For Quick Alerts
ALLOW NOTIFICATIONS  
For Daily Alerts

ಜ್ವರ ಹಾಗೂ ಶೀತ ಆದರೆ, ಔಷಧೀಯ ಬದಲು ಇಂತಹ ಹಣ್ಣುಗಳನ್ನು ತಿನ್ನಿ

|

ಪ್ರಕೃತಿಯಲ್ಲಿ ಸಿಗುವಂತಹ ಪ್ರತಿಯೊಂದು ಹಣ್ಣು ಹಾಗೂ ತರಕಾರಿಗಳು ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಸಹಕಾರಿ ಆಗಿದೆ. ಇದರಿಂದಲೇ ಹವಾಮಾನಕ್ಕೆ ತಕ್ಕಂತೆ ನಮಗೆ ಕೆಲವೊಂದು ಹಣ್ಣುಗಳು ಪ್ರಕೃತಿಯಲ್ಲಿ ಲಭ್ಯವಾಗುವುದು. ಇದರ ಸೇವನೆ ಮಾಡಿ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಬಹುದು. ಹಿಂದಿನಿಂದಲೂ ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುವಂತಹ ಹಣ್ಣು ಹಂಪಲುಗಳನ್ನೇ ಬಳಸಿಕೊಂಡು ಜೀವನ ಸಾಗಿಸುತ್ತಿದ್ದರು. ಇವುಗಳಲ್ಲಿ ಕೆಲವೊಂದು ಕಾಯಿಲೆಗಳನ್ನು ನಿವಾರಣೆ ಮಾಡುವ ಗುಣಗಳು ಕೂಡ ಇರುವ ಕಾರಣದಿಂದಾಗಿ ದೇಹವನ್ನು ಸೂಕ್ಷ್ಮಜೀವಿಗಳು, ಕೀಟಾಣುಗಳಿಂದ ರಕ್ಷಿಸುವುದು. ಹಣ್ಣುಗಳಲ್ಲಿ ಕೀಟಾಣುಗಳನ್ನು ಕೊಲ್ಲುವಂತಹ ಗುಣಗಳು ಇವೆ ಮತ್ತು ಪರಿಣಾಮಕಾರಿಯಾಗಿ ಪ್ರತಿರೋಧ ಶಕ್ತಿ ವೃದ್ಧಿಸುವುದು.

Fruits Treat

ವಿಟಮಿನ್ ಗಳನ್ನು ಹೊಂದಿರುವ ಹಣ್ಣುಗಳು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗಿ ಶೀತ ಹಾಗೂ ಜ್ವರದಿಂದ ಕಾಪಾಡುವುದು. ನಿಯಮಿತವಾಗಿ ಹಣ್ಣುಗಳ ಸೇವನೆ ಮಾಡುತ್ತಲಿದ್ದರೆ ಆಗ ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಯಾವುದೇ ಕಾಯಿಲೆ ವಿರುದ್ಧ ಹೋರಾಡಲು ಬೇಕಾಗುವಂತಹ ಆಂಟಿಬಯೋಟಿಕ್ ಅಂಶವನ್ನು ಹಣ್ಣುಗಳು ನೀಡುವುದು. ಶೀತ ಮತ್ತು ಜ್ವರ ಸಮಸ್ಯೆ ನಿವಾರಣೆ ಮಾಡಲು ಸರಿಯಾದ ಹಣ್ಣುಗಳಿಂದ ಸಾಧ್ಯವಿದೆ. ಶೀತ ಹಾಗೂ ಜ್ವರದ ಸಮಸ್ಯೆ ನಿವಾರಣೆ ಮಾಡಲು ನೀವು ಈಗ ಯಾವುದೇ ಮಾತ್ರೆಗಳನ್ನು ಶೇಖರಣೆ ಮಾಡಿಡಬೇಕು ಎಂದೇನಿಲ್ಲ. ಕೇವಲ ಹಣ್ಣುಗಳು ಇದ್ದರೆ ಸಾಕು. ಶೀತ ಮತ್ತು ಜ್ವರದ ಸಮಸ್ಯೆ ನಿವಾರಣೆ ಮಾಡುವಂತಹ ಹಣ್ಣುಗಳು ಯಾವುದು ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ ಮತ್ತು ಅದನ್ನು ಔಷಧೀಯ ರೂಪದಲ್ಲಿ ಬಳಸಿಕೊಳ್ಳಿ.

ಸೇಬು

ಸೇಬು

ದಿನಕ್ಕೊಂದು ಸೇಬು ತಿಂದರೆ ಆಗ ವೈದ್ಯರಿಂದ ದೂರ ಉಳಿಯಬಹುದು ಎಂದು ಹಿಂದಿನವರು ಹೇಳಿದ್ದಾರೆ. ಇದು ನಿಜವೆನ್ನಬಹುದು. ಯಾಕೆಂದರೆ ಸೇಬು ನಮಗೆ ಬೇಕಾಗಿರುವಂತಹ ಆಂಟಿಆಕ್ಸಿಡೆಂಟ್ ನ್ನು ಹೆಚ್ಚಿನ ಮಟ್ಟದಲ್ಲಿ ನೀಡುವುದು. ಒಂದು ಸೇಬಿನಲ್ಲಿ ಆಂಟಿ ಆಕ್ಸಿಡೆಂಟ್ ನ ಪರಿಣಾಮವಾಗಿರುವ ವಿಟಮಿನ್ ಸಿ 1,500 ಗ್ರಾಂನಷ್ಟು ಇದೆ. ಫ್ಲಾವನಾಯ್ಡ್ ಗಳಿಂದ ತುಂಬಿರುವಂತಹ ಸೇಬು ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್ ನ್ನು ತಡೆಯುವ ಶಕ್ತಿ ಹೊಂದಿದೆ. ಇದು ಚರ್ಮಕ್ಕೆ ಕಾಂತಿ ನೀಡುವುದು. ದೇಹವನ್ನು ಆರೋಗ್ಯವಾಗಿ ಇಡುವುದು ಮತ್ತು ಶೀತ ಮತ್ತು ಜ್ವರದ ವೈರಸ್ ನಿಂದ ರಕ್ಷಿಸುವುದು.

ಪಪ್ಪಾಯಿ

ಪಪ್ಪಾಯಿ

ವಿಟಮಿನ್ ಸಿಯ ಶೇ. 250 ಆರ್ ಡಿಎ ಹೊಂದಿರುವಂತಹ ಪಪ್ಪಾಯಿಯು ಶೀತ ಮತ್ತು ಜ್ವರವನ್ನು ದೂರ ಮಾಡುವುದು. ಬೆಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಹಾಗೂ ಇ ಹೊಂದಿರುವಂತಹ ಪಪ್ಪಾಯಿಯು ಉರಿಯೂತವನ್ನು ದಿನವಿಡಿ ದೇಹದಿಂದ ಹೊರಗೆ ಇಡುತ್ತದೆ. ಇದರೊಂದಿಗೆ ಅಸ್ತಮಾ, ಶೀತ ಮತ್ತು ಕೆಮ್ಮಿನ ಪರಿಣಾಮ ಕಡಿಮೆ ಮಾಡುವುದು. ಈ ಹಣ್ಣು ಚರ್ಮಕ್ಕೆ ತುಂಬಾ ಒಳ್ಳೆಯದು ಮತ್ತು ಕಪ್ಪು ಕಲೆಗಳ ನಿವಾರಣೆ ಮಾಡಲು ಸಹಕಾರಿ ಆಗಿದೆ.

Most Read: ಸಾಮಾನ್ಯ ಜ್ವರಕ್ಕೆಲ್ಲಾ ಮನೆಮದ್ದಿರುವಾಗ ವೈದ್ಯರ ಹಂಗೇಕೆ?

ಕ್ರಾನ್ಬೇರಿ

ಕ್ರಾನ್ಬೇರಿ

ಬೇರೆ ಯಾವುದೇ ಹಣ್ಣುಗಳು ಅಥವಾ ತರಕಾರಿಗಳಿಂದ ಹೆಚ್ಚು ಆಂಟಿಆಕ್ಸಿಡೆಂಟ್ ಕ್ರಾನ್ಬೇರಿಯಲ್ಲಿದೆ. ಈ ಹಣ್ಣನ್ನು ಒಂದು ಸಲ ತಿನ್ನುವುದು ಮತ್ತು ಬ್ರಾಕೋಲಿಯನ್ನು ಐದು ಸಲ ಸೇವಿಸುವುದು ಸರಿಸಮ. ನೈಸರ್ಗಿಕ ಪ್ರೊಬಯೋಟಿಕ್ ಆಗಿರುವಂತಹ ಕ್ರಾನ್ಬೇರಿ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಮಟ್ಟವನ್ನು ಉತ್ತಮಪಡಿಸುವುದು ಮತ್ತು ಆಹಾರದಿಂದ ಬರುವಂತಹ ಕಾಯಿಲೆಗಳನ್ನು ತಡೆಯುವುದು. ಇದು ವೈರಸ್ ನ್ನು ದೂರವಿಡುವುದು ಮಾತ್ರವಲ್ಲದೆ ಶೀತ ಮತ್ತು ಜ್ವರದ ಸಾಧ್ಯತೆಯನ್ನು ತಗ್ಗಿಸುವುದು. ಕ್ರಾನ್ಬೇರಿಯನ್ನು ನೀವು ಆಹಾರ ಕ್ರಮದಲ್ಲಿ ಸೇರಿಸಿಕೊಂಡು ಹಾಗೆ ಸೇವಿಸಬಹುದು ಅಥವಾ ಶೇಕ್ ಮಾಡಿ ಬಳಸಬಹುದು.

ದ್ರಾಕ್ಷಿ ಹಣ್ಣು

ದ್ರಾಕ್ಷಿ ಹಣ್ಣು

ಲಿಮೊನಾಯ್ಡ್ ಗಳೆಂಬ ನೈಸರ್ಗಿಕ ಅಂಶವನ್ನು ಹೊಂದಿರುವಂತಹ ದ್ರಾಕ್ಷಿ ಹಣ್ಣುಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ದ್ರಾಕ್ಷಿ ಹಣ್ಣುನಲ್ಲಿ ಲೈಕೊಪೆನೆ ಎನ್ನುವಂತಹ ಅಂಶದ ವಿರುದ್ಧ ಹೋರಾಡುವುದು. ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು ಮತ್ತು ಸರಿಯಾಗಿ ಜೀರ್ಣಕ್ರಿಯೆ ಪ್ರಕ್ರಿಯೆ ಸಾಗಲು ಬೇಕಾಗುವಂತಹ ಪೋಷಕಾಂಶಗಳನ್ನು ಇದು ಒದಗಿಸುವುದು. ದೇಹದಲ್ಲಿ ಜ್ವರದ ಲಕ್ಷಣಗಳನ್ನು ಇದು ಕಡಿಮೆ ಮಾಡುವುದು ಮತ್ತು ಅದರ ವಿರುದ್ಧ ಹೋರಾಡಲು ಬೇಕಾಗುವ ಪೋಷಕಾಂಶ ಒದಗಿಸುವುದು. ಈ ಅದ್ಭುತ ಹಣ್ಣು ದೇಹಕ್ಕೆ ಬೇಕಾಗುವ ಶಕ್ತಿ ಒದಗಿಸುವುದು. ಇದರಿಂದ ನಿಶ್ಯಕ್ತಿ ಮತ್ತು ಅನಾರೋಗ್ಯ ದೂರ ಮಾಡಬಹುದು.

ಬಾಳೆಹಣ್ಣು

ಬಾಳೆಹಣ್ಣು

ವಿಟಮಿನ್ ಬಿ6ನ್ನು ಸಮೃದ್ಧವಾಗಿ ಹೊಂದಿರುವಂತಹ ಬಾಳೆಹಣ್ಣು ನಿಶ್ಯಕ್ತಿ, ಖಿನ್ನತೆ, ಒತ್ತಡ ಮತ್ತು ನಿದ್ರಾಹೀನತೆ ನಿವಾರಣೆ ಮಾಡುವುದು. ಹಠಾತ್ ಆಗಿ ಕಾಡುವಂತಹ ಹಸಿವನ್ನು ಇದು ನಿವಾರಣೆ ಮಾಡುವುದು. ಒಂದು ಬಾಳೆಹಣ್ಣು ತಿಂದರೆ ಅದರಿಂದ ಮನಸ್ಥಿತಿ ಸುಧಾರಣೆ ಆಗುವುದು ಮತ್ತು ಹಸಿವಿನ ಮಟ್ಟ ಕಡಿಮೆ ಆಗುವುದು. ಇದು ದೇಹಕ್ಕೆ ಹೆಚ್ಚು ಕೊಬ್ಬನ್ನು ಕೂಡ ಸೇರಿಸುವುದಿಲ್ಲ. ಮೆಗ್ನಿಶಿಯಂನ್ನು ಹೊಂದಿರುವ ಬಾಳೆಹಣ್ಣು ಮೂಳೆಯ ಆರೋಗ್ಯವನ್ನು ಕಾಪಾಡುವುದು ಮತ್ತು ಬಲಗೊಳಿಸುವುದು. ಪೊಟಾಶಿಯಂ ಅಂಶವು ಹೃದಯದ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ನಿವಾರಣೆ ಮಾಡುವುದು.

Most Read: ವೈರಲ್ ಜ್ವರ: ಮಾತ್ರೆಯ ಬದಲು, ಮನೆಮದ್ದಿಗೆ ಆದ್ಯತೆ ನೀಡಿ

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಬೇಸಿಯಲ್ಲಿ ಅತಿಯಾದ ಉಷ್ಣತೆಯಿಂದ ಪಾರಾಗಲು ಹೇಳಿ ಮಾಡಿಸಿರುವಂತಹ ಹಣ್ಣಾಗಿರುವಂತಹ ಕಲ್ಲಂಗಡಿಯು ಶೀತ ಹಾಗೂ ಜ್ವರವನ್ನು ದೂರ ಮಾಡುವುದು. ವಿಟಮಿನ್ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿರುವಂತಹ ಕಲ್ಲಂಗಡಿಯು ದೇಹದಲ್ಲಿನ ಉರಿಯೂತ ಕಡಿಮೆ ಮಾಡುವುದು ಮತ್ತು ದೇಹವನ್ನು ಸೋಂಕಿನಿಂದ ರಕ್ಷಿಸುವುದು.

English summary

These Fruits Treat Cold and Flu Better Than Medicines

Fruits carry germ-killing properties and can effectively boost immune system. Loaded with vitamins, fruits maintain a high level of immunity letting your body keep cold and flu at bay.Besides, consuming foods regularly can reduce the risk of heart disease and cancer.Fruit also gives your body the required dietary supplements to fight the antibodies leading to ailments. Conditions like cold and flu can be very well addressed by eating the right fruit type. Now, don’t just blindly resort to medicines for the treatment of cold and flu.
X
Desktop Bottom Promotion