For Quick Alerts
ALLOW NOTIFICATIONS  
For Daily Alerts

ಪನೀರ್ ತಿಂದು ದೇಹದ ತೂಕ ಇಳಿಸಿಕೊಳ್ಳಿ!

|

ಪನೀರ್ ಅಂದರೆ ಇಷ್ಟಪಡದೇ ಇರುವಂತಹ ಜನರು ತುಂಬಾ ಕಡಿಮೆ ಎನ್ನಬಹುದು. ಪನೀರ್ ನಿಂದ ಮಾಡಿದಂತಹ ಖಾದ್ಯಗಳು ತುಂಬಾ ರುಚಿ ಹಾಗೂ ಆರೋಗ್ಯಕ್ಕೂ ಇದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಪನೀರ್ ಚಿಲ್ಲಿ, ಪನೀರ್ ಮಂಚೂರಿ, ಪನೀರ್ ಸ್ಯಾಂಡ್ ವಿಚ್, ಪನೀದ್ ಪರಾಟ, ಬಟರ್ ಪನೀರ್ ಮಸಾಲ, ಪನೀರ್ ಗೀ ರೋಸ್ಟ್ ಇತ್ಯಾದಿಗಳು ಬಾಯಿಯಲ್ಲಿ ನೀರುರಿಸುವಂತೆ ಮಾಡುವುದು. ಪನೀರ್ ಸ್ವಲ್ಪ ದುಬಾರಿಯಾದರೂ ಅದರಿಂದ ಸಿಗುವ ಆರೋಗ್ಯ ಲಾಭಗಳು ಹಲವಾರು. ನಿಮಗೆ ಇಷ್ಟವಾಗಿರುವಂತಹ ಪನೀರ್ ನಿಂದ ತೂಕ ಇಳಿಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯಾ? ಇಲ್ಲ ತಾನೇ? ಹಾಗಾದರೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಲೇಬೇಕು.

Most Read: ಪನ್ನೀರ್ ದರ ದುಬಾರಿಯಾದರೂ ಆರೋಗ್ಯಕ್ಕೆ ಒಳ್ಳೆಯದು...

paneer

ತೂಕ ಇಳಿಸಲು ಪನೀರ್ ಹೇಗೆ ನೆರವಾಗುವುದು?

ಅದ್ಭುತವಾಗಿರುವ ರುಚಿ ಹೊಂದಿರುವಂತಹ ಪನೀರ್ ನಲ್ಲಿ ಪ್ರೋಟೀನ್ ಅಂಶವು ಅಧಿಕವಾಗಿದೆ ಮತ್ತು ಕಾರ್ಬ್ಸ್ ಕಡಿಮೆ ಇದೆ. ನೀವು ಸಸ್ಯಾಹಾರಿಯಾಗಿದ್ದರೆ ದೈನಂದಿನ ಪ್ರೋಟೀನ್ ಅಗತ್ಯತೆಗೆ ನೀವು ಇದನ್ನೇ ಸೇವಿಸಬೇಕು. ತೂಕ ಇಳಿಸಲು ಪನೀರ್ ಯಾವ ರೀತಿ ನೆರವಾಗುವುದು ಎನ್ನುವುದಕ್ಕೆ ನಾಲ್ಕು ಕಾರಣಗಳನ್ನು ನೀಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಕ್ಯಾಲರಿ ಕಡಿಮೆ ಇದೆ

100 ಗ್ರಾಂ ಪನೀರ್ ನಲ್ಲಿ ಕೇವಲ 1.2 ಗ್ರಾಂನಷ್ಟು ಕಾರ್ಬ್ಸ್ ಮಾತ್ರ ಇದೆ ಮತ್ತು 72 ಕ್ಯಾಲರಿ ಇದೆ ಎಂದು ನಿಮಗೆ ತಿಳಿದಿದೆಯಾ? ಇದರಿಂದಾಗಿ ತೂಕ ಇಳಿಸಿಕೊಳ್ಳಲು ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

ಆರೋಗ್ಯಕರ ಕೊಬ್ಬು ಹೊಂದಿರುವ ಆಹಾರ

ದೇಹದ ತೂಕ ಇಳಿಸಿಕೊಳ್ಳಲು ಆರೋಗ್ಯಕಾರಿ ಕೊಬ್ಬು ಅತೀ ಅಗತ್ಯವಾಗಿ ಬೇಕಿರುವುದು. ದೇಹದಲ್ಲಿ ಒಳ್ಳೆಯ ಕೊಬ್ಬು ಇದ್ದಾಗ ಅದು ಇದನ್ನು ಶಕ್ತಿಯನ್ನಾಗಿ ಪರಿವರ್ತನೆ ಮಾಡುವುದು. ಇದರಿಂದ ತೂಕ ಇಳಿಯುವುದು.

Most Read: ಮಣ್ಣಿನ ಮಡಕೆಯಲ್ಲೇ ಮಾಡಿ ಈ ಪನ್ನೀರ್ ಗ್ರೇವಿ

ಹೊಟ್ಟೆ ತುಂಬಿಸುವುದು

ಪನೀರ್ ತಿಂದರೆ ಆಗ ದೀರ್ಘಕಾಲ ತನಕ ಹೊಟ್ಟೆ ತುಂಬಿದಂತೆ ಆಗುವುದು. ಇದು ನಿಮ್ಮ ಹಸಿವಿನ ಬಯಕೆ ಮತ್ತು ಫಾಸ್ಟ್ ಫುಡ್ ಸೇವನೆ ಕಡಿಮೆ ಮಾಡುವುದು.

ಸಂಯೋಜಿತ ಲಿನೋಲೀಕ್ ಆಮ್ಲವಿದೆ

ಸಂಯೋಜಿತ ಲಿನೋಲೀಕ್ ಆಮ್ಲ(ಸಿಎಲ್ ಎ) ತೂಕ ಕಳೆದುಕೊಳ್ಳಲು ಇರುವ ಸಾಮಾನ್ಯ ಅಂಶವಾಗಿದೆ ಮತ್ತು ಇದನ್ನು ದೇಹದಾರ್ಢ್ಯ ಮತ್ತು ತೂಕ ಇಳಿಸಲು ಬಳಸಲಾಗುತ್ತದೆ. ಹಾಲಿನ ಉತ್ಪನ್ನಗಳಲ್ಲಿ ಸಿಎಲ್ ಎ ಅಂಶವು ಅತ್ಯುತ್ತಮವಾಗಿದೆ.

Most Read: 8 ಬಗೆಯ ಸ್ವಾದಿಷ್ಟಕರ ಪನ್ನೀರ್ ರೆಸಿಪಿ

ತೂಕ ಇಳಿಸಲು ಪನೀರ್ ಬಳಸುವುದು ಹೇಗೆ?

ಪನೀರ್ ನ್ನು ಕೇವಲ ಕಾಳುಮೆಣಸಿನ ಹುಡಿ ಮತ್ತು ಕಲ್ಲುಪ್ಪು ಹಾಕಿ ತಿಂದರೆ ಅದ್ಭುತ ರುಚಿ ನೀಡುವುದು. ಇದನ್ನು ನೀವು ಬೇರೆ ಯಾವುದೇ ರೀತಿಯಿಂದಲೂ ತಯಾರಿಸಬೇಕಾಗಿಲ್ಲ. ಆರೋಗ್ಯಕಾರಿ ಆಹಾರಕ್ಕೆ ಇದನ್ನು ನೀವು ಸೇರಿಸಿಕೊಳ್ಳಬಹುದು ಮತ್ತು ಇದು ಅಲ್ಲಿ ಹೊಂದಿಕೊಳ್ಳುವುದು. ಪನೀರ್ ಸಲಾಡ್, ಗ್ರಿಲ್ ಮಾಡಿದ ಪನೀರ್ ನ್ನು ಬೀಜಗಳು ಮತ್ತು ಧಾನ್ಯಗಳ ಜತೆ ಸೇರಿಸಿ ತಿನ್ನಬೇಕು. ಇದು ಅತ್ಯುತ್ತಮ ರುಚಿ ನೀಡುವುದು. ಇದನ್ನು ತಯಾರಿಸುವ ವೇಳೆ ಯಾವುದೇ ಎಣ್ಣೆ ಅಥವಾ ಬೆಣ್ಣೆ ಬಳಸಬೇಡಿ. ತೂಕ ಕಳೆದುಕೊಳ್ಳಲು ಬಯಸಿದ್ದರೆ ಆಗ ನೀವು ಪನೀರ್ ತಿಕ್ಕಾ ಅಥವಾ ಪನೀರ್ ಬಟರ್ ಮಸಾಲದಂತಹ ಖಾದ್ಯದಿಂದ ದೂರವಿರಬೇಕಾಗುತ್ತದೆ.

English summary

Weight loss: 4 ways paneer can help you

We Indians have a special love affair with paneer as it is extremely versatile in nature. From paneer sandwich, paneer paratha to butter-paneer masala, there something delicious to suit everyone’s taste buds. When we think of paneer, we actually consider it as a lavish dish which is meant majorly for feasting. However, not a lot of people know that the protein-packed cottage cheese can actually help you shed those stubborn kilos with ease. Yes, this scrumptious food can help you keep a tab on your calorie intake, all the while satiating your need to eat something ‘tasty!’
X
Desktop Bottom Promotion