For Quick Alerts
ALLOW NOTIFICATIONS  
For Daily Alerts

ಮೊಳಕೆಕಾಳುಗಳ ವಿಧಗಳು, ಪೋಷಕಾಂಶಗಳು ಹಾಗೂ ಆರೋಗ್ಯಕಾರಿ ಪ್ರಯೋಜನಗಳು

|

ಮನುಷ್ಯನ ಸಮಗ್ರ ಆರೋಗ್ಯಕ್ಕೆ ಉಪಯುಕ್ತವಾಗುವಂಥ ವಿಟಮಿನ್ ಹಾಗೂ ಖನಿಜಾಂಶಗಳಿಂದ ಮೊಳಕೆ ಕಾಳುಗಳು ಸಮೃದ್ಧವಾಗಿರುತ್ತವೆ. ಯಾವುದೇ ಬೀಜ ಅಥವಾ ಕಾಳುಗಳನ್ನು ನೀರಲ್ಲಿ ನೆನೆಸಿಟ್ಟಾಗ ಅವು ಮೊಳಕೆಯೊಡೆದು ಬೆಳೆಯಲಾರಂಭಿಸುತ್ತವೆ. ಈ ಕ್ರಿಯೆಯನ್ನು ಮೊಳಕೆಯೊಡೆಯುವಿಕೆ ಎಂದು ಕರೆಯಲಾಗುತ್ತದೆ. ಮೊಳಕೆಕಾಳು ತಯಾರಿಸುವುದು ಹಾಗೂ ಅವನ್ನು ಆಹಾರದಲ್ಲಿ ಬಳಸುವುದು ತುಂಬಾ ಸುಲಭವಾಗಿದೆ.

ಮೊಳಕೆಕಾಳುಗಳು ಎಂದರೇನು?

ಮೊಳಕೆಕಾಳುಗಳು ಎಂದರೇನು?

ಈಗ ತಾನೆ ಮೊಳಕೆಯೊಡೆದು ದೊಡ್ಡದಾಗಿ ಬೆಳೆಯಬಲ್ಲ ಕಾಳು ಅಥವಾ ಬೀಜಗಳನ್ನು ಮೊಳಕೆಕಾಳು ಎನ್ನಲಾಗುತ್ತದೆ. ಕಾಳುಗಳನ್ನು ಕೆಲ ಗಂಟೆಗಳ ಕಾಲ ನೀರಲ್ಲಿ ನೆನೆಸಿಟ್ಟು ನಂತರ ಅವಕ್ಕೆ ಸೂಕ್ತ ಪ್ರಮಾಣದ ತೇವಾಂಶ ಹಾಗೂ ಉಷ್ಣತೆ ಸಿಗುವಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದಾಗ ೨ ರಿಂದ ೭ ದಿನಗಳ ಅವಧಿಯಲ್ಲಿ ಮೊಳಕೆಕಾಳುಗಳು ಬೆಳೆಯುತ್ತವೆ.

Most Read: ಆರೋಗ್ಯದ ಖಜಾನೆ ಮೊಳಕೆ ಕಟ್ಟಿದ ಕಾಳುಗಳು

 ಮೊಳಕೆಕಾಳುಗಳ ವಿಧಗಳು

ಮೊಳಕೆಕಾಳುಗಳ ವಿಧಗಳು

ಬೀನ್ಸ್ ಹಾಗೂ ಬಟಾಣಿ ರೀತಿಯ ಮೊಳಕೆಕಾಳುಗಳು : ಸೋಯಾಬೀನ್, ಹುರುಳಿ, ಹಸಿರು ಬಟಾಣಿ, ಕಪ್ಪು ಹುರುಳಿ, ಹೆಸರು ಕಾಳು, ತೊಗರಿ, ಕಡಲೆ, ಕೆಂಪು ಹುರುಳಿ. ಕಾಯಿ ಹಾಗೂ ಬೀಜ ರೀತಿಯ ಮೊಳಕೆಕಾಳುಗಳು: ಬಾದಾಮಿ ಬೀಜ, ಎಳ್ಳಿನ ಬೀಜ, ಸೂರ್ಯಕಾಂತಿ ಬೀಜ, ಮೂಲಂಗಿ ಬೀಜ, ಮೆಂತ್ಯೆ ಬೀಜ. ಮೊಳಕೆ ಬರಿಸಿದ ಧಾನ್ಯಗಳು: ಗೋದಿ, ನವಣೆ ಅಕ್ಕಿ, ಕಂದು ಅಕ್ಕಿ, ಹರಿವೆ ಸೊಪ್ಪಿನ ಬೀಜ ಹಾಗೂ ಓಟ್ಸ್ ತರಕಾರಿ ಹಾಗೂ ಎಲೆಯ ಮೊಳಕೆಗಳು: ಬ್ರೊಕೊಲಿ, ಮೂಲಂಗಿ, ಪಾಲಕ್, ಬೀಟರೂಟ್ ಸೊಪ್ಪು, ಮೆಂತ್ಯದ ಸೊಪ್ಪಿನ ಬೀಜ.

ಮೊಳಕೆಕಾಳುಗಳಲ್ಲಿರುವ ಪೌಷ್ಟಿಕಾಂಶಗಳ ವಿವರ

ಮೊಳಕೆಕಾಳುಗಳಲ್ಲಿರುವ ಪೌಷ್ಟಿಕಾಂಶಗಳ ವಿವರ

ಕಾಳು, ಬೀಜ ಅಥವಾ ಧಾನ್ಯಗಳು ಮೊಳಕೆಯೊಡುವ ಸಂದರ್ಭದಲ್ಲಿ ಅವುಗಳಲ್ಲಿನ ಪೌಷ್ಟಿಕಾಂಶಗಳ ಪ್ರಮಾಣ ದುಪ್ಪಟ್ಟಾಗುತ್ತದೆ. ಹೀಗಾಗಿ ಇವು ಪ್ರೊಟೀನ್, ಮೆಗ್ನೇಶಿಯಂ, ಫಾಸ್ಫರಸ್, ಮ್ಯಾಂಗನೀಸ್, ಫೊಲೇಟ್, ವಿಟಮಿನ್ ಸಿ ಹಾಗೂ ವಿಟಮಿನ್ ಕೆ ಗಳಿಂದ ಸಮೃದ್ಧವಾಗಿರುತ್ತವೆ. ಮೊಳಕೆಯೊಡುವುದರಿಂದ ಕಾಳಿನಲ್ಲಿನ ಪ್ರೊಟೀನ್ ಅಂಶ ಹೆಚ್ಚಾಗುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅಲ್ಲದೆ ಮೊಳಕೆಕಾಳುಗಳು ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಅಮಿನೋ ಆಸಿಡ್ಸ್‌ಗಳನ್ನು ಹೇರಳ ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಮೊಳಕೆ ಬರಿಸುವ ಸಂದರ್ಭದಲ್ಲಿ ಕಾಳುಗಳಲ್ಲಿ ಉತ್ಪತ್ತಿಯಾಗುವ ಪ್ರೊಟೀನ್‌ಗಳನ್ನು ದೇಹ ಬಲುಬೇಗ ಹಾಗೂ ಸುಲಭವಾಗಿ ಜೀರ್ಣಿಸಿಕೊಂಡು ಅವುಗಳಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಮೊಳಕೆಕಾಳುಗಳ ಆರೋಗ್ಯ ಭಾಗ್ಯ ಗುಣಗಳು

ಜೀರ್ಣಶಕ್ತಿ ವೃದ್ಧಿಸಲು ಸಹಕಾರಿ

ಜೀರ್ಣಶಕ್ತಿ ವೃದ್ಧಿಸಲು ಸಹಕಾರಿ

ಮೊಳಕೆಕಾಳುಗಳಲ್ಲಿರುವ ಹೆಚ್ಚಿನ ಪ್ರಮಾಣದ ಜೀವಂತ ಎಂಜೈಮಗಳಿಂದ ದೇಹದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ ಹಾಗೂ ದೇಹದ ಒಟ್ಟಾರೆ ರಾಸಾಯನಿಕ ಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಎಂಜೈಮ್‌ಗಳು ಆಹಾರ ಪದಾರ್ಥಗಳು ಸುಲಭವಾಗಿ ಒಡೆದು ಅವುಗಳಲ್ಲಿನ ಎಲ್ಲ ಪೋಷಕಾಂಶಗಳು ದೇಹಕ್ಕೆ ಸಿಗುವಂತೆ ಮಾಡುತ್ತವೆ. ಮೊಳಕೆಕಾಳುಗಳಲ್ಲಿರುವ ನಾರಿನಂಶದಿಂದ ಮಲ ವಿಸರ್ಜನೆ ಕ್ರಿಯೆ ಸರಾಗವಾಗುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ.

ಹೃದಯ ಆರೋಗ್ಯಕ್ಕೆ ಬೇಕು ಮೊಳಕೆಕಾಳುಗಳು

ಹೃದಯ ಆರೋಗ್ಯಕ್ಕೆ ಬೇಕು ಮೊಳಕೆಕಾಳುಗಳು

ಮೊಳಕೆಕಾಳುಗಳ ಸೇವನೆಯಿಂದ ದೇಹದಲ್ಲಿ ಉತ್ತಮ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗಿ, ಕೆಟ್ಟ ಕೊಲೆಸ್ಟರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಬ್ರೊಕೊಲಿ ಮೊಳಕೆಕಾಲೂಗಳಲ್ಲಿರುವ ಸಕ್ರಿಯ ಜೈವಿಕ ಕಂಪೌಂಡ್‌ಗಳಿಂದ ಪ್ಲಾಸ್ಮಾಗಳ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಾಗುತ್ತದೆ ಹಾಗೂ ಲಿಪಿಡ್ ಪೆರಾಕ್ಸಿಡೇಶನ್, ಸೀರಮ್ ಟ್ರೈಗ್ಲಿಸರೈಡ್, ಆಕ್ಸಿಡೇಟಿವ್ ಸ್ಟ್ರೆಸ್ ಇಂಡೆಕ್ಸ್, ಸೀರಮ್ ಇನ್ಸುಲಿನ್, ಇನ್ಸುಲಿನ್ ನಿರೋಧಕ ಇವುಗಳನ್ನು ಕಡಿಮೆ ಮಾಡುತ್ತದೆ. ಆಕ್ಸಿಡೈಸ್ಡ್ ಎಲ್‌ಡಿಎಲ್ ಕೊಲೆಸ್ಟರಾಲ್ ಅಂಶವನ್ನು ಸಹ ಕಡಿಮೆ ಮಾಡುವುದರಿಂದ ಟೈಪ್-2 ಡಯಾಬಿಟೀಸ್ ರೋಗಿಗಳಿಗೆ ಉತ್ತಮವಾಗಿವೆ. ಕಡಲೆ ಬೀಜದ ಮೊಳಕೆಕಾಳುಗಳಲ್ಲಿನ ಫೈಟೊ ಇಸ್ಟ್ರೊಜೆನ್ಸ್‌ಗಳಿಂದ ಇವು ಹೃದಯನಾಳಗಳ ಆರೋಗ್ಯಕ್ಕೆ ಸಹಕಾರಿಯಾಗಿವೆ.

Most Read: ಮೊಳಕೆ ಬರಿಸಿದ ಕಾಳುಗಳು-ಮೂರ್ತಿ ಚಿಕ್ಕದಾದರೂ-ಸಿಕ್ಕಾಪಟ್ಟೆ ಪವರ್!

ತೂಕ ಇಳಿಸಲು ಸಹಕಾರಿ ಮೊಳಕೆಕಾಳುಗಳು

ತೂಕ ಇಳಿಸಲು ಸಹಕಾರಿ ಮೊಳಕೆಕಾಳುಗಳು

ಮೊಳಕೆಕಾಳುಗಳು ಹೆಚ್ಚು ಪ್ರಮಾಣದ ನಾರಿನಂಶ ಹೊಂದಿರುವುದರಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಇವು ಬಹಳ ಸೂಕ್ತ ಆಹಾರವಾಗಿವೆ. ಇವುಗಳಲ್ಲಿನ ನಾರಿನಂಶವು ನಿಮಗೆ ಪದೇ ಪದೇ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಕಡಲೆ ಬೀಜದ ಮೊಳಕೆಕಾಳುಗಳ ನಿಯಮಿತ ಸೇವನೆಯಿಂದ ಮಹಿಳೆಯರು ಹೊಟ್ಟೆ ಭಾಗದ ಬೊಜ್ಜನ್ನು ಕರಗಿಸಲು ಸಾಧ್ಯ.

ರಕ್ತದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬೇಕು ಮೊಳಕೆಕಾಳುಗಳು

ರಕ್ತದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬೇಕು ಮೊಳಕೆಕಾಳುಗಳು

ಮೊಳಕೆಕಾಳುಗಳ ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಸಕ್ಕರೆಯನ್ನು ಒಡೆದು ಅದನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ದೇಹಕ್ಕೆ ಅಗತ್ಯವಾದ ಅಮಿಲೇಸ್ ಎಂಜೈಮಗಳು ಹೆಚ್ಚು ಉತ್ಪತ್ತಿಯಾಗಲು ಮೊಳಕೆಕಾಳುಗಳ ಸೇವನೆ ಅಗತ್ಯವಾಗಿದೆ. ಇನ್ನು ಬ್ರೊಕೊಲಿಯಲ್ಲಿರುವ ಸಲ್ಫೊರಾಫೆನ್ ಅಂಶವು ಟೈಪ್-೨ ಡಯಾಬಿಟೀಸ್ ರೋಗಿಗಳ ದೇಹದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತವೆ.

English summary

Sprouts: Types, Nutrition, and Health Benefits

Sprouts are one of the healthiest foods with chock-full of vitamins and minerals that benefit your overall health. When you soak seeds or spores in water, they start germinating and this process is called sprouting . Sprouts are easy to grow and easy to add to your meals.
X
Desktop Bottom Promotion