For Quick Alerts
ALLOW NOTIFICATIONS  
For Daily Alerts

ಸೆಕ್ಸ್‌ಗೂ ಮುನ್ನ ಇಂತಹ 7 ಆಹಾರಗಳಲ್ಲಿ ಯಾವುದಾದರೂ ಒಂದನ್ನು ಸೇವಿಸಿ ಸಾಕು!

|

ಸಂಗಾತಿಯೊಂದಿಗೆ ಕಳೆಯುವ ಸಮಯದಲ್ಲಿ ನಮ್ಮ ಪರಿಪೂರ್ಣ ಶ್ರಮವನ್ನು ನೀಡಬೇಕೆಂದು ನಾವು ಬಯಸಿದರೂ ಹೆಚ್ಚಿನ ಸಂದರ್ಭಗಳಲ್ಲಿ ಇದು ಸಾಧ್ಯವಾಗುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿದ್ದರೂ ಇದರಲ್ಲಿ ಪ್ರಮುಖವಾದ ಕಾರಣವೆಂದರೆ ನಾವು ಸೇವಿಸುವ ಆಹಾರ. ಜಾಣತನದ ಕ್ರಮವೆಂದರೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸುವುವುದ್.

ಈ ಶಕ್ತಿ ಇರುವ ಆಹಾರಗಳನ್ನು ಕಾಮೋತ್ತೇಜಕಗಳು (Aphrodisiacs) ಎಂದು ಕರೆಯುತ್ತಾರೆ ಹಾಗೂ ವಿಶ್ದದ ಪ್ರತಿ ಸಂಸ್ಕೃತಿಯಲ್ಲಿಯೂ ಭಿನ್ನವಾದ ಆಹಾರಗಳನ್ನು ಈ ರೂಪದಲ್ಲಿ ಸೇವಿಸಲು ನೀಡಲಾಗುತ್ತಾ ಬರಲಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಆಹಾರಗಳು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಕಾರಣದಿಂದಲೇ ಕಾಮೋತ್ತೇಜಕ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿವೆಯೇ ವಿನಃ ನಿಜವಾದ ಅರ್ಹತೆಯನ್ನು ಪಡೆದಿಲ್ಲ. ಆದರೆ ಇಂದು ವಿಜ್ಞಾನ ಬಹಳ ಮುಂದುವರೆದಿದ್ದು ಯಾವ ಆಹಾರದಲ್ಲಿ ನಿಜವಾಗಿಯೂ ಕಾಮೋತ್ತೇಜಕ ಗುಣಗಳಿವೆ ಎಂದು ತಿಳಿಸುತ್ತವೆ.

ಈ ಗುಣಗಳಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸುವುದು, ಲೈಂಗಿಕ ಕ್ಷಮತೆಯನ್ನು ಹೆಚ್ಚಿಸುವುದು, ಮಿಲನದ ಸಮಯದಲ್ಲಿ ಕಾಣಿಸಿಕೊಳ್ಳುವ ಉದ್ವೇಗವನ್ನು ಕಡಿಮೆ ಮಾಡುವುದು, ಶಕ್ತಿಯನ್ನು ಏಕಸಮಾನವಾಗಿ ಉಳಿಸಿಕೊಳ್ಳುವುದು ಅಥವಾ ಮಿಲನದ ಸಮಯದಲ್ಲಿ ಎದುರಾಗುವ ಹೊಟ್ಟೆಯುಬ್ಬರಿಕೆಯನ್ನು ಇಲ್ಲವಾಗಿಸುವುದು ಮೊದಲಾದವು ಸೇರಿವೆ. ಮಿಲನ ಕ್ರಿಯೆಗೆ ಈ ಗುಣಗಳಲ್ಲಿ ಯಾವುದೋ ಒಂದು ಅಥವಾ ಎರಡು ಅಥವಾ ಇನ್ನೂ ಹೆಚ್ಚಿನ ಗುಣಗಳ ಅಗತ್ಯಬೀಳಬಹುದು. ಹಾಗಾಗಿ ಬಹುತೇಕ ಎಲ್ಲಾ ಗುಣಗಳೂ ಇರುವ ಆಹಾರಗಳನ್ನು ವಿಜ್ಞಾನ ಸಾದರಪಡಿಸಿದ್ದು ಇವುಗಳಲ್ಲಿ ಪ್ರಮುಖವಾದ ಏಳು ಆಹಾರಗಳು ಹೀಗಿವೆ:

ಬೆಣ್ಣೆಹಣ್ಣು (Avocados)

ಬೆಣ್ಣೆಹಣ್ಣು (Avocados)

ಒಂದು ವೇಳೆ ರುಚಿಗಾಗಿ ಮಾತ್ರ ನೀವು ಬೆಣ್ಣೆಹಣ್ಣನ್ನು ಇಷ್ಟಪಟ್ಟಿದ್ದರೆ ಈಗ ಇದರ ಇತರ ಗುಣಗಳಿಗಾಗಿಯೂ ನೀವು ಈ ಬೆಣ್ಣೆಯ ತಿರುಳಿನ ಹಸಿರು ಹಣ್ಣನ್ನು ಇನ್ನಷ್ಟು ಇಷ್ಟಪಡುವುದು ಖಚಿತ. Global Healing Center ಎಂಬ ಸಂಸ್ಥೆಯ ಪ್ರಕಾರ ಇವುಗಳಲ್ಲಿ ಫೋಲಿಕ್ ಆಮ್ಲ ಅತಿ ಹೆಚ್ಚಿನ ಪ್ರಮಾಣದಲ್ಲಿದೆ ಹಾಗೂ ಇವು ಪ್ರೋಟೀನುಗಳನ್ನು ಅತಿ ಕ್ಷಿಪ್ರವಾಗಿ ಒಡೆದು ತಕ್ಷಣವೇ ಲಭಿಸುವಂತೆ ಹಾಗೂ ಹೆಚ್ಚು ಹೊತ್ತಿನ ಕಾಲ ಲಭ್ಯವಾಗುವಂತೆ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಈ ಶಕ್ತಿಯೇ ಮಿಲನಕ್ರಿಯೆಗೆ ಅಗತ್ಯವಾದ ಇಂಧನವಾಗಿದ್ದು ಹೆಚ್ಚು ಹೊತ್ತು ಸಂಸರ್ಗವನ್ನು ವಿಜೃಂಭಿಸುವಂತೆ ಮಾಡುತ್ತದೆ. ಅಲ್ಲದೇ The American Heart Association ಎಂಬ ಸಂಸ್ಥೆ ವಿವರಿಸಿರುವ ಪ್ರಕಾರ ಇದರಲ್ಲಿರುವ ಆರೋಗ್ಯ ಸ್ನೇಹಿ ಕೊಬ್ಬು (ಏಕ ಅಸಂತೃಪ್ತ ಕೊಬ್ಬು ಅಥವಾ monounsaturated fat) ದೇಹಕ್ಕೆ ಅಗತ್ಯವಿರುವ ರಸದೂತಗಳ ಪ್ರಮಾಣ ಅತಿ ಸೂಕ್ತಮಟ್ಟದಲ್ಲಿರುವಂತೆ ನೋಡಿಕೊಳ್ಳುತ್ತದೆ. the Modern Medicine Network ಎಂಬ ಸಂಸ್ಥೆಯ ಪ್ರಕಾರ ಮಿಲನಕ್ರಿಯೆಯಲ್ಲಿ ಭಾಗಿಯಾಗಿರುವ ದಂಪತಿಗಳಿಬ್ಬರೂ ಬೆಣ್ಣೆಹಣ್ಣನ್ನು ಸೇವಿಸಿದರೆ ಲೈಂಗಿಕ ಕ್ರಿಯೆ ಒಟ್ಟಾರೆಯಾಗಿ ಉತ್ತಮಗೊಳ್ಳುತ್ತದೆ.

Most Read: ಒಂದೇ ವಾರದಲ್ಲಿ ದಂತಕುಳಿ ಸಮಸ್ಯೆ ಕಡಿಮೆ ಮಾಡುವ ಪವರ್‌ಫುಲ್ ಮನೆಮದ್ದುಗಳು

ಸ್ಟ್ರಾಬೆರಿ

ಸ್ಟ್ರಾಬೆರಿ

ಇತರ ಬೆರ್ರಿಹಣ್ಣುಗಳ ಜೊತೆ, ವಿಶೇಷವಾಗಿ ಬ್ಲೂಬೆರಿ ಹಾಗೂ ಸ್ಟ್ರಾಬೆರಿ ಹಣ್ಣುಗಳಲ್ಲಿಯೂ ಅತಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟ್ ಗಳಿವೆ ಎಂದು ವೆಬ್ ಎಂಡಿ ತಾಣ ತಿಳಿಸುತ್ತದೆ. ಈ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸುವ ಮೂಲಕ ನಮ್ಮ ದೇಹದ ರಕ್ತಪರಿಚಲನಾ ವ್ಯವಸ್ಥೆ ಸೂಕ್ತವಾಗಿರುವಂತೆ ನೆರವಾಗುತ್ತವೆ. ಹಾಗಾದರೆ ಈ ಗುಣ ಲೈಂಗಿಕ ಜೀವನವನ್ನು ಹೇಗೆ ಉತ್ತಮಗೊಳಿಸುತ್ತದೆ? ಈ ಪ್ರಶ್ನೆಗೆ The Alternative Daily ಎಂಬ ತಾಣ ಸೂಕ್ತ ಉತ್ತರ ನೀಡಿದೆ. ಯಾವಾಗ ನಮ್ಮ ರಕ್ತನಾಳಗಳಲ್ಲಿ ಈ ಕೆಟ್ಟ ಕಣಗಳಿರುವುದಿಲ್ಲವೋ ಆಗ ರಕ್ತಪರಿಚಲನೆ ದೇಹದ ಎಲ್ಲಾ ಭಾಗಗಳಿಗೆ ಸರಾಗವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಆಗಲು ಸಾಧ್ಯವಾಗುತ್ತದೆ. ಮಿಲನಕ್ರಿಯೆಗೆ ಜನನಾಂಗಗಳಲ್ಲಿ ಸಾಕಷ್ಟು ರಕ್ತಪರಿಚಲನೆ ಇರುವುದು ಅಗತ್ಯವಾಗಿದ್ದು ಈ ಮೂಲಕ ಮಿಲನಕ್ರಿಯೆಯೂ ಉತ್ತಮಗೊಳ್ಳುತ್ತದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಹಲವಾರು ಪ್ರೇಮಿಗಳು ಚಾಕಲೇಟನ್ನು ಪ್ರೇಮದ ಸಂಕೇತ ಎಂದೇ ಭಾವಿಸಿ ಪರಸ್ಪರರಿಗೆ ಉಡುಗೊರೆಯಾಗಿ ನೀಡುತ್ತಾರೆ. ಸಾಮಾನ್ಯವಾಗಿ ಚಾಕಲೇಟು ಬಾಯಿಯಲ್ಲಿ ಕರಗಿದಾಗ ಮೆದುಳಿಗೆ ತಲುಪುವ ಮುದಗೊಳ್ಳುವ ಭಾವನೆಯೇ ಆಹ್ಲಾದ ನೀಡುವುದಾಗಿದ್ದು ಇದೇ ಕಾರಣಕ್ಕೆ ಮಕ್ಕಳು ಚಾಕಲೇಟನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಮಿಲನಕ್ರಿಯೆಗಾಗಿ ಸಾಮಾನ್ಯ ಚಾಕಲೇಟು ಸಾಕಾಗುವುದಿಲ್ಲ. ಇದರ ಬದಲಿಗೆ ಕಪ್ಪು ಚಾಕಲೇಟು ಆಯ್ದುಕೊಳ್ಳಬೇಕು. ಕಪ್ಪು ಚಾಕಲೇಟಿನಲ್ಲಿ ಪಿ ಇ ಎ ( phenylethylamine (PEA) ಎಂಬ ಪೋಷಕಾಂಶವಿದೆ. Psychology Today ಎಂಬ ಸಂಸ್ಥೆಯ ಆಹಾರ ತಜ್ಞ Anneli Rufus ಎಂಬುವವು ಹೀಗೆ ವಿವರಿಸುತ್ತಾರೆ: ಈ ಪೋಷಕಾಂಶ ರಕ್ತಕ್ಕೆ ಬೆರೆತೊಡನೆ ಮೆದುಳಿಗೆ ಎಂಡಾರ್ಫಿನ್ ಎಂಬ ರಸದೂತ ಬಿಡುಗಡೆಯಾಗುತ್ತದೆ ಹಾಗೂ ಮನಸ್ಸಿಗೆ ಮುದ ನೀಡಲು ಈ ರಸದೂತವೇ ಕಾರಣ. ಅಲ್ಲದೇ ರಕ್ತದಲ್ಲಿ ಡೋಪಮೈನ್ ಎಂಬ ರಸದೂತವೂ ಸೂಕ್ತ ಮಟ್ಟದಲ್ಲಿರಲು ಸಾಧ್ಯವಾಗುತ್ತದೆ ಎಂದು Slate ಎಂಬ ಸಂಸ್ಥೆಯ Bethany Brookshire ಎಂಬುವರು ವಿವರಿಸುತ್ತಾರೆ. ನಮ್ಮ ಮನಸ್ಸಿನಲ್ಲಿ ಎದುರಾಗುವ ಗುಪ್ತ ಬಯಕೆಗಳು, ಪಾಪವೆಂದು ಪರಿಗಣಿಸಲಾಗುವ ಕ್ರಿಯೆಗಳಿಗೆ ಒಲವು ತೋರಲು ಹಾಗೂ ಮನಸ್ಸಿನ ಭಾವನೆಗಳು ಮತ್ತು ತೃಪ್ತಿಯ ಸಂಕೇತವನ್ನು ಈ ಡೋಪಮೈನ್ ಗಳೇ ನಿರ್ಧರಿಸುತ್ತವೆ. ಮಿಲನಕ್ರಿಯೆಯಲ್ಲಿಯೂ ಈ ಡೋಪಮೈನ್ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಾಗಿದ್ದು ಮಿಲನಕ್ರಿಯೆಗೂ ಮುನ್ನ ಇಬ್ಬರೂ ಕೊಂಚ ಕಪ್ಪು ಚಾಕಲೇಟು ಸೇವಿಸುವುದು ಉತ್ತಮ.

Most Read: ದೇಹದಲ್ಲಿ ಕೊಬ್ಬು ಉಂಟು ಮಾಡದ ಟಾಪ್ 8 ಆಹಾರಗಳು

ಸಿಂಪಿ ಮತ್ತು ಇತರ ಸಾಗರ ಉತ್ಪನ್ನಗಳು

ಸಿಂಪಿ ಮತ್ತು ಇತರ ಸಾಗರ ಉತ್ಪನ್ನಗಳು

ಕಾಮೋತ್ತೇಜಕ ಆಹಾರಗಳಲ್ಲಿ ಸಮುದ್ರ ಉತ್ಪನ್ನಗಳಲ್ಲಿ ಒಂದಾದ ಚಿಪ್ಪಿನಲ್ಲಿರುವ ಸಿಂಪಿ (Oyster) ಪ್ರಮುಖವಾಗಿದೆ. ಅಲ್ಲದೇ ಸಿಂಪಿಯ ಚಿಪ್ಪು ಕೊಂಚವೇ ತೆರೆದಿದ್ದಾಗ ಇದು ಮಹಿಳೆಯ ಜನನಾಂಗವನ್ನೇ ಹೋಲುವ ಮತ್ತು ಒಳಗಿನ ಮೃದ್ವಂಗಿಯ ಲೋಳೆಯೂ ಜಾರುಕದ್ರವವನ್ನೇ ಹೋಲುವ ಕಾರಣ ಪುರುಷನ ಮನಸ್ಸಿನಲ್ಲಿ ಪರೋಕ್ಷವಾಗಿ ಮಹಿಳೆಯ ಬಗ್ಗೆ ಅನುರಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಸಿಂಪಿಗಳಲ್ಲಿ ಸತು ಹೇರಳವಾಗಿದೆ ಹಾಗೂ ಈ ಧಾತು ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಪ್ರಸೂತಿತಜ್ಞೆ ಮತ್ತು ದ ಹಾರ್ಮೋನ್ ಕ್ಯೂರ್ ಎಂಬ ಪುಸ್ತಕದ ಲೇಖಕಿ ಡಾ. ಸಾರಾ ಗಾಟ್ಫ್ರೈಡ್ (ಎಂ. ಡಿ) ಯವರು ತಿಳಿಸುತ್ತಾರೆ. ಸತು ಪುರುಷರ ದೇಹದಲ್ಲಿ ಹೆಚ್ಚಿನ ಟೆಸ್ಟಾಸ್ಟ್ರೆರಾನ್ ಉತ್ಪಾದನೆಗೆ ನೆರವಾಗುತ್ತದೆ ಹಾಗೂ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಾಮಾಸಕ್ತಿಯನ್ನೂ ಹೆಚ್ಚಿಸುತ್ತದೆ. ವಿಶೇಷವಾಗಿ ಪುರುಷರಲ್ಲಿ ವೀರ್‍ಯಾಣುಗಳ ಸಂಖ್ಯೆ ಹೆಚ್ಚಿಸಲು ಮತ್ತು ನಿಮಿರುತನವನ್ನು ಹೆಚ್ಚಿಸಲೂ ಸಿಂಪಿ ನೆರವಾದರೆ ಮಹಿಳೆಯರಲ್ಲಿ ಅಂಡಾಶಯಗಳ ಆರೋಗ್ಯವನ್ನು ಉತ್ತಮವಾಗಿರಿಸಿ ತನ್ಮೂಲಕ ಲೈಂಗಿಕ ಬಯಕೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಒಣಫಲಗಳು

ಒಣಫಲಗಳು

ಕಾಮೋತ್ತೇಜಕಗಳ ಪಟ್ಟಿಯಲ್ಲಿ ಒಣಫಲಗಳೂ ಸೇರಿವೆ ಎಂದು ರೀಡರ್ಸ್ ಡೈಜೆಸ್ಟ್ ವಿವರಿಸುತ್ತದೆ. ಇವುಗಳಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಹಲವಾರು ಪೋಷಕಾಂಶಗಳಿವೆ ಹಾಗೂ ಇವುಗಳನ್ನು ಆಯ್ದುಕೊಳ್ಳುವುದೇ ತ್ರಾಸಕರ ವಿಷಯವಾಗಿದೆ. ಆಹಾರತಜ್ಞ ಹಾಗೂ ಬಾಣಸಿಗ ಅಲೆಕ್ಸ್ ಮಾಲಿನ್ಸ್ಕೈಯವರು ನ್ಯಾಚುರಲ್ ನ್ಯೂಸ್ ಗೆ ನೀಡಿ಼ದ ಮಾಹಿತಿಯ ಪ್ರಕಾರ ಗೋಡಂಬಿ ಮತ್ತು ಬಾದಾಮಿಗಳಲ್ಲಿ ಹೆಚ್ಚಿನ ಪ್ರಮಾಣದ ಸತು ಇವೆ ಹಾಗೂ ಇವು ಲೈಂಗಿಕ ಶಕ್ತಿಗೆ ತುಂಬಾ ಅವಶ್ಯವಾಗಿವೆ. Chan School of Public Health ಎಂಬ ಸಂಸ್ಥೆಯ ಹಾರ್ವರ್ಡ್ ರವರ ಪ್ರಕಾರ ಮೀನಿನಲ್ಲಿರುವಂತೆಯೇ ಅಕ್ರೋಟುಗಳಲ್ಲಿಯೂ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನಾಮ್ಲಗಳಿವೆ ಹಾಗೂ ಇವು ಲೈಂಗಿಕ ಪ್ರಚೋದನೆಗಳಿಗೆ ಹೆಚ್ಚಿನ ನೆರವು ನೀಡುತ್ತವೆ. ಏಕೆಂದರೆ ಇವು ಸಹಾ ಡೋಪಮೈನ್ ಉತ್ಪಾದನೆಗೆ ನೆರವಾಗುವ ಮೂಲಕ ಲೈಂಗಿಕ ತೃಪ್ತಿ ಪಡೆಯಲು ನೆರವಾಗುತ್ತವೆ.

Most Read: ಮಹಿಳೆಯರು ರೆಡ್ ವೈನ್ ಕುಡಿದರೆ-ಅವರಲ್ಲಿ ಸೆಕ್ಸ್ ಆಸಕ್ತಿ ಹೆಚ್ಚಾಗಲಿದೆಯಂತೆ!

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ನೈಸರ್ಗಿಕ ವಯಾಗ್ರಾ ರೂಪದಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸುವಂತೆ ಇತ್ತೀಚಿನ ಸಂಶೋಧನೆಗಳು ವಿವರಿಸುತ್ತಿವೆ. ಡಾ. ಭೀಮು ಪಾಟಿಲ್ (ಪಿ ಎಚ್ಡಿ) ಯವರು ವೆಬ್ ಎಂಡಿ ತಾಣಕ್ಕೆ ನೀಡಿದ ವಿವರಗಳ ಪ್ರಕಾರ ಕಲ್ಲಂಗಡಿಯಲ್ಲಿರುವ ಸಿಟ್ರುಲೈನ್ ಎಂಬ ಪೋಷಕಾಂಶ ರಕ್ತದಲ್ಲಿ ನೈಟ್ರಿಕ್ ಆಕ್ಸೈಡ್ ಅನ್ನು ಹೆಚ್ಚಿಸಿ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಸಾಮಾನ್ಯವಾಗಿ ನಪುಂಸಕತ್ವ ನಿವಾರಿಸಲು ನೀಡುವ ಔಷಧಿಗಳೂ ಇದೇ ಕೆಲಸವನ್ನು ಮಾಡುತ್ತವೆ. ಯಾವಾಗ ರಕ್ತಪರಿಚಲನೆ ಉತ್ತಮಗೊಂಡಿತೋ, ಪುರುಷರಂತೆಯೇ ಮಹಿಳೆಯರಲ್ಲಿಯೂ ಲೈಂಗಿಕ ಕಾರ್ಯಗಳು ಇನ್ನೂ ಉತ್ತಮವಾಗಿ ನೆರವೇರಲು ಸಾಧ್ಯವಾಗುತ್ತದೆ ಹಾಗೂ ಮಿಲನಕ್ರಿಯೆಗೆ ಅಗತ್ಯವಾದ ಹೆಚ್ಚಿನ ಶಕ್ತಿ ಮತ್ತು ಮುದಗೊಳಿಸುವ ಎಂಡಾರ್ಫಿನ್ ಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಅಂಜೂರ

ಅಂಜೂರ

ಒಂದು ವೇಳೆ ಮೇಲಿನ ಯಾವುದೇ ಆಹಾರಗಳ ಸೇವನೆಯಿಂದ ನಿಮಗೆ ಹೊಟ್ಟೆಯುಬ್ಬರಿಕೆ ಉಂಟಾಗಿದ್ದರೆ ಅಂಜೂರವನ್ನು ನೀವು ಆಯ್ದುಕೊಳ್ಳಬಹುದು. ಅಂಜೂರಗಳಲ್ಲಿಯೂ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಹಾಗೂ ಸತು ಉತ್ತಮವಾಗಿದ್ದು ಇವುಗಳೊಂದಿಗೇ ಉತ್ತಮ ಪ್ರಮಾಣದ ಕರಗುವ ನಾರು ಸಹಾ ಇದೆ. BBC Good Food ಎಂಬ ಕಾರ್ಯಕ್ರಮದ ನಿರೂಪಕ ಹಾಗೂ ಆಹಾರತಜ್ಞ ಜೋ ಲ್ಯೂವಿನ ರವರ ಪ್ರಕಾರ ಆಹಾರದಲ್ಲಿರುವ ನಾರು ನಮ್ಮ ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸಿ ಹೆಚ್ಚು ಹೊತ್ತು ಹಸಿವಾಗದಂತೆ ತಡೆಯುತ್ತದೆ. ಹಾಗಾಗಿ ಹೊಟ್ಟೆಯುಬ್ಬರಿಕೆಯ ಚಿಂತೆಯಿಲ್ಲದೇ ಅಂಜೂರವನ್ನು ಸೇವಿಸಬಹುದು.

ಕಾಮೋತ್ತೇಜಕ ಆಹಾರಗಳನ್ನು ಸೇವಿಸಬೇಕು

ಕಾಮೋತ್ತೇಜಕ ಆಹಾರಗಳನ್ನು ಸೇವಿಸಬೇಕು

ಆದರೆ ಕೇವಲ ಲೈಂಗಿಕ ಅನುಭವವನ್ನು ಮಾತ್ರವೇ ಗಮನದಲ್ಲಿಟ್ಟುಕೊಂಡು ಪ್ರತ್ಯೇಕವಾಗಿ ಆಹಾರಗಳನ್ನು ಸೇವಿಸಬಾರದು. ಬದಲಿಗೆ ನಿಮ್ಮ ಅರೋಗ್ಯಕ್ಕೆ ಪೂರಕವಾದ ಆಹಾರಗಳ ಜೊತೆಗೇ ಕಾಮೋತ್ತೇಜಕ ಆಹಾರಗಳನ್ನು ಸೇವಿಸಬೇಕು. ಈ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿವೆ ಹಾಗೂ ಇವುಗಳ ಸತ್ಯಾಸತ್ಯತೆಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಮಿಲನಕ್ರಿಯೆಗೆ ಸಂಗಾತಿಗಳ ನಡುವಣ ಮಾನಸಿಕ ಬಾಂಧವ್ಯ, ಅನ್ಯೋನ್ಯತೆಯೇ ಪ್ರಮುಖ ಆಯಾಮವಾಗಿದ್ದು ಇಬ್ಬರಿಗೂ ಇಷ್ಟವಾಗುವ ಆಹಾರಸೇವನೆ ಅಥವಾ ಬೇರಾವುದೇ ವಿಷಯಗೂ ಮಿಲನಕ್ರಿಯೆಯಷ್ಟೇ ಸಂತೋಷವನ್ನು ನೀಡಬಲ್ಲುದು.

English summary

Seven Foods To Eat Before Sex That Can Make Your Night Even Better

No matter how high you crank up Marvin Gaye, sometimes it's just hard to get it on for any number of reasons. Now I don't know about you, but I spend a lot of my time thinking about food. So what's better than foods that will amp up your sex life?Aphrodisiacs (defined as agents that arouse sexual response and desire) have been floating around different cultures throughout history. Though often contested as mere myth and folklore that may just reduce the experience to a placebo effect, science supports that there are foods that can target issues from a lack of libido to help improve sex.
X