For Quick Alerts
ALLOW NOTIFICATIONS  
For Daily Alerts

ಕಣ್ಣಿನ ಕ್ಯಾನ್ಸರ್‌ನ ಕೆಲವೊಂದು ಅಪಾಯಕಾರಿ ಸಂಗತಿಗಳು

|

ಕ್ಯಾನ್ಸರ್ ಎನ್ನುವ ಮಾಹಾಮಾರಿಯು ಇಂದು ವಿಶ್ವದೆಲ್ಲೆಡೆಯಲ್ಲಿ ಲಕ್ಷಾಂತರ ಮಂದಿಯ ಪ್ರಾಣಹಾನಿಗೆ ಕಾರಣವಾಗುತ್ತಿದೆ. ನಾವು ತಿನ್ನುವ ಆಹಾರ, ಹೊರಗಿನ ಕಲುಷಿತ ವಾತಾವರಣ ಇತ್ಯಾದಿಗಳು ನಮ್ಮಲ್ಲಿ ಕ್ಯಾನ್ಸರ್ ಗೆ ಕಾರಣವಾಗುವುದು. ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳು ಇವೆ.

ಒಂದೊಂದು ಕ್ಯಾನ್ಸರ್ ನ ಲಕ್ಷಣಗಳು ಭಿನ್ನವಾಗಿರುವುದು. ಹೀಗಾಗಿ ಅದರ ಅಪಾಯಗಳಲ್ಲಿ ಕೂಡ ವ್ಯತ್ಯಾಸಗಳು ಇರುವುದು. ಇದರಲ್ಲಿ ಒಂದು ರೀತಿಯ ಅಪಾಯವೆಂದರೆ ಅದು ಧೂಮಪಾನ. ಇದನ್ನು ನಾವು ಕಡೆಗಣಿಸಬಹುದು. ವ್ಯಕ್ತಿಯ ವಯಸ್ಸು ಮತ್ತು ಕೌಟುಂಬಿಕ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಅಪಾಯದ ಬಗ್ಗೆ ತಿಳಿದುಕೊಂಡಿದ್ದರೂ ಅಥವಾ ಇತರ ಕೆಲವು ಅಪಾಯಗಳ ಬಗ್ಗೆ ನಿಮಗೆ ಅರಿವು ಇದ್ದರೂ ನಿಮಗೆ ಕಾಯಿಲೆಯು ಬರಲೇಬೇಕೆಂದಿಲ್ಲ. ಅಪಾಯದ ಬಗ್ಗೆ ಸ್ವಲ್ಪ ಅಥವಾ ತಿಳಿಯದೆ ಇರುವವರಿಗೆ ಇಂತಹ ಕಾಯಿಲೆಗಳು ಬರಲೂ ಬಹುದು.

ಜನಾಂಗ ಅಥವಾ ಜನಾಂಗೀಯತೆ

ಜನಾಂಗ ಅಥವಾ ಜನಾಂಗೀಯತೆ

ಆಫ್ರಿಕನ್ ಅಮೆರಿಕಾ, ಹಿಸ್ಪಾನಿಕ್ಸ್ ಅಥವಾ ಏಶ್ಯನ್ ಅಮೆರಿಕನ್ ಗಿಂತ ಬಿಳಿಯರಲ್ಲಿ ಕಣ್ಣಿನ ಮೆಲನೊಮಾದ ಅಪಾಯವು ಹೆಚ್ಚಾಗಿ ಇರುವುದು.

ಕಣ್ಣಿನ ಬಣ್ಣ

ಕಣ್ಣಿನ ಬಣ್ಣ

ಕಣ್ಣಿನ ಬಣ್ಣವು ತುಂಬಾ ತಿಳಿಯಾಗಿರುವಂತಹ ವ್ಯಕ್ತಿಗಳಲ್ಲಿ ಮೆಲನೊಮಾ ಬರುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಕಡುಬಣ್ಣದ ಕಣ್ಣುಗಳು ಅಥವಾ ಚರ್ಮದ ಬಣ್ಣ ಹೊಂದಿರುವವರಲ್ಲಿ ಈ ಸಾಧ್ಯತೆಯು ಕಡಿಮೆ ಇರುವುದು.

ವಯಸ್ಸು ಮತ್ತು ಲಿಂಗ

ವಯಸ್ಸು ಮತ್ತು ಲಿಂಗ

ಕಣ್ಣಿನ ಮೆಲನೊಮಾವು ಯಾವುದೇ ವಯಸ್ಸಿನಲ್ಲೂ ಬರಬಹುದು. ಆದರೆ ವಯಸ್ಸಾಗುತ್ತಾ ಇರುವಂತೆ ಇದರ ಅಪಾಯವು ಹೆಚ್ಚಾಗಿರುವುದು. ಕಣ್ಣಿನ ಮೆಲನೊಮಾವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಇರುವುದು. ಕೆಲವು ಅನುವಂಶೀಯ ಪರಿಸ್ಥಿತಿ

ಅನುವಂಶೀಯ ಪರಿಸ್ಥಿತಿಗಳು

ಅನುವಂಶೀಯ ಪರಿಸ್ಥಿತಿಗಳು

ಡೈಸ್ಪ್ಲಾಸ್ಟಿಕ್ ನೆವಸ್ ಸಿಂಡ್ರೋಮ್ ಇರುವವರ ದೇಹದಲ್ಲಿ ಹಲವಾರು ರೀತಿಯ ಅಸಾಮಾನ್ಯ ಮಚ್ಚೆಗಳು ಇರುವುದು. ಇಂತಹ ವ್ಯಕ್ತಿಗಳಲ್ಲಿ ಮೆಲನೊಮಾದ ಅಪಾಯವು ಹೆಚ್ಚಾಗಿ ಇರುವುದು. ಇಂತಹ ವ್ಯಕ್ತಿಗಳ ಕಣ್ಣುಗಳಲ್ಲಿ ಮೆಲನೊಮಾ ಬೆಳವಣಿಗೆಯಾಗುವ ಅಪಾಯವು ಅಧಿಕವಾಗಿ ಇರುವುದು. ಕಣ್ಣಪಾಪೆಯ ಮುಂಭಾಗದಲ್ಲಿರುವ ವರ್ಣದ್ರವ್ಯಪೂರಿತ ಸ್ತರ ಅಸಾಮಾನ್ಯ ಕಂದು ಚುಕ್ಕೆಗಳಿರುವ ಜನರು ಕೂಡ ಕಣ್ಣಿನ ಮೆಲನೊಮಾಕ್ಕೆ ಒಳಗಾಗುವಂತಹ ಅಪಾಯವು ಅಧಿಕವಾಗಿರುವುದು ಎಂದು ಹೇಳಲಾಗಿದೆ.

Most Read: ಗರುಡ ಪುರಾಣ ಪ್ರಕಾರ ನೀವು ಇಂತವರ ಮನೆಯಲ್ಲಿ ಆಹಾರ ಸೇವಿಸಲೇಬಾರದು!

ಬಿಎಪಿ1 ಕ್ಯಾನ್ಸರ್ ಸಿಂಡ್ರೊಮ್

ಬಿಎಪಿ1 ಕ್ಯಾನ್ಸರ್ ಸಿಂಡ್ರೊಮ್

ಬಿಎಪಿ1 ಕ್ಯಾನ್ಸರ್ ಸಿಂಡ್ರೊಮ್ ತುಂಬಾ ಅಪರೂಪದ ಅನುವಂಶೀಯ ಪರಿಸ್ಥಿತಿಯಾಗಿದ್ದು, ಇಲ್ಲಿ ಕುಟುಂಬ ಸದಸ್ಯರು ಕಣ್ಣುಪಾಪೆಯ ಮೆಲನೊಮಾಕ್ಕೆ ಒಳಗಾಗುವಂತಹ ಸಾಧ್ಯತೆಗಳು ಹೆಚ್ಚಾಗಿ ಇರುವುದು. ಇದರೊಂದಿಗೆ ಚರ್ಮದ ಮೆಲನೊಮಾ, ಮಾರಕ ಮೆಸೊಥೆಲಿಯೊಮ, ಕಿಡ್ನಿ ಕ್ಯಾನ್ಸರ್ ಮತ್ತು ಇತರ ಕೆಲವೊಂದು ಕಾಯಿಲೆಗಳು ಕೂಡ ಬರಬಹುದು. ಈ ಪರಿಸ್ಥಿತಿಯು ಅನುವಂಶೀಯ ಬದಲಾವಣೆ ಅಂದರೆ ಬಿಎಪಿ1 ಜಿನ್ ಮತ್ತು ಇದು ಹದಿಹರೆಯದಲ್ಲೇ ಕ್ಯಾನ್ಸರ್ ಬರುವಂತಹ ಸಾಧ್ಯತೆಯನ್ನು ಹೆಚ್ಚು ಮಾಡುವುದು.

ಮಚ್ಚೆಗಳು

ಮಚ್ಚೆಗಳು

ಕಣ್ಣಿನಲ್ಲಿ ಅಥವಾ ಚರ್ಮದಲ್ಲಿ ವಿವಿಧ ರೀತಿಯ ಮಚ್ಚೆಗಳು ಕಾಣಿಸಿಕೊಂಡರೆ ಅದರಿಂದ ಕಣ್ಣಿನಪಾಪೆಯಲ್ಲಿ ಕಣ್ಣಿನ ಮೆಲನೊಮಾ ಬರುವಂತಹ ಅಪಾಯವು ಅಧಿಕವಾಗಿ ಇರುವುದು. ಕಣ್ಣಿನಲ್ಲಿ ಇದು ಕೊರೊಯಿಡಲ್, ದೈತ್ಯ ಕೋರಿಡಾಲ್, ಮತ್ತು ಐರಿಸ್ ನೀವಿ ಸೇರಿರುವುದು. ಅದೇ ರೀತಿಯಾಗಿ ಚರ್ಮದಲ್ಲಿ ಅಟಿಕಲ್ ನೆವಿ, ಚರ್ಮದ ಸಾಮಾನ್ಯ ನೇವಿ, ಮತ್ತು ಚರ್ಮದ ಕಣ್ಣುಗಳು ಸೇರಿರುವುದು. ಕಣ್ಣಿನ ಪರಿಸ್ಥಿತಿಯನ್ನು ಪ್ರಾಥಮಿಕವಾಗಿ ಬಂದ ಮೆಲನೊಸಿಸ್(ಪಿಎಎಂ) ಎಂದು ಕರೆಯಲಾಗುತ್ತದೆ. ಕಣ್ಣಿನಲ್ಲಿ ಮೆಲನೊಸೈಟ್ಸ್ ಗಳು ಹೆಚ್ಚಾಗಿ ಬೆಳವಣಿಗೆ ಆದಂತೆ ಆಗ ಸಂಯೋಗ ಮೆಲನೊಮಾದ ಅಪಾಯವು ಅಧಿಕವಾಗಿ ಇರುವುದು.

ಕೌಟುಂಬಿಕ ಇತಿಹಾಸ

ಕೌಟುಂಬಿಕ ಇತಿಹಾಸ

ಕಣ್ಣಿನ ಮೆಲನೊಮಾವು ಕೆಲವೊಂದು ಕುಟುಂಬಗಳಲ್ಲಿ ಕಂಡುಬರಬಹುದು. ಆದರೆ ಇದು ತುಂಬಾ ಅಪರೂಪ ಮತ್ತು ಈ ಸಮಸ್ಯೆಗೆ ಅನುವಂಶೀಯ ಕಾರಣವನ್ನು ಈಗಲೂ ಸಂಶೋಧನೆ ಮಾಡಲಾಗುತ್ತಾ ಇದೆ. ಸಾಬೀತು ಆಗದೆ ಇರುವ ಅಪಾಯಗಳು

ಬಿಸಿಲಿಗೆ ಮೈಯೊಡ್ಡುವುದು

ಬಿಸಿಲಿಗೆ ಮೈಯೊಡ್ಡುವುದು

ಸೂರ್ಯನ ಬಿಸಿಲಿಗೆ ಅತಿಯಾಗಿ ಮೈಯೊಡ್ಡುವ ಕಾರಣದಿಂದಾಗಿ ಚರ್ಮದಲ್ಲಿ ಮೆಲನೊಮಾವು ಬರುವ ಅಪಾಯವು ಇದೆ ಎಂದು ಹೇಳಲಾಗುತ್ತದೆ. ಇದು ಕಣ್ಣಿನ ಮತ್ತು ಸಂಯೋಗ ಮೆಲನೊಮಾದ ಅಪಾಯಕ್ಕೂ ಕಾರಣವಾಗಬಹುದು ಎಂದು ಕೂಡ ಹೇಳಲಾಗಿದೆ. ಆದರೆ ಇದುವರೆಗೆ ನಡೆಸಿರುವಂತಹ ಅಧ್ಯಯನಗಳು ಯಾವುದೇ ಸ್ಪಷ್ಟ ವರದಿಯನ್ನು ನೀಡಿಲ್ಲ. ಇಂತಹ ಪ್ರಶ್ನೆಗಳಿಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.

ಕೆಲವು ವೃತ್ತಿಗಳು

ಕೆಲವು ವೃತ್ತಿಗಳು

ಕೆಲವೊಂದು ಅಧ್ಯಯನಗಳ ಪ್ರಕಾರ ವೆಲ್ಡಿಂಗ್ ಮಾಡುವಂತಹ ವೃತ್ತಿಯಲ್ಲಿ ಇರುವವರಿಗೆ ಕಣ್ಣಿನ ಮೆಲನೊಮಾ ಬರುವ ಸಾಧ್ಯತೆಗಳು ಹೆಚ್ಚಾಗಿ ಇರುವುದು. ಆದರೆ ಇದರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.

Most Read: ಕ್ಯಾರೆಟ್ ಕೇವಲ ಹಲ್ವಕ್ಕೆ ಮಾತ್ರ ಫೇಮಸ್ ಅಲ್ಲ-ಕ್ಯಾನ್ಸರ್ ರೋಗ ನಿಯಂತ್ರಿಸುವ ಶಕ್ತಿ ಇದರಲ್ಲಿದೆ!

ಚರ್ಮದ ಮೆಲನೊಮಾ

ಚರ್ಮದ ಮೆಲನೊಮಾ

ಕಣ್ಣಿನ ಮೆಲನೊಮಾ ಬಂದಿರುವಂತಹ ವ್ಯಕ್ತಿಗಳಲ್ಲಿ ಹಿಂದೆ ಚರ್ಮದ ಮೆಲನೊಮಾವು ಬಂದಿರುವಂತಹ ಇತಿಹಾಸವು ಇರುವುದು. ಆದರೆ ಚರ್ಮದ ಮೆಲನೊಮಾ ಬಂದರೆ ಅದರಿಂದ ಕಣ್ಣಿನ ಮೆಲನೊಮಾ ಬರುವಂತಹ ಅಪಾಯವು ಹೆಚ್ಚಾಗುವುದೇ ಎಂದು ಇದುವರೆಗೆ ಸರಿಯಾಗಿ ತಿಳಿದುಬಂದಿಲ್ಲ.

ವಿಟಮಿನ್‌ಯುಕ್ತ ಆಹಾರಗಳನ್ನು ಸೇವಿಸಿ

ವಿಟಮಿನ್‌ಯುಕ್ತ ಆಹಾರಗಳನ್ನು ಸೇವಿಸಿ

ವಿಟಮಿನ್ A ಮತ್ತು K ಗಳಿ೦ದ ಸಮೃದ್ಧವಾದ ಆರೋಗ್ಯಪೂರ್ಣ ಆಹಾರವನ್ನು ಸೇವಿಸುವುದು, ಪರಿಪೂರ್ಣವಾದ, ಆರೋಗ್ಯಯುತವಾದ ನಯನಗಳನ್ನು ಪಡೆಯಲು ಸಹಕಾರಿಯಾಗಿದೆ. ಆರೋಗ್ಯಯುತವಾದ ಕಣ್ಣುಗಳು ಮತ್ತು ಸಮರ್ಪಕವಾದ ದೃಷ್ಟಿಯನ್ನು ಹೊ೦ದುವುದಕ್ಕಾಗಿ ಅಗತ್ಯವಿರುವ ವಿಟಮಿನ್‌ಗಳು ಮತ್ತು ಖನಿಜಗಳನ್ನು ಪೂರೈಸುವ, ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರತಿದಿನ ಸೇವಿಸಿರಿ.

ಕಣ್ಣಿನ ವ್ಯಾಯಾಮ

ಕಣ್ಣಿನ ವ್ಯಾಯಾಮ

ಐದು ನಿಮಿಷಗಳ ಕಾಲ ನಿಮ್ಮ ಕಣ್ಣಿನ ಗುಡ್ಡೆಗಳನ್ನು ವೃತ್ತಾಕಾರವಾಗಿ ತಿರುಗಿಸುವುದೋ ಅಥವಾ ಹಲವಾರು ಬಾರಿ ನಿಮ್ಮ ಕಣ್ಣುಗಳನ್ನು ಮಿಟುಕಿಸುವುದೋ ಇ೦ತಹ ಕೆಲವು ಸರಳ ಕಣ್ಣುಗಳ ವ್ಯಾಯಾಮವನ್ನು ಮಾಡಿರಿ. ಬೆಳಗ್ಗಿನ ಹೊತ್ತು ನಿಮ್ಮ ಅ೦ಗೈಗಳನ್ನು ಎರಡು ನಿಮಿಷಗಳ ಕಾಲ ಪರಸ್ಪರ ಉಜ್ಜಿರಿ. ಅನ೦ತರ ಬೆಚ್ಚಗಾದ ಆ ನಿಮ್ಮ ಅ೦ಗೈಗಳನ್ನು ಕಣ್ಣುಗಳ ಮೇಲೆ ಇರಿಸಿರಿ. ಇ೦ತಹ ಕಣ್ಣುಗಳಿಗೆ ಸ೦ಬ೦ಧಿಸಿದ ವ್ಯಾಯಾಮಗಳು ನಿಮ್ಮ ಕಣ್ಣುಗಳ ತೇವಾ೦ಶವನ್ನು ಕಾಪಾಡುತ್ತವೆ ಹಾಗೂ ನಿಮ್ಮ ಕಣ್ಣುಗಳನ್ನು ಆರೋಗ್ಯಪೂರ್ಣವಾಗಿರಿಸುತ್ತವೆ.

Most Read: ನಾಲಿಗೆಯ ಕ್ಯಾನ್ಸರ್-ನೀವು ತಿಳಿಯಲೇಬೇಕಾದ ಸಂಗತಿಗಳು

ಸಿಟ್ರಸ್ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಿ

ಸಿಟ್ರಸ್ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಿ

ವಿಟಮಿನ್ ಸಿ ಎಂದು ಹೇಳಿದರೆ ಅದು ಸಿಟ್ರಸ್ ಹಣ್ಣುಗಳಲ್ಲಿವೆ ಎಂದು ಗೊತ್ತಿದೆ. ಕಿತ್ತಲೆ ಮತ್ತು ದ್ರಾಕ್ಷಿಹಣ್ಣುಗಳು ತಿನ್ನಲು ರುಚಿಯಾಗಿರುತ್ತದಲ್ಲದೆ ಶೀತ ಮತ್ತು ಕೆಮ್ಮನ್ನು ವಾಸಿಮಾಡುವುದು ಮತ್ತು ಕಣ್ಣುಗಳಿಗೂ ಸಹ ಉತ್ತಮ ಆಹಾರ. ನಾವು ಆಹಾರಗಳ ಜೊತೆ ಸಿಟ್ರಸ್ ಹಣ್ಣುಗಳನ್ನು ಸೇವಿಸಿ ಅಕ್ಷಿಪಟಲದ ಅವನತಿ ಮತ್ತು ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಇವುಗಳಿಂದ ದೂರವಿರಬಹುದು.

ಕೆಲವೊಮ್ಮೆ ಮುಂದಿನ ದೃಶ್ಯವನ್ನು ಸ್ಪಷ್ಟವಾಗಿ ಕಾಣಲು ಕೊಂಚ ಹೆಚ್ಚೇ ತ್ರಾಸಪಡಬೇಕಾಗಿ ಬರುತ್ತದೆ. ಇದಕ್ಕೆ ಕಣ್ಣುಗಳ ಒತ್ತಡ ಅಥವಾ ಒಣಗಿದ ಕಣ್ಣುಗಳು ಕಾರಣವಾಗಿರಬಹುದು. ಕಂಪ್ಯೂಟರ್ ಪರದೆಯನ್ನೇ ತದೇಕಚಿತ್ತದಿಂದ ಇಡಿಯ ದಿನ ವೀಕ್ಷಿಸುವವರಿಗೆ ಈ ತೊಂದರೆ ಸಾಮಾನ್ಯವಾಗಿದೆ. ಇವರಿಗೆ ಕಣ್ಣು ಮಿಟುಕಿಸುವಾಗ ಕೊಂಚ ಉರಿಯಾಗಬಹುದು ಅಥವಾ ದೃಷ್ಟಿ ಮಂಜಾಗಬಹುದು. ಇದು ಕಣ್ಣೀರು ಇಂಗಿರುವುದನ್ನು ಹಾಗೂ ಕಣ್ಣುಗಳಿಗೆ ಹೆಚ್ಚು ಆರಾಮದ ಅಗತ್ಯವಿರುವುದನ್ನು ಸೂಚಿಸುತ್ತವೆ.

English summary

Risk Factors for Eye Cancer

A risk factor is anything that increases your chance of getting a disease such as cancer. Different cancers have different risk factors. Some risk factors, like smoking, can be changed. Others, like a person’s age or family history, can’t be changed. But having a known risk factor, or even several risk factors, does not mean that you will get the disease. And many people who get the disease may have few or no known risk factors.
Story first published: Saturday, February 2, 2019, 16:48 [IST]
X
Desktop Bottom Promotion