Just In
Don't Miss
- Technology
ಜಿ-ಮೇಲ್ ಬಳಕೆದಾರರಿಗೆ ಹೊಸ ಫಿಚರ್ಸ್ ಪರಿಚಯಿಸಿದ ಗೂಗಲ್!
- Automobiles
ಹೊಸ ಸಿಟಿ ಆರ್ಎಸ್ ಕಾರಿನ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನೈಸರ್ಗಿಕವಾಗಿ ಯಕೃತ್ ಅನ್ನು ಶುದ್ಧೀಕರಿಸಲು ಇಂತಹ ಸರಳ ಟಿಪ್ಸ್ ತಪ್ಪದೇ ಅನುಸರಿಸಿ
ದೇಹದಲ್ಲಿ ಇರುವಂತಹ ಪ್ರತಿಯೊಂದು ಅಂಗವು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ದೇಹದಲ್ಲಿ ಇರುವಂತಹ ಕೆಲವೊಂದು ವಿಷಕಾರಿ ಅಂಶಗಳನ್ನು ಹೊರಹಾಕಿ, ದೇಹವು ಶುದ್ಧವಾಗಿರುವಂತೆ ಅದು ನೋಡಿಕೊಳ್ಳುವುದು. ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕಲು ದೇಹವನ್ನು ನಿರ್ವಿಷಗೊಳಿಸುವುದು ಅತೀ ಅಗತ್ಯ. ದೇಹದಲ್ಲಿ ವಿಷಕಾರಿ ಅಂಶಗಳು ತುಂಬಿಕೊಳ್ಳಲು ಹಲವಾರು ಕಾರಣಗಳು ಇರಬಹುದು. ಇದರಲ್ಲಿ ಮುಖ್ಯವಾಗಿ ಅತಿಯಾಗಿ ಸಂಸ್ಕರಿತ ಆಹಾರ ಸೇವನೆ ಮಾಡುವ ಕಾರಣ ಮತ್ತು ವಾತಾವರಣದಲ್ಲಿ ಇರುವಂತಹ ವಿಷವು ದೇಹದೊಳಗೆ ಸೇರಿಕೊಳ್ಳುವುದರಿಂದ. ದೇಹವನ್ನು ನಿರ್ವಿಷಗೊಳಿಸುವುದು ಅತೀ ಅಗತ್ಯ ಆಗಿದೆ. ಇದು ನಿಮ್ಮ ಚರ್ಮಕ್ಕೆ ಮಾತ್ರವಲ್ಲದೆ, ಯಕೃತ್ ಗೆ ಕೂಡ ಇದು ಅತೀ ಅನಿವಾರ್ಯ.
ಯಕೃತ್ ನಮ್ಮ ದೇಹದಲ್ಲಿ ಇರುವಂತಹ ಅತೀ ಮುಖ್ಯ ಅಂಗವಾಗಿದೆ. ಹೃದಯ, ಕಿಡ್ನಿ ಮತ್ತು ಯಕೃತ್ ನಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಯಕೃತ್ ನಮ್ಮ ದೇಹದಲ್ಲಿ ನಿರ್ವಿಷಗೊಳಿಸುವ ಕಾರ್ಯ ಮಾಡುವುದು. ಇದು ರಕ್ತವನ್ನು ಶುದ್ಧೀಕರಿಸುವುದು ಮತ್ತು ಇದರ ಬಳಿಕ ಇದು ದೇಹದ ಬೇರೆ ಭಾಗಗಳಿಗೆ ತೆರಳುವುದು. ದೇಹದಲ್ಲಿ ಇರುವಂತಹ ರಾಸಾಯನಿಕಗಳನ್ನು ಇದು ನಿರ್ವಿಷಗೊಳಿಸುವುದು ಮತ್ತು ಇದನ್ನು ತ್ಯಾಜ್ಯ ವಸ್ತುಗಳನ್ನಾಗಿ ಮಾಡುವುದು. ಇದರಿಂದ ನಮ್ಮ ಆರೋಗ್ಯವು ಸರಿಯಾಗಿ ಇರಬೇಕಾದರೆ ಆಗ ಯಕೃತ್ ಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಅತೀ ಅಗತ್ಯವಾಗಿದೆ. ದೇಹದ ವಿಷವನ್ನು ತೆಗೆಯುವಂತಹ ಯಕೃತ್ ನ್ನು ಶುದ್ಧೀಕರಿಸುವುದು ಬೇಡವೇ ಎನ್ನುವ ಪ್ರಶ್ನೆ ಬರುವುದು. ಇದೇ ವೇಳೆ ಯಕೃತ್ ನ್ನು ಶುದ್ಧೀಕರಿಸುವುದು ಹೇಗೆ ಎನ್ನುವ ಪ್ರಶ್ನೆಯು ಮೂಡುವುದು. ನೈಸರ್ಗಿಕವಾಗಿ ಯಕೃತ್ ನ್ನು ಶುದ್ಧೀಕರಿಸಬಹುದು. ಆದರೆ ಇದಕ್ಕಾಗಿ ನೀವು ಕೆಲವೊಂದು ಸರಳ ವಿಧಾನಗಳನ್ನು ಪಾಲಿಸಿಕೊಂಡು ಹೋಗಬೇಕು. ಇದರಿಂದ ನೈಸರ್ಗಿಕವಾಗಿ ಯಕೃತ್ ನ್ನು ಶುದ್ಧ ಮಾಡಬಹುದು. ಇದರ ಬಗ್ಗೆ ನೀವು ಮುಂದಕ್ಕೆ ತಿಳಿಯಿರಿ.

ಯಕೃತ್ ಸ್ನೇಹಿಯಾಗಿರುವ ಆಹಾರ ಕ್ರಮ ಪಾಲಿಸಿ
ಆರೋಗ್ಯಕಾರಿ ಹಾಗೂ ಸಮತೋಲಿತವಾಗಿರುವ ಆಹಾರವು ನಮ್ಮ ದೇಹವನ್ನು ಆರೋಗ್ಯವಾಗಿಡುವುದು ಮತ್ತು ಅರ್ಧಕ್ಕಿಂತಲೂ ಹೆಚ್ಚಿನ ಕಾಯಿಲೆಗಳು ಇದರಿಂದ ದೂರ ಆಗುವುದು. ಇದೇ ರೀತಿಯಾಗಿ ನೀವು ಯಕೃತ್ ಸ್ನೇಹಿಯಾಗಿರುವಂತಹ ಕೆಲವೊಂದು ಆಹಾರ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಯಕೃತ್ ಗೆ ಅದ್ಭುತವಾಗಿರುವ ಕೆಲವೊಂದು ಆಹಾರಗಳಲ್ಲಿ ದ್ರಾಕ್ಷಿ, ಬೀಟ್ ರೂಟ್, ಬೆರ್ರಿಗಳು, ಕಾಳುಗಳು, ಆಲಿವ್ ತೈಲ ಮತ್ತು ಕಡಿಮೆ ಕೊಬ್ಬು ಇರುವ ಚಾ. ನೀವು ಆದಷ್ಟು ಮಟ್ಟಿಗೆ ಕಡಿಮೆ ಕೊಬ್ಬು ಇರುವಂತಹ ಆಹಾರ ಸೇವನೆ ಮಾಡಿ ಮತ್ತು ತಾಜಾ ತರಕಾರಿ ಸೇವನೆ ಮಾಡಿ. ಹೊಟ್ಟೆಗೆ ಸ್ನೇಹಿಯಾಗಿರುವ ಆಹಾರವು ಖಂಡಿತವಾಗಿಯೂ ಯಕೃತ್ ಗೆ ಹಲವಾರು ರೀತಿಯಿಂದ ನೆರವಾಗುವುದು.
Most Read: ದೇಹದ ಲಿವರ್ನ ಬಗ್ಗೆ ನಿಮಗೆ ತಿಳಿಯದೇ ಇರುವ ಪ್ರಮುಖ ಸಂಗತಿಗಳು

ಹೆಚ್ಚೆಚ್ಚು ಜ್ಯೂಸ್ ಕುಡಿಯಿರಿ
ಜ್ಯೂಸ್ ಗಳು ನಿಮ್ಮ ಯಕೃತ್ ಗೆ ತುಂಬಾ ಆರೋಗ್ಯಕಾರಿ ಆಗಿರುವುದು. ಜ್ಯೂಸ್ ಗಳು ನಿಮ್ಮ ಯಕೃತ್ ನ್ನು ಶುದ್ಧೀಕರಿಸುವುದು ಮತ್ತು ಅದರ ಕಾರ್ಯ ಕ್ಷಮತೆ ಹೆಚ್ಚಿಸುವುದು. ಆದರೆ ನೀವು ಇಲ್ಲಿ ಗಮನಿಸಬೇಕಾಗಿರುವಂತಹ ವಿಚಾರ ಎಂದರೆ ಇಲ್ಲಿ ನೀವು ಪ್ಯಾಕ್ ಮಾಡಲ್ಪಟ್ಟಿರುವಂತಹ ಪಾನೀಯ ಸೇವನೆ ಮಾಡಲೇಬಾರದು. ಯಾಕೆಂದರೆ ಅದರಲ್ಲಿ ಪೋಷಕಾಂಶಗಳು ಕಡಿಮೆ ಇರುವುದು. ಅತಿಯಾದ ಸಕ್ಕರೆ ಮತ್ತು ಕೃತಕ ಸುವಾಸನೆ ಹಾಗೂ ರುಚಿ ಇರುವುದು. ನೀವು ತಾಜಾ ಜ್ಯೂಸ್ ನ್ನು ಕುಡಿಯಿರಿ ಮತ್ತು ಅದಕ್ಕೆ ಸಕ್ಕರೆ ಬಳಕೆ ಮಾಡಬೇಡಿ. ತಾಜಾ ತರಕಾರಿ ಜ್ಯೂಸ್ ಯಕೃತ್ ಗೆ ತುಂಬಾ ಒಳ್ಳೆಯ ಆಯ್ಕೆ ಆಗಿರುವುದು. ನೀವು ಕ್ಯಾರೆಟ್, ಬೀಟ್ ರೂಟ್, ನೆಲ್ಲಿಕಾಯಿ, ಬಸಳೆ, ಟೊಮೆಟೋ ಮತ್ತು ಇತರ ತರಕಾರಿಗಳನ್ನು ಹಾಕಿಕೊಂಡು ಮಿಶ್ರಣದ ಜ್ಯೂಸ್ ಕುಡಿಯಬಹುದು ಅಥವಾ ನಿಮಗೆ ಇಷ್ಟವಾದ ತರಕಾರಿ ಜ್ಯೂಸ್ ಸೇವಿಸಬಹುದು.

ಅಧಿಕ ಕ್ಯಾಲರಿ ಕರಗಿಸಿ
ಅತಿಯಾದ ತೂಕ ಹೊಂದಿದ್ದರೆ ಆಗ ಹಲವಾರು ರೀತಿಯ ಕಾಯಿಲೆಗಳು ಬರುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದೇ ರೀತಿಯಾಗಿ ಇದರಿಂದ ಯಕೃತ್ ನ ಮೇಲೆ ಕೂಡ ಪರಿಣಾಮ ಬೀರುವುದು. ಇದಕ್ಕೆ ನೀವು ಆರೋಗ್ಯಕಾರಿ ತೂಕ ಕಾಪಾಡಿಕೊಂಡು ಹೋಗಬೇಕು. ದಿನನಿತ್ಯವು ನೀವು ದೈಹಿಕ ವ್ಯಾಯಾಮದಲ್ಲಿ ತೊಡಗಿಕೊಳ್ಳುವ ಜತೆಗೆ ಆರೋಗ್ಯಕಾರಿ ಆಹಾರ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಖಂಡಿತವಾಗಿಯೂ ತೂಕ ಇಳಿಸಬಹುದು. ತೂಕ ಕಳೆದುಕೊಳ್ಳಲು ನೆರವಾಗುವಂತಹ ಆರೋಗ್ಯಕಾರಿ ಆಹಾರ ಕ್ರಮದ ಜತೆಗೆ ನೀವು ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Most Read: ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಆಲ್ಕೋಹಾಲ್ ತ್ಯಜಿಸಿ
ಕುಡಿತ ಎನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಆಲ್ಕೋಹಾಲ್ ಸೇವನೆ ಮಾಡುವ ಕಾರಣದಿಂದಾಗಿ ಯಕೃತ್ ಗೆ ಹಾನಿ ಆಗುವ ಸಂಭವವು ಹೆಚ್ಚು. ನಿಯಮಿತವಾಗಿ ಆಲ್ಕೋಹಾಲ್ ಸೇವನೆ ಮಾಡುವ ಕಾರಣದಿಂದ ಯಕೃತ್ ಮೇಲೆ ತೀವ್ರವಾದ ಪರಿಣಾಮ ಬೀರುವುದು. ಇದರಿಂದ ಕಾಮಾಲೆ, ಸಿರೋಸಿಸ್, ಯಕೃತ್ ವೈಫಲ್ಯ ಮತ್ತು ಯಕೃತ್ ನ ಕ್ಯಾನ್ಸರ್ ಕೂಡ ಬರಬಹುದು. ನಿಮಗೆ ಯಕೃತ್ ನ್ನು ಆರೋಗ್ಯವಾಗಿ ಇಡಬೇಕೆಂಬ ಮನಸ್ಸಿದ್ದರೆ ಆಲ್ಕೋಹಾಲ್ ಸೇವನೆ ಈಗಿಂದೀಗಲೇ ತ್ಯಜಿಸಿ ಬಿಡಿ. ಆಲ್ಕೋಹಾಲ್ ನ್ನು ಸಂಪೂರ್ಣವಾಗಿ ತ್ಯಜಿಸುವುದು ಅಷ್ಟು ಸುಲಭವಲ್ಲ ಎನ್ನುವುದು ತಿಳಿದಿದೆ. ಆದರೆ ಪ್ರತಿನಿತ್ಯ ನೀವು ಕುಡಿಯುವ ಪ್ರಮಾಣವನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡಿಕೊಂಡು ಬರಬೇಕು. ಇದರಿಂದ ಕೆಲವು ದಿನಗಳ ಬಳಿಕ ನಿಮಗೆ ಅಂಟಿಕೊಂಡಿರುವ ಚಟವು ಬಿಟ್ಟು ಹೋಗುವುದು. ಇದಕ್ಕೆ ದೃಢ ನಿರ್ಧಾರ ತೆಗೆದುಕೊಳ್ಳುವ ಮನಸ್ಸು ಕೂಡ ಅಗತ್ಯ. ಯಕೃತ್ ನ್ನು ಆರೋಗ್ಯವಾಗಿ ಇಡಲು ಮತ್ತು ಅದನ್ನು ನಿರ್ವಿಷಗೊಳಿಸಲು ಇದು ಕೆಲವೊಂದು ವಿಧಾನಗಳು. ಆದರೆ ನಿಮಗೆ ತುಂಬಾ ಗಂಭೀರವಾಗಿರುವಂತ ಸಮಸ್ಯೆಗಳಾಗಿರುವ ವಾಂತಿ, ವಾಕರಿಕೆ, ಮೂತ್ರವಿಸರ್ಜನೆ ಮತ್ತು ಸ್ರವಿಸುವಿಕೆ, ಹೊಟ್ಟೆ ನೋವು, ದೀರ್ಘಕಾಲದ ನಿಶ್ಯಕ್ತಿ ಅಥವಾ ಕಾಮಾಲೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಆಗ ನೀವು ತಕ್ಷಣವೇ ಹೋಗಿ ವೈದ್ಯರನ್ನು ಭೇಟಿ ಮಾಡಿ, ಅವರಿಂದ ಪರೀಕ್ಷೆ ಮಾಡಿಸಿಕೊಳ್ಳಿ.