For Quick Alerts
ALLOW NOTIFICATIONS  
For Daily Alerts

ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದರೆ ದೇಹಕ್ಕೆ ಆಗುವ ಅಚ್ಚರಿಯ ಆರೋಗ್ಯ ಲಾಭಗಳು

|

ಮನುಷ್ಯನ ದೇಹವು ಶೇ.75ರಷ್ಟು ನೀರಿನಾಂಶದಿಂದ ನಿರ್ಮಾಣಗೊಂಡಿದ್ದು, ದ್ರವ ಅಂಶವು ಪ್ರಮುಖ ಪಾತ್ರ ವಹಿಸುವುದು. ಹೀಗಾಗಿ ಮನುಷ್ಯರಿಗೆ ನೀರಿನ ಸೇವನೆ ಅತ್ಯಗತ್ಯ ಆಗಿರುವುದು. ನೀರು ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಂದಲೂ ಇದು ಕಾಪಾಡುವುದು. ಹೀಗಾಗಿ ನಾವು ಪ್ರತಿನಿತ್ಯವು ಅಗತ್ಯಕ್ಕೆ ಅನುಗುಣವಾಗಿ ನೀರಿನ ಸೇವನೆ ಮಾಡಲೇಬೇಕು. ಒಂದು ಮಿತಿಯ ನೀರಿನ ಸೇವನೆ ಮಾಡದೆ ಇದ್ದರೆ ಆಗ ದೇಹವು ನಿರ್ಜಲೀಕರಣಕ್ಕೆ ಒಳಗಾಗುವುದು.

ಹೀಗಾಗಿ ನಮ್ಮ ದೇಹಕ್ಕೆ ನೀರು ಎನ್ನುವುದು ಅತೀ ಅಗತ್ಯ. ನೀರನ್ನು ಸಾಮಾನ್ಯ ನೀರು, ತಣ್ಣಗಿನ ನೀರು ಮತ್ತು ಬಿಸಿ ನೀರು ಎಂದು ಮೂರು ವಿಧವಾಗಿ ವಿಂಗಡಿಸಬಹುದು. ಹೆಚ್ಚಾಗಿ ಬೇಸಗೆಯಲ್ಲಿ ಸಾಮಾನ್ಯ ಅಥವಾ ತಣ್ಣಗಿನ ನೀರು ಕುಡಿಯಲು ಇಷ್ಟಪಡುವರು. ಇನ್ನು ಮಳೆಗಾಲ ಹಾಗೂ ಚಳಿಗಾಲದಲ್ಲಿ ಬಿಸಿ ನೀರು ಇಷ್ಟವಾಗುವುದು. ಮುಂಜಾನೆ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದರೆ ದೇಹಕ್ಕೆ ಯಾವ ರೀತಿಯ ಲಾಭಗಳು ಸಿಗಲಿದೆ ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಿಕೊಂಡು ತಿಳಿಯಿರಿ ಮತ್ತು ಬಿಸಿ ನೀರು ಕುಡಿದು ಅದರಿಂದ ಆರೋಗ್ಯ ಲಾಭಗಳನ್ನು ಪಡೆಯಿರಿ...

ಜೀರ್ಣ ಕ್ರಿಯೆ ಸುಧಾರಿಸುವುದು

ಜೀರ್ಣ ಕ್ರಿಯೆ ಸುಧಾರಿಸುವುದು

ಬಿಸಿ ನೀರು ಕುಡಿಯುವುದರಿಂದ ಸಿಗುವಂತಹ ಅತೀ ಮುಖ್ಯ ಲಾಭ ಎಂದರೆ ಅದು ಜೀರ್ಣ ಕ್ರಿಯೆ ಸುಧಾರಣೆ ಮಾಡುವುದು. ಬಿಸಿ ನೀರು ನಾವು ಸೇವಿಸಿದ ಆಹಾರವನ್ನು ವಿಘಟಿಸಲು ನೆರವಾಗುವುದು ಮಾತ್ರವಲ್ಲದೆ ಇದರಿಂದ ಜೀರ್ಣಕ್ರಿಯೆ ಕೂಡ ಸರಾಗವಾಗಿ ಆಗುವುದು. ಬಿಸಿ ನೀರು ಕುಡಿದರೆ ಅದರಿಂದ ಮಲಬದ್ಧತೆ ನಿವಾರಣೆ ಮಾಡಬಹುದು. ಯಾಕೆಂದರೆ ಬಿಸಿ ನೀರು ಕರುಳಿನ ಕ್ರಿಯೆಯನ್ನು ಸರಾಗವಾಗಿಸುವುದು.

ತೂಕ ಇಳಿಸಲು ಕೂಡ ಸಹಕಾರಿ

ತೂಕ ಇಳಿಸಲು ಕೂಡ ಸಹಕಾರಿ

ಬಿಸಿ ನೀರು ಕುಡಿದರೆ ಅದರಿಂದ ತೂಕ ಇಳಿಸಿಕೊಳ್ಳಲು ನೆರವಾಗುವುದು ಎಂದು ಹಲವಾರು ಸಂಶೋಧನೆಗಳು ಹೇಳಿವೆ. ಬಿಸಿ ನೀರು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಪರಿಣಾಮಕಾರಿಯಾಗಿ ಹೊರಗೆ ಹಾಕುವುದು. ಇದು ಹೊಟ್ಟೆ ತುಂಬಿದಂತೆ ಮಾಡುವುದು. ಯಾಕೆಂದರೆ ತಣ್ಣೀರಿಗೆ ಹೋಲಿಸಿದರೆ ಬಿಸಿ ನೀರು ಹೆಚ್ಚು ಕಾಲ ಹೊಟ್ಟೆಯಲ್ಲಿ ಉಳಿಯುವುದು.

Most Read:ಖಾಲಿ ಹೊಟ್ಟೆಗೆ ಚಿಟಿಕೆಯಷ್ಟು ಕರಿಮೆಣಸಿನ ಪುಡಿ ಬೆರೆಸಿ ಕುಡಿದರೆ, ಆರೋಗ್ಯಕ್ಕೆ ಒಳ್ಳೆಯದು

ಕಟ್ಟಿದ ಮೂಗು ನಿವಾರಣೆ

ಕಟ್ಟಿದ ಮೂಗು ನಿವಾರಣೆ

ಬಿಸಿ ನೀರನ್ನು ಕುಡಿಯುವುದರಿಂದ ಸಿಗುವ ಮತ್ತೊಂದು ಲಾಭ ಎಂದರೆ ಅದು ಕಟ್ಟಿದ ಮೂಗಿನ ನಿವಾರಣೆ ಮಾಡುವುದು. ಮುಚ್ಚಿ ಹೋಗಿರುವಂತಹ ಸೈನಸ್ ನ್ನು ಬಿಡಿಸುವುದು. ಶೀತದ ವಿರುದ್ಧ ಹೋರಾಡಲು ಇದು ತುಂಬಾ ಪರಿಣಾಮಕಾರಿಯಾಗಿ ನೆರವಾಗುವುದು. ಬಿಸಿ ನೀರನ್ನು ಕುಡಿದರೆ ಆಗ ನಿಮಗೆ ಸೈನಸ್ ನಿಂದ ಬರುತ್ತಿರುವ ತಲೆನೋವಿನ ನಿವಾರಣೆ ಮಾಡಲು ನೆರವು ಸಿಗುವುದು.

ರಕ್ತ ಸಂಚಾರವನ್ನು ಸುಧಾರಿಸುವುದು

ರಕ್ತ ಸಂಚಾರವನ್ನು ಸುಧಾರಿಸುವುದು

ಕೇವಲ ಹೊಟ್ಟೆಯ ಆರೋಗ್ಯ ಮಾತ್ರವಲ್ಲದೆ, ಬಿಸಿ ನೀರಿನಿಂದಾಗಿ ದೇಹದಲ್ಲಿ ರಕ್ತ ಸಂಚಾರವು ಸುಗಮವಾಗಿ ಆಗಲು ನೆರವಾಗುವುದು. ಬಿಸಿ ನೀರು ರಕ್ತನಾಳನ್ನು ಹಿಗ್ಗಿಸುವ ಮೂಲಕವಾಗಿ ರಕ್ತವು ಸರಿಯಾಗಿ ಸಂಚಾರವಾಗುವಂತೆ ಮಾಡುವುದು. ಇದರಿಂದ ಸಂಪೂರ್ಣ ದೇಹಕ್ಕೆ ರಕ್ತವು ಸರಿಯಾಗಿ ತಲುಪುವುದು.ಇದರಿಂದಾಗಿ ಹೃದಯದ ಆರೋಗ್ಯವು ಉತ್ತಮವಾಗುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ನೈಸರ್ಗಿಕವಾಗಿ ನೋವು ನಿವಾರಣೆ ಮಾಡುವುದು

ನೈಸರ್ಗಿಕವಾಗಿ ನೋವು ನಿವಾರಣೆ ಮಾಡುವುದು

ಬಿಸಿ ನೀರು ರಕ್ತ ಸಂಚಾರವನ್ನು ಉತ್ತಮಪಡಿಸುವುದು. ಇದರಿಂದಾಗಿ ರಕ್ತವು ದೇಹದೆಲ್ಲೆಡೆ ಸಂಚಾರವಾಗಿ ಸ್ನಾಯುಗಳಿಗೆ ಆರಾಮ ಸಿಗುವುದು ಮತ್ತು ನೋವು ನಿವಾರಣೆ ಆಗುವುದು. ಇದು ದೇಹದ ಒಳಗಿನ ನೋವಿಗೆ ಕೂಡ ತುಂಬಾ ಪರಿಣಾಮಕಾರಿ ಆಗಿದೆ. ಬಿಸಿ ನೀರನ್ನು ಕುಡಿಯು ಮೂಲಕ ಋತುಚಕ್ರದ ವೇಳೆ ಸಂಭವಿಸು ವಂತಹ ನೋವನ್ನು ಕಡಿಮೆ ಮಾಡಬಹುದು.

ಮಲಬದ್ಧತೆಯನ್ನು ತಡೆಯುತ್ತದೆ

ಮಲಬದ್ಧತೆಯನ್ನು ತಡೆಯುತ್ತದೆ

ಮೈದಾ ಹಾಗೂ ಇತರ ಅನಾರೋಗ್ಯಕರ ಸಿದ್ಧ ಆಹಾರಗಳನ್ನು ಸೇವಿಸುವವರಿಗೆ ಮಲಬದ್ದತೆ ನಿತ್ಯದ ತೊಂದರೆಯಾಗಿದೆ. ನಿತ್ಯವೂ ಬಿಸಿನೀರನ್ನು ಸೇವಿಸುವ ಮೂಲಕ ಕರುಳುಗಲು ಹೆಚ್ಚು ಸಂಕುಚಿತಗೊಳ್ಳುವ ಮೂಲಕ ದೇಹದಿಂದ ಕಲ್ಮಶಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತದೆ.ಆದ್ದರಿಂದ ಮಲಬದ್ಧತೆಯ ತೊಂದರೆ ಇರುವವರು ತಕ್ಷಣ ತಮ್ಮ ನೀರಿನ ಅಗತ್ಯತೆಯನ್ನು ಬಿಸಿನೀರಿಗೆ ಬದಲಿಸಿಕೊಳ್ಳುವ ಮೂಲಕ ಶೀಘ್ರವೇ ಈ ತೊಂದರೆ ನಿವಾರಣೆಯಾಗುವುದನ್ನು ಗಮನಿಸಬಹುದು.

ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ಇಡಿಯ ದಿನದ ಚಟುವಟಿಕೆಯಿಂದ ದೇಹ ಬಳಲಿದ್ದರೆ ಬಿಸಿನೀರಿನ ಸ್ನಾನ ದೇಹಕ್ಕೆ ಆರಾಮ ಒದಗಿಸುತ್ತದೆ. ಏಕೆಂದರೆ ಬಿಸಿನೀರು ಚರ್ಮದ ಮೇಲೆ ಬಿದ್ದಾಗ ನರಗಳೆಲ್ಲವೂ ಕೊಂಚ ಬಿಸಿಯ ಪ್ರಚೋದನೆ ಪಡೆದು ಹೆಚ್ಚಿನ ರಕ್ತವನ್ನು ಹರಿಸುತ್ತವೆ. ಇದರಿಂದ ದೇಹದ ಕ್ರಿಯೆಗಳು ಚುರುಕಾಗುತ್ತವೆ. ಬಿಸಿನೀರಿನ ಸೇವನೆ ಯಿಂದಲೂ ಇದೇ ಪ್ರಕಾರದ ಪ್ರಚೋದನೆ ದೇಹದ ಒಳಗಿನಿಂದ ಪಡೆಯುವ ಮೂಲಕ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಹಲವಾರು ಹೃದಯ ಸಂಬಂಧಿತ ತೊಂದರೆಗಳಿಂದ ರಕ್ಷಿಸುತ್ತದೆ.

Most Read:ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ- ದೇಹದ ತೂಕ ಇಳಿಸಬಹುದು!

ಒತ್ತಡವನ್ನು ಕಡಿಮೆ ಮಾಡುತ್ತದೆ

ಒತ್ತಡವನ್ನು ಕಡಿಮೆ ಮಾಡುತ್ತದೆ

ದಿನದ ಹಲವಾರು ಒತ್ತಡಗಳಿಂದ ಸಂಜೆಯಾಗುತ್ತಿದ್ದಂತೆಯೇ ಬಳಲಿಕೆ ಆವರಿಸಿದ್ದರೆ ಇದನ್ನು ಮರೆಯಲು ವ್ಯಸನಗಳತ್ತ ಒಲವು ತೋರುವ ಬದಲು ಬಿಸಿನೀರನ್ನು ಕುಡಿಯುವುದು ಉತ್ತಮ. ಮನಸ್ಸಿನ ನಿರಾಳತೆಗೆ ಕಾರ್ಟಿಸೋಲ್ ಎಂಬ ರಸದೂತ ಕಾರಣವಾಗಿದೆ. ಬಿಸಿನೀರಿನ ಸೇವನೆಯಿಂದ ಉತ್ತಮಗೊಳ್ಳುವ ರಕ್ತಪರಿಚಲನೆ ಮೆದುಳಿಗೆ ತಲುಪುವ ರಕ್ತದ ಪ್ರಮಾಣವನ್ನೂ ಹೆಚ್ಚಿಸುತ್ತದೆ ಹಾಗೂ ಹೆಚ್ಚಿನ ಆರಾಮ ನೀಡುವ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಮುಟ್ಟಿನ ವೇಳೆ ಉಂಟಾಗುವ ಸ್ನಾಯು ಸೆಳೆತ ನಿವಾರಣೆ

ಮುಟ್ಟಿನ ವೇಳೆ ಉಂಟಾಗುವ ಸ್ನಾಯು ಸೆಳೆತ ನಿವಾರಣೆ

ಮುಟ್ಟಿನ ವೇಳೆ ಸ್ನಾಯು ಸೆಳೆತದ ಸಮಸ್ಯೆ ಎದುರಿಸುವವರು ಬಿಸಿ ನೀರನ್ನು ಕುಡಿದರೆ ಅದರಿಂದ ಪರಿಹಾರ ಪಡೆಯಬಹುದಾಗಿದೆ. ಇದು ಹೊಟ್ಟೆಯಲ್ಲಿನ ಸ್ನಾಯುಗಳ ಶಮನಗೊಳಿಸಿ, ರಕ್ತದ ಹರಿವನ್ನು ಹೆಚ್ಚಿಸಿ ಮತ್ತು ಸ್ನಾಯು ಸೆಳೆತದಿಂದ ವಿರಾಮ ಸಿಗುವುದು.

English summary

surprising Benefits Of Drinking Hot Water in empty stomach

One of the well-known health benefits of consumption of hot water is that it improves digestion. Hot water helps the body in breaking down the food which improves digestion. Hot water can also help you treat constipation because it supports bowel movement.Various researches suggest that hot water can help you lose weight. Hot water helps you flush out toxins effectively. It also promotes the feeling of fullness because hot water stays in the stomach for longer as compared to cold water.
X
Desktop Bottom Promotion