For Quick Alerts
ALLOW NOTIFICATIONS  
For Daily Alerts

ಕಿಡ್ನಿ ಸಮಸ್ಯೆ ಇರುವವರು ಸೇವಿಸಬೇಕಾದ ಹಾಗೂ ಸೇವಿಸಬಾರದ ಆಹಾರಗಳು

|

ದೇಹದಲ್ಲಿ ಪ್ರಮುಖ ಅಂಗವಾಗಿರುವಂತಹ ಕಿಡ್ನಿಯು ನಮ್ಮ ದೇಹದಲ್ಲಿರುವ ಕಲ್ಮಷಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುವಂತಹ ಕೆಲಸ ಮಾಡುವುದು. ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದರೆ ಆಗ ದೇಹದಲ್ಲಿ ಸಮಸ್ಯೆಗಳು ಆರಂಭವಾಗುವುದು. ಕಿಡ್ನಿ ಸಮಸ್ಯೆಗೆ ಇಂದಿನ ದಿನಗಳಲ್ಲಿ ಚಿಕಿತ್ಸೆಯು ಲಭ್ಯವಿದೆ. ಕಿಡ್ನಿಯು ದೀರ್ಘ ವೈಫಲ್ಯಕ್ಕೆ ಒಳಗಾಗುವುದು. ಇದರಲ್ಲಿ ಕಿಡ್ನಿ ಕಸಿ ಅಥವಾ ಡಯಾಲಿಸಿಸ್ ಮಾಡಬೇಕಾಗುತ್ತದೆ. ಅದಾಗ್ಯೂ, ಪರಿಸ್ಥಿತಿಯನ್ನು ಸ್ಥಿರ ಹಾಗೂ ಆರೋಗ್ಯವಾಗಿ ಇರಬೇಕಾದರೆ ದೀರ್ಘಕಾಲದ ತನಕ ಪೋಷಕಾಂಶಗಳನ್ನು ಪಡೆದುಕೊಂಡು, ಆರೋಗ್ಯಕರವಾಗಿರುವಂತಹ ಆಹಾರ ಸೇವನೆ ಮಾಡಬೇಕು.

ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ವೇಳೆ ದೇಹದಲ್ಲಿ ಕಲ್ಮಶವು ಶೇಖರಣೆ ಆಗುವುದು. ಇದರೊಂದಿಗೆ ರಕ್ತದಲ್ಲಿ ಕೆಲವೊಂದು ಪೋಷಕಾಂಶಗಳು ಹಾಗೂ ಖನಿಜಾಂಶಗಳು ಕಡಿಮೆ ಆಗುವ ಕಾರಣದಿಂದಾಗಿ ವಿಷಕಾರಿ ಅಂಶಗಳು ಹೆಚ್ಚಾಗುವುದು. ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವಂತಹ ವ್ಯಕ್ತಿಗಳು ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಇದರಲ್ಲಿ ಮುಖ್ಯವಾಗಿ ಅಧಿಕ ಸೋಡಿಯಂ, ಪೊಟಾಶಿಯಂ ಮತ್ತು ಪೋಸ್ಪರಸ್ ಇರುವಂತಹ ಆಹಾರಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಕಿಡ್ನಿ ವೈಫಲ್ಯದೊಂದಿಗೆ ಈ ಮೈಕ್ರೋನ್ಯೂಟ್ರಿಯಂಟ್ಸ್ ಗಳು ರಕ್ತದಲ್ಲಿ ಹೆಚ್ಚಾಗಿದ್ದರೆ ಆಗ ನಿಮಗೆ ಕೆಲವು ಇತರ ಸಮಸ್ಯೆಗಳು ಕಾಡಲು ಆರಂಭವಾಗುವುದು. ಇದರಲ್ಲಿ ಮುಖವಾಗಿ ನೀವು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸಬಹುದು. ಇದರಿಂದ ಹೃದಯದ ಸಮಸ್ಯೆಗಳು ಕಾಣಿಸಬಹುದು. ದೇಹದಲ್ಲಿ ದ್ರವ ಶೇಖರಣೆ ಆಗಬಹುದು. ಅನಿಯಮಿತವಾಗಿ ಎದೆ ಬಡಿತವು ಹೆಚ್ಚಾಗಬಹುದು, ಮೂಳೆ ಸಮಸ್ಯೆ ಕಾಣಿಸಿಕೊಳ್ಳಬಹುದು.

ಆರೋಗ್ಯಕಾರಿ ಆಹಾರ ಸೇವನೆ

ಆರೋಗ್ಯಕಾರಿ ಆಹಾರ ಸೇವನೆ

ಆರೋಗ್ಯಕಾರಿ ಆಹಾರ ಸೇವನೆ ಮಾಡಿದರೆ ಆಗ ಕಿಡ್ನಿ ಸಮಸ್ಯೆ ಇರುವಂತಹ ಜನರಲ್ಲಿ ಪ್ರಾಣಹಾನಿ ಸಂಭವಿಸುವುದು ಕಡಿಮೆ ಎಂದು ಕ್ಲಿನಿಕಲ್ ಜರ್ನಲ್ ಆಫ್ ದ ಅಮೆರಿಕನ್ ಸೊಸೈಟಿ ಆಫ್ ನ್ಯೂರೋಲಾಜಿಯು ತನ್ನ ಸಂಶೋಧನೆಯಲ್ಲಿ ಹೇಳಿದೆ. ಆರೋಗ್ಯಕಾರಿ ಆಹಾರ ಕ್ರಮವೆಂದರೆ ಆಹಾರದಲ್ಲಿ ಹಣ್ಣುಗಳು, ಹಸಿರೆಲೆ ತರಕಾರಿಗಳು, ಮೀನು, ಧಾನ್ಯಗಳು, ಇಡೀ ಧಾನ್ಯಗಳು ಮತ್ತು ನಾರಿನಾಂಶ ಅಧಿಕವಾಗಿರುವ ಆಹಾರ ಸೇವನೆ ಮಾಡುವುದು. ಕಿಡ್ನಿ ಸಮಸ್ಯೆ ಇರುವಂತಹ ರೋಗಿಗಳು ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ಇದರಲ್ಲಿ ಮುಖ್ಯವಾಗಿ ಕೆಂಪು ಮಾಂಸ, ಸೋಡಿಯಂ ಮತ್ತು ಸಂಸ್ಕರಿತ ಸಕ್ಕರೆ ಸೇವನೆ ಪ್ರಮಾಣ ಕಡಿಮೆ ಮಾಡಬೇಕು.

Most Read: ಕಿಡ್ನಿಯನ್ನು ಅನಾರೋಗ್ಯದಿಂದ ದೂರವಿಡಲು ಏನು ಮಾಡಬೇಕು?

ಕಿಡ್ನಿ ಸಮಸ್ಯೆ ಇರುವವರು ತಿನ್ನಲೇಬೇಕಾದ ಆಹಾರಗಳು

ಕಿಡ್ನಿ ಸಮಸ್ಯೆ ಇರುವವರು ತಿನ್ನಲೇಬೇಕಾದ ಆಹಾರಗಳು

ಕಿಡ್ನಿ ಸ್ನೇಹಿಯಾಗಿರುವ ಕೆಲವೊಂದು ಆಹಾರಗಳ ಪ್ರಮುಖವಾಗಿ ರೋಗಿಯು ಸಲಹೆಗಳನ್ನು ಪಡೆಯಬೇಕು ಮತ್ತು ನಿರ್ಬಂಧಗಳನ್ನು ಹೇರಬೇಕು. ನೀವು ಖರೀದಿ ಮಾಡುವಂತಹ ಆಹಾರ ಸಾಮಗ್ರಿಗಳಿಂದಾಗಿ ಅಡುಗೆ ಮನೆಯನ್ನು ತುಂಬಿಸಿಕೊಳ್ಳಬೇಕು. ಸರಿಯಾದ ಆಹಾರ ಪದಾರ್ಥಗಳು ಇದ್ದರೆ ಅದು ತುಂಬಾ ಸಹಕಾರಿಯಾಗಲಿದೆ. ಕಿಡ್ನಿ ಕಾಯಿಲೆ ಇರುವಂತಹ ಜನರು ಯಾವ ರೀತಿಯ ಆಹಾರ ಸೇವನೆ ಮಾಡಬಹುದು ಎಂದು ಇಲ್ಲಿ ತಿಳಿಸಿಕೊಡಲಿದ್ದೇವೆ.

ಹಸಿರೆಲೆ ತರಕಾರಿಗಳು

ಹಸಿರೆಲೆ ತರಕಾರಿಗಳು

ನಿಮ್ಮ ಪ್ರತಿನಿತ್ಯದ ಆಹಾರ ಕ್ರಮದಲ್ಲಿ ವಿವಿಧ ರೀತಿಯ ತರಕಾರಿಗಳು(ಹಸಿ ಅಥವಾ ಬೇಯಿಸಿದ) ಇರಲೇಬೇಕು. ಬಸಳೆ, ಬೀಟ್ ರೂಟ್, ಟೊಮೆಟೊ ಮತ್ತು ಸೆಲರಿ ತುಂಬಾ ಒಳ್ಳೆಯ ಆಯ್ಕೆಯಾಗಿದೆ. ಬೀಟ್ ರೂಟ್ ನಲ್ಲಿ ಉನ್ನತ ಮಟ್ಟದ ನೈಟ್ರಿಕ್ ಆಕ್ಸೈಡ್ ಇದ್ದು, ನೈಸರ್ಗಿಕವಾಗಿ ಇದು ರಕ್ತವನ್ನು ಶುದ್ಧೀಕರಿಸುವುದು. ನೈಟ್ರಿಕ್ ಆಕ್ಸೈಡ್ ನ ಮಟ್ಟವು ರಕ್ತದಲ್ಲಿ ಕಡಿಮೆ ಆದರೆ ಆಗ ಕಿಡ್ನಿಗೆ ಹಾನಿಯಾಗುವುದು ಎಂದು ಇಂಡಿಯನ್ ಜರ್ನಲ್ ಆಫ್ ನೆಫ್ರಾಲಜಿಯಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯಲ್ಲಿ ಹೇಳಿದೆ. ಬಸಳೆಯು ನಿಮ್ಮ ಆಹಾರದಲ್ಲಿ ಅತ್ಯುತ್ತಮ ಆಯ್ಕೆಯಾಗಿದ್ದು, ಇದರಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಬಿ ಮತ್ತು ಇತರ ಆ್ಯಂಟಿಆಕ್ಸಿಡೆಂಟ್ ಗಳು ಕಿಡ್ನಿಯನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಾಗ್ಯೂ, ಬಸಳೆಯಲ್ಲಿ ಇರುವಂತಹ ಪೋಷಕಾಂಶಗಳನ್ನು ನೀವು ಅತಿಯಾಗಿ ಸೇವನೆ ಮಾಡಬೇಡಿ. ಯಾಕೆಂದರೆ ಇದರಿಂದ ಕಿಡ್ನಿ ಕಲ್ಲುಗಳು ಉಂಟಾಗುವ ಸಾಧ್ಯತೆ ಇದೆ.

Most Read: 'ಕಿಡ್ನಿ'ಗೆ ತಗಲುವ ಸೋಂಕನ್ನು ಗುಣಪಡಿಸುವ ಮನೆಮದ್ದುಗಳು

ಹಣ್ಣುಗಳು

ಹಣ್ಣುಗಳು

ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಹಾಗೂ ಕೆಲವೊಂದು ಪೋಷಕಾಂಶಗಳನ್ನು ಹೊಂದಿರುವಂತಹ ಕೆಲವೊಂದು ಹಣ್ಣುಗಳು ಕಿಡ್ನಿ ಸ್ನೇಹಿಯಾಗಿದೆ. ಕಿಡ್ನಿಗೆ ನೆರವಾಗುವಂತಹ ಕೆಲವೊಂದು ಹಣ್ಣುಗಳು ಈ ರೀತಿಯಾಗಿದೆ. ಇದರಲ್ಲಿ ಮುಖ್ಯವಾಗಿ ಕ್ರಾನ್ಬೆರಿ, ಬ್ಲ್ಯಾಕ್ ಬೆರ್ರಿ ಮತ್ತು ನೇರಳೆ ಹಣ್ಣುಗಳು. ಲಿಂಬೆ ಮತ್ತು ದಾಳಿಂಬೆ ಹಣ್ಣಿನ ಜ್ಯೂಸ್ ನಿಂದ ಕೂಡ ಕಿಡ್ನಿ ಸೋಂಕನ್ನು ಕಡಿಮೆ ಮಾಡಬಹುದು. ಮೂತ್ರನಾಳದ ಸೋಂಕು(ಯುಟಿಐ) ತಡೆಯಲು ಮತ್ತು ಅದರ ಚಿಕಿತ್ಸೆಗೆ ಕ್ರಾನ್ಬೆರಿ ಅತ್ಯುತ್ತಮ ಆಯ್ಕೆ ಎಂದು ನ್ಯೂಟ್ರಿಷನ್ ಜರ್ನಲ್ ಹೇಳಿದೆ. ಯುಟಿಐ ಸಮಸ್ಯೆಯಿಂದ ಬಳುತ್ತಿದ್ದ ಜನರಿಗೆ ಒಣ ಹಾಗೂ ಸಿಹಿ ಆಗಿರುವಂತಹ ಕಾನ್ಬೆರಿಗಳನ್ನು ಪ್ರತಿನಿತ್ಯವು ಎರಡು ವಾರಗಳ ತನಕ ನೀಡಲಾಯಿತು. ಆರು ತಿಂಗಳ ಪ್ರಯೋಗದ ಬಳಿಕ ಈ ಜನರಲ್ಲಿ ಯುಟಿಐ ಸಮಸ್ಯೆಯು ಕಂಡುಬರಲಿಲ್ಲ. ಇದರಿಂದ ಕಾನ್ಬೆರಿಯನ್ನು ಅಂಗಡಿಯಿಂದ ಖರೀದಿ ಮಾಡಿ ಮತ್ತು ಅದರ ಜ್ಯೂಸ್ ಮಾಡಿ, ಬೆಳಗ್ಗೆ ಸೇವನೆ ಮಾಡಿ. ಕಿಡ್ನಿ ರಕ್ಷಣೆಗೆ ಇದು ಅತ್ಯುತ್ತಮ ವಿಧಾನವಾಗಿದೆ.

ನೇರಳೆ ಹಣ್ಣು ಮತ್ತು ಬ್ಲ್ಯಾಕ್ ಬೆರ್ರಿಗಳಲ್ಲಿ ರೆಸ್ವೆರಾಟ್ರೊಲ್ ಎನ್ನುವಂತಹ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ದೀರ್ಘಕಾಲದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವಂತ ಜನರಿಗೆ ಈ ಆ್ಯಂಟಿಆಕ್ಸಿಡೆಂಟ್ ತುಂಬಾ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ರೆಸ್ವೆರಾಟ್ರೊಲ್ ನಿಂದಾಗಿ ಪಾಲಿಸಿಸ್ಟಿಕ್ ಕಿಡ್ನಿ ರೋಗ ನಿಧಾನವಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಪಾಲಿಸಿಸ್ಟಿಕ್ ಕಿಡ್ನಿ ಕಾಯಿಲೆಯು ಕಿಡ್ನಿ ಚೀಲಗಳ ದೀರ್ಘಕಾಲಿಕ ಸಮಸ್ಯೆಯಾಗಿದೆ.

ಇತರ ಕೆಲವು ಆಹಾರಗಳು

ಇತರ ಕೆಲವು ಆಹಾರಗಳು

ಹಣ್ಣುಗಳು ಮತ್ತು ತರಕಾರಿಗಳ ಹೊರತಾಗಿ ಕೆಲವೊಂದು ಇತರ ಆಹಾರಗಳನ್ನು ಕೂಡ ಕಿಡ್ನಿ ಕಾಯಿಲೆ ಸಮಸ್ಯೆ ಇರುವವರು ಆಯ್ಕೆ ಮಾಡಿಕೊಳ್ಳಬಹುದು. ಇವುಗಳಲ್ಲಿ ಮುಖ್ಯವಾಗಿ ಇಡೀ ಧಾನ್ಯಗಳು, ಮೊಟ್ಟೆ, ಬೀಜಗಳು, ಕಾಳುಗಳು, ಅಗಸೆ ಬೀಜಗಳು, ಕಡು ಚಾಕಲೇಟ್, ಎಳ್ಳೆಣ್ಣೆ ಇತ್ಯಾದಿ. ತಾಜಾ ಗಿಡಮೂಲಿಕೆಗಳು ಹಾಗೂ ಮಸಾಲೆಗಳು ಮುಖ್ಯವಾಗಿ ಕೊತ್ತಂಬರಿ, ಅರಶಿನ, ಶುಂಠಿ, ದಾಲ್ಚಿನಿ, ಪಾರ್ಸ್ಲಿ ಕಿಡ್ನಿ ಸಮಸ್ಯೆ ಇರುವಂತಹ ಜನರಿಗೆ ತುಂಬಾ ಒಳ್ಳೆಯದು. ಕಿಡ್ನಿಯನ್ನು ನೀರು ಮತ್ತು ಇತರ ಕೆಲವು ಪಾನೀಯಗಳಿಂದ ತೇವಾಂಶದಿಂದ ಇಡುವುದು ಅತೀ ಅಗತ್ಯವಾಗಿರುವುದು. ಗಿಡಮೂಲಿಕೆ ಚಹಾ ಮತ್ತು ಹಣ್ಣುಗಳನ್ನು ಒಳಗೊಂಡಿರುವ ನೀರು ಸೇವಿಸಬೇಕು.

Most Read: ಇಂತಹ 7 ಲಕ್ಷಣಗಳು ಕಂಡುಬಂದರೆ- ಕಿಡ್ನಿಯಲ್ಲಿ ಸಮಸ್ಯೆ ಇದೆ ಎಂದರ್ಥ!!

ಕಡೆಗಣಿಸಬೇಕಾಗಿರುವ ಆಹಾರಗಳು

ಕಡೆಗಣಿಸಬೇಕಾಗಿರುವ ಆಹಾರಗಳು

ಕಿಡ್ನಿ ಸಮಸ್ಯೆ ಇರುವಂತಹ ಜನರು ಯಾವ ರೀತಿಯ ಆಹಾರ ಸೇವಿಸಬೇಕು ಎಂದು ನಿಮಗೆ ಈಗಾಗಲೇ ತಿಳಿದಿದೆ. ಆದರೆ ಕೆಲವೊಂದು ಆಹಾರವನ್ನು ಆಹಾರ ಕ್ರಮದಿಂದ ಹೊರಗಡೆ ಇಡಬೇಕು. ನೀವು ಕೆಲವು ಆಹಾರಗಳನ್ನು ಕಡೆಗಣಿಸಿದರೆ ಅದರಿಂದ ಕಿಡ್ನಿಯು ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸಲು ನೆರವಾಗುವುದು.

•ಸಮುದ್ರ ಉಪ್ಪು, ಸುವಾಸಿತ ಉಪ್ಪುಗಳಾಗಿರುವ ಶುಂಠಿ ಉಪ್ಪು, ಈರುಳ್ಳಿ ಉಪ್ಪು

•ಸಂಸ್ಕರಿತ ಮಾಂಸಗಳಾಗಿರುವ ಚಿಕನ್ ನಗೆಟ್ಸ್, ಹ್ಯಾಮ್, ಸಾಸೇಜ್ ಇತ್ಯಾದಿಗಳು.

•ಕ್ಯಾನ್ ನಲ್ಲಿ ಇರುವಂತಹ ಸೂಪ್ ಮತ್ತು ಶೀತಲೀಕರಿಸಲ್ಪಟ್ಟಿರುವ ಆಹಾರ. ಇದರಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುವುದು.

•ಸಾಸಿವೆ ಮತ್ತು ಸೋಯಾ ಸಾಸ್ ನಂತಹ ಕಾಂಡಿಮೆಂಟ್ಸ್ ಗಳು.

•ರಿಫೈನ್ಡ್ ತೈಲಗಳು: ಸೋಯಾಬೀನ್, ಸೂರ್ಯಕಾಂತಿ

•ಬಿಯರ್ ಮತ್ತು ಸೋಡಾ

•ಪೋಸ್ಪರಸ್ ಅಧಿಕವಾಗಿರುವ ಆಹಾರ: ಒಣಗಿದ ಬೀಜಗಳು, ಬ್ರಾಕೋಲಿ, ಮಶ್ರೂಮ್ ಮತ್ತು ಕಾಳುಗಳು. ಇದನ್ನು ತಿನ್ನಲೇಬೇಕಿದ್ದರೆ ಆಗ ನೀವು ದಿನಕ್ಕೆ ಒಂದು ಕಪ್ ಮಾತ್ ರಸೇವನೆ ಮಾಡಿ.

•ಅಧಿಕ ಪೊಟಾಶಿಯಂ ಇರುವಂತಹ ಹಣ್ಣೂಗಳಾಗಿರುವ ಅವಕಾಡೋ, ಬಾಳೆಹಣ್ಣು ಮತ್ತು ಕಿತ್ತಳೆ.

ಕಿಡ್ನಿಯನ್ನು ಶುದ್ಧೀಕರಿಸಿ

ಕಿಡ್ನಿಯನ್ನು ಶುದ್ಧೀಕರಿಸಿ

ಈ ಎ್ಲಾ ಆಹಾರ ಕ್ರಮಗಳೊಂದಿಗೆ ಕಿಡ್ನಿ ಸೋಂಕು, ಕಲ್ಲು ಮತ್ತು ಇತರ ಸಮಸ್ಯೆಗಳಾಗಿರುವಂತಹ ದ್ರವ ಶೇಖರಣೆ ಮತ್ತು ಯುಟಿಐ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ಕಿಡ್ನಿಯನ್ನು ಶುದ್ಧೀಕರಿಸುವುದು ಅತೀ ಅಗತ್ಯವಾಗಿದೆ. ಕಿಡ್ನಿ ಶುದ್ಧೀಕರಿಸುವಂತಹ ವಿಧಾನವೆಂದರೆ, ಮೂರು ದಿನಗಳ ಕಾಲ ಕೇವಲ ತರಕಾರಿ ಜ್ಯೂಸ್, ಕಾನ್ಬೆರಿ ಅಥವಾ ನೇರಳೆ ಹಣ್ಣಿನ ಸ್ಮೂಥಿ , ಸಲಾಡ್ ಮತ್ತು ಚಿಕನ್ ಆಹಾರದಲ್ಲಿ ಸೇವಿಸಬೇಕು. ಇದನ್ನು ನೀವು ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವಾಗಿ ವಿಂಗಡಿಸಬೇಕು. ಸಲಾಡ್ ಮತ್ತು ಚಿಕನ್ ನ್ನು ನೀವು ರಾತ್ರಿ ವೇಳೆ ಊಟಕ್ಕೆ ಬಳಸಿ.

English summary

Suffering from a kidney disease? Eat this not that

When your kidneys fail to perform their essential function of eliminating wastes and toxins from the body, you need to be very cautious about the dietary choices you make. Here, we guide you on the foods you need to include and exclude from your meals while battling renal failure and other kidney diseases.
X
Desktop Bottom Promotion