For Quick Alerts
ALLOW NOTIFICATIONS  
For Daily Alerts

ಹೆಚ್ಚು ಹೆಚ್ಚು ಪ್ರಯಾಣ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಂತೆ!

|

ಆರೋಗ್ಯವಾಗಿ ಇರಬೇಕಾದರೆ ನಾವು ಏನು ಮಾಡಬೇಕು ಎಂದು ಪ್ರತಿಯೊಬ್ಬರು ಇಂದಿನ ದಿನಗಳಲ್ಲಿ ಪ್ರಶ್ನಿಸುವರು. ಯಾಕೆಂದರೆ ಆರೋಗ್ಯ ಇದ್ದರೆ ಆಗ ಎಲ್ಲವೂ ಇರುವುದು. ಅದೇ ಇಲ್ಲವೆಂದಾದರೆ ಆಗ ದುಡಿದಿರುವ ಹಣವೆಲ್ಲಾ ಆಸ್ಪತ್ರೆಗೆ ಹಾಕಬೇಕಾಗುತ್ತದೆ. ಇಂದಿನ ವೇಗ ಹಾಗೂ ಒತ್ತಡದ ಜೀವನದಲ್ಲಿ ನಾವು ಹಣ ಸಂಪಾದನೆಯ ಹಿಂದೆ ಹೋಗಿ ಆರೋಗ್ಯ ಕೆಡಿಸಿಕೊಂಡಿದ್ದೇವೆ. ಯಾರಾದರೂ ರಜೆಯಲ್ಲಿ ಹೊರಗಡೆ ಪ್ರವಾಸಕ್ಕೆ ಹೋಗದೆ ಇರುವವರ ಬಗ್ಗೆ ಕೇಳಬಹುದು.

ಆದರೆ ಅದು ಅವರ ಸಮಸ್ಯೆಯಾಗಿರಬಹುದು. ನಾವೆಲ್ಲರೂ ಪ್ರವಾಸ ಮಾಡುವುದನ್ನು ಇಷ್ಟಪಡುತ್ತೇವೆ. ಅದರಲ್ಲೂ ಸುಂದರವಾಗಿರುವಂತಹ ಪ್ರದೇಶಗಳಿಗೆ ಹೋಗಲು ನಮಗೆಲ್ಲರಿಗೂ ಇಷ್ಟ. ಕೆಲವರಿಗೆ ಪ್ರವಾಸ ಮಾಡುವುದು ಒಂದು ಹವ್ಯಾಸವಾಗಿರುವುದು. ಅವರು ಪ್ರತಿಯೊಂದು ಕಡೆಗಳಿಗೂ ಪ್ರವಾಸ ಮಾಡುತ್ತಾ ಇರುತ್ತಾರೆ. ಅದಾಗ್ಯೂ, ಸಂತೋಷ ಹಾಗೂ ದೈನಂದಿಕ ಚಟುವಟಿಕೆಯಿಂದ ಮುಕ್ತಿ ಹೊಂದಲು ನಾವು ಪ್ರಯಾಣ ಮಾಡುತ್ತೇವೆ. ಪ್ರವಾಸವೆನ್ನುವುದು ಒಂದು ಒಳ್ಳೆಯ ಔಷಧಿಯಾಗಿದೆ. ಇದನ್ನು ವಿಜ್ಞಾನ ಕೂಡ ಸಾಬೀತು ಮಾಡಿದೆ. ಆರೋಗ್ಯ ಹಾಗೂ ಬಲಿಷ್ಠವಾಗಿ ಇರಬೇಕಾದರೆ ಆಗ ನಾವು ಪ್ರಯಾಣಿಸುತ್ತಿರಬೇಕು ಎಂದು ಹೇಳಲಾಗಿದೆ.

travelling

ಪ್ರವಾಸದಿಂದ ಪ್ರತಿರೋಧಕ ಶಕ್ತಿ ಹೆಚ್ಚಳ

ವಿವಿಧ ರೀತಿಯ ಕೀಟಾಣುಗಳು ಮತ್ತು ಸೋಂಕಿನ ವಿರುದ್ಧ ದೇಹವು ಹೋರಾಡಲು ಅದಕ್ಕೆ ರೋಗ ಪ್ರತಿರೋಧಕವು ಬೇಕಾಗಿರುವುದು. ಇದು ಪ್ರೋಟೀನ್ ನ್ನು ರಕ್ಷಿಸುವುದು ಮತ್ತು ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು. ದೇಹ ಮತ್ತು ಹೊಟ್ಟೆಯ ಆರೋಗ್ಯಕ್ಕಾಗಿ ನಾವು ಕೊಳೆಗೆ ಕೂಡ ಕೆಲವೊಂದು ಸಲ ಒಗ್ಗಿಕೊಳ್ಳಬೇಕಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ. ಇದರಿಂದಾಗಿ ಪ್ರಯಾಣದಿಂದ ಆರೋಗ್ಯವು ಉತ್ತಮವಾಗುವುದು. ವಿಜ್ಞಾನವು ಹೇಳುವ ಪ್ರಕಾರ ಪ್ರಯಾಣವು ಅತೀ ಉತ್ತಮವಾದ ಪ್ರೋಬಯೋಟಿಕ್ ಆಗಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣ ಮಾಡಿದ ವೇಳೆ ಅಲ್ಲಿ ಹೊಸ ಬ್ಯಾಕ್ಟೀರಿಯಾಗಳಿಗೆ ದೇಹವು ಒಗ್ಗಿಕೊಳ್ಳುವುದು ಮತ್ತು ಇದರಿಂದ ರೋಗದ ವಿರುದ್ಧ ಹೋರಾಡಲು ಹೆಚ್ಚಿನ ಶಕ್ತಿ ಸಿಗುವುದು.

ಇದು ಒತ್ತಡದ ಮಟ್ಟ ಕಡಿಮೆ ಮಾಡುವುದು

ಇದರಲ್ಲಿ ಹೊಸತೇನಿಲ್ಲ. ನಿಜವಾಗಿಯೂ ಪ್ರಯಾಣ ಮಾಡಿದರೆ ಅದು ನಮ್ಮ ದೈನಂದಿನ ಬದುಕಿನ ಒತ್ತಡವನ್ನು ಕಡಿಮೆ ಮಾಡುವುದು. ಇದರಿಂದಾಗಿ ನಾವು ಪ್ರಯಾಣದ ವೇಳೆ ತುಂಬಾ ಆರಾಮವಾಗಿ ಉಸಿರಾಡಬಹುದು. ವೈಜ್ಞಾನಿಕವಾಗಿ ಪ್ರಯಾಣದಿಂದ ಜನರು ತುಂಬಾ ಸಂತೋಷ, ಖುಷಿ ಮತ್ತು ಎಲ್ಲಾ ರೀತಿಯ ಆತಂಕ ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವರು ಎಂದು ಹೇಳಲಾಗಿದೆ. ಖಿನ್ನತೆ ನಿವಾರಣೆಗೆ ಇದು ಅತ್ಯುತ್ತಮ ಪರಿಹಾರವಾಗಿದೆ. ಮೂರು ದಿನಕ್ಕಿಂತ ಹೆಚ್ಚಿನ ಪ್ರಯಾಣದಿಂದ ಜನರಿಗೆ ಹೆಚ್ಚು ವಿಶ್ರಾಂತಿ, ಒಳ್ಳೆಯ ಮನಸ್ಥಿತಿ ಮತ್ತು ಆತಂಕವು ಕಡಿಮೆ ಆಗುವುದು. ಪ್ರಯಾಣದಿಂದ ಹಿಂತಿರುಗಿದ ಬಳಿಕ ಕೂಡ ಅವರಲ್ಲಿ ಇದೇ ರೀತಿಯ ಮನಸ್ಥಿತಿ ಇರುತ್ತದೆ.

ಪ್ರಯಾಣವು ಮೆದುಳಿಗೂ ಒಳ್ಳೆಯದು

ಮೆದುಳು ಯಾವಾಗಲೂ ತುಂಬಾ ಚುರುಕಾಗಿರಬೇಕು ಎಂದಾದರೆ ಆಗ ನೀವು ಇನ್ನು ಹೆಚ್ಚು ಪ್ರಯಾನ ಮಾಡಬೇಕು. ಯಾಕೆಂದರೆ ಪ್ರಯಾಣದಿಂದಾಗಿ ನೀವು ಹೊಸ ಅವಕಾಶ ಪಡೆಯಲಿದ್ದೀರಿ ಮತ್ತು ಹೊಸ ಜನರನ್ನು ಭೇಟಿಯಾಗಿ, ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವಿರಿ. ಇದರಿಂದಾಗಿ ನೀವು ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ತುಂಬಾ ಜ್ಞಾನ ಪಡೆಯುವಿರಿ. ಹೊಸ ಅನುಭವದಿಂದಾಗಿ ನಿಮಗೆ ನೆನಪಿನ ಶಕ್ತಿ ಹೆಚ್ಚಳ ಮತ್ತು ಕ್ರಿಯಾತ್ಮಕತೆ ಬರುವುದು. ಪರ್ಸನಲ್ ಆಂಟ್ ಸೋಶಿಯಲ್ ಸೈಕಾಲಜಿ ಜರ್ನಲ್ ನ ಪ್ರಕಾರ, ಪ್ರಯಾಣ ಮತ್ತು ವಿದೇಶದಲ್ಲಿ ಓದುವುದರಿಂದ ಭಾವನೆಗಳಲ್ಲಿ ಒಂದು ಸ್ಥಿರತೆ ಮತ್ತು ಮುಕ್ತ ಮನಸ್ಸು ಬರುವುದು ಎಂದು ಹೇಳಲಾಗಿದೆ.

travelling

ಪ್ರಯಾಣದಿಂದ ಹೃದಯದ ಆರೋಗ್ಯ ಉತ್ತಮವಾಗುವುದು

ನೀವು ಪ್ರಯಾಣಿಸುವುದನ್ನು ಇಷ್ಟಪಡುತ್ತಿದ್ದರೆ ಮತ್ತು ನಿಯಮಿತವಾಗಿ ಪ್ರವಾಸಗಳನ್ನು ಮಾಡುತ್ತಲಿದ್ದರೆ ಆಗ ನಿಮಗೆ ಹೃದಯಾಘಾತವಾಗುವ ಸಾಧ್ಯತೆಯು ತುಂಬಾ ಕಡಿಮೆ ಇರುವುದು. ಫ್ರಾಮಿಂಗ್ಹ್ಯಾಮ್ ಹಾರ್ಟ್ ಸ್ಟಡಿ ವರದಿಯ ಪ್ರಕಾರ, ಹೆಚ್ಚು ಪ್ರಯಾಣ ಮಾಡುವಂತಹ ಜನರಲ್ಲಿ ಹೃದಯಾಘಾತದ ಅಪಾಯವು ತುಂಬಾ ಕಡಿಮೆ ಇರುವುದು ಮತ್ತು ಇವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಬರುವುದಿಲ್ಲ. ಹೆಚ್ಚು ಹೆಚ್ಚು ಪ್ರಯಾಣ ಮಾಡಿದಂತೆ ನೀವು ಒತ್ತಡ ಹಾಗೂ ಆತಂಕ ಕಡಿಮೆ ಮಾಡಿಕೊಳ್ಳುವಿರಿ. ಇದು ನಿಮ್ಮ ಹೃದಯದ ಆರೋಗ್ಯವನ್ನು ದೀರ್ಘಗೊಳಿಸುವುದು.

ಇದು ನಿಮ್ಮ ಫಿಟ್ನೆಸ್ ನ ರಹಸ್ಯ

ಪ್ರಯಾಣಿಸುತ್ತಿರುವ ವೇಳೆ ನೀವು ದೇಹವನ್ನು ತುಂಬಾ ಚಟುವಟಿಕೆಯಿಂದ ಇಡಬಹುದು ಮತ್ತು ಇದು ನೀವು ದೀರ್ಘಕಾಲ ನಡೆಯುವುದು ಅಥವಾ ಪ್ರಕೃತಿಗೆ ಮೈಯೊಡುವುದು ಅಥವಾ ಬೀಚ್ ನಲ್ಲಿ ವಾಲಿಬಾಲ್ ಅಥವಾ ಬೇರೆ ಕ್ರೀಡೆಗಳನ್ನು ಆಡುವುದು. ಹೋಟೆಲ್ ನಲ್ಲಿ ನೀವು ಕೆಲವೊಮ್ಮೆ ಈಜುವುದು ಅಥವಾ ಬೇರೆ ಕ್ರೀಡೆಗಳಲ್ಲಿ ತೊಡಗಿಕೊಳ್ಳಬಹುದು. ನೀವು ಮನೆಯಲ್ಲಿ ಇರುವುದಕ್ಕಿಂತ ಹೆಚ್ಚು ಪ್ರಯಾಣದ ವೇಳೆ ಚಟುವಟಿಕೆಯಿಂದ ಇರುವಿರಿ.

English summary

Top health benefits of travelling

Have you heard anyone say no to a vacation? Probably not, as almost all of us love travelling. While some are more frequent travellers, travelling being one of their hobbies, some travel less by choice. However, there’s hardly any who would refuse to travel for the sake of pleasure and to get away from the daily bustle. Travelling can be your best alternative medicine. Yes, that’s what science has proven already. Here are few ways by which travelling can make you remain healthy and strong.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more