For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಕ್ಯಾನ್ಸರ್ ತಡೆಯುವ ಶಕ್ತಿ ಚಿನ್ನದ ದೇವತೆ ಅರಿಶಿನದಲ್ಲಿದೆ!

|

ಭಾರತೀಯರು ಹಾಗೂ ಆಯುರ್ವೇದವು ಪುರಾತನ ಕಾಲದಿಂದಲೂ ಉಪಯೋಗಿಸಿಕೊಂಡು ಬಂದಿರುವಂತಹ ಗಿಡಮೂಲಿಕೆ ಅರಿಶಿನವು ಇಂದು ಔಷಧೀಯ ರೂಪದಲ್ಲಿ ತುಂಬಾ ಜನಪ್ರಿಯವಾಗಿದೆ. ಆಯುರ್ವೇದದಲ್ಲಿ ಅರಿಶಿನವನ್ನು ಔಷಧಿಯ ರೂಪದಲ್ಲಿ ಹಿಂದಿನ ಕಾಲದಿಂದಲೂ ಬಳಸಿಕೊಂಡು ಬರಲಾಗುತ್ತಿತ್ತು. ಭಾರತೀಯರು ಪ್ರತಿಯೊಂದು ಅಡುಗೆಗೂ ಇದನ್ನು ಬಳಸುವರು. ಯಾವುದೇ ಭಾರತೀಯರ ಮನೆಗೆ ಹೋದರೂ ಅರಿಶಿನ ಪುಡಿ ಅಥವಾ ಅರಿಶಿನ ಕೊಂಬು ಸಿಗುವುದು. ಇದರಿಂದ ಸಿಗುವಂತಹ ಆರೋಗ್ಯ ಗುಣಗಳನ್ನು ತಿಳಿದುಕೊಂಡು ವಿದೇಶಿಯರು ಕೂಡ ಬಳಸಲು ಆರಂಭಿಸಿರುವರು.

Most Read: ದಿನಕ್ಕೊಂದು ಲೋಟ ಅರಿಶಿನ ಬೆರೆಸಿದ ನೀರು-ಆಯಸ್ಸು ನೂರು!

turmeric

ಇತ್ತೀಚೆಗೆ ನಡೆಸಿರುವಂತಹ ಒಂದು ಅಧ್ಯಯನದ ಪ್ರಕಾರ ಅರಿಶಿನವು ಹೊಟ್ಟೆಯ ಕ್ಯಾನ್ಸರ್ ಅನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಹೊಟ್ಟೆಯ ಕ್ಯಾನ್ಸರ್ ನ ಚಿಕಿತ್ಸೆಗೆ ಕೂಡ ಇದು ನೆರವಾಗುವುದು. ಇದರಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಚಿಕಿತ್ಸಕ ಗುಣ ಹೊಂದಿದೆ ಎಂದು ಸ್ಯಾನ್ ಪೌಲೊ ಯೂನಿವರ್ಸಿಟಿ ಮತ್ತು ಬ್ರೆಜಿಲ್‌ನ ಪಾರಾ ಫೆಡರಲ್ ಯೂನಿವರ್ಸಿಟಿಯ ಸಂಶೋಧಕರು ಹೇಳಿರುವರು.

ಹೊಟ್ಟೆಯ ಕ್ಯಾನ್ಸರ್ ಅನ್ನು ತಡೆಯುವ ಮತ್ತು ಅದಕ್ಕೆ ಚಿಕಿತ್ಸೆ ನೀಡುವಂತಹ ಕೆಲವೊಂದು ವಸ್ತುಗಳ ಬಗ್ಗೆ ವಿಜ್ಞಾನಿಗಳು ನೀಡಿರುವ ಮಾಹಿತಿಯನ್ನು ಸಂಗ್ರಹಿಸಿಕೊಂಡು ಅಧ್ಯಯನ ನಡೆಸಿದ ವೇಳೆ ಕರ್ಕ್ಯುಮಿನ್ ಇದರಲ್ಲಿ ಒಂದು ಎಂದು ಸಾಬೀತು ಆಗಿದೆ ಎಂದು ಯುಎಫ್ ಪಿಎ ಪ್ರಾಧ್ಯಾಪಕ ಡೇನಿಯಲ್ ಕ್ವಿರೊಜ್ ಕ್ಯಾಲ್ಕಾಗ್ನೊ ತಿಳಿಸಿರುವರು.

Most Read: ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಸಂಶೋಧಕರು ಕಂಡು ಕೊಂಡಿರುವ ಪ್ರಕಾರ ಕೊಲೆಕ್ಯಾಲ್ಸಿಫೆರೊಲ್ (ವಿಟಮಿನ್ ಡಿಯ ಒಂದು ವರ್ಗ) ರೆಸ್ವೆರಾಟ್ರೊಲ್ (ಪಾಲಿಫಿನಾಲ್) ಮತ್ತು ಕ್ವೆರ್ಸೆಟಿನ್ ಕೂಡ ಹೊಟ್ಟೆಯ ಕ್ಯಾನ್ಸರ್ ಅನ್ನು ತಡೆಯುವಂತಹ ಶಕ್ತಿಯನ್ನು ನೀಡುವುದು. ಯಾಕೆಂದರೆ ಇದರಲ್ಲಿ ಹಿಸ್ಟೊನ್ ಚಟುವಟಿಕೆ ನೈಸರ್ಗಿಕವಾಗಿ ನಿಯಂತ್ರಿಸುವ ಗುಣಗಳು ಇವೆ. ಹಿಸ್ಟೋನ್ ಎನ್ನುವುದು ಕೋಶಗಳಲ್ಲಿ ಇರುವಂತಹ ಪ್ರೋಟೀನ್ ಆಗಿದ್ದು, ಇದು ಡಿಎನ್ ಎ ಸಂಯೋಜಿಸಲು ನೆರವಾಗುವುದು.

ಕೇವಲ ಕರ್ಕ್ಯುಮಿನ್ ಮಾತ್ರಲ್ಲದೆ ಇತರ ಕೆಲವೊಂದು ಅಂಶಗಳು ಕೂಡ ಹಿಸ್ಟೊನ್ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೊಲೆಕ್ಯಾಲ್ಸಿಫೆರೊಲ್, ರೆಸ್ವೆರಾಟ್ರೊಲ್ ಆಗಿದ್ದು, ಇವುಗಳು ದ್ರಾಕ್ಷಿಯ ಬೀಜ ಮತ್ತು ಕೆಂಪು ವೈನ್‌ನಲ್ಲಿ ಕಂಡುಬರುವುದು. ಕ್ವೆರ್ಸೆಟಿನ್ ಎನ್ನುವ ಅಂಶವು ಸೇಬು, ಬ್ರಾಕೋಲಿ, ಈರುಳ್ಳಿಯಲ್ಲಿ ಕಂಡುಬರುವುದು. ಗಾರ್ಸಿನಾಲ್ ಎನ್ನುವುದು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಇದು ಕೆಲವೊಂದು ಮರಗಳಲ್ಲಿ ಕಂಡುಬರುವುದು.

English summary

Turmeric may help prevent stomach cancer: Study

Turmeric is one of the most common ingredients of an Indian kitchen. It is a compulsory element of almost every Indian dish. The health benefits of turmeric are very popular. It has medicinal properties, therefore, it has been used for medicinal purposes since ages. According to a recent study, turmeric can help prevent stomach cancer and can also aid stomach cancer treatment. Turmeric is loaded with an element called curcumin which has a therapeutic effect.
Story first published: Saturday, April 27, 2019, 13:22 [IST]
X
Desktop Bottom Promotion