Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಹೃದಯದ ಬಡಿತದ ವೇಗವನ್ನು ಕೆಲವೇ ನಿಮಿಷಗಳಲ್ಲಿ ಕಡಿಮೆಗೊಳಿಸಲು ಸುಲಭ ವಿಧಾನಗಳು
ಹೃದಯದ ಬಡಿತ ಅಥವಾ ನಾಡಿ ಮಿಡಿತ ಸುಮಾರು ಪ್ರತಿ ನಿಮಿಷಕ್ಕೆ ಅರವತ್ತರಿಂದ ನೂರು ಬಡಿತಗಳ ನಡುವೆ ಇದ್ದರೆ ಇದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ತಜ್ಞರ ಪ್ರಕಾರ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ನಮ್ಮ ಹೃದಯದ ಬಡಿತ 50-70 ರ ನಡುವೆ ಇದ್ದರೆ ಇದು ಆದರ್ಶಕರ ಮಟ್ಟದಲ್ಲಿದೆ. ಒಂದು ವೇಳೆ ಬಡಿತದ ಗತಿ ಈ ಮಿತಿಗಳನ್ನು ಮೀರಿದರೆ ಇದು tachycardia ಅಥವಾ ಹೃದಯಸ್ಪಂದನಾಧಿಕ್ಯ ಎಂಬ ಸ್ಥಿತಿಯನ್ನು ಪಡೆಯುತ್ತದೆ ಹಾಗೂ ಇದು ಅಪಾಯಕಾರಿಯಾಗಿದೆ.
ಈ ಮೂಲಕ ಹೃದಯದ ಮೇಲಿನ ಒತ್ತಡ ಹೆಚ್ಚುತ್ತದೆ ಹಾಗೂ ಹೃದಯದ ಕಾಯಿಲೆ, ರಕ್ತಹೀನತೆ ಮೊದಲಾದವು ಎದುರಾಗುತ್ತವೆ. ಕೆಲವು ಸಂದರ್ಭದಲ್ಲಿ ಈ ಸ್ಥಿತಿ ನಮ್ಮ ಆರೋಗ್ಯದ ಸಾಮಾನ್ಯ ಸ್ಥಿತಿಯಲ್ಲದೇ ಆ ಕ್ಷಣದಲ್ಲಿ ಎದುರಿಸುತ್ತಿರುವ ಮಾನಸಿಕ ಒತ್ತಡ, ಜ್ವರ ಅಥವಾ ಬೇರಾವುದೋ ತರಬೇತಿಯ ಸಮಯದಲ್ಲಿ ಉದ್ವೇಗದ ಮೂಲಕವೂ ಎದುರಾಗಿರಬಹುದು. ಒಂದು ವೇಳೆ ಈ ಕಾರಣಗಳಿಲ್ಲದೇ ನಿಮ್ಮ ನಾಡಿಮಿಡಿತ ಸಾಮಾನ್ಯಕ್ಕಿಂತಲೂ ಹೆಚ್ಚು ವೇಗದಲ್ಲಿದ್ದರೆ ಮೊತ್ತ ಮೊದಲಾಗಿ ನೀವು ವೈದ್ಯರಲ್ಲಿ ಭೇಟಿ ನೀಡಬೇಕು.
ನಿಮ್ಮ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುವ ಬೋಲ್ಡ್ ಸ್ಕೈ ತಂಡ ಇಂದು ತನ್ನ ಓದುಗರಿಗೆ ಈ ವಿಷಯದ ಬಗ್ಗೆ ಕೆಲವಾರು ಮಾಹಿತಿಗಳನ್ನು ಪ್ರಸ್ತುತಪಡಿಸುತ್ತಿದೆ ಹಾಗೂ ಈ ಸಂದರ್ಭದಲ್ಲಿ ನಿರ್ವಹಿಸಬೇಕಾದ ಪ್ರಥಮ ಚಿಕಿತ್ಸೆಯೂ ಆಗಿದೆ. ಅಲ್ಲದೇ ಈ ಬಡಿತ ಗಾಬರಿ ಹುಟ್ಟಿಸುವಷ್ಟು ಹೆಚ್ಚಿದ್ದರೆ ಹಾಗೂ ಹದಿನೈದರಿಂದ ಇಪ್ಪತ್ತು ನಿಮಿಷಗಳಲ್ಲಿ ಸಹಜಸ್ಥಿತಿಗೆ ಮರಳದೇ ಇದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಅಥವಾ ತುರ್ತು ವೈದ್ಯಕೀಯ ಸೇವೆಯನ್ನು ಪಡೆಯಲು ಮರೆಯದಿರಿ.
ಮೂಗು ಬಾಯಿ ಮುಚ್ಚಿ ಊದುವುದು (Valsalva maneuver)
ಇದೊಂದು ಉಸಿರಾಟದ ತಂತ್ರವಾಗಿದ್ದು ನಮ್ಮ ಹೃದಯ ಬಡಿತದ ಮೇಲೆ ತಕ್ಷಣವೇ ಪರಿಣಾಮವನ್ನುಂಟುಮಾಡುತ್ತದೆ. ಇದನ್ನು ಹೀಗೆ ನಿರ್ವಹಿಸಿ: ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳಿನಿಂದ ಮೂಗಿನ ಎರಡೂ ಹೊಳ್ಳೆಗಳನ್ನು ಮುಚ್ಚಿ. ಬಾಯಿಯನ್ನೂ ಮುಚ್ಚಿ ಈಗ ಕೊಂಚ ಒತ್ತಡದೊಂದಿಗೆ ಗಾಳಿಯನ್ನು ಹೊರಬಿಡಲು ಯತ್ನಿಸಿ, ಅಂದರೆ, ಒಂದು ವೇಳೆ ಬೆಲೂನೊಂದನ್ನು ಬಾಯಿಯಲ್ಲಿಟ್ಟು ಊದುವಾಗ ಹೇಗೆ ಊದುತ್ತೀರೋ ಹಾಗೆ, ಆದರೆ ಬಾಯಿಯಿಂದ ಗಾಳಿ ಹೊರಹೋಗಬಾರದು. ಈ ಸಮಯದಲ್ಲಿ ನೆಲದಲ್ಲಿ ಚಕ್ಕಲಮಕ್ಕಲ ಹಾಕಿ ಕುಳಿತುಕೊಳ್ಳುವುದು ಉತ್ತಮ. (ಇದರಿಂದ ಹೃದಯದ ಒತ್ತಡ ದೇಹದ ಎಲ್ಲಾ ಭಾಗಗಳಿಗೆ ಸಮನಾಗಿ ಹರಡಿಹೋಗಲು ಸಾಧ್ಯವಾಗುತ್ತದೆ) ಈ ವಿಧಾನವನ್ನು ಮುಂದಿನ ಹತ್ತು ಹದಿನೈದು ಸೆಕೆಂಡುಗಳ ಕಾಲ ಕೆಲವಾರು ಬಾರಿ ನಿರ್ವಹಿಸಿ.
ತಣ್ಣನೆಯ ನೀರು ಬಳಸಿ
ಈ ವಿಧಾನದಲ್ಲಿ ನಮ್ಮ ಹೃದಯದ ಬಡಿತದ ಮೇಲೆ ನಿಯಂತ್ರಣವಿರುವ ವೇಗಸ್ ನರವನ್ನು ಪ್ರಚೋದಿಸಿ ನಾಡಿಮಿಡಿತ ಕಡಿಮೆಯಾಗುವಂತೆ ಮಾಡಲಾಗುತ್ತದೆ. ಒಂದು ವೇಳೆ ಹೃದಯ ಬಡಿತ ತೀವ್ರವಾಗಿದ್ದರೆ ಕೊಂಚ ತಣ್ಣೀರನ್ನು ಮುಖದ ಮೇಲೆ ಸಿಂಪಡಿಸಿಕೊಳ್ಳಬೇಕು.
Most Read: ಚಳಿಗಾಲದಲ್ಲಿ ಒಡೆದ ಹಿಮ್ಮಡಿಗಳಿಗೆ ಕೆಲವು ನೈಸರ್ಗಿಕ ದೇಸೀ ಮನೆಮದ್ದುಗಳು
ನೆಟ್ಟಗೆ ಕುಳಿತುಕೊಳ್ಳಿ
ಈ ವಿಧಾನವೂ ಮೊದಲ ವಿಧಾನದಲ್ಲಿ ತಿಳಿಸಿದಂತಹದ್ದೇ ಆಗಿದ್ದು ಎರಡು ಹಂತಗಳಲ್ಲಿ ನಿರ್ವಹಿಸಬೇಕು.
ಮೊದಲಾಗಿ ಬೆನ್ನು ನೆಟ್ಟಗಿರುವಂತೆ ಕುಳಿದು ಹೊಟ್ಟೆಯ ಸ್ನಾಯುಗಳನ್ನು ಸಂಕುಚಿಸಿ.
ಇದೇ ಸಮಯದಲ್ಲಿ, ಮಲವಿಸರ್ಜನೆಗೆ ಅವಸರವಾದಾಗ ತಡೆಯಲು ಯಾವ ಸ್ನಾಯುಗಳನ್ನು ಸಂಕುಚಿಸುತ್ತೀರೋ ಹಾಗೇ ಸಂಕುಚಿಸಿ ಕೊಂಚ ಹೊತ್ತು ಕಣ್ಣು ಮುಚ್ಚಿ ಇದೇ ಭಂಗಿಯಲ್ಲಿ ಕುಳಿತಿರಿ.
ಸೈಸರ್ ನರವನ್ನು ಮಸಾಜ್ ಮಾಡಿ
carotid sinus massage ಎಂಬ ಹೆಸರಿನ ಈ ವಿಧಾನವೂ ನಾಡಿಮಿಡಿತವನ್ನು ತಹಬಂದಿಗೆ ತರುತ್ತದೆ. ಈ ನರ ನಮ್ಮ ಕುತ್ತಿಗೆಯಿಂದ ಕಿವಿಯ ಕೆಳಗಿನ ಗದ್ದಭಾಗದ ಮೂಲಕ ಹಾದು ಹೋಗುತ್ತದೆ. ಈ ಭಾಗವನ್ನು ನವಿರಾಗಿ ಮಸಾಜ್ ಮಾಡುವ ಮೂಲಕ ಅಕ್ಕಪಕ್ಕದ ನರಗಳಿಗೂ ಪ್ರಚೋದನೆ ದೊರೆತು ಶೀಘ್ರವೇ ಹೃದಯದ ಬಡಿತ ಸಾಮಾನ್ಯ ಸ್ಥಿತಿಗೆ ಬರುತ್ತದೆ.
Most Read: ಇದು ಸರಳ ಶೀತ ಎಂದು ನಿರ್ಲಕ್ಷಿಸಬೇಡಿ! ಇದರಿಂದ ಸೈನಸ್ ಸೋಂಕು ಬರಬಹುದು!!
ಮಂಜುಗಡ್ಡೆಯಷ್ಟು ತಣ್ಣಗಿನ ನೀರು ಸೇವಿಸಿ
ಇತ್ತೀಚಿನ ಸಂಶೋಧನೆಯ ಪ್ರಕಾರ ನಾಡಿಮಿಡಿತ ಕಡಿಮೆಗೊಳಿಸಲು ಇನ್ನೊಂದು ಸುಲಭ ವಿಧಾನವಿದೆ. ಅದೆಂದರೆ ಮಂಜಿನಷ್ಟು ತಣ್ಣಗಿರುವ ನೀರನ್ನು ಕುಡಿಯುವುದು. ಈ ಸಮಯದಲ್ಲಿ ಬಾಯಿಯೊಳಗಿನ ನಾಲಿಗೆ ಮತ್ತು ಇತರ ಭಾಗಗಳು ತಕ್ಷಣವೇ ತಣ್ಣಗಾಗುವ ಮೂಲಕ ವೇಗಸ್ ನರಕ್ಕೂ ಪ್ರಚೋದನೆ ನೀಡುತ್ತವೆ. ಪರಿಣಾಮವಾಗಿ ನೈಸರ್ಗಿಕ ಪ್ರತಿವರ್ತನಾ ಕ್ರಿಯೆಗೆ ಸ್ಪಂದಿಸಿ ನಾಡಿಮಿಡಿತವೂ ಕಡಿಮೆಯಾಗುತ್ತದೆ.
ಔಷಧಿಗಳನ್ನು ಸೇವಿಸಿ
ನಾವು ತಿಳಿದಿರುವಂತೆ ಪ್ರತಿ ವ್ಯಕ್ತಿಯೂ ಚಿಕಿತ್ಸೆಗೆ ಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಒಂದು ವೇಳೆ ಮೇಲಿನ ಯಾವುದೇ ವಿಧಾನ ಫಲಕಾರಿಯಲ್ಲ ಎಂದೆನ್ನಿಸಿದರೆ ತಕ್ಷಣವೇ ನೀವು ವೈದ್ಯರ ಸಲಹೆ ಪಡೆಯುವುದು ಅನಿವಾರ್ಯ. ಈ ಸ್ಥಿತಿಗೆ ನಿಜವಾದ ಕಾರಣ ಯಾವುದೆಂದು ವೈದ್ಯರು ಕೆಲವಾರು ಪರೀಕ್ಷೆಗಳ ಮೂಲಕ ಕಂಡುಕೊಳ್ಳುತ್ತಾರೆ ಹಾಗೂ ಸೂಕ್ತ ಔಷಧಿಯನ್ನೂ ಸಲಹೆ ಮಾಡುತ್ತಾರೆ. ಇಂದು ವೈದ್ಯವಿಜ್ಞಾನದಲ್ಲಿ ಹಲವಾರು ಆವಿಷ್ಕಾರಗಳಾಗಿದ್ದು ಈ ತೊಂದರೆಗೂ ಸೂಕ್ತ ಔಷಧಿಗಳು ಲಭ್ಯವಿವೆ.