For Quick Alerts
ALLOW NOTIFICATIONS  
For Daily Alerts

ಇವೆಲ್ಲಾ ತುಂಬಾನೇ ಸುಸ್ತು ಉಂಟು ಮಾಡುವಂತಹ ಆಹಾರಗಳು

|

ಮಧ್ಯಾಹ್ನ ಅಥವಾ ರಾತ್ರಿ ಊಟ ಮಾಡಿದ ಬಳಿಕ ತುಂಬಾ ಉದಾಸೀನತೆ ದೇಹವನ್ನು ಒಕ್ಕರಿಸಿಕೊಂಡು ಬಿಡುವುದು. ಯಾಕೆಂದರೆ ತಿಂದ ಆಹಾರ ಕರಗಲು ಹೆಚ್ಚಿನ ಸಮಯ ಹಾಗೂ ಪರಿಶ್ರಮ ಬೇಕಾಗಿರುವ ಕಾರಣದಿಂದಾಗಿ ಆಲಸ್ಯವು ಬರುವುದು. ಆಹಾರವು ಹಿತಮಿತವಾಗಿದ್ದರೆ ಅದು ದೇಹಕ್ಕೆ ಕೂಡ ತುಂಬಾ ಒಳ್ಳೆಯದು. ಇಲ್ಲವಾದಲ್ಲಿ ಇನ್ನಿಲ್ಲಂದಂತಹ ಸಮಸ್ಯೆಗಳನ್ನು ಸೃಷ್ಟಿ ಮಾಡುವುದು.

ಕೆಲವೊಂದು ಸಲ ನಾವು ರುಚಿಯಾಗಿದೆ ಎಂದು ಹೇಳಿ ಹೊಟ್ಟೆ ತುಂಬಾ ತಿಂದು ಬಿಡುತ್ತೇವೆ. ಇದರಿಂದ ಹೊಟ್ಟೆಯು ಭಾರವಾಗುವುದು ಮತ್ತು ಯಾವುದೇ ಕೆಲಸ ಮಾಡಲು ಮನಸ್ಸು ಕೂಡ ಬರುವುದಿಲ್ಲ. ಆದರೆ ಕೆಲವೊಂದು ಆಹಾರಗಳು ನಿಮ್ಮಲ್ಲಿ ಸುಸ್ತು ಉಂಟು ಮಾಡುವುದು ಎಂದು ಹೇಳಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ ದೇಹದಲ್ಲಿ ಶಕ್ತಿ ಕಡಿಮೆಯಾಗದಂತೆ ತಡೆಯಬೇಕಾದರೆ ಆಗ ಕೆಲವೊಂದು ಆಹಾರಗಳನ್ನು ಕಡೆಗಣಿಸಬೇಕು. ಅದು ಯಾವುದು ಎಂದು ಈ ಲೇಖನ ಮೂಲಕ ನೀವು ತಿಳಿಯಿರಿ....

ಪಾಸ್ತಾ

ಪಾಸ್ತಾ

ಹೌದು, ಕಾರ್ಬ್ಸ್ ನಿಂದಾಗಿ ದೇಹದಲ್ಲಿನ ಶಕ್ತಿಯ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಅದರಲ್ಲಿ ಪಾಸ್ತಾದಂತಹ ಸಂಸ್ಕರಿಸಿ ರುವಂತಹ ಕಾರ್ಬ್ರೋಹೈಡ್ರೇಟ್ಸ್ ಸೇವನೆ ಮಾಡಿದರೆ ಅದರಿಂದ ಸಕ್ಕರೆ ಮಟ್ಟವು ಹೆಚ್ಚಾಗುವುದು, ಇಷ್ಟು ಮಾತ್ರವಲ್ಲದೆ ಇನ್ಸುಲಿನ್ ಮಟ್ಟವು ಏರುವುದು. ಇದರಿಂದಾಗಿ ದೇಹದಲ್ಲಿ ನಿಶ್ಯಕ್ತಿ ಮತ್ತು ಉದಾಸೀನತೆ ಬರುವುದು ಎಂದು ತಜ್ಞರು ತಿಳಿಸಿದ್ದಾರೆ. ಕೆಲವರು ಬಿಳಿ ಬ್ರೆಡ್, ಮಫಿನ್ ಮತ್ತು ಸಂಸ್ಕರಿತ ಆಹಾರ ಸೇವನೆ ಮಾಡುವರು. ಆದರೆ ಇದರಲ್ಲಿ ಇರುವಂತಹ ಹಿಟ್ಟು ಮತ್ತು ಸಕ್ಕರೆ ಪ್ರಮಾಣವು ದೇಹದಲ್ಲಿ ಆಲಸ್ಯವನ್ನು ಉಂಟು ಮಾಡುವುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಅಧಿಕ ಮಟ್ಟದ ಪೊಟಾಶಿಯಂ ಅಂಶವಿದೆ ಮತ್ತು ಇದು ನರ ವ್ಯವಸ್ಥೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವುದು ಎಂದು ಹೇಳಲಾಗುತ್ತದೆ. ಆದರೆ ಬಾಳೆಹಣ್ಣಿನಲ್ಲಿ ಅಧಿಕ ಮಟ್ಟದ ಮೆಗ್ನಿಶಿಯಂ ಕೂಡ ಇದೆ. ಇದು ನಿದ್ರೆಗೆ ಸಹಕರಿಸುವಂತಹ ಪ್ರಮುಖ ಖನಿಜಾಂಶವಾಗಿದೆ. ಮೆಗ್ನಿಶಿಯಂ ಆರಾಮ ನೀಡುವಂತಹ ಖನಿಜಾಂಶವಾಗಿದೆ ಎಂದು ಅಲ್ಟ್ರಾ ವೆಲ್ ನೆಸ್ ಸೆಂಟರ್ ನ ಸ್ಥಾಪಕ ಮಾರ್ಕ್ ಹೈಮ್ಯಾನ್ ತಿಳಿಸಿದ್ದಾರೆ.

Most Read: ಬಟಾಣಿ ಕಾಳಿನ ಆರೋಗ್ಯ ಹಾಗೂ ಸೌಂದರ್ಯ ಲಾಭಗಳು

ಕೆಂಪು ಮಾಂಸ

ಕೆಂಪು ಮಾಂಸ

ಕೆಂಪು ಮಾಂಸವು ನಿಮಗೆ ಕಬ್ಬಿನಾಂಶವನ್ನು ನೀಡುವುದು. ಇದು ಶಕ್ತಿ ವರ್ಧಕವಾಗಿದೆ. ಆದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಇದೆ. ಕೊಬ್ಬು ಅಧಿಕವಾರಿವು ಮಾಂಸ, ಸಂಪೂರ್ಣ ಹಾಲಿಕ ಉತ್ಪನ್ನಗಳು, ಪಿಜ್ಜಾ ಮತ್ತು ಸಾಸ್ ಗಳನ್ನು ಸೇವನೆ ಮಾಡಿದ ಬಳಿಕ ನಿಮಗೆ ಆಲಸ್ಯ ಉಂಟಾಗುವುದು. ಯಾಕೆಂದರೆ ಕೊಬ್ಬನ್ನು ವಿಘಟಿಸಲು ದೇಹಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಬೇರೆ ಪೋಷಕಾಂಶಗಳಿಗಿಂತ ಕೊಬ್ಬನ್ನು ವಿಘಟಿಸಲು ಹೆಚ್ಚು ಸಮಯ ಬೇಕು ಎಂದು ತಜ್ಞರು ತಿಳಿಸುತ್ತಾರೆ. ಇದರಿಂದಾಗಿ ದೇಹವು ಹೆಚ್ಚಿನ ಶಕ್ತಿಯನ್ನು ಜೀರ್ಣಕ್ರಿಯೆಗೆ ಸಾಗಿಸುವುದು. ಇದರಿಂದ ಉದಾಸೀನತೆ ಬರುವುದು.

ಚೆರ್ರಿಗಳು

ಚೆರ್ರಿಗಳು

ಚೆರ್ರಿಗಳಲ್ಲಿ ನೈಸರ್ಗಿಕವಾಗಿ ಮೆಲಟೊನಿನ್ ಅಂಶವಿದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಣೆ ಮಾಡುವಂತಹ ಹಾರ್ಮೋನು ಆಗಿದೆ. ಇದು ರಾತ್ರಿ ವೇಳೆ ಸೇವನೆಗೆ ಒಳ್ಳೆಯದು. ಹಗಲಿನಲ್ಲಿ ಒಳ್ಳೆಯದಲ್ಲ. ನಿಯಮಿತವಾಗಿ ಚೆರ್ರಿ ಸೇವನೆ ಮಾಡಿದರೆ ಅದರಿಂದ ನೈಸರ್ಗಿಕ ನಿದ್ರೆಯ ಆವರ್ತನ ಮತ್ತು ದೇಹದ ಮರುಕಳಿಸುವ ಲಯವನ್ನು ನಿರ್ವಹಿಸಲು ನೆರವಾಗುವುದು ಎಂದು ತಜ್ಞರು ತಿಳಿಸಿದ್ದಾರೆ. ಇಂದಿನ ದಿನಗಳಲ್ಲಿ ಚೆರ್ರಿ ಜ್ಯೂಸ್ ತುಂಬಾ ಜನಪ್ರಿಯತೆ ಪಡೆಯುತ್ತಿದೆ. ನಿದ್ರಾಹೀನತೆಯಿಂದ ಬಳಲುತ್ತಿರುವಂತಹ ವಯಸ್ಸಾದ ವ್ಯಕ್ತಿಗಳು ಚೆರ್ರಿ ಜ್ಯೂಸ್ ನ್ನು ದಿನಕ್ಕೆ ಎರಡು ಸಲ ಕುಡಿದಾಗ ಅವರಿಗೆ ನಿದ್ರಾಹೀನತೆ ಸಮಸ್ಯೆಯಲ್ಲಿ ತುಂಬಾ ಸುಧಾರಣೆ ಕಂಡುಬಂದಿದೆ ಎಂದು ಹೇಳಲಾಗಿದೆ.

ಸಾಲ್ಮನ್

ಸಾಲ್ಮನ್

ಸಾಲ್ಮನ್ ನಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲವಿದೆ. ಅದಾಗ್ಯೂ, ಸಾಲ್ಮನ್ ಮತ್ತು ಇತರ ಕೆಲವೊಂದು ಮೀನುಗಳಲ್ಲಿ ವಿಟಮಿನ್ ಬಿ6 ಸಮೃದ್ಧ ವಾಗಿರುವುದು. ಇದರಿಂದ ದೇಹವು ಮೆಲಟೊನಿನ್ ಉತ್ಪತ್ತಿ ಮಾಡುವುದು. ಮೆಲಟೊನಿನ್ ಎನ್ನುವುದು ನಿದ್ರೆಯ ಹಾರ್ಮೋನು ಆಗಿದೆ. ದೇಹದಲ್ಲಿ ಯಾರಿಗಾದರೂ ಶಕ್ತಿ ಕಡಿಮೆ ಇದೆ ಎಂದು ಅನಿಸಿದರೆ ಅವರು ರಾತ್ರಿ ವೇಳೆ ಸಾಲ್ಮನ್ ಮೀನಿನ ಸೇವನೆ ಮಾಡಬೇಕು. ಯಾಕೆಂದರೆ ಇದು ತುಂಬಾ ಪರಿಣಾಮಕಾರಿ ಹಾಗೂ ನಿದ್ರೆಯು ಸರಿಯಾಗಿ ಆಗುವುದು.

ಲೆಟಸ್

ಲೆಟಸ್

ಒಪಿಡ್ ಗಳಂತೆ ಲೆಟಸ್ ನಲ್ಲಿ ಕೂಡ ಮೆದುಳಿಗೆ ಪ್ರಭಾವ ಬೀರುವಂತಹ ನಿದ್ರಾಜನಕ ಗುಣಗಳನ್ನು ಹೊಂದಿದೆ ಎಂದು ತಜ್ಞರು ತಿಳಿಸುತ್ತಾರೆ. ಈ ಅಂಶವನ್ನು ಆಕ್ಯುಟೈನ್ ಎಂದು ಕರೆಯಲಾಗುತ್ತದೆ. ಇದನ್ನು ಇಲಿಗಳ ಮೇಲೆ ಪ್ರಯೋಗ ಮಾಡಿದಾಗ ಅದು ಶಮನಕಾರಿ ಮತ್ತು ನೋವು ನಿವಾರಕವಾಗಿ ಕೆಲಸ ಮಾಡಿದೆ ಎನ್ನುತ್ತಾರೆ ವೈದ್ಯರು.

Most Read: ಕೆಮ್ಮು ಹಾಗೂ ಎದೆಯಲ್ಲಿ ಕಫ ಹೆಚ್ಚಾಗಿದ್ದರೆ- ಒಂದು ಗ್ಲಾಸ್ ಅನಾನಸ್ ಜ್ಯೂಸ್ ಕುಡಿಯಿರಿ

ಟರ್ಕಿ ಮಾಂಸ

ಟರ್ಕಿ ಮಾಂಸ

ಟರ್ಕಿಯಲ್ಲಿ ಟ್ರಿಪ್ಟೊಫಾನ್ ಹೆಚ್ಚಿನ ಮಟ್ಟದಲ್ಲಿ ಇದೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಟ್ರಿಪ್ಟೊಫಾನ್ ಸಿರೊಟಾನಿನ್ ಗೆ ಪೂರ್ವಭಾವಿಯಾಗಿದ್ದು, ಇದು ಒಂದು ರೀತಿಯಲ್ಲಿ ಮನಸ್ಥಿತಿ ಯನ್ನು ಬದಲಾಯಿಸುವುದು. ಇದು ಆರಾಮ ಮತ್ತು ನಿದ್ರೆಗೆ ನೆರವಾಗುವುದು ಎಂದು ತಜ್ಞರು ತಿಳಿಸಿದ್ದಾರೆ. ಅದಾಗ್ಯೂ, ಟ್ರಿಪ್ಟೊಫಾನ್ ನಿಂದಾಗಿ ದೇಹವು ಬಳಲಿದಂತೆ ಆಗುವುದು. ಟ್ರಿಪ್ಟೊಫಾನ್ ಮತ್ತು ಕಾರ್ಬ್ರೋಹೈಡ್ರೇಟ್ಸ್ ಸೇರಿಕೊಂಡರೆ ಹೀಗೆ ಆಗುವುದು ಎನ್ನುತ್ತಾರೆ. ಅವರು. ನೀವು ಟರ್ಕಿಯಿಂದ ಮಾಡಿರುವಂತಹ ಆಹಾರಗಳಿಂದ ಪಾರ್ಟಿ ನೀಡಲು ಬಯಸಿದರೆ ಆಗ ಖಂಡಿತವಾಗಿಯೂ ನೀವು ಅವರಿಗೆ ನಿದ್ರೆ ನೀಡುವಿರಿ. ಟರ್ಕಿ ಜತೆಗೆ ಕ್ರಾನ್ ಬೆರ್ರಿಗಳು, ರೋಲ್ಸ್ ಮತ್ತು ಇತರ ಕೆಲವು ಆಹಾರಗಳು ನಿದ್ರೆ ಉಂಟು ಮಾಡಬಹುದು. ಆದರೆ ಇದರಲ್ಲಿ ಕೋಳಿ ಮಾಂಸಕ್ಕಿಂತ ಕಡಿಮೆ ಮಟ್ಟದ ಟ್ರಿಪ್ಟೊಫಾನ್ ಇದೆ.

English summary

surprising foods that make you tired us

We’ve all eaten a big meal and then felt exhausted afterwards, but what about the times that you thought you were eating something good for you and still got tired? Turns out there are some foods we wouldn’t normally think of that can cause us to feel fatigued.The Three-Stage Hunger and Recovery Plan for Overeating and Food Addiction, about these hidden energy-zappers.
Story first published: Friday, February 1, 2019, 9:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more