ ನೀವು ಬೆಳಗ್ಗೆ ಎದ್ದ ಬಳಿಕ 400 ಮಿ.ಲೀ.ನಿಂದ 600 ಮಿ.ಲೀ. ನೀರು ಕುಡಿಯಬೇಕು. ಇನ್ನೊಂದು ಕಡೆ ಅತಿಯಾಗಿ ನೀರು ಕುಡಿದರೆ ಅದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಇಂದೇ ಆರಂಭಿಸಿ
ನೀವು ಬೆಳಗ್ಗೆ ಎದ್ದ ಬಳಿಕ ಹಲ್ಲುಜ್ಜಿ ಮತ್ತು ಬೆಳಗ್ಗಿನ ನಿತ್ಯಕರ್ಮಗಳನ್ನು ಪೂರೈಸಿಕೊಳ್ಳೀ. ಇದರ ಬಳಿಕ ನೀವು ಶುದ್ಧವಾಗಿರುವ ನೀರನ್ನು ಕುಡಿಯಿರಿ. ಸುಮಾರು 500 ಮಿ.ಲೀ.ನಷ್ಟು ನೀರನ್ನು ನೀವು ಕುಡಿಯಿರಿ. ಒಂದು ಬಾಟಲಿ ಅಥವಾ ಜಗ್ ನಲ್ಲಿ ನೀರು ಹಾಕಿಡಿ. ಲೋಟ ತೆಗೆದುಕೊಂಡು ಅದನ್ನು ಕುಡಿಯಿರಿ. ನಿಮಗೆ ಮೊದಲಿಗೆ ತುಂಬಾ ನೀರು ಕುಡಿಯಲು ಕಷ್ಟವಾಗುತ್ತಲಿದ್ದರೆ, ಆಗ ನೀವು ದಿನದಿಂದ ದಿನಕ್ಕೆ ಇದನ್ನು ಹೆಚ್ಚಿಸುತ್ತಾ ಹೋಗಿ.



Click it and Unblock the Notifications
