For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಗೊಳಿಸುವ 8 ಆಹಾರಗಳು

|

ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವು ಸಮತೋಲನದಲ್ಲಿ ಇರಬೇಕಾದರೆ ಆಗ ಅದಕ್ಕೆ ದೇಹದಲ್ಲಿ ಉತ್ಪತ್ತಿ ಆಗುವಂತಹ ಟೆಸ್ಟೋಸ್ಟೆರಾನ್ ಹಾರ್ಮೋನು ಪ್ರಮುಖ ಕಾರಣವಾಗಿದೆ. ಇದು ಪುರುಷರ ಲೈಂಗಿಕ ಹಾರ್ಮೋನು ಎಂದು ಕರೆಯಲಾಗುತ್ತದೆ. ಮಹಿಳೆಯರಲ್ಲಿ ಕೂಡ ಸ್ವಲ್ಪ ಮಟ್ಟದಲ್ಲಿ ಇದು ಗರ್ಭಕೋಶ ಮತ್ತು ಮೂತ್ರಜನಕಾಂಗದ ಗ್ರಂಥಿಗಳಲ್ಲಿ ಇದು ಬಿಡುಗಡೆ ಆಗುತ್ತದೆ. ಆದರೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಹಲವಾರು ವಿಧಾನಗಳು ಇವೆ. ಇದರಲ್ಲಿ ಪ್ರಮುಖವಾಗಿ ನಾವು ಸೇವಿಸುವ ಆಹಾರ. ನಮ್ಮ ಆಹಾರ ಕ್ರಮವು ಸರಿಯಾಗಿದ್ದರೆ ಆಗ ಟೆಸ್ಟೋಸ್ಟೆರಾನ್ ಮಟ್ಟವು ಸಮತೋಲನದಲ್ಲಿ ಇರುತ್ತದೆ.

ಸಾಮಾನ್ಯವಾಗಿ ಆರೋಗ್ಯಕರ ಆಹಾರ ಕ್ರಮದಿಂದ ಟೆಸ್ಟೋಸ್ಟೆರಾನ್ ಮಟ್ಟ ಕಾಪಾಡಬಹುದು. ಯಾಕೆಂದರೆ ಈ ಹಾರ್ಮೋನ್ ಸ್ನಾಯುಗಳಲ್ಲಿನ ಮಾಂಸ ಖಂಡಗಳು ಬೆಳೆಯಲು, ಲೈಂಗಿಕ ಕ್ರಿಯೆ ಸುಧಾರಿಸಲು, ಮೂಳೆಗಳ ಆರೋಗ್ಯ ಮತ್ತು ಬಲಪಡಿಸಲು ಅತೀ ಅಗತ್ಯವಾಗಿದೆ. ಟೆಸ್ಟೋಸ್ಟೆರಾನ್ ಮಟ್ಟವು ತುಂಬಾ ಕಡಿಮೆ ಇದ್ದರೆ ಆಗ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಾಗಿರುವಂತಹ ಟೈಪ್ 2 ಮಧುಮೇಹ, ಹೃದಯದ ಸಮಸ್ಯೆ, ಬೊಜ್ಜು ಮತ್ತು ಚಯಾಪಚಯ ಸಮಸ್ಯೆ ಕಾಣಿಸಬಹುದು. ಇದರಿಂದಾಗಿ ಟೆಸ್ಟೋಸ್ಟೆರಾನ್ ಮಟ್ಟ ಕಾಪಾಡುವುದು ಅತೀ ಅಗತ್ಯವಾಗಿರುವುದು. ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಗೊಳಿಸುವ ಕೆಲವೊಂದು ಆಹಾರಗಳ ಬಗ್ಗೆ ತಿಳಿಯಿರಿ....

ಆಲ್ಕೋಹಾಲ್

ಆಲ್ಕೋಹಾಲ್

ಆಲ್ಕೋಹಾಲ್ ನಿಂದಾಗಿ ಪುರುಷರ ಸಂತಾನೋತ್ಪತ್ತಿಯಲ್ಲಿ ತೊಡಗುವ ಹಾರ್ಮೋನುಗಳ ಮೇಲೆ ಪರಿಣಾಮ ಬೀರುವುದು. ಅತಿಯಾಗಿ ಆಲ್ಕೋಹಾಲ್ ಸೇವಿಸಿದರೆ ಇದು ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಮಾಡುವುದು. ಅದರಲ್ಲೂ ವಿಶೇಷವಾಗಿ ಪುರುಷರಲ್ಲಿ. ಇದರಿಂದ ಆಲ್ಕೋಹಾಲ್ ಸೇವನೆಯನ್ನು ಮಿತಿಯಲ್ಲಿರಿಸಿಕೊಂಡು ಟೆಸ್ಟೋಸ್ಟೆರಾನ್ ಮಟ್ಟ ಕಾಪಾಡಿಕೊಳ್ಳಿ.

ಸಂಸ್ಕರಿತ ಆಹಾರಗಳು

ಸಂಸ್ಕರಿತ ಆಹಾರಗಳು

ಸಂಸ್ಕರಿತ ಆಹಾರಗಳಾಗಿರುವಂತಹ ಚೀಸ್, ಡಬ್ಬದಲ್ಲಿರುವ ತರಕಾರಿಗಳು, ಬ್ರೆಡ್, ಕೇಕ್ ಮತ್ತು ಬಿಸ್ಕಟ್ ಗಳಲ್ಲಿ ಅಧಿಕ ಟ್ರಾನ್ಸ್ ಫ್ಯಾಟ್ ಗಳಿವೆ. ಇದರಿಂದ ಟೈಪ್ 2 ಮಧುಮೇಹ, ಉರಿಯೂತ ಮತ್ತು ಹೃದಯದ ಕಾಯಿಲೆಗಳು ಬರುವುದು. ಅಧಿಕ ಟ್ರಾನ್ಸ್ ಫ್ಯಾಟ್ ಸೇವನೆ ಮಾಡಿದರೆ ಅದರಿಂದ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆ ಆಗುವುದು ಮತ್ತು ಇದು ಸಂತಾನೋತ್ಪತ್ತಿ ಮೇಲೆ ಪರಿಣಾಮ ಉಂಟು ಮಾಡುವುದು.

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳಾಗಿರುವ ಸೋಯಾ ಹಾಲು, ಮಿಸ್ಕೊ, ತೌಫು ಇತ್ಯಾದಿಗಳು ಟೆಸ್ಟೋಸ್ಟೆರಾನ್ ಮಟ್ಟವನ್ನು ಕುಗ್ಗಿಸುವುದು ಎಂದು ಹೇಳಲಾಗುತ್ತದೆ. ಅಧ್ಯಯನ ವರದಿಗಳ ಪ್ರಕಾರ ಸೋಯಾ ಆಹಾರದಲ್ಲಿ ಅತ್ಯಧಿಕ ಮಟ್ಟದ ಫೈಟೊಸ್ಟ್ರೋಜನ್ ಗಳು ಇವೆ ಮತ್ತು ಇದು ಈಸ್ಟೋಜನ್ ಮೇಲೆ ಪರಿಣಾಂ ಬೀರುವುದು ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವುದು.

ತರಕಾರಿ ಎಣ್ಣೆ

ತರಕಾರಿ ಎಣ್ಣೆ

ತರಕಾರಿ ಎಣ್ಣೆಗಳಾಗಿರುವಂತಹ ಸೋಯಾಬೀನ್, ಜೋಳ, ಕ್ಯಾನೊಲಾ ಮತ್ತು ಹತ್ತಿಬೀಜದ ಎಣ್ಣೆಯು ಬಹುಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಈ ಅನಾರೋಗ್ಯಕರ ಕೊಬ್ಬನ್ನು ನಿಯಮಿತವಾಗಿ ಸೇವಿಸುವುದರಿಂದ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವುದು.

ಬೀಜಗಳು

ಬೀಜಗಳು

31 ಮಹಿಳೆಯರ ಮೇಲೆ ನಡೆಸಿರುವಂತಹ ಅಧ್ಯಯನದ ಪ್ರಕಾರ ಪಿಸಿಒಎಸ್ ಅಂಕಿಅಂಶದಂತೆ ವಾಲ್ ನಟ್ ಮತ್ತು ಬಾದಾಮಿಯು ಸೆಕ್ಸ್ ಹಾರ್ಮೋನ್ ಬಂಧಿಸುವ ಗ್ಲೊಬುಲಿನ್(ಎಸ್ ಎಚ್ ಬಿಜಿ)ಯ ಮಟ್ಟವನ್ನು ಶೇ.12.5 ರಿಂದ 16ರಷ್ಟು ಹೆಚ್ಚಿಸುವುದು ಎಂದು ಹೇಳಲಾಗಿದೆ. ಎಸ್ ಎಚ್ ಬಿಜಿ ಟೆಸ್ಟೋಸ್ಟೆರಾನ್ ಹಾರ್ಮೋನ್ ನ್ನು ಬಂಧಿಸುವ ಪ್ರೋಟೀನ್ ಆಗಿದೆ. ಇದು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವುದು.

ಪುದೀನಾ

ಪುದೀನಾ

ಪುದೀನಾವು ಟೆಸ್ಟೋಸ್ಟೆರಾನ್ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುವುದು. ಪ್ರತಿನಿತ್ಯ ಪುದೀನಾ ಚಾ ಸೇವನೆ ಮಾಡುವಂತಹ ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಗಣನೀಯವಾಗಿ ಕುಸಿದಿದೆ ಎಂದು ಅಧ್ಯಯನಗಳು ಹೇಳಿವೆ.

ಫ್ಲ್ಯಾಕ್ಸ್ ಸೀಡ್

ಫ್ಲ್ಯಾಕ್ಸ್ ಸೀಡ್

ಫ್ಲ್ಯಾಕ್ಸ್ ಸೀಡ್ ನಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಅಧಿಕವಾಗಿದ್ದು, ಅದೇ ರೀತಿಯಾಗಿ ಸಸ್ಯಜನ್ಯವಾದಂತಹ ಲಿಗ್ನನ್ಸ್ ಕೂಡ ಇದ್ದು, ಇದು ಟೆಸ್ಟೋಸ್ಟೆರಾನ್ ನ್ನು ಬಂಧಿಸುವುದು ಮತ್ತು ಅದನ್ನು ದೇಹದಿಂದ ಹೊರಹಾಕುವುದು.

ಲಿಕ್ವಾರಿಸ್ ರೂಟ್

ಲಿಕ್ವಾರಿಸ್ ರೂಟ್

ಲಿಕ್ವಾರಿಸ್ ಬೇರನ್ನು ಆಯುರ್ವೇದಲ್ಲಿ ಕೆಲವೊಂದು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅದಾಗ್ಯೂ, ಪ್ರತಿನಿತ್ಯ 3.5 ಗ್ರಾಂ ಲಿಕ್ವಾರಿಸ್ ಬೇರು ಸೇವಿಸಿದರೆ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆ ಆಗುವುದು.

English summary

These Eight Foods That Lower Your Testosterone Levels

A healthy diet is important to maintain normal levels of testosterone because this hormone is required for gaining muscle mass, improving sexual function, promoting bone health, and boosting strength. Certain foods like mint, flaxseed, nuts, alcohol, soy products, processed foods etc. are known to lower testosterone levels.
X
Desktop Bottom Promotion