Just In
Don't Miss
- News
ಯಡಿಯೂರಪ್ಪಗೆ ತಲೆನೋವಾದ ಸಂಪುಟ ವಿಸ್ತರಣೆ: ಆಕಾಂಕ್ಷಿಗಳು ಯಾರ್ಯಾರು?
- Technology
ವಾಟ್ಸ್ ಆಪ್ ಚಾಟ್ ನ್ನು ಹೈಡ್ ಮಾಡುವುದಕ್ಕೆ ಇರುವ ಸಿಂಪಲ್ ಟ್ರಿಕ್ಸ್ ಗಳು
- Movies
''ಸಿನಿಮಾ ಸಾಮೂಹಿಕ ಕಲೆಯಾಗಿಯೇ ಉಳಿಯಬೇಕು ''- ನಾಗತಿಹಳ್ಳಿ ಚಂದ್ರಶೇಖರ್
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Automobiles
ಬಿಎಸ್-6 ಎಫೆಕ್ಟ್- ಹೋಂಡಾ ಕಾರುಗಳ ಮೇಲೆ ದಾಖಲೆ ಪ್ರಮಾಣದ ಆಫರ್
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಉತ್ತರ ಭಾರತಕ್ಕೆ ಪ್ರವಾಸ ಹೋದ್ರೆ ಈ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯಲು ಮರೀಬೇಡಿ
ಇಂತಹ ಲಕ್ಷಣಗಳು ಕಂಡುಬಂದರೆ- ಹೆಚ್ಚು ಉಪ್ಪಿನಂಶ ಇರುವ ಆಹಾರ ಸೇವಿಸುತ್ತಿದ್ದೀರಿ ಎಂದರ್ಥ!
ಸೇವಿಸುವಂತಹ ಆಹಾರವೇ ಆಗಿರಲಿ, ಅದು ಮಿತ ಪ್ರಮಾಣದಲ್ಲಿ ಒಳ್ಳೆಯದು. ಇಲ್ಲವಾದರಲ್ಲಿ ಅದರಿಂದಲೂ ಕೆಲವು ಸಮಸ್ಯೆಗಳು ಬರುವುದು. ಅತಿಯಾದರೆ ಅಮೃತ ಕೂಡ ವಿಷ ಎಂದು ನಮ್ಮ ಹಿರಿಯರು ಇದಕ್ಕೆ ಇರಬೇಕು. ನಾವು ಪ್ರತಿನಿತ್ಯವು ಹಲವಾರು ರೀತಿಯ ಆಹಾರ ಸೇವನೆ ಮಾಡುತ್ತೇವೆ. ಇದು ಹೊಟ್ಟೆಗೆ ಹೋಗಿ, ಅಲ್ಲಿ ಜೀರ್ಣಗೊಂಡು ಶಕ್ತಿಯಾಗಿ ಪರಿವರ್ತನೆ ಆಗುವುದು. ಇದರಲ್ಲಿ ಕೆಲವು ಆಹಾರಗಳನ್ನು ನಾವು ಹಿತಮಿತವಾಗಿ ಸೇವಿಸಬೇಕು. ಅದರಲ್ಲೂ ಮುಖ್ಯವಾಗಿ ಉಪ್ಪು ಹಾಗೂ ಸಕ್ಕರೆ. ಉಪ್ಪು ರಕ್ತದೊತ್ತಡ ಹೆಚ್ಚು ಮಾಡಿದರೆ, ಸಕ್ಕರೆಯು ಮಧುಮೇಹಕ್ಕೆ ಕಾರಣವಾಗ ಬಹುದು.
ಕೆಲವರು ಅಡುಗೆ ವೇಳೆ ಬಳಸಿರುವಂತಹ ಉಪ್ಪಿನ ಜತೆಗೆ ಮತ್ತೆ ಉಪ್ಪನ್ನು ಸಿಂಪಡಿಸಿಕೊಂಡು ಸೇವನೆ ಮಾಡುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕರ. ಉಪ್ಪಿನ ಅತಿಯಾಗಿ ಸೇವನೆ ಮಾಡುವ ಕಾರಣದಿಂದಾಗಿ ರಕ್ತದೊತ್ತಡ ಬರಬಹುದು ಮತ್ತು ನಿಮಗೆ ಹೃದಯದ ಕಾಯಿಲೆ, ಕಿಡ್ನಿ ಕಾಯಿಲೆ ಮತ್ತು ಅಸ್ಥಿರಂಧ್ರತೆಯ ಅಪಾಯವು ಹೆಚ್ಚಾಗಬಹುದು. ಮೂತ್ರ ಪರೀಕ್ಷೆ ಮಾಡದ ಹೊರತಾಗಿ, ನೀವು ಅತಿಯಾಗಿ ಉಪ್ಪು ಸೇವನೆ ಮಾಡುತ್ತಲಿದ್ದೀರಿ ಎಂದು ತಿಳಿಯಲು ನಿಮಗೆ ಸಾಧ್ಯ ಆಗದು. ನಿಯಮಿತವಾಗಿ ಅತಿಯಾಗಿ ಉಪ್ಪು ಸೇವನೆ ಮಾಡಿದರೆ, ಆಗ ದೇಹದಲ್ಲಿ ಕೆಲವೊಂದು ಚಿಹ್ನೆ ಹಾಗೂ ಲಕ್ಷಣಗಳನ್ನು ಕಾಣಿಸಿಕೊಳ್ಳುವುದು. ಈ ಲಕ್ಷಣಗಳಿಂದಾಗಿ ನೀವು ಉಪ್ಪು ಸೇವನೆ ಅತಿಯಾಗಿದೆ ಎಂದು ತಿಳಿಯಬೇಕು ಮತ್ತು ನಿಯಮಿತವಾಗಿ ಉಪ್ಪು ಸೇವನೆ ಕಡಿಮೆ ಮಾಡಬೇಕು.

ವಿಚಿತ್ರ ಜಾಗದಲ್ಲಿ ಊತ
ಇದು ತುಂಬಾ ವಿಚಿತ್ರ ಲಕ್ಷಣವಾಗಿರಬಹುದು. ಆದರೆ ನೀವು ಅತಿಯಾಗಿ ಉಪ್ಪು ಸೇವಿಸುತ್ತಾ ಇದ್ದೀರಿ ಎನ್ನುವುದರ ಲಕ್ಷಣವಿದು. ಅತಿಯಾಗಿ ಉಪ್ಪು ಸೇವನೆ ಮಾಡಿದರೆ ಆಗ ದೇಹದ ಕೆಲವೊಂದು ಅಂಗಾಂಶಗಳಲ್ಲಿ ನೀರಿನಾಂಶವು ಶೇಖರಣೆ ಆಗುವುದು. ಇದನ್ನು ಎಡಿಮಾ ಎಂದು ಕರೆಯಲಾಗುತ್ತದೆ. ಇದರಿಂದಾಗಿ ದೇಹದ ವಿವಿಧ ಭಾಗಗಳಲ್ಲಿ ಊತ ಕಾಣಿಸಿಕೊಳ್ಳುವುದು. ಕಣ್ಣುಗಳ ಕೆಳಭಾಗವು ಊದಿಕೊಳ್ಳುವುದು, ಬೆರಳುಗಳಲ್ಲಿ ಊತ, ಹಿಂಗಾಲು ಮತ್ತು ಮೊಣಕಾಲಿನಲ್ಲಿ ಊತ ಕಾಣಿಸಿಕೊಳ್ಳಬಹುದು. ಇದನ್ನು ನಿವಾರಣೆ ಮಾಡುವ ಸರಳ ವಿಧಾನ ಎಂದರೆ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರತಿನಿತ್ಯ ನೀವು ಸೇವನೆ ಮಾಡುವ ಉಪ್ಪಿನ ಪ್ರಮಾಣ ಕಡಿಮೆ ಮಾಡಿಕೊಳ್ಳಿ.

ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ
ಅತಿಯಾಗಿ ಉಪ್ಪಿನಾಂಶ ಸೇವನೆ ಮಾಡಿದರೆ, ಆಗ ನಿಮ್ಮ ಮೂತ್ರ ವಿಸರ್ಜನೆಯಲ್ಲೂ ಬದಲಾವಣೆ ಕಂಡುಬರುವುದು. ಅತಿಯಾದ ಉಪ್ಪಿನಾಂಶವನ್ನು ದೇಹದಿಂದ ಹೊರಗೆ ತೆಗೆಯಲು ಕಿಡ್ನಿಯು ತುಂಬಾ ದೀರ್ಘ ಸಮಯದ ತನಕ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಕೆಲವೊಂದು ಸಲ ಮೂತ್ರ ವಿಸರ್ಜನೆಗೆ ಅವಸರ ಉಂಟಾಗುವುದು. ಇಂತಹ ಪರಿಸ್ಥಿತಿಯಲ್ಲಿ ನೀವು ಸೇವಿಸುವಂತಹ ಉಪ್ಪಿನ ಪ್ರಮಾಣದ ಬಗ್ಗೆ ಹೆಚ್ಚು ಗಮನ ನೀಡಬೇಕು. ಪದೇ ಪದೇ ಮೂತ್ರ ವಿಸರ್ಜನೆ ಮಾಡುವಂತೆ ಆಗಲು ಇದು ಕಾರಣ ಆಗಿರ ಬಹುದು. ಮೂತ್ರದ ಬಣ್ಣದಲ್ಲಿ ಕೂಡ ಬದಲಾವಣೆ ಕಂಡು ಬರಬಹುದು. ಉಪ್ಪಿಲ್ಲದೆ ರುಚಿಯಿಲ್ಲ ಎನ್ನುವ ಮಾತಿದೆ. ಅದೇ ರೀತಿಯಾಗಿ ಹೆಚ್ಚಿನ ಎಲ್ಲಾ ಆಹಾರಕ್ಕೂ ಉಪ್ಪು ಅಗತ್ಯ. ಆದರೆ ನೀವು ಕೆಲವೊಂದು ಆಹಾರಗಳಿಗೆ ಉಪ್ಪಿನ ಪ್ರಮಾಣವನ್ನು ಕಡಿಮೆ ಬಳಸಬಹುದು.

ಅತಿಯಾದ ಬಾಯಾರಿಕೆ
ನೀವು ಅತಿಯಾಗಿ ಉಪ್ಪು ಸೇವನೆ ಮಾಡಿದರೆ, ಆಗ ದೇಹದಲ್ಲಿ ನೀರಿನಾಂಶದ ಸಮತೋಲನದಲ್ಲಿ ವ್ಯತ್ಯಾಸ ಆಗುವುದು. ಅತಿಯಾಗಿ ಉಪ್ಪು ಸೇವಿಸಿದರೆ ಆಗ ನೀವು ಹೆಚ್ಚು ನೀರು ಕುಡಿಯಬೇಕು. ನಿಮಗೆ ಇದರಿಂದ ಪದೇ ಪದೇ ಬಾಯಾರಿಕೆ ಆಗಬಹುದು. ಈ ವೇಳೆ ಸರಿಯಾಗಿ ನೀರು ಕುಡಿಯದೆ ಇರುವುದು ಇದಕ್ಕೆ ಪರಿಹಾರವಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವು ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಇದರಿಂದ ದೇಹವು ನಿರ್ಜಲೀಕರಣಕ್ಕೆ ಒಳಗಾಗುವುದು ತಪ್ಪುವುದು. ನೀರು ನಿಮ್ಮ ಸಂಪೂರ್ಣ ಆರೋಗ್ಯ ಕಾಪಾಡುವುದು ಮತ್ತು ದೇಹವನ್ನು ತಾಜಾವಾಗಿಡಲು ಇದು ನೆರವಾಗುವುದು.

ಉಪ್ಪಿನ ಅತಿಯಾದ ಬಯಕೆ
ನೀವು ಅತಿಯಾಗಿ ಉಪ್ಪಿನ ಸೇವನೆ ಮಾಡಿದರೆ, ಆಗ ಮತ್ತೆ ಅದನ್ನು ತಿನ್ನಬೇಕು ಎನ್ನುವ ಬಯಕೆಯು ಕಾಡುವುದು. ಇದರಿಂದ ನೀವು ಸೇವಿಸುವಂತಹ ಪ್ರತಿಯೊಂದು ಆಹಾರಕ್ಕೂ ಉಪ್ಪನ್ನು ಹೆಚ್ಚಾಗಿ ಸೇರಿಸಿಕೊಳ್ಳುತ್ತೀರಿ. ಅತಿಯಾಗಿ ಉಪ್ಪು ಸೇವಿಸುವ ಪರಿಣಾಮ ನೀವು ತಿನ್ನುವ ಆಹಾರದಲ್ಲಿ ಉಪ್ಪು ಕಡಿಮೆ ಇದೆ ಎಂದು ನಿಮಗೆ ಭಾವನೆ ಬರುವುದು. ಉಪ್ಪಿನಾಂಶವು ಅಧಿಕ ಇರುವಂತಹ ಆಹಾರಕ್ಕಾಗಿ ನಿಮ್ಮ ಬಯಕೆಯು ಹೆಚ್ಚಾಗುವುದು. ಯಾಕೆಂದರೆ ನೀವು ಉಪ್ಪಿನ ರುಚಿಗೆ ಹೆಚ್ಚು ಒಗ್ಗಿಕೊಂಡಿರುತ್ತೀರಿ. ಇದಕ್ಕಾಗಿ ನೀವು ಉಪ್ಪಿನಾಂಶವು ಇರುವಂತಹ ಆಹಾರವನ್ನು ಸೇವಿಸಲು ಹೆಚ್ಚು ಬಯಸುವಿರಿ.

ನಿರಂತರ ತಲೆನೋವು
ಅತಿಯಾಗಿ ಉಪ್ಪು ಸೇವನೆ ಮಾಡುವ ಪರಿಣಾಮವಾಗಿ ನಿಮಗೆ ನಿರಂತರವಾಗಿ ತಲೆನೋವು ಬರಬಹುದು. ಎಲ್ಲಾ ಸಮಯದಲ್ಲೂ ನಿಮಗೆ ತಲೆನೋವು ಕಾಡಬಹುದು. ಆದರೆ ತಲೆನೋವು ತುಂಬಾ ಲಘುವಾಗಿ ಇರುವುದು. ಈ ವೇಳೆ ನೀವು ಉಪ್ಪನ್ನು ಕಡಿಮೆ ಸೇವಿಸುವ ಜತೆಗೆ, ನೀರನ್ನು ಅಧಿಕ ಕುಡಿಯ ಬೇಕು. ಹೀಗೆ ಮಾಡಿದರೆ ತಲೆನೋವು ದೂರವಾಗುವುದು. ತಲೆನೋವಿಗೆ ನೋವು ನಿವಾರಕ ತೆಗೆದುಕೊಳ್ಳುವ ಬದಲು ನೀವು ಹೆಚ್ಚು ನೀರು ಕುಡಿದರೆ ತುಂಬಾ ಒಳ್ಳೆಯದು.