For Quick Alerts
ALLOW NOTIFICATIONS  
For Daily Alerts

ಇಂದಿಗೂ ಜೀವಂತವಿರುವ ಈ ಪ್ರಾಚೀನ ಪದ್ಧತಿಯ ಮನೆಮದ್ದುಗಳನ್ನು ನೀವೊಮ್ಮೆ ಪ್ರಯತ್ನಿಸಿ

|

ನಾವು ಆಧುನಿಕ ವೈಜ್ಞಾನಿಕ ಯುಗದಲ್ಲಿ ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ ಶರ ವೇಗದಲ್ಲಿ ಮುನ್ನುಗ್ಗಿದರೂ ಕೆಲವೊಂದು ಬಾರಿ ಹಳೆಯ ಕಾಲದ ಪದ್ದತಿಗಳನ್ನು ಅನುಸರಿಸಬೇಕಾಗುತ್ತದೆ . ವೈದ್ಯಕೀಯ ಕ್ಷೇತ್ರದಲ್ಲೂ ಅಷ್ಟೇ . ಪಕ್ಕದಲ್ಲೇ ಕ್ಲಿನಿಕ್ ಇದ್ದರೂ ಅಥವಾ ಸುಸ್ಸಜಿತ ಆಸ್ಪತ್ರೆ ಇದ್ದರೂ ನಾವು ಸಣ್ಣ ಪುಟ್ಟ ಕಾಯಿಲೆಗೆಲ್ಲಾ ಕೆಲವೊಮ್ಮೆ ಆಸ್ಪತ್ರೆಗೆ ಹೋಗುವುದಿಲ್ಲ.

ಬದಲಿಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ನೆಗಡಿ ಶೀತ ಜ್ವರ ಕೆಮ್ಮು ಇಂತಹ ಸಾಧಾರಣ ಕಾಯಿಲೆಗಳಿಗೆ ಮುಕ್ತಿ ಕಂಡು ಕೊಳ್ಳುತ್ತೇವೆ. ಇವೆಲ್ಲವನ್ನೂ ನಮ್ಮ ಹಿರಿಯರಿಂದ ಕಲಿತಿರುತ್ತೇವೆ ಮತ್ತು ಅಲ್ಲಿ ಇಲ್ಲಿ ಕೇಳಿ ತಿಳಿದುಕೊಂಡಿರುತ್ತೇವೆ . ನಮಗೇನು ಧೀರ್ಘವಾಗಿ ಅಲ್ಲದಿದ್ದರೂ ತಕ್ಷಣಕ್ಕೆ ಪರಿಹಾರ ಸಿಕ್ಕಿದರೆ ಸಾಕು ಎಂಬಂತೆ ಅನ್ನಿಸುತ್ತದೆ. ಈ ಪದ್ಧತಿಗಳು ಬಹಳ ಪ್ರಯೋಜನಕಾರಿಯೂ ಹೌದು. ಹಾಗಾದರೆ ಏನೀ ಪುರಾತನ ಪದ್ಧತಿಗಳು ಎಂಬ ಕುತೂಹಲವೇ? ಬನ್ನಿ ಒಂದೊಂದಾಗಿ ಇದರ ಬಗ್ಗೆ ಚರ್ಚಿಸೋಣ .

ಜ್ವರಕ್ಕೆ ಜೇನು ತುಪ್ಪ ಮದ್ದು

ಜ್ವರಕ್ಕೆ ಜೇನು ತುಪ್ಪ ಮದ್ದು

ಹೌದು ಇದು ಇಂಗ್ಲೆಂಡ್ ನಲ್ಲಿ ಬಹಳ ಪ್ರಚಲಿತವಾಗಿರುವ ಮನೆಮನೆಯಲ್ಲೂ ಪ್ರಾಯೋಗಿಕವಾಗಿ ಪ್ರಯತ್ನಿಸುವ ಪ್ರಾಚೀನ ಪದ್ಧತಿ . ಅಲ್ಲಿರುವ ಪಂಡಿತೋತ್ತಮರು ಜ್ವರ ಬಂದರೆ ಸೂಚಿಸುವುದು ಪ್ರತಿ ದಿನ ಬೆಳಗ್ಗೆ ಒಂದು ಚಮಚ ಜೇನು ತುಪ್ಪ ತಿನ್ನಲು . ಏಕೆಂದರೆ ಜೇನು ತುಪ್ಪ ಅಲರ್ಜಿ ಗೆ ಪ್ರತಿರೋಧ ವಾಗಿ ಕೆಲಸ ಮಾಡಿ ಜ್ವರವನ್ನು ಕಡಿಮೆ ಮಾಡುತ್ತದೆ .

ಮೈ ಬೆವರಿನ ದುರ್ವಾಸನೆಗೆ ಟೊಮೇಟೊ ಜ್ಯೂಸ್

ಮೈ ಬೆವರಿನ ದುರ್ವಾಸನೆಗೆ ಟೊಮೇಟೊ ಜ್ಯೂಸ್

ನಾವು ಎಷ್ಟೇ ಬಾರಿ ಸ್ನಾನ ಮಾಡಿದರೂ ಯಾವುದೇ ದುಬಾರಿ ಸೋಪ್ ಹಾಕಿದರೂ ಕೆಲವೊಮ್ಮೆ ನಮ್ಮ ಮೈ ಬೆವರಿನ ದುರ್ನಾಥ ನಮಗೆ ಮಾತ್ರವಲ್ಲದೆ ನಮ್ಮ ಪಕ್ಕದವರಿಗೂ ಕಿರಿಕಿರಿ ಉಂಟು ಮಾಡುತ್ತದೆ . ಇದಕ್ಕೆ ನಮ್ಮ ಹಿರಿಯರು ಟೊಮೇಟೊ ಜ್ಯೂಸು ಉಪಯೋಗಿಸುತ್ತಿದ್ದರು . ಅವರ ಪ್ರಕಾರ ಇದರಲ್ಲಿರುವ ಕೆಲವೊಂದು ಅಂಶ ಬೆವರಿನ ವಾಸನೆಯನ್ನು ಆದಷ್ಟು ಕಡಿಮೆ ಮಾಡುತ್ತದೆ ಅಥವಾ ಸಂಪೂರ್ಣವಾಗಿ ದೂರ ಮಾಡುತ್ತದೆ ಎಂದು . ನೀವೊಮ್ಮೆ ಯಾಕೆ ಪ್ರಯತ್ನಿಸಬಾರದು . ನೀವು ಸ್ನಾನ ಮಾಡುವ ನೀರಿಗೆ 2 ರಿಂದ ಮೂರು ಕಪ್ ಟೊಮೇಟೊ ಜ್ಯೂಸು ಬೆರಸಿ 10 ರಿಂದ 15 ನಿಮಿಷ ಬಿಟ್ಟು ನಂತರ ಆ ನೀರಿನಿಂದ ಸ್ನಾನ ಮಾಡಿ ನೋಡಿ.

Most Read: ಒತ್ತಡ, ಆತಂಕ ನಿವಾರಣೆ ಮಾಡಲು ಸಹಾಯ ಮಾಡುವ ಸೂಪರ್ ಆಹಾರಗಳು

ಕ್ಯಾಲ್ಲಸ್ ಅಥವಾ ಆಣಿಗೆ ಬ್ರೆಡ್ ತಿನ್ನಿಸಿ

ಕ್ಯಾಲ್ಲಸ್ ಅಥವಾ ಆಣಿಗೆ ಬ್ರೆಡ್ ತಿನ್ನಿಸಿ

ಇದಕ್ಕೆ ಸುಲಭ ಮನೆ ಮದ್ದು ಎಂದರೆ ಒಂದು ಬ್ರೆಡ್ ಪೀಸ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಆಪಲ್ ಸೈಡರ್ ವಿನೆಗರ್ ಅನ್ನು ಹಾಕಿ ಅದನ್ನು ಆಣಿ ಆಗಿರುವ ಜಾಗಕ್ಕೆ ಇಟ್ಟು ಮೇಲೊಂದು ಪ್ಲಾಸ್ಟರ್ ಹಾಕಿ ನಂತರ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಆರಾಮವಾಗಿ ಮಲಗಿಕೊಂಡು ನಿದ್ದೆ ಮಾಡಿ . ಇಷ್ಟಾದರೆ ಬೆಳಗ್ಗೆ ಆಣಿ ಮಾಯವಾಗಿರುತ್ತದೆ . ನಮ್ಮ ಪ್ರಾಚೀನ ಹಿರಿಯರು ಉಪಯೋಗಿಸುತ್ತಿದ್ದ ಪದ್ದತಿಯೇ ಇದು .

ಜ್ವರಕ್ಕೆ ನೆನೆಸಿರುವ ಕಾಲು ಚೀಲ (ಸಾಕ್ಸ್)

ಜ್ವರಕ್ಕೆ ನೆನೆಸಿರುವ ಕಾಲು ಚೀಲ (ಸಾಕ್ಸ್)

ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ . ನಿಮಗೆ ಜ್ವರ ಬಂದಾಗ ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆದು ಒಂದು ಆನ್ ಆ ಬಟ್ಟೆಯಲ್ಲಿ ಒರೆಸಿ ನಂತರ ಒಂದು ಜೊತೆ ಕಾಲುಚೀಲವನ್ನು ನೀರಿನಲ್ಲಿ ನೆನೆಹಾಕಿ . ನಂತರ ಅವನ್ನು ಚೆನ್ನಾಗಿ ಹಿಂಡಿ ಅವುಗಳನ್ನು ಕಾಲಿಗೆ ಧರಿಸಿ ಅದರ ಮೇಲೆ ಒಣಗಿರುವ ಕಾಲುಚೀಲಗಳನ್ನು ಧರಿಸಿದರೆ ನಿಮ್ಮ ಜ್ವರ ಬೆಳಗಾಗುವಷ್ಟರಲ್ಲಿ ಮಾಯ .

ಬಿಕ್ಕಳಿಕೆಗೆ ಸುಲಭ ಮದ್ದು ಒಂದು ರೂಪಾಯಿಯಲ್ಲಿ

ಬಿಕ್ಕಳಿಕೆಗೆ ಸುಲಭ ಮದ್ದು ಒಂದು ರೂಪಾಯಿಯಲ್ಲಿ

ಇದೊಂದು ಬಹಳ ಸುಲಭ ಮತ್ತು ಎಲ್ಲರಿಗೂ ಇಷ್ಟವಾಗುವ ತಂತ್ರ ಎಂದೇ ಹೇಳಬಹುದು . ಬಿಕ್ಕಳಿಕೆ ಬಂದಾಗ ನಮ್ಮ ಬುದ್ಧಿ ಶಕ್ತಿ ಬೇರೆಡೆಗೆ ತಕ್ಷಣ ಕೇಂದ್ರೀಕೃತವಾದರೆ ಬಿಕ್ಕಳಿಕೆ ನಿಂತು ಹೋಗುತ್ತದೆ. ಇದು ಈ ತಂತ್ರದ ಹಿಂದಿರುವ ರಹಸ್ಯ . ಏನೆಂದರೆ ಒಂದು ರೂಪಾಯಿಯ ನಾಣ್ಯ ವನ್ನು ತೆಗೆದುಕೊಂಡು ಅದನ್ನು ಎರಡೂ ಕಾಲಿನ ಹೆಬ್ಬೆರಳುಗಳ ಮದ್ಯೆ ಇಟ್ಟುಕೊಂಡು ಆದಷ್ಟು ಕಾಯಿನ್ ನೆಲಕ್ಕೆ ತಾಗದಂತೆ ಗಮನ ಹರಿಸಿ ಒಂದು ಕಾಲಿನಿಂದ ಮತ್ತೊಂದು ಕಾಲಿಗೆ ವರ್ಗಾಯಿಸಲು ಪ್ರಯತ್ನಿಸಿ . ಬಿಕ್ಕಳಿಕೆ ನಿಲ್ಲದಿದ್ದರೆ ಕೇಳಿ.

Most Read: ಸುಲಭವಾದ ಮನೆ ಮದ್ದುಗಳ ಹಿಂದಿರುವ ವೈಜ್ಞಾನಿಕ ವಿಸ್ಮಯಗಳು

ಈರುಳ್ಳಿಯ ವಾಸನೆ ನಿದ್ದೆ ತರಿಸುತ್ತದೆ

ಈರುಳ್ಳಿಯ ವಾಸನೆ ನಿದ್ದೆ ತರಿಸುತ್ತದೆ

ಸಾಮಾನ್ಯವಾಗಿ ನಿದ್ದೆಯ ಸಮಸ್ಯೆ ಎದುರಿಸುವವರು ಈ ಪ್ರಯೋಗವನ್ನು ಪ್ರಯತ್ನಿಸಬಹುದು . ಹೇಗೆಂದರೆ ಒಂದು ಮಧ್ಯಮ ಗಾತ್ರದ ಈರುಳ್ಳಿಯನ್ನು ತೆಗೆದುಕೊಂಡು ಸಣ್ಣಗೆ ಹೆಚ್ಚಿ ಅದನ್ನು ಒಂದು ಜಾರಿಗೆ ಹಾಕಿ ಮಲಗಿಕೊಳ್ಳುವಾಗ ತಲೆಯ ಬಳಿ ಇಟ್ಟುಕೊಂಡು ಮಲಗಿದರೆ ಮತ್ತು ಯಾವಾಗ ನಿದ್ದೆ ಕ್ಷೀಣಿಸಿದಂತಹ ಅನುಭವ ಆಗುತ್ತದೆಯೋ ಆಗ ಅದರ ವಾಸನೆ ಧೀರ್ಘವಾಗಿ ತೆಗೆದುಕೊಂಡರೆ ಖಂಡಿತಾ ನಿದ್ದೆ ಬರುತ್ತದೆ ಎಂದು ನಮ್ಮ ಅಜ್ಜ ಅಜ್ಜಿ ಹೇಳುತ್ತಿದ್ದರು . ನೀವೇಕೆ ಒಮ್ಮೆ ಟ್ರೈ ಮಾಡಬಾರದು ?

English summary

These Ancient home remedies are more Powerfull

No doubt there are a variety of medicines available in the market to treat different diseases. Yet when it comes to treating problems like a toothache and hiccups, we always turn to home remedies for some relief. The reason is very simple, they are easy, convenient and have almost no side effects. Here are some unusual home remedies from ancient time that you can try in present time without worrying much about anything
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X