For Quick Alerts
ALLOW NOTIFICATIONS  
For Daily Alerts

ಇದೇ ಕಾರಣಕ್ಕೆ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳು ಕಂಡುಬರುವುದು!

|

ಪುರುಷ ಆರೋಗ್ಯವಾಗಿದ್ದರೆ ಸಾಲದು, ಆತನ ಲೈಂಗಿಕ ಆರೋಗ್ಯ ಕೂಡ ಚೆನ್ನಾಗಿರಬೇಕು. ಹೀಗೆ ಇದ್ದಲ್ಲಿ ಮಾತ್ರ ವೈವಾಹಿಕ ಜೀವನ ಅಥವಾ ಇನ್ಯಾವುದೇ ಸಂಬಂಧವು ಉತ್ತಮ ರೀತಿಯಲ್ಲಿ ಮುಂದುವರಿಲು ಸಾಧ್ಯ. ಆಧುನಿಕ ಯುಗದಲ್ಲಿ ಪುರುಷರು ಹಾಗೂ ಮಹಿಳೆಯರಲ್ಲಿ ಜೀವನ ಶೈಲಿ ಹಾಗೂ ತಿನ್ನುವಂತಹ ಆಹಾರ ಕ್ರಮದಿಂದ ಲೈಂಗಿಕ ಆಸಕ್ತಿಯು ಕಡಿಮೆಯಾಗುತ್ತಾ ಇದೆ. ಈ ಲೈಂಗಿಕ ಸಮಸ್ಯೆಗಳಲ್ಲಿ ಪ್ರಮುಖವಾಗಿ ನಿಮಿರು ದೌರ್ಬಲ್ಯ, ಸ್ಖಲನದ ಸಮಸ್ಯೆ, ಬಂಜೆತನ ಮತ್ತು ಇತರ ಕೆಲವೊಂದು ಸಮಸ್ಯೆಗಳು ಇದರಲ್ಲಿ ಒಳಗೊಂಡಿದೆ. ಇನ್ನು ಆರೋಗ್ಯ ತಜ್ಞರ ಅಭಿಪ್ರಾಯದಂತೆ ಪುರುಷರಲ್ಲಿ ಲೈಂಗಿಕ ಸಮಸ್ಯೆಯು ಕಾಣಿಸಿಕೊಳ್ಳುವುದು ದೈಹಿಕ ಅಥವಾ ಮಾನಸಿಕ ಸಮಸ್ಯೆಯಿಂದಾಗಿ ಎಂದು ಅಭಿಪ್ರಾಯ ಪಡುತ್ತಾರೆ... ಹಾಗಾದರೆ ಇಂತಹ ಸಮಸ್ಯೆಗೆ ಕಾರಣವೇನು? ಎಂಬುದನ್ನು ವಿವರವಾಗಿ ನೋಡೋಣ ಬನ್ನಿ....

ದೈಹಿಕ ಸಮಸ್ಯೆಗಳು

ದೈಹಿಕ ಸಮಸ್ಯೆಗಳು

ಹಲವು ದೈಹಿಕ ಮತ್ತು ವೈದ್ಯಕೀಯ ಪರಿಸ್ಥಿತಿಯು ಲೈಂಗಿಕ ಸಮಸ್ಯೆಗೆ ಕಾರಣವಾಗಬಹುದು. ಈ ಪರಿಸ್ಥಿತಿಗಳು ಏನೆಂದರೆ ಮಧುಮೇಹ, ಹೃದಯ ಮತ್ತು ನಾಳದ(ರಕ್ತನಾಳ) ಕಾಯಿಲೆ, ನರಗಳ ಸಮಸ್ಯೆ, ಹಾರ್ಮೋನು ವೈಪರಿತ್ಯ, ದೀರ್ಘಕಾಲದ ಕಾಯಿಲೆಗಳಾಗಿರುವ ಕಿಡ್ನಿ ಅಥವಾ ಯಕೃತ್ ವೈಫಲ್ಯ ಮತ್ತು

ಆಲ್ಕೋಹಾಲ್ ಅಥವಾ ಮಾದಕ ದ್ರವ್ಯ ಸೇವನೆ. ಖಿನ್ನತೆ ವಿರೋಧಿ ಔಷಧಿಯಂತಹ ಕೆಲವೊಂದು ರೀತಿಯ ಔಷಧಿಗಳ ಅಡ್ಡಪರಿಣಾಮ ದಿಂದಾಗಿ ಲೈಂಗಿಕ ಆಕಾಂಕ್ಷೆ ಮತ್ತು ಕಾರ್ಯದ ಮೇಲೆ ಪರಿಣಾಮ ಬೀರುವುದು. ಮಾನಸಿಕ ಕಾರಣಗಳು: ಇವುಗಳಲ್ಲಿ ಮುಖ್ಯವಾಗಿ ಕೆಲಸದ ಒತ್ತಡ ಮತ್ತು ಆತಂಕ, ಲೈಂಗಿಕಚಟುವಟಿಕೆ ಬಗ್ಗೆ ಇರುವ ಚಿಂತೆ, ವಿವಾಹೇತರ ಅಥವಾ ಸಂಬಂಧದ ಸಮಸ್ಯೆಗಳು, ಖಿನ್ನತೆ, ತಪ್ಪಿತಸ್ಥ ಮನೋಭಾವ ಮತ್ತು ಹಿಂದಿನ ಲೈಂಗಿಕ ಆಘಾತದ ಪರಿಣಾಮ.

ಲೈಂಗಿಕ ಸಮಸ್ಯೆಗಳಿಂದ ಯಾರ ಮೇಲೆ ಪರಿಣಾಮವಾಗುವುದು?

ಲೈಂಗಿಕ ಸಮಸ್ಯೆಗಳಿಂದ ಯಾರ ಮೇಲೆ ಪರಿಣಾಮವಾಗುವುದು?

ಲೈಂಗಿಕ ಸಮಸ್ಯೆಗಳು ಪುರುಷರು ಹಾಗೂ ಮಹಿಳೆಯರು ಇಬ್ಬರ ಮೇಲೂ ಪರಿಣಾಮ ಬೀರುವುದು. ಲೈಂಗಿಕ ಸಮಸ್ಯೆಯು ಎಲ್ಲಾ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವುದು. ಇದರಲ್ಲಿ ಸಾಮಾನ್ಯವಾಗಿ ಪರಿಣಾಮ ಬೀರುವುದು ವಯಸ್ಸಾಗುತ್ತಾ ಇರುವಂತವರಲ್ಲಿ. ವಯಸ್ಸಾಗುತ್ತಾ ಹೋದಂತೆ ದೇಹದ ಆರೋಗ್ಯವು ಕುಂದುವುದು.

ನಿಮಿರು ದೌರ್ಬಲ್ಯ, ಶೀಘ್ರ ಸ್ಖಲನ

ನಿಮಿರು ದೌರ್ಬಲ್ಯ, ಶೀಘ್ರ ಸ್ಖಲನ

ಪುರುಷರಲ್ಲಿ ಕಾಣಿಸಿಕೊಳ್ಳುವಂತಹ ಸಾಮಾನ್ಯವಾದ ಲೈಂಗಿಕ ಸಮಸ್ಯೆಗಳೆಂದರೆ ನಿಮಿರು ದೌರ್ಬಲ್ಯ, ಶೀಘ್ರ ಸ್ಖಲನ ಮತ್ತು ಲೈಂಗಿಕ ಆಕಾಂಕ್ಷೆಯು ಕಡಿಮೆ ಆಗಿರುವುದು.

ಸ್ಖಲನ ಸಮಸ್ಯೆಗಳು ಯಾವುದು?

ಪುರುಷರಲ್ಲಿ ವಿವಿಧ ರೀತಿಯ ಸ್ಖಲನದ ಸಮಸ್ಯೆಗಳು ಕಾಣಿಸಿಕೊಳ್ಳುವುದು.

ಶೀಘ್ರ ಸ್ಖಲನ: ಈ ರೀತಿಯ ಸ್ಖಲನವು ನುಗ್ಗುವಿಕೆಯಾದ ತಕ್ಷಣ ಅಥವಾ ಅದಕ್ಕಿಂತ ಮೊದಲೇ ನಡೆಯುವುದು.

ಸ್ಖಲನಕ್ಕೆ ಅಡೆತಡೆ: ಈ ರೀತಿಯ ಸ್ಖಲನವು ತುಂಬಾ ನಿಧಾನವಾಗಿ ಆಗುವುದು. ಸ್ಖಲನ ಹಿಮ್ಮುಖವಾಗುವುದು: ಈ ರೀತಿಯ ಸ್ಖಲನವು ಪರಾಕಾಷ್ಠೆ ವೇಳೆ ಸ್ಖಲನವು ಗರ್ಭಕೋಶದಲ್ಲಿ ಸ್ಖಲನವಾಗುವ ಬದಲು ಮೂತ್ರಕೋಶಕ್ಕೆ ಹಿಮ್ಮುಖವಾಗಿ ಚಲಿಸುವುದು. ಕೆಲವೊಂದು ಸಂದರ್ಭದಲ್ಲಿ ಶೀಘ್ರ ಸ್ಖಲನ ಅಥವಾ ಅಡೆತಡೆಯ ಸ್ಖಲನವು ಕೆಲವೊಂದು ಮಾನಸಿಕ ಸಮಸ್ಯೆಯಿಂದ ಬರುವುದು. ಕಟ್ಟುನಿಟ್ಟಿನ ಧಾರ್ಮಿಕ ಹಿನ್ನೆಲೆ ಹೊಂದಿರುವ ವ್ಯಕ್ತಿಯು ಸೆಕ್ಸ್ ನ್ನು ಒಂದು ಪಾಪ ಎಂದು ಪರಿಗಣಿಸಬಹುದು, ಸಂಗಾತಿ ಕಡೆಗೆ ಕುಂದಿದ ಆಕರ್ಷಣೆ ಮತ್ತು ಹಿಂದಿನ ಕೆಲವು ಆಘಾತಕಾರಿ ಘಟನೆಗಳು ಇದಕ್ಕೆ ಕಾರಣವಾಗಿರಬಹುದು. ಶೀಘ್ರ ಸ್ಖಲನ ಎನ್ನುವುದು ಪುರುಷರಲ್ಲಿ ಕಾಣಿಸಿಕೊಳ್ಳುವಂತಹ ಸಾಮಾನ್ಯ ಲೈಂಗಿಕ ಸಮಸ್ಯೆಯಾಗಿದೆ. ಲೈಂಗಿಕ ಕ್ರಿಯೆ ವೇಳೆ ತಾನು ಯಾವ ರೀತಿಯ ಪ್ರದರ್ಶನ ನೀಡುತ್ತೇನೆ ಎನ್ನುವ ಆತಂಕವು ಇದಕ್ಕೆ ಕಾರಣವಾಗಿರುವುದು. ಕೆಲವೊಂದು ಔಷಧಿಗಳಾಗಿರುವಂತ ಖಿನ್ನತೆ ವಿರೋಧಿ ಔಷಧಿಗಳು ಕೂಡ ಸ್ಖಲನದ ಮೇಲೆ ಪರಿಣಾಮ ಬೀರಬಹುದು. ಬೆನ್ನುಹುರಿ ಮತ್ತು ಬೆನ್ನಿನ ನರಗಳಿಗೆ ಹಾನಿ ಆಗಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ಮಧುಮೇಹ ದಿಂದಾಗಿ ನರದ ಸಮಸ್ಯೆ(ನರಗಳಿಗೆ ಹಾನಿ) ಇರುವಂತಹ ಪುರುಷರಲ್ಲಿ ಹಿಮ್ಮುಖ ಸ್ಖಲನವು ಕಾಣಿಸಿಕೊಳ್ಳುವುದು. ಮೂತ್ರಕೋಶದಲ್ಲಿರುವಂತಹ ನರಗಳಲ್ಲಿನ ಸಮಸ್ಯೆಯಿಂದಾಗಿ ಹೀಗೆ ಆಗುವುದು ಮತ್ತು ಮೂತ್ರಕೋಶದ ಕುತ್ತಿಗೆಯು ಸ್ಖಲನವು ಹಿಮ್ಮುಖವಾಗುವಂತೆ ಮಾಡುವುದು. ಪ್ರಾಸ್ಟೇಟ್ ಅಥವಾ ಮೂತ್ರಕೋಶದ ಕುತ್ತಿಗೆಗೆ ಮಾಡಿರುವಂತಹ ಶಸ್ತ್ರ ಚಿಕಿತ್ಸೆ ಯಿಂದಲೂ ಹಿಮ್ಮುಖ ಸ್ಖಲನವು ಕಾಣಿಸುವುದು. ಹೊಟ್ಟೆಯ ಕೆಲವು ಶಸ್ತ್ರಚಿಕಿತ್ಸೆಯಿಂದಲೂ ಇದು ಬರಬಹುದು. ಇದರ ಹೊರತಾಗಿ ಕೆಲವೊಂದು ಔಷಧಿಗಳು, ಅದರಲ್ಲೂ ಮನಸ್ಥಿತಿ ಸಮತೋಲನಕ್ಕೆ ತೆಗೆದುಕೊಳ್ಳುವ ಔಷಧಿಯು ಇಂತಹ ಹಿಮ್ಮುಖ ಸ್ಖಲನಕ್ಕೆ ಕಾರಣವಾಗಬಹುದು.

Most Read:ಪುರುಷರ ಸೆಕ್ಸ್ ಲೈಫ್ ಹೆಚ್ಚಿಸುವ ನೈಸರ್ಗಿಕ ಆಹಾರಗಳು

ಲೈಂಗಿಕವಾಗಿ ಹರಡುವ ರೋಗಗಳು ಮತ್ತು ನಿಮ್ಮ ಬಾಯಿ

ಲೈಂಗಿಕವಾಗಿ ಹರಡುವ ರೋಗಗಳು ಮತ್ತು ನಿಮ್ಮ ಬಾಯಿ

ಪ್ರತೀವರ್ಷ ಅಮೆರಿಕಾವೊಂದರಲ್ಲಿ ಸುಮಾರು 20 ಮಿಲಿಯನ್ ಜನರಿಗೆ ಲೈಂಗಿಕ ರೋಗಗಳು ಹರಡುತ್ತವೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆಂಟೇಷನ್ ಹೇಳಿದೆ. ನಿವಾರಣೆ ಮಾಡಬಹುದಾದಂತಹ ಕೆಲವೊಂದು ರೋಗಗಳು ನಿಮ್ಮ ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರಬಹುದು. ಅದರಲ್ಲೂ ನಿಮ್ಮ ಬಾಯಿಗೆ. ಎಲ್ಲಾ ಜನರಿಗೆ ಒಂದೇ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದುಇಲ್ಲ. ಲೈಂಗಿಕವಾಗಿ ಹರಡಿದ ಸೋಂಕಿನಿಂದ ರೋಗ ಇರುವಂತಹ ವ್ಯಕ್ತಿಗಳಲ್ಲಿ ಕೆಲವೊಂದು ಸಲ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದು. ಎಲ್ಲಾ ಲೈಂಗಿಕ ರೋಗಗಳನ್ನು ನಿವಾರಣೆ ಮಾಡಲು ಸಾಧ್ಯವಿಲ್ಲದೆ ಇದ್ದರೂ ಇದಕ್ಕೆ ಚಿಕಿತ್ಸೆ ಇದೆ. ನಿಮ್ಮ ಆರೋಗ್ಯದ ತಂಡದಲ್ಲಿ ದಂತವೈದ್ಯರು ತುಂಬಾ ಪ್ರಮುಖ ಪಾತ್ರ ವಹಿಸುವರು. ಅವರ ಸಲಹೆ ಪಡೆದುಕೊಂಡು ಸೋಂಕು ನಿಮ್ಮ ಬಾಯಿ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.

ಎಚ್ ಪಿವಿ: ತಲೆ ಮತ್ತು ಕುತ್ತಿಗೆ ಕ್ಯಾನ್ಸರ್

ಎಚ್ ಪಿವಿ: ತಲೆ ಮತ್ತು ಕುತ್ತಿಗೆ ಕ್ಯಾನ್ಸರ್

ದ ಹ್ಯೂಮನ್ ಪ್ಯಾಪಿಲ್ಲೊಮಾ ವೈರಸ್(ಎಚ್ ಪಿವಿ) ಅಮೆರಿಕಾದಲ್ಲಿ ಹರಡುತ್ತಿರುವಂತಹ ಸಾಮಾನ್ಯ ಲೈಂಗಿಕ ರೋಗವಾಗಿದೆ. ಇದು ಪ್ರತೀ ವರ್ಷ ಸುಮಾರು 14 ಮಿಲಿಯನ್ ಜನರಲ್ಲಿ ಕಾಣಿಸಿಕೊಳ್ಳುವುದು. ಸಿಡಿಸಿ ವರದಿ ಪ್ರಕಾರ ಲೈಂಗಿಕವಾಗಿ ಹರಡಬಲ್ಲಂತಹ ಸುಮಾರು 40 ವಿಧದ ಎಚ್ ಪಿವಿಗಳು ಇವೆ. ಆದರೆ ಹೆಚ್ಚಿನವುಗಳನ್ನು ಪ್ರತಿರೋಧಕ ವ್ಯವಸ್ಥೆಯು ಯಾವುದೇ ಆರೋಗ್ಯ ಸಮಸ್ಯೆ ಆಗದಂತೆ ನೋಡಿಕೊಂಡು ದೇಹದಿಂದ ಹೊರಗೆ ಹಾಕುವುದು. ಎಚ್ ಪಿವಿಯು ಬಾಯಿ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರಬಹುದು. ಅದರಲ್ಲೂ ಕೆಲವೊಂದು ತುಂಬಾ ಅಪಾಯಕಾರಿಯಾಗಿರುವಂತಹ ಎಚ್ ಪಿವಿ ಆಗಿರುವುದು. ಇದರಲ್ಲಿ ಎಚ್ ಪಿವಿ-15 ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಗೆ ಕೂಡ ಕಾರಣವಾಗಬಹುದು. ಎಚ್ ಪಿವಿ ಸಂಬಂಧಿತ ಸುಮಾರು 9000 ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್ ಪ್ರಕರಣಗಳನ್ನು ಪತ್ತೆ ಮಾಡಲಾಗುತ್ತದೆ. ಈ ರೀತಿಯ ಕ್ಯಾನ್ಸರ್ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವುದು ಎಂದು ಸಿಡಿಸಿ ವರದಿ ಹೇಳಿದೆ. ಈ ರೀತಿಯ ಕ್ಯಾನ್ಸರ್ ಮುಖ್ಯವಾಗಿ ನಾಲಗೆಯ ಅಡಿಭಾಗದಲ್ಲಿ ಗಂಟಲಿನಲ್ಲಿ ಬೆಳವಣಿಗೆ ಆಗುವುದು. ಇದು ಟಾನ್ಸಿಲ್ ನ ನಡುವೆ ಅಥವಾ ಗಂಟಲಿನ ಹಿಂಭಾಗದಲ್ಲಿ ಬೆಳೆಯುವುದು. ಇದರಿಂದಾಗಿ ಇದನ್ನು ಪತ್ತೆ ಮಾಡುವುದು ತುಂಬಾ ಕಠಿಣವಾಗಿರುವುದು. ಮರಳಿ ಬರುವಂತಹ ಎಚ್ ಪಿವಿ-ನೆಗೆಟಿವ್ ಕ್ಯಾನ್ಸರ್ ಗೆ ಹೋಲಿಸಿದರೆ, ಎಚ್ ಪಿವಿ ಪಾಸಿಟಿವ್ ಕ್ಯಾನ್ಸರ್ ಇರುವಂತಹ ಜನರು ಸಾಯುವಂತಹ ಅಪಾಯವು ತುಂಬಾ ಕಡಿಮೆ. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಮಾಡಿದರೆ ಆಗ ಇದರಿಂದ ಬೇಗನೆ ಮುಕ್ತಿ ಪಡೆಯಬಹುದು. ಕ್ಯಾನ್ಸರ್ ನ್ನು ಪತ್ತೆ ಮಾಡಲು ನಿಯಮಿತವಾಗಿ ದಂತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದೇ ವೇಳೆ ಸಂಪೂರ್ಣ ತಲೆ ಮತ್ತು ಕುತ್ತಿಗೆ ಪರೀಕ್ಷೆ ಮಾಡಿಸಿದರೆ ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದು.

ಎಚ್ ಪಿವಿ: ಬಾಯಿ ಗಡ್ಡೆ

ಎಚ್ ಪಿವಿ: ಬಾಯಿ ಗಡ್ಡೆ

ತುಂಬಾ ಕಡಿಮೆ ಅಪಾಯ ಉಂಟು ಮಾಡುವಂತಹ ಎಚ್ ಪಿವಿಯು ಬಾಯಿಯಲ್ಲಿ ಗಡ್ಡೆಗಳು ಅಥವಾ ಗಂಟಲಿನಲ್ಲಿ ಗಾಯಗಳನ್ನು ಉಂಟು ಮಾಡಬಹುದು. ಇದರ ಲಕ್ಷಣಗಳು ತುಂಬಾ ಕಡಿಮೆ ಆಗಿರುವುದು ಮತ್ತು ಇದರಿಂದ ಯಾವುದೇ ನೋವು ಬರದು ಅಥವಾ ಇದು ಕ್ಯಾನ್ಸರ್ ಕಾರಕವಲ್ಲ. ಇದು ಪದೇಪದೇ ಕಾಣಿಸಿಕೊಳ್ಳಬಹುದು. ನಿಮ್ಮ ದಂತ ವೈದ್ಯರು ಅಥವಾ ವೈದ್ಯರು ಇದನ್ನು ಶಸ್ತ್ರಚಿಕಿತ್ಸೆ ಮೂಲಕವಾಗಿ ತೆಗೆಸಿಕೊಳ್ಳಲು ಹೇಳಬಹುದು.

Most Read:ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರಗಳು

ಹರ್ಪಿಸ್

ಹರ್ಪಿಸ್

ಎರಡು ರೀತಿಯ ವೈರಸ್ ನಿಂದಾಗಿ ಹರ್ಪಿಸ್ ಬರುವುದು. ಆದರೆ ಈ ಎರಡು ವೈರಸ್ ಗಳಿಗೆ ಯಾವುದೇ ರೀತಿಯ ಪರಿಹಾರವಿಲ್ಲ. ಟೈಪ್ 1 ವೈರಸ್ ನಿಂದಾಗಿ ಬರುವಂತಹ ಹರ್ಪಿಸ್ ನಿಂದಾಗಿ ಶೀತದ ಲಕ್ಷಣಗಳು ಅಥವಾ ಬಾಯಿಯಲ್ಲಿ ಇತರ ಗಾಯಗಳು ಕಾಣಿಸಿಕೊಳ್ಳಬಹುದು. ಟೈಪ್ 2 ವೈರಸ್ ನಿದ ಬರುವಂತಹ ಹರ್ಪಿಸ್ ನಿಂದಾಗಿ ಜನನೇಂದ್ರೀಯದಲ್ಲಿ ಗಾಯಗಳು ಆಗಬಹುದು. ಈ ಎರಡು ರೀತಿಯ ವೈರಸ್ ಗಳು ಸಾಂಕ್ರಾಮಿಕವಾಗಿದೆ ಮತ್ತು ಇದು ಜನನೇಂದ್ರೀಯ ಅಥವಾ ಬಾಯಿಯ ಜೊಲ್ಲಿನಿಂದ ಬೇರೆಯವರಿಗೆ ಹರಡಬಹುದು. ಇದರಿಂದ ಆಗುವಂತಹ ಬೊಕ್ಕೆಗಳ ಸಂಪರ್ಕಕ್ಕೆ ಬಂದರೂ ಇದು ಹರಡುವುದು. ಇದು ಮೂಡುವಾಗ ನಿಮ್ಮ ಬಾಯಿಯಲ್ಲಿ ಏಕಾಏಕಿಯಾಗಿ ಬೊಕ್ಕೆಗಳನ್ನು ನೋಡಬಹುದು. ಇದು ವ್ಯಾಪಕವಾಗಿ ಹಬ್ಬುವುದು. ಇದು ಬಿಳಿ, ಗುಲಾಬಿ, ಕೆಂಪು, ಹಳದಿ ಬಣ್ಣದ್ದು ಆಗಿರಬಹುದು. ಇದು ಒಡೆದ ವೇಳೆ ನಿಮಗೆ ತುಂಬಾ ನೋವಾಗಬಹುದು. ಇದರಿಂದ ಆಹಾರ ನುಂಗಲು ಮತ್ತು ತಿನ್ನಲು ಕಷ್ಟವಾಗಬಹುದು. ಇದು ಸಾಮಾನ್ಯವಾಗಿ 7-10 ದಿನಗಳಲ್ಲಿ ಒಣಗಿ ಹೋಗುವುದು ಮತ್ತು ನೋವು ನಿವಾರಣೆ ಮಾಡಲು ದಂತವೈದ್ಯರು ನಿಮಗೆ ಮಾತ್ರೆಗಳನ್ನು ನೀಡಬಹುದು. ಹರ್ಪಿಸ್ ನ ಲಕ್ಷಣಗಳು ಎಂದರೆ ಜ್ವರ ಹಾಗೂ ನಿಶ್ಯಕ್ತಿ. ಈ ಕಾಯಿಲೆ ನಿವಾರಣೆ ಮಾಡಲು ನೀವು ಮೊದಲು ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆಯುವುದು ಸೂಕ್ತ.

ಸಿಫಿಲಿಸ್

ಸಿಫಿಲಿಸ್

2005ರ ಬಳಿಕ ಸಿಫಿಲಿಸ್ ರೋಗದ ಪ್ರಕರಣವು ಏರುಗತಿಯಲ್ಲಿದೆ. 2016ರಲ್ಲಿ ಸುಮಾರು 27,814 ಪ್ರಕರಣಗಳು ವರದಿಯಾಗಿದೆ. ಇದು ಅತ್ಯಧಿಕವಾಗಿದ್ದು, 2015ರ ಬಳಿಕ ಶೇ. 17.6ರಷ್ಟು ಏರಿಕೆಯಾಗಿದೆ. ಸಿಫಿಲಿಸ್ ಸೋಂಕಿನ ಮೊದಲ ಹಂತವಾಗಿ ಇದು ಬೊಕ್ಕೆಗಳನ್ನು ಉಂಟು ಮಾಡುವುದು. ಇದು ನಿಮಗೆ ತುಟಿಗಳು, ನಾಲಗೆಯ ತುದಿ, ವಸಡು ಅಥವಾ ಟಾನ್ಸಿಲ್ ನ ಪಕ್ಕದಲ್ಲಿ ಇದು ಮೂಡಿ ಬರಬಹುದು. ಇದು ಸಣ್ಣ ಕೆಂಪು ಕಲೆಗಳಂತೆ ಕಾಣಿಸಿಕೊಂಡು ಬಳಿಕ ದೊಡ್ಡದಾಗಿ ಬೆಳೆಯುವುದು. ಈ ಬೊಕ್ಕೆಗಳು ಕೆಂಪು, ಹಳದಿ ಅಥವಾ ಬಿಳಿ ಬಣ್ಣದ್ದಾಗಿರಬಹುದು. ಇದು ದೊಡ್ಡ ಮಟ್ಟದ ಸಾಂಕ್ರಾಮಿಕ ರೋಗ ಮತ್ತು ತುಂಬಾ ನೋವಿನಿಂದ ಕೂಡಿರುವುದು. ಚಿಕಿತ್ಸೆ ಪಡೆಯದೆ ಇದ್ದರೂ ಬೊಕ್ಕೆಗಳು ಮಾಯವಾಗಬಹುದು. ಆದರೆ ನಿಮ್ಮಲ್ಲಿ ಈಗಲೂ ಸಿಫಿಲಿಸ್ ಇರುವ ಕಾರಣದಿಂದಾಗಿ ಅದು ಬೇರೆಯವರಿಗೆ

ಹರಡ ಬಹುದು.

Most Read:ಸೆಕ್ಸ್ ಮೂಲಕ ಹರಡುವ 'ಗೊನೊರಿಯಾ' ಕಾಯಿಲೆ! ಇಲ್ಲಿದೆ ಇದರ ಲಕ್ಷಣಗಳು

ಗೊನೊರಿಯಾ

ಗೊನೊರಿಯಾ

ಗೊನೊರಿಯಾ ಎನ್ನುವುದು ಬ್ಯಾಕ್ಟೀರಿಯಾದಿಂದ ಬರುವ ರೋಗವಾಗಿದ್ದು, ಇದು ಲೋಳೆಯ ಪೊರೆಯ ಮೇಲೆ ಪರಿಣಾಮ ಬೀರುವುದು. ಇದರಿಂದ ಬಾಯಿ ಹಾಗೂ ಗಂಟಲಿಗೆ ಹಾನಿಯಾಗ ಬಹುದು. ಸಿಫಿಲಿಸ್ ನಂತೆ ಗೊನೊರಿಯಾದ ಪ್ರಕರಣವು ಕೂಡ ಅಧಿಕವಾಗಿದೆ. 2016ರಲ್ಲಿ ಸುಮಾರು 468,514 ಪ್ರಕರಣಗಳು ವರದಿಯಾಗಿದೆ. ಇದು 2015ಕ್ಕಿಂತ ಶೇ. 18.5ರಷ್ಟು ಹೆಚ್ಚಾಗಿದೆ. ಗೊನೊರಿಯಾ ಪತ್ತೆ ಮಾಡುವುದು ತುಂಬಾ ಕಠಿಣ ಕೆಲಸ. ಯಾಕೆಂದರೆ ಇದರ ಲಕ್ಷಣಗಳು ತುಂಬಾ ಲಘು ಹಾಗೂ ಗಮನಕ್ಕೆ ಬಾರದೆ ಇರಬಹುದು. ಈ ಸಮಸ್ಯೆಯಿಂದಾಗಿ ಬಾಯಿಯಲ್ಲಿ ಬೊಕ್ಕೆ ಅಥವಾ ಗಂಟಲಿನಲ್ಲಿ ಸುಟ್ಟ ಅನುಭವ ಆಗಬಹುದು. ಕೆಲವೊಂದು ಹೆಚ್ಚುವರಿ ಲಕ್ಷಣಗಳೆಂದರೆ ಅದು ಗ್ರಂಥಿಗಳ ಊದುವಿಕೆ ಮತ್ತು ಬಾಯಿಯಲ್ಲಿ ಬಿಳಿ ಬೊಕ್ಕೆಗಳು ಕಾಣಿಸಿ ಕೊಳ್ಳುವುದು. ಗೊನೊರಿಯಾಗೆ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು. ಬಾಯಿಯಲ್ಲಿ ಗೊನೊರಿಯಾ ಲಕ್ಷಣಗಳನ್ನು ಪತ್ತೆ ಮಾಡಲು ಸ್ವಾಬ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಬಾಯಿ ಅಥವಾ ಗಂಟಲಿನಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡರೆ ಆಗ ನೀವು ದಂತ ವೈದ್ಯರಲ್ಲಿ ಇದರ ಬಗ್ಗೆ ಚರ್ಚೆ ಮಾಡಿ. ನೀವು ವೈದ್ಯರನ್ನು ಭೇಟಿ ಮಾಡಿ ಇದರ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬಹುದು.

English summary

These are the Causes for Male Sexual Problems

Many men have sexual problems. They become more common as men age. Problems can includeErectile dysfunction,Reduced or lost interest in sex,Problems with ejaculation,Low testosteroneStress, illness, medicines, or emotional problems may also be factors. Occasional problems withsexual function are common. If problems last more than a few months or cause distress for you or your partner, you should see your health care provider.
X
Desktop Bottom Promotion