For Quick Alerts
ALLOW NOTIFICATIONS  
For Daily Alerts

ದಿನನಿತ್ಯ ಇಂತಹ 10 ಆಹಾರಗಳನ್ನು ಸೇವಿಸಿದರೆ, ದೇಹದ ಶಕ್ತಿ ಹೆಚ್ಚುತ್ತದೆ

|

ಮನುಷ್ಯನು ಸೇವಿಸುವಂತಹ ಪ್ರತಿಯೊಂದು ಆಹಾರ ಮತ್ತು ಪಾನೀಯದಲ್ಲಿ ಶಕ್ತಿ ನೀಡುವಂತಹ ಅಂಶಗಳು ಇವೆ. ಇದರಿಂದಾಗಿ ಆತನಿಗೆ ತನ್ನ ದೈನಂದಿನ ಚಟುವಟಿಕೆಗಳನ್ನು ಮಾಡಲು ಶಕ್ತಿ ಲಭ್ಯವಾಗುವುದು.

Energy Foods

ದೇಹದಲ್ಲಿ ಶಕ್ತಿ ಇಲ್ಲವೆಂದಾದರೆ ಆಗ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಮುಖ್ಯವಾಗಿರುವುದು. ಯಾವ ಆಹಾರಗಳನ್ನು ಸೇವಿಸಿದರೆ ನಮ್ಮ ದೇಹಕ್ಕೆ ಶಕ್ತಿ ಸಿಗುವುದು ಎಂದು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

ನೀರು

ನೀರು

ನಮ್ಮ ದೇಹದ ಶೇ.75ರಷ್ಟು ಭಾಗದಲ್ಲಿ ನೀರಿನಾಂಶವಿದೆ. ಸ್ನಾಯುಗಳು ತೇವಾಂಶದಿಂದ ಇದ್ದರೆ ಆಗ ಬಲ ಸಿಗುವುದು ಮತ್ತು ಶಕ್ತಿಯ ಮಟ್ಟವು ಹೆಚ್ಚಾಗುವುದು. 0.6 ಔನ್ಸ್ ನಷ್ಟು ನೀರು 45 ಗ್ರಾಂ ತೂಕಕ್ಕೆ ಬೇಕಾಗಿದೆ. ಜಲೀಕರಣವು ಶಕ್ತಿಯ ಮೂಲಕ್ಕೆ ತುಂಬಾ ಪ್ರಮುಖ ಅಂಶವಾಗಿದೆ. ಇದು ಬೇರೆಲ್ಲಾ ಆಹಾರಕ್ಕಿಂತಲೂ ಪ್ರಮುಖವಾಗಿದೆ.

ಬಸಳೆ

ಬಸಳೆ

ಬಸಳೆಯು ತುಂಬಾ ಆರೋಗ್ಯಕಾರಿ ಆಹಾರ ಎಂದು ಪರಿಗಣಿಸಲಾಗಿದೆ ಮತ್ತು ಇದು ಶಕ್ತಿಯ ಒಳ್ಳೆಯ ಮೂಲ. ನೀವು ಪ್ರತಿನಿತ್ಯ 430 ಗ್ರಾಂನಷ್ಟು ಬಸಳೆ ಸೇವನೆ ಮಾಡಬೇಕು. ಇದರಿಂದ ಲಾಭ ಸಿಗುವುದು. ಬಸಳೆಯಲ್ಲಿ ಉತ್ತಮ ಗುಣಮಟ್ಟದ ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೋಟೀನ್ ಇದೆ.

Most Read: ಪುರುಷರಲ್ಲಿ ಶಕ್ತಿ ಹೆಚ್ಚಿಸುವ ಹದಿನೈದು ಆಹಾರಗಳು

ಮೊಟ್ಟೆ

ಮೊಟ್ಟೆ

ಉಪಾಹಾರಕ್ಕೆ ನೀವು ಮೊಟ್ಟೆ ಸೇವಿಸಿದರೆ ಆಗ ದೇಹಕ್ಕೆ ಶಕ್ತಿ ಸಿಗುವುದು. ಮೊಟ್ಟೆಯಲ್ಲಿ ಪ್ರೋಟೀನ್ ಅಂಶವು 6-8 ಗ್ರಾಂ ಇದೆ ಮತ್ತು ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು, ಸತು, ಕಬ್ಬಿನಾಂಶ ಮತ್ತು ಕ್ಯಾಲ್ಸಿಯಂ ಇದೆ. ಇದರಿಂದ ದೇಹಕ್ಕೆ ಶಕ್ತಿ ಸಿಗುವುದು.

ಗೊಜಿ ಬೆರ್ರಿ

ಗೊಜಿ ಬೆರ್ರಿ

ಗೊಜಿ ಬೆರ್ರಿ ಒತ್ತಡವನ್ನು ನಿಭಾಯಿಸುವಂತಹ ಸಾಮರ್ಥ್ಯ ಹೊಂದಿದೆ ಮತ್ತು ಮಾನಸಿಕ ಆರೋಗ್ಯವನ್ನು ಇದು ಸಮಸ್ಥಿತಿಯಲ್ಲಿ ಇಡುತ್ತದೆ. ಗೊಜಿ ಬೆರ್ರಿಗಳು ಚೀನಾದಲ್ಲಿ ಸಿಗುವ ಶಕ್ತಿ ನೀಡುವಂತಹ ಆಹಾರವಾಗಿದೆ. ಗೊಜಿ ಬೆರ್ರಿ ಸೇವಿಸಿದರೆ ಅದರಿಂದ ತಕ್ಷಣವೇ ಮನಸ್ಥಿತಿ ಬದಲಾಗುವುದು ಮತ್ತು ಶಕ್ತಿಯ ಮಟ್ಟವು ಹೆಚ್ಚಾಗುವುದು.

ಚಿಕನ್ ಬ್ರೆಸ್ಟ್

ಚಿಕನ್ ಬ್ರೆಸ್ಟ್

ಚಿಕನ್ ಬ್ರೆಸ್ಟ್ ಅಗ್ಗದಲ್ಲಿ ಸಿಗುವುದು ಮತ್ತು ಇದರಲ್ಲಿ ಉನ್ನತ ಮಟ್ಟದ ಪ್ರೋಟೀನ್ ಮತ್ತು ಹೆಚ್ಚಿನ ಶಕ್ತಿ ಇದೆ. 100 ಗ್ರಾಂ ಚಿಕನ್ ಬ್ರೆಸ್ಟ್ ನಲ್ಲಿ 30 ಗ್ರಾಂ ಪ್ರೋಟೀನ್ ಇದೆ ಮತ್ತು ಕೊಬ್ಬು ಕಡಿಮೆ ಇದೆ.

ಗೆಣಸು

ಗೆಣಸು

ಗೆಣಸಿನಲ್ಲಿ ಉನ್ನತ ಮಟ್ಟದ ಕಾರ್ಬೋಹೈಡ್ರೇಟ್ಸ್ ಇದೆ. ಇದರೊಂದಿಗೆ ಇದರಲ್ಲಿ ಹಲವಾರು ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ಇದು ಸಕ್ಕರೆ ಮಟ್ಟವನ್ನು ಸಾಮಾನ್ಯವಾಗಿಡುತ್ತದೆ ಮತ್ತು ಶಕ್ತಿ ತುಂಬುವುದು.

ಕಾಫಿ

ಕಾಫಿ

ಕೆಫಿನ್ ನ್ನು ಕೆನೆ ಹಾಲಿನೊಂದಿಗೆ ಸೇವಿಸಿದರೆ ಅದರಿಂದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಿಗುವುದು ಮಾತ್ರವಲ್ಲದೆ ಅತ್ಯುನ್ನತ ಮಟ್ಟದ ಕಾರ್ಬೋಹೈಡ್ರೇಟ್ಸ್ ಗಳಿವೆ. ಒಂದು ಕಪ್ ಕಾಫಿಯು ನಿಮ್ಮ ಮನಸ್ಥಿತಿ ಸುಧಾರಣೆ ಮಾಡುವುದು ಮತ್ತು ತಾಜಾತನ ನೀಡುವುದು.

Most Read: ಪುರುಷರ ಆಕರ್ಷಕ ಮೈಕಟ್ಟಿಗೆ ಸತ್ವಯುತ ಆಹಾರ

ಗೌರಾನಾ

ಗೌರಾನಾ

ಗೌರಾನಾ ಎನ್ನುವುದು ಕೆಂಪು ಬಣ್ಣ ಹೊಂದಿರುವ ದುಂಡಗಿನ ಹಣ್ಣಾಗಿದೆ ಮತ್ತು ಇದರಲ್ಲಿ ನೈಸರ್ಗಿಕವಾಗಿರುವ ಕೆಫಿನ್ ಹೊಂದಿದೆ. ಇದರಲ್ಲಿ ಕಾಫಿಯಲ್ಲಿ ಇರುವಂತಹ ಕೆಫಿನ್ ನಿಂತ 2.5 ಪಟ್ಟು ಹೆಚ್ಚು ನೈಸರ್ಗಿಕ ಕೆಫಿನ್ ಇದೆ. ಇದು ಶಕ್ತಿಯ ಸಪ್ಲಿಮೆಂಟ್ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ.

ಇಡೀ ಏಕದಳ ಧಾನ್ಯಗಳು

ಇಡೀ ಏಕದಳ ಧಾನ್ಯಗಳು

ಇಡೀ ಏಕದಳ ಧಾನ್ಯಗಳಲ್ಲಿ ಇರುವಂತಹ ಉನ್ನತ ಮಟ್ಟದ ನಾರಿನಾಂಶವು ದಿನವಿಡಿ ಶಕ್ತಿಯನ್ನು ನೀಡುವುದು. ಇವುಗಳು ರಕ್ತನಾಳಗಳಿಗೆ ಗ್ಲೂಕೋಸ್ ಬಿಡುಗಡೆ ಕಡಿಮೆ ಮಾಡುವುದು. ಇಡೀ ಏಕದಳ ಧಾನ್ಯಗಳಲ್ಲಿ ದೇಹಕ್ಕೆ ಬೇಕಿರುವಂತಹ ಎಲ್ಲಾ ರೀತಿಯ ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು ಉನ್ನತ ಮಟ್ಟದ ಪ್ರೋಟೀನ್, ಆರೋಗ್ಯಕಾರಿ ಕೊಬ್ಬು ಮತ್ತು ನಾರಿನಾಂಶವನ್ನು ಹೊಂದಿದೆ. ಸಣ್ಣ ಪಿಂಗಾಣಿಯಲ್ಲಿ ಒಣ, ಹುರಿದ ಕುಂಬಳಕಾಯಿ ಬೀಜಗಳನ್ನು ಹಾಕಿಕೊಂಡು ತಿಂದರೆ ಶಕ್ತಿಯು ಸಿಗುವುದು. ಕುಂಬಳಕಾಯಿ ಬೀಜದ ಎಣ್ಣೆಯ ಸಪ್ಲಿಮೆಂಟ್ ಕೂಡ ಸೇವಿಸಬಹುದು.

English summary

Top 10 Energy Foods

Human body is all about water. Hydrating the muscles increases the strength and energy levels. Aim for about 0.6 ounces of water per pound of body weight. Hydration is an important energy source, even more important than most of the other foods.Best foods to boost your energy instantly when you feel tired. These top 10 new energy foods will boost your energy and help you stay active all the time.
X
Desktop Bottom Promotion