For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಎದುರಾಗುವ ಈ ಐದು ಸಾಮಾನ್ಯ ಕಾಯಿಲೆಗಳ ಬಗ್ಗೆ ಎಚ್ಚರವಿರಲಿ!

|

ಯುಗಾದಿಯ ಹಬ್ಬ ಹತ್ತಿರಾಗುತ್ತಿದ್ದಂತೆಯೇ ಬೇಸಿಗೆಯ ದಿನಗಳೂ ಬಂದೇ ಬಿಟ್ಟಿವೆ. ಬಿರುಬಿಸಿಲು ತಾಪಮಾನವನ್ನು ಏರಿಸಿದಾಗ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ತಂಪುಗೊಳಿಸುವ ವಿಧಾನಗಳಿಗೆ ನಾವು ಮೊರೆಹೋಗುತ್ತೇವೆ. ಅಲ್ಲದೇ ಬೇಸಿಗೆಯ ಈ ಹವಾಮಾನದಲ್ಲಿ ಕೆಲವು ರೋಗಗಳು ಸಾಮಾನ್ಯವಾಗಿ ಎದುರಾಗುತ್ತವೆ ಹಾಗೂ ರಜೆಯ ದಿನಗಳ ನಿಮ್ಮ ಯೋಜನೆಗಳನ್ನೇ ಬುಡಮೇಲು ಮಾಡಿಬಿಡಬಹುದು. ಬನ್ನಿ, ಸಾಮಾನ್ಯವಾಗಿ ಎದುರಾಗುವ ಈ ಐದು ಕಾಯಿಲೆಗಳ ಬಗ್ಗೆ ಅರಿತುಕೊಂಡು ಎಚ್ಚರಿಕೆ ವಹಿಸೋಣ:

ಸಿಡುಬು (Chicken pox)

ಸಿಡುಬು (Chicken pox)

ಇದೊಂದು ಸೋಂಕುರೋಗವಾಗಿದ್ದು ಸಾಮಾನ್ಯವಾಗಿ ಮಕ್ಕಳಿಗೆ ಸುಲಭವಾಗಿ ಆವರಿಸುತ್ತದೆ. ಈ ರೋಗಕ್ಕೆ ಕೋಳಿಯ ಹೆಸರೇಕೆ? ಯೋಚಿಸಿದ್ದೀರಾ? ವಾಸ್ತವವಾಗಿ ಕೋಳಿಗೂ ಈ ರೋಗಕ್ಕೂ ಸಂಬಂಧವೇ ಇಲ್ಲ. ಸೋಂಕು ತಗುಲಿದ ರೋಗಿಯ ಚರ್ಮದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಕೋಳಿಗಳು ಕೊಕ್ಕಿನಲ್ಲಿ ಕುಕ್ಕಿ ಕುಕ್ಕಿ ಇಟ್ಟಂತೆ ತೋರುತ್ತವೆ, ಇಷ್ಟೇ ಕೋಳಿಯ ಸಂಬಂಧ. ಈ ಸೋಂಕು ಹರಡಲು ಕಾರಣವಾಗುವ ವೈರಸ್: ವಾರಿಸೆಲ್ಲಾ ಜ಼ೋಸ್ಟರ್ (The Varicella zoster virus) ಸಾಮಾನ್ಯವಾಗಿ ಬೇಸಿಗೆಯ ಪ್ರಾರಂಭದ ದಿನಗಳಲ್ಲಿಯೇ, ಹೆಚ್ಚಾಗಿ ಮಕ್ಕಳಲ್ಲಿಯೇ ಈ ರೋಗ ಕಂಡುಬರುತ್ತದೆ. ಸೋಂಕು ಎದುರಾದ ಒಂದರೆಡು ದಿನಗಳಲ್ಲಿಯೇ ಚಿಕ್ಕ ಚಿಕ್ಕ ಗುಳ್ಳೆಗಳು ಮೈಮೇಲೆಲ್ಲಾ ಏಳುತ್ತವೆ ಹಾಗೂ ಉರಿ ಮತ್ತು ತುರಿಕೆಯಿಂದ ಕೂಡಿರುತ್ತವೆ. ಸೋಂಕಿಗೊಳಗಾದ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾದ ಈ ಸೋಂಕು ಹರಡುವ ವೈರಸ ಗಾಳಿಯಲ್ಲಿ ಹರಡಿಕೊಂಡು ತೇಲುತ್ತಿರುತ್ತವೆ ಹಾಗೂ ಈ ಗಾಳಿಯನ್ನು ಉಸಿರಾಡಿದ ವ್ಯಕ್ತಿಗೂ ಹರಡುತ್ತದೆ. ಇದೇ ಕಾರಣಕ್ಕೆ ರೋಗ ಕಂಡುಬಂದ ತಕ್ಷಣವೇ ರೋಗಿಯನ್ನು ಪ್ರತ್ಯೇಕ ಕೋಣೆಯಲ್ಲಿರಿಸುವುದು ಅಗತ್ಯವಾಗಿದೆ. ಒಂದು ವೇಳೆ ಈ ಗುಳ್ಳೆಗಳು ಒಡೆದು ಒಸರಿದ ದ್ರವವನ್ನು ಮುಟ್ಟಿದವರಿಗೂ ಈ ಸೋಂಕು ಹರಡಬಹುದು.

ಸೋಂಕು ತಗಲಿರುವ ಲಕ್ಷಣಗಳು

ಸೋಂಕು ತಗಲಿರುವ ಲಕ್ಷಣಗಳು

ಪ್ರಾರಂಭಿಕ ಲಕ್ಷಣಗಳೆಂದರೆ ಜ್ವರ, ತಲೆನೋವು ಹಾಗೂ ಗಂಟಲ ಕೆರೆತ. ಮರುದಿನ ಅಥವಾ ಎರಡನೇ ದಿನದಲ್ಲಿ ಚರ್ಮದ ಮೇಲೆ ಎಲ್ಲೋ ಒಂದೆರಡು ಕಡೆ ಚಿಕ್ಕದಾಗಿ ಗುಳ್ಳೆಗಳು ಏಳತೊಡಗುತ್ತವೆ ಹಾಗೂ ಚಿಕ್ಕದಾಗಿ ಉರಿ ಪ್ರಾರಂಭವಾಗುತ್ತದೆ. ನಿಧಾನವಾಗಿ ಈ ಗುಳ್ಳೆಗಳು ನಿಧಾನವಾಗಿ ವಿಸ್ತರಿಸುತ್ತಾ ಇಡಿಯ ದೇಹವನ್ನು ಅವರಿಸತೊಡಗುತ್ತವೆ. ಎರಡು ದಿನಗಳವರೆಗೆ ಸತತವಾಗಿ ದೊಡ್ಡದಾಗುತ್ತಾ ಹೋಗುತ್ತವೆ ಹಾಗೂ ಒಳಗಣ ದ್ರವದ ಒತ್ತಡ ತಾಳಲಾರದೇ ಬಿರಿದು ದ್ರವ ಹೊರಚಿಮ್ಮತೊಡಗುತ್ತದೆ. ಕ್ರಮೇಣ ಒಡೆದ ಭಾಗದ ಚರ್ಮದ ಅಡಿ ಹೊಸ ಚರ್ಮ ಬೆಳೆಯತೊಡಗುತ್ತದೆ ಹಾಗೂ ಹಳೆಯ ಚರ್ಮ ಪಕಳೆಯಂತೆ ಉದುರುತ್ತದೆ. ಹೀಗಾಗ ಬಳಿಕವೇ ರೋಗಿ ಮತ್ತೊಮ್ಮೆ ತನ್ನ ಸಹಜ ಜೀವನದತ್ತ ಮರಳಬಹುದು. ಅಲ್ಲಿಯವರೆಗೂ ರೋಗಿಯನ್ನು ಕಟ್ಟುನಿಟ್ಟಾಗಿ ಯಾರ ಸಂಪರ್ಕಕ್ಕೂ ಬರದಂತೆ ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿರಿಸಿ ಸಾಕಷ್ಟು ವಿಶ್ರಾಂತಿ ಪಡೆಯುವಂತೆ ಮಾಡಬೇಕು. ಈ ಸ್ಥಿತಿ ಸುಮಾರು ಹತ್ತು ದಿನಗಳವರೆಗೆ ಇರುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಈ ವೈರಸ್ಸಿಗೆ ರೋಗ ನಿರೋಧಕ ವ್ಯವಸ್ಥೆ ಉತ್ಪತ್ತಿಯಾಗುತ್ತದೆ ಮತ್ತು ಜೀವಮಾನದಲ್ಲಿ ಮತ್ತೆಂದೂ ಬರದಂತೆ ರಕ್ಷಣಾ ವ್ಯವಸ್ಥೆ ರೂಪಿತಗೊಳ್ಳುತ್ತದೆ. ರೋಗಿಯ ಬಟ್ಟೆ, ತಟ್ಟೆಲೋಟ, ವೈಯಕ್ತಿಕ ವಸ್ತುಗಳೆಲ್ಲವನ್ನೂ ಪ್ರತ್ಯೇಕವಾಗಿಯೇ ಸ್ವಚ್ಛಗೊಳಿಸಬೇಕು ಹಾಗೂ ಸ್ವಚ್ಟತೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ಮುನ್ನೆಚ್ಚರಿಕೆ: ಇಂದು ಈ ರೋಗ ಬರದಂತೆ ತಡೆಯಲು ಲಸಿಕೆ ಲಭ್ಯವಿದೆ. ಆದರೂ, ಲಸಿಕೆ ತೆಗೆದುಕೊಂಡಾಕ್ಷಣ ಎಲ್ಲಾ ವೈರಸ್ಸುಗಳ ಧಾಳಿಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುವುದು ಅಗತ್ಯ ಕ್ರಮವಾಗಿದೆ. ನಾಲ್ಕು ಜನರ ಓಡಾಟವಿರುವ ಸ್ಥಳಗಳಿಗೆ ಹೋಗಿ ಬಂದ ಬಳಿಕ ಮೊದಲಾಗಿ ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡೇ ಉಳಿದ ಕೆಲಸಗಳನ್ನು ಪ್ರಾರಂಭಿಸುವುದು, ಈ ರೋಗ ಖಚಿತವಾದರೆ ತಕ್ಷಣವೇ ರೋಗಿಯನ್ನು ಉಳಿದವರ ಸಂಪರ್ಕಕ್ಕೆ ಬರದಂತೆ ಪ್ರತ್ಯೇಕ ಕೋಣೆಯಲ್ಲಿ ಇರುವಂತೆ ವ್ಯವಸ್ಥೆ ಮಾಡುವುದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ.

Most Read: ಬಾಡಿ ಹೀಟ್ ಕಡಿಮೆ ಮಾಡಲು ಸೇವಿಸಬಹುದಾದ ಬೇಸಿಗೆಯ ಆಹಾರಗಳು ಮತ್ತು ಪಾನೀಯಗಳು

ದಡಾರ (Measles)

ದಡಾರ (Measles)

ಇದಕ್ಕೆ ರೂಬೋವೆಲಾ ಅಥವಾ ಮೋರ್ಬಿಲ್ಲಿ ಎಂಬ ಹೆಸರೂ ಇದೆ ಹಾಗೂ ಸಾಮಾನ್ಯವಾಗಿ ಈ ರೋಗವೂ ಬೇಸಿಗೆಯಲ್ಲಿಯೇ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಹರಡಲು ಕಾರಣವಾಗುವ ವೈರಸ್: ಪ್ಯಾರಾಮಿಕ್ಸೋ ವೈರಸ್ (The paramyxo virus). ಈ ವೈರಸ್ಸಿನ ಸೋಂಕು ಮೊದಲಾಗಿ ಗಂಟಲ ಹಿಂಭಾಗದ ತೇವಭಾಗದಲ್ಲಿ ಪ್ರಾಂಭವಾಗುತ್ತದೆ ಹಾಗೂ ಚಿಕನ್ ಪಾಕ್ಸ್ ನ ವಿಧಾನದಂತೆಯೇ ವ್ಯಕ್ತಿಯ ಸೀನು ಅಥವಾ ಕೆಮ್ಮಿನಿಂದ ಹರಡುತ್ತದೆ.

ಲಕ್ಷಣಗಳು: ಪ್ರಾರಂಭದಲ್ಲಿ ಭಾರೀ ಜ್ವರ, ಕೆಮ್ಮು, ಸತತ ಸೋರುವ ಮೂಗು, ಗಂಟಲ ಬೇನೆ ಹಾಗೂ ಕೆಂಪಗಾಗಿರುವ ಕಣ್ಣುಗಳು. ಕ್ರಮೇಣ ಈ ಲಕ್ಷಣಗಳು ಬದಲಾಗುತ್ತಾ ಚರ್ಮದಲ್ಲಿ ಚಿಕ್ಕ ಚಿಕ್ಕ ಕೆಂಪಗಿನ ಗೀರುಗಳು ಮೂಡಲು ಪ್ರಾರಂಭವಾಗುತ್ತವೆ. ಚಿಕ್ಕ ಕೆಂಪು ಗುಳ್ಳೆಗಳಂತೆಯೂ ಇವು ತೋರಬಹುದು. ಜ್ವರ, ಕೆಮ್ಮು, ಸೋರುವ ಮೂಗು ಮೊದಲಾದವು ಕಡಿಮೆಯಾಗುವ ಲಕ್ಷಣವನ್ನೇ ತೋರದೇ ಮುಂದುವರೆಯುತ್ತವೆ. ಜೊತೆಗೇ ಬಾಯಿಯಲ್ಲಿಯೂ ಚಿಕ್ಕ ಚಿಕ್ಕ ಬಿಳಿ ಗುಳ್ಳೆಗಳು ಕಾಣಿಸಿಕೊಳ್ಳತೊಡಗುತ್ತವೆ. ಈ ಗುಳ್ಳೆಗಳು ಸುಮಾರು ಮೂರರಿಂದ ಐದು ದಿನಗಳವರೆಗೆ ಇರುತ್ತವೆ. ಈ ಸೋಂಕು ನಮ್ಮ ತಲೆಗೂದಲು ಪ್ರಾರಂಭವಾಗುವ ಹಣೆಯ ಭಾಗದಲ್ಲಿ ಮೊದಲಿಗೆ ಕಾಣಿಸಿಕೊಳ್ಳುತ್ತವೆ ಹಾಗೂ ನಿಧಾನವಾಗಿ ಮುಖದ ಚರ್ಮದಲ್ಲಿ ವಿಸ್ತರಿಸತೊಡಗಿ ನಿಧಾನವಾಗಿ ದೇಹದ ಇತರ ಭಾಗಕ್ಕೂ ಹರಡುತ್ತದೆ.

ಮುನ್ನೆಚ್ಚರಿಗೆ: ಮಕ್ಕಳಿಗೆ ಎಂ ಎಂ ಆರ್ (Measels, Mumps and Rubella) ಲಸಿಕೆಯನ್ನು ಆಸ್ಪತ್ರೆಯಲ್ಲಿ ನೀಡಲಾಗುತ್ತದೆ ಹಾಗೂ ಈ ಲಸಿಕೆಯ ಮೂಲಕ ಈ ಮೂರೂ ರೋಗಗಳಿಗೆ ದೇಹ ಪ್ರತಿರೋಧ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತದೆ.

ಕಾಮಾಲೆ (Jaundice)

ಕಾಮಾಲೆ (Jaundice)

ಕಾಮಾಲೆ (Jaundice) ಅಥವಾ ಹಳದಿರೋಗ: Hepatitis A ಎಂದೂ ಕರೆಯಲಾಗುವ ಈ ರೋಗ ನೀರಿನ ಮೂಲಕ ಹರಡುವ ರೋಗವಾಗಿದ್ದು ಸಾಮಾನ್ಯವಾಗಿ ಈ ಬ್ಯಾಕ್ಟೀರಿಯಾ ಸೋಂಕಿತ ಆಹಾರವನ್ನು ಸರಿಯಾಗಿ ತೊಳೆಯದೇ ಅಥವಾ ಬೇಯಿಸದೇ ಸೇವಿಸುವ ಮೂಲಕ ಅಥವಾ ಬ್ಯಾಕ್ಟೀರಿಯಾಗಳಿಂದ ತುಂಬಿದ ನೀರನ್ನು ಕುಡಿಯುವ ಮೂಲಕ ಹರಡುತ್ತದೆ. ಈ ಸೋಂಕು ಹರಡಲು ಕಾರಣವಾಗುವ ವೈರಸ್: ಹೆಪಟೈಟಿಸ್ - ಎ ( Hepatitis A virus)-ಈ ವೈರಸ್ ದೇಹವನ್ನು ಪ್ರವೇಶಿಸಿದ ಬಳಿಕ ಕೇವಲ ಯಕೃತ್ ಮೇಲೇ ತನ್ನ ಧಾಳಿಯನ್ನು ನಡೆಸಿ ಅತಿಯಾದ ಪ್ರಮಾಣದಲ್ಲಿ ಪಿತ್ತರಸವನ್ನು ಉತ್ಪತ್ತಿಯಾಗುವಂತೆ ಮಾಡುತ್ತದೆ. ಇದು ರಕ್ತದ ಮೂಲಕ ದೇಹದ ಎಲ್ಲಾ ಭಾಗಗಳಿಗೂ ಹರಡಿ ಚರ್ಮ, ಕಣ್ಣುಗಳ ಬಣ್ಣವನ್ನು ಹಳದಿಗೊಳಿಸುತ್ತದೆ. ಇದೇ ಕಾರಣಕ್ಕೆ ಈ ರೋಗಕ್ಕೆ ಹಳದಿರೋಗ ಎಂಬ ಹೆಸರು ಬಂದಿದೆ.

ಲಕ್ಷಣಗಳು: ಪ್ರಾರಂಭದದಲ್ಲಿ ಚರ್ಮದ ಬಣ್ಣ ನಿಧಾನವಾಗಿ ಹಳದಿಬಣ್ಣಕ್ಕೆ ತಿರುಗಲು ತೊಡಗುತ್ತದೆ. ಕ್ರಮೇಣ ದೇಹದ ತೇವವಾಗಿರುವ ಚರ್ಮಗಳು, ಕಣ್ಣಿನ ಬಿಳಿಭಾಗ ಮೊದಲಾದವೂ ಹಳದಿ ಬಣ್ಣ ತೊಡಗುತ್ತದೆ. ಆದರೆ ದೇಹದಿಂದ ವಿಸರ್ಜನೆಗೊಂಡ ಮಲ ಬಣ್ಣ ಕಳೆದುಕೊಂಡಿರುತ್ತದೆ, ಮೂತ್ರ ಗಾಢವರ್ಣ ಪಡೆಯುತ್ತದೆ ಹಾಗೂ ಚರ್ಮ ತುರಿಕೆಯಿಂದ ಕೂಡಿರುತ್ತದೆ.

ಮುನ್ನೆಚ್ಚರಿಕೆ: ಈ ರೋಗ ಬರದಂತೆ ತಡೆಯುವ ಲಸಿಕೆ ಇದೆ. ಆದರೂ ಯಾವುದೇ ರೋಗ ಬರದಂತೆ ತಡೆಗಟ್ಟುವುದೇ ಜಾಣತನದ ಕ್ರಮವಾಗಿದೆ. ಹಾಗಾಗಿ ಸ್ವಚ್ಛತೆ ಕಾಪಾಡದ ಯಾವುದೇ ಸ್ಥಳದಲ್ಲಿ ಆಹಾರವನ್ನು ಸೇವಿಸಲೇಬಾರದು. ಕೇವಲ ಫಿಲ್ಟರ್ ನೀರು ಅಥವಾ ಎರಡು ಬಾರಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು.

Most Read: ಏಳು ದಿನಗಳ ಕಾಲ ಬ್ರೇಕ್‌ಫಾಸ್ಟ್‌ಗೆ ಕೇವಲ ಮೊಟ್ಟೆಗಳನ್ನು ಮಾತ್ರ ತಿಂದ ಮಹಿಳೆಗೆ ಏನಾಯಿತು ಗೊತ್ತೇ?

ಟೈಫಾಯ್ಡ್ ( Typhoid)

ಟೈಫಾಯ್ಡ್ ( Typhoid)

ಟೈಫಾಯ್ಡ್ ಜ್ವರ ಎಂದೇ ಕರೆಯಲ್ಪಡುವ ಈ ರೋಗವೂ ನೀರಿನಿಂದ ಹರಡುತ್ತದೆ. ವಿಶೇಷವಾಗಿ ಬಯಲು ವಿಸರ್ಜನೆಯಲ್ಲಿ ರೋಗಿಯ ಮಲದಿಂದ ನೀರಿಗೆ ದಾಟಿಕೊಳ್ಳುವ ಬ್ಯಾಕ್ಟೀರಿಯಾಗಳು ಈ ನೀರು ಕುಡಿದವರ ದೇಹದಲ್ಲಿ ಆಶ್ರಯ ಪಡೆದು ತಮ್ಮ ಮನೆಹಾಳು ಕೆಲಸವನ್ನು ಮುಂದುವರೆಸುತ್ತವೆ. ಈ ಸೋಂಕು ಹರಡಲು ಕಾರಣವಾಗುವ ವೈರಸ್: ಸಾಲ್ಮೋನೆಲ್ಲಾ ಟೈಫಿ (Salmonella typhi).ರೋಗಿಯ ಮಲದ ಮೂಲಕ ಜೀವಂತವಾಗಿ ಹೊರಹೋಗುವ ಈ ವೈರಸ್ ನೀರಿನಲ್ಲಿ ಸುಲಭವಾಗಿ ಸೇರಿಕೊಂಡು ಹೆಚ್ಚು ಕಾಲ ಜೀವಂತವಿರುತ್ತದೆ ಹಾಗೂ ಈ ನೀರನ್ನು ಸ್ವಚ್ಛಗೊಳಿಸದೇ ಸೇವಿಸಿದವರ ಹೊಟ್ಟೆಯನ್ನು ಸೇರಿದ ಬಳಿಕ ಕೆಲವು ದಿನಗಳ ವರೆಗೆ ಸಂಖ್ಯಾಭಿವೃದ್ದಿ ಮಾಡುತ್ತಾ ತನ್ನ ಇರವನ್ನು ಪ್ರಕಟಿಸದೇ ಸಾಕಷ್ಟು ಸಂಖ್ಯೆಯಲ್ಲಿ ವೃದ್ದಿಗೊಂಡ ಬಳಿಕವೇ ಏಕಾಏಕಿ ಧಾಳಿ ನಡೆಸುತ್ತದೆ.

ಲಕ್ಷಣಗಳು: ಅಧಿಕ ಜ್ವರ, ಸುಸ್ತು, ಹೊಟ್ಟೆಯ ಭಾಗದಲ್ಲಿ ನೋವು, ತಲೆನೋವು ಹಸಿವಿಲ್ಲದಿರುವುದು ಹಾಗೂ ಕೆಲವೊಮ್ಮೆ ಚರ್ಮದಲ್ಲಿ ಅಲ್ಲಲ್ಲಿ ಕೆಂಪಗಾಗಿರುವುದು ಕಾಣಬರುತ್ತದೆ. ಕಾಯಿಲೆ ಆವರಿಸಿದ ಬಳಿಕ ಸೂಕ್ತ ಚಿಕಿತ್ಸೆ ಪಡೆದು ಗುಣವಾದ ವ್ಯಕ್ತಿಯ ದೇಹದಲ್ಲಿಯೂ ಎಲ್ಲೋ ಒಂದು ಕಡೆ ಈ ವೈರಸ್ ಯಾವುದೇ ಸುಳಿವು ನೀಡದೇ ಹಾಗೇ ಅಡಗಿ ಕುಳಿತು ಸೂಕ್ತ ಸಮಯಕ್ಕೆ ಕಾಯುತ್ತಿರಬಹುದು ಹಾಗಾಗಿ ಈ ವ್ಯಕ್ತಿಯಲ್ಲಿ ವೈರಸ್ ಇದ್ದರೂ ಯಾವುದೇ ಕಾಯಿಲೆ ಇರುವುದಿಲ್ಲ ಈ ವ್ಯಕ್ತಿಗಳನ್ನು ವೈದ್ಯಭಾಷೆಯಲ್ಲಿ ‘carriers'ಎಂದು ಕರೆಯುತ್ತಾರೆ. ಆದರೆ ಈ ವೈರಸ್ ಸೂಕ್ತ ಅವಕಾಶ ಸಿಕ್ಕ ಒಡನೆಯೇ ಸಂಖ್ಯಾಭಿವೃದ್ದಿ ಮಾಡಿಕೊಂಡು ರೋಗವನ್ನು ಇತರರಿಗೆ ಹರಡಲೂಬಹುದು.

ಮುನ್ನೆಚ್ಚರಿಕೆ

ಟೈಫಾಯ್ಡ್ ನಿಂದ ರಕ್ಷಣೆ ಪಡೆಯಲು ಇಂದು ಎರಡು ಬಗೆಯ ಲಸಿಕೆಗಳು ಲಭ್ಯವಿವೆ. ಮೊದಲನೆಯದು ಈ ವೈರಸ್ಸುಗಳನ್ನು ಕೊಲ್ಲುತ್ತವೆ ಹಾಗೂ ಇದನ್ನು ಚುಚ್ಚುಮದ್ದಿನ ಮೂಲಕ ರೋಗಿಗೆ ನೀಡಲಾಗುತ್ತದೆ. ಎರಡನೆಯದು ಈ ವೈರಸ್ಸಿಗೆ ಬುದ್ದಿ ಕಲಿಸಲು ಇದರದ್ದೇ ಪ್ರಬೇಧವನ್ನು ನಿಃಶಕ್ತಿಗೊಳಿಸಿ ಔಷಧಿ ಅಥವಾ ಮಾತ್ರೆಯ ರೂಪದಲ್ಲಿ ರೋಗಿಗೆ ಸೇವಿಸಲು ನೀಡುವುದಾಗಿದೆ.

ಕೆಪ್ಪಟರಾಯ (Mumps)

ಕೆಪ್ಪಟರಾಯ (Mumps)

ಇದೊಂದು ಅತ್ಯಂತ ಪ್ರಬಲ ಸೋಂಕುಕಾರಕ ರೋಗವಾಗಿದ್ದು ಮಕ್ಕಳಲ್ಲಿಯೇ ಹೆಚ್ಚಾಗಿ ಹಾಗೂ ಸಾಮಾನ್ಯವಾಗಿ ಬೇಸಿಗೆಯಲ್ಲಿಯೇ ಕಾಣಬರುತ್ತದೆ. ಈ ಸೋಂಕು ಹರಡಲು ಕಾರಣವಾಗುವ ವೈರಸ್: ಮಂಪ್ಸ್ ವೈರಸ್ (The mumps virus).ಸೋಂಕಿಗೊಳಗಾದ ವ್ಯಕ್ತಿಯ ಸೀನು ಅಥವಾ ಕೆಮ್ಮಿನಿಂದ ಈ ವೈರಸ್ ಗಾಳಿಯಲ್ಲಿ ತೇಲಾಡುತ್ತಾ ಹಲವರಿಗೆ ಹರಡುತ್ತದೆ.

ಲಕ್ಷಣಗಳು: ಪ್ರಧಾನ ಲಕ್ಷಣವೆಂದರೆ ಲಾಲಾರಸ ಉತ್ಪಾದಿಸುವ ಗ್ರಂಥಿ ಊದಿಕೊಳ್ಳುವುದು ಹಾಗೂ ಗಂಟಲ ಕೆಳಭಾಗದಲ್ಲಿ ಊತ ಕಾಣಿಸಿಕೊಳ್ಳುವುದು. ಪ್ರಾರಂಭವಾದ ದಿನದಿಂದಲೇ ಜ್ವರ, ತಲೆನೋವು, ಮೈಕೈ ನೋವು, ಸುಸ್ತು ಹಾಗೂ ಹಸಿವಿಲ್ಲದಿರುವುದು ಕಾಣಿಸಿಕೊಳ್ಳುತ್ತದೆ. ದಿನೇದಿನೇ ಗಂಟಲ ಕೆಳಭಾಗದ ಊತ ಹೆಚ್ಚುತ್ತಾ ಹೋಗುತ್ತದೆ.

ಮುನ್ನೆಚ್ಚರಿಕೆ: MMR ಲಸಿಕೆ (Measels, Mumps and rubella) ಯನ್ನು ಹಾಕಿಸಿಕೊಳ್ಳುವ ಮೂಲಕ ಈ ರೋಗ ಬರದಂತೆ ತಡೆಗಟ್ಟಬಹುದು.

ಬೇಸಿಗೆ ಎಂದರೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯುವ ಸಂತೋಷದ ಸಮಯವಾಗಿದ್ದು ಈ ಸಮಯದಲ್ಲಿ ಯಾವುದೇ ರೋಗ ಆವರಿಸದಂತೆ ಮುನ್ನೆಚ್ಚರಿಕೆ: ವಹಿಸುವುದು ಜಾಣತನದ ಕ್ರಮವಾಗಿದೆ ಹಾಗೂ ಈ ಮೂಲಕ ಬೇಸಿಗೆಯ ರಜಾದಿನಗಳನ್ನು ಪರಿಪೂರ್ಣವಾಗಿ ಆಸ್ವಾದಿಸಲು ಸಾಧ್ಯವಾಗುತ್ತದೆ.

English summary

Top 5 summer diseases you should Aware about this

Summer’s here and with the temperatures soaring, it’s not only the unbearable temperatures that can harm you but a large variety of diseases that can put a damper in your plans. Here are the top 5 diseases you should be vary of this summer.
X
Desktop Bottom Promotion