Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಿನವಿಡೀ ಹಸಿವಾಗುತ್ತಿದೆಯೇ? ಹಾಗಾದರೆ ಇದೇ ಕಾರಣವಿರಬಹುದು!
ಹಸಿವು ಎನ್ನುವುದು ದೇಹವು ನಮಗೆ ಇನ್ನು ಶಕ್ತಿ ಬೇಕು ಎಂದು ಹೇಳುವಂತಹ ಒಂದು ವಿಧಾನವಾಗಿದೆ. ಹೆಚ್ಚಿನ ಜನರು ದಿನವಿಡಿ ಹಸಿವಾಗುತ್ತಲೇ ಇರುತ್ತದೆ ಮತ್ತು ಅವರು ಏನಾದರೊಂದು ತಿಂಡಿ ತಿನ್ನುತ್ತಿರುವರು. ಆದರೆ ಇಷ್ಟು ಹಸಿವಾಗಲು ಕಾರಣಗಳು ಏನು? ಇಲ್ಲಿ ತುಂಬಾ ಚೆನ್ನಾಗಿ ವಿವರಣೆ ನೀಡಲಾಗಿದೆ.

ಹಸಿವಾಗಲು ಹಲವಾರು ರಿತಿಯ ಕಾರಣಗಳು ಇರಬಹುದು. ನಿಯಂತ್ರಣದಲ್ಲಿ ಇಲ್ಲದೆ ಇರುವಂತಹ ಥೈರಾಯ್ಡ್ ಸಮಸ್ಯೆಯಿಂದ ಹಿಡಿದು ಅತಿಯಾದ ಒತ್ತಡದ ಜೀವನಶೈಲಿ, ನಿದ್ರಾಹೀನತೆ ಇತ್ಯಾದಿಗಳು. ಈ ಕಾರಣಗಳಿಂದಾಗಿ ನಿಮಗೆ ಹಸಿವು ಹೆಚ್ಚಾಗುತ್ತಲಿದ್ದರೆ ಆಗ ನೀವು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ನಿಮಗೆ ಪದೇ ಪದೇ ಹಸಿವಾಗುತ್ತಿರುವುದು ಯಾಕೆ ಎಂದು ತಿಳಿಯಲು ನಾವು ನಿಮಗೆ ಇಲ್ಲಿ ಕೆಲವೊಂದು ಕಾರಣಗಳನ್ನು ಹೇಳಲಿದ್ದೇವೆ. ಅದನ್ನು ನೀವು ತಿಳಿಯಿರಿ.

ಆಹಾರ ಪಥ್ಯ
ಆಹಾರ ಪಥ್ಯ ಮಾಡುವಂತಹ ಜನರಲ್ಲಿ ಹೆಚ್ಚಾಗಿ ಹಸಿವು ಕಾಣಿಸುವುದು. ಯಾಕೆಂದರೆ ಆಹಾರ ಕ್ರಮದಿಂದಾಗಿ ಕ್ಯಾಲರಿ ಸೇವನೆ ಕಡಿಮೆ ಆಗಿರುವುದು. ಇದರಿಂದಗಿ ದೇಹವು ದಹಿಸುದಕ್ಕಿಂತ ಕಡಿಮೆ ಕ್ಯಾಲರಿ ಸೇವನೆ ಮಾಡಿದರೆ ಆಗ ಗ್ರೇಲಿನ್ ಎನ್ನುವಂತಹ ಹಾರ್ಮೋನು ಬಿಡುಗಡೆ ಆಗುವುದು. ಇದು ಹಸಿವು ಉಂಟು ಮಾಡುವ ಹಾರ್ಮೋನು ಆಗಿದೆ.

ಟೈಪ್ 2 ಮಧುಮೇಹ
ಟೈಪ್ 2 ಮಧುಮೇಹ ಇರುವಂತಹ ಜನರಲ್ಲಿ ದಿನವಿಡಿ ಹಸಿವು ಕಾಣಿಸುವುದು. ಮಧುಮೇಹ ಉಂಟಾಗಲು ಪ್ರಮುಖ ಕಾರಣವೆಂದರೆ ಗ್ಲೂಕೋಸ್ ಅಂಗಾಂಶಗಳಿಗೆ ತೆರಳುವ ಬದಲು ಅದು ರಕ್ತದಲ್ಲೇ ಉಳಿದುಕೊಳ್ಳುವುದು. ಇದರಿಂದ ಅದು ಶಕ್ತಿಯಾಗಿ ಪರಿವರ್ತನೆ ಆಗುವುದಿಲ್ಲ. ಇದರಿಂದಾಗಿ ಹಸಿವು ಪದೇ ಪದೇ ಕಾಣಿಸುವುದು.

ಕಡಿಮೆ ಪ್ರೋಟೀನ್ ಇರುವ ಆಹಾರ
ಪ್ರೋಟೀನ್ ನಿಂದಾಗಿ ಹಾರ್ಮೋನುಗಳು ಬಿಡುಗಡೆ ಆಗುವುದು ಮತ್ತು ಇದರಿಂದ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ಹಸಿವನ್ನು ಹೆಚ್ಚಿಸುವಂತಹ ಹಾರ್ಮೋನ್‌ನ್ನು ಇದು ಕಡಿಮೆ ಮಾಡುವುದು. ಇದರಿಂದಾಗಿ ನೀವು ಹೆಚ್ಚು ಪ್ರೋಟೀನ್ ಸೇವನೆ ಮಾಡಿದರೆ ಆಗ ಪದೇ ಪದೇ ಹಸಿವಾಗುವುದು ತಪ್ಪುವುದು. ಪ್ರೋಟೀನ್ ಅಧಿಕವಾಗಿರುವ ಆಹಾರಗಳಾಗಿರುವಂತಹ ಮಾಂಸ, ಮೊಟ್ಟೆ, ಮೀನು, ಹಾಲು, ಮೊಸರು, ಧಾನ್ಯಗಳು ಇತ್ಯಾದಿಗಳನ್ನು ಸೇವಿಸಿ.

ಕಡಿಮೆ ಕಾರ್ಬ್ ಹೊಂದಿರುವ ಆಹಾರ ಕ್ರಮ
ಕಡಿಮೆ ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ಅಥವಾ ಸಂಸ್ಕರಿತ ಕಾರ್ಬೋಹೈಡ್ರೇಟ್ಸ್ ಸೇವನೆ ಮಾಡುವ ಪರಿಣಾಮ ಹಸಿವು ಹೆಚ್ಚಾಗುವುದು. ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ಗಳಲ್ಲಿ ಹೆಚ್ಚಿನ ಪ್ರೋಟೀನ್ ಇದೆ ಮತ್ತು ಇದನ್ನು ಜೀರ್ಣಿಸಲು ದೇಹಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದಾಗಿ ದೀರ್ಘಕಾಲದ ತನಕ ಹೊಟ್ಟೆಯು ತುಂಬಿದಂತೆ ಆಗುವುದು. ಇನ್ನೊಂದು ಬದಿಯಲ್ಲಿ ಸಂಸ್ಕರಿತ ಕಾರ್ಬ್ ಗಳು ಹೊಟ್ಟೆ ತುಂಬಿದ ಭಾವನೆ ಉಂಟು ಮಾಡುವುದಿಲ್ಲ.

ಅಧಿಕ ಸಕ್ಕರೆ ಆಹಾರ
ಅತಿಯಾಗಿ ಸಕ್ಕರೆ ಸೇವನೆ ಮಾಡುವ ಪರಿಣಾಮ ಫ್ರಾಕ್ಟೋಸ್ ನಿಂದಾಗಿ ಹಸಿವು ಹೆಚ್ಚಾಗುವುದು. ಯಾಕೆಂದರೆ ದೇಹವು ಹೆಚ್ಚಿನ ಪ್ರಮಾಣದಲ್ಲಿ ಗ್ರೇಲಿನ್ ಉತ್ಪತ್ತಿ ಮಾಡುವುದು ಮತ್ತು ಇದು ಮೆದುಳಿನ ಚಟುವಟಿಕೆ ಮೇಲೆ ಪರಿಣಾಮ ಬೀರುವುದು ಮತ್ತು ಇದು ನಿಮ್ಮ ದೇಹಕ್ಕೆ ಹಸಿವಾಗಿದೆ ಎನ್ನುವ ಸಂಕೇತ ನೀಡುವುದು.

ಕಡಿಮೆ ನಾರಿನಾಂಶದ ಆಹಾರ
ನಾರಿನಾಂಶವನ್ನು ಸರಿಯಾಗಿ ಸೇವನೆ ಮಾಡದೆ ಇದ್ದರೆ ಆಗ ಹಸಿವು ಹೆಚ್ಚಾಗುವುದು. ಅಧಿಕ ನಾರಿನಾಂಶವು ಇರುವಂತಹ ಆಹಾರ ಸೇವನೆ ಮಾಡಿದರೆ ಆಗ ದೀರ್ಘಕಾಲದ ತನಕ ಹೊಟ್ಟೆಯು ತುಂಬಿದಂತೆ ಇರುವುದು ಮತ್ತು ಹಸಿವು ನಿಯಂತ್ರಣದಲ್ಲಿರುವುದು. ನಿಮಗೆ ಅತಿಯಾಗಿ ಹಸಿವಾಗುತ್ತಲಿದ್ದರೆ ಆಗ ನಾರಿನಾಂಶವು ಕಡಿಮೆ ಆಗಿದೆ ಎಂದು ಹೇಳಬಹುದು.

ಸರಿಯಾಗಿ ನಿದ್ರಿಸದೆ ಇರುವುದು
ನಿದ್ರೆಯು ಕಡಿಮೆ ಆದರೆ ಆಗ ನೈಸರ್ಗಿಕವಾಗಿ ಅದು ದೇಹದಲ್ಲಿ ಹಾರ್ಮೋನುಗಳ ಮೇಲೆ ಪರಿಣಾಮ ಬೀರುವುದು. ಇದರಿಂದ ಕೆಲವೊಂದು ಸಂದರ್ಭದಲ್ಲಿ ಹಸಿವು ಹೆಚ್ಚಾಗುವುದು. ವರದಿಗಳು ಹೇಳುವ ಪ್ರಕಾರ ಪುರುಷರಲ್ಲಿ ನಿದ್ರೆಯು ಕಡಿಮೆ ಆದರೆ ಆಗ ಗ್ರೇಲಿನ್ ಮಟ್ಟವು ಹೆಚ್ಚಾಗುವುದು ಮತ್ತು ಇವರು ಸಾಮಾನ್ಯ ನಿದ್ರೆ ಮಾಡುವವರಿಗಿಂತ ಹೆಚ್ಚು ತಿನ್ನುವರು.

ನಿರ್ಜಲೀಕರಣ
ಊಟಕ್ಕೆ ಮೊದಲು ನೀರು ಕುಡಿದರೆ ಆಗ ಹೊಟ್ಟೆಯು ತುಂಬಿದಂತೆ ಆಗುವುದು. ಪದೇ ಪದೇ ಹಸಿವಾಗಲು ಕಾರಣವೆಂದರೆ ನೀವು ಸರಿಯಾಗಿ ನೀರು ಕುಡಿಯದೆ ಇರುವುದು. ಇದರಿಂದಾಗಿ ನಿರ್ಜಲೀಕರಣ ಉಂಟಾಗುವುದು. ದಿನಕ್ಕೆ ಎಂಟು ಲೋಟ ನೀರು ಕುಡಿಯಿರಿ ಮತ್ತು ನೀರಿನಾಂಶವು ಅಧಿಕವಾಗಿರುವಂತಹ ಕಲ್ಲಂಗಡಿ, ಕಿತ್ತಳೆ ಇತ್ಯಾದಿ ಹಣ್ಣುಗಳನ್ನು ತಿನ್ನಿ.

ಅತಿಯಾದ ವ್ಯಾಯಾಮ
ಅತಿಯಾಗಿ ವ್ಯಾಯಾಮ ಮಾಡಿದರೆ ಆಗ ಕ್ಯಾಳರಿ ಹೆಚ್ಚು ದಹಿಸುವುದು. ವರದಿಗಳು ಹೇಳುವ ಪ್ರಕಾರ ವ್ಯಾಯಾಮ ಮಾಡುವಂತಹ ಜನರ ಚಯಾಪಚಯವು ಹೆಚ್ಚು ವೇಗವಾಗಿ ಇರುವುದು. ಇದರಿಂದ ಕ್ಯಾಲರಿ ಹೆಚ್ಚು ದಹಿಸುವುದು. ವ್ಯಾಯಾಮದಿಂದಾಗಿ ನಿಮಗೆ ಅಧಿಕ ಹಸಿವಾಗುತ್ತಲಿದ್ದರೆ ಆಗ ದೇಹಕ್ಕೆ ಶಕ್ತಿ ನೀಡುವ ಆಹಾರ ತಿನ್ನಿ.

ಅತಿಯಾಗಿ ಆಲ್ಕೋಹಾಲ್ ಸೇವನೆ
ಆಲ್ಕೋಹಾಲ್ ನಲ್ಲಿ ಹಸಿವು ಉತ್ತೇಜಿಸುವ ಗುಣಗಳು ಇದೆ ಎಂದು ಹೇಳಲಾಗುತ್ತದೆ. ಆಲ್ಕೋಹಾಲ್ ಹಸಿವನ್ನು ಉಂಟು ಮಾಡುವ ಲೆಪ್ಟಿನ್ ಎನ್ನುವ ಹಾರ್ಮೋನ್ ನ್ನು ಕ್ರಿಯಾಶೀಲಗೊಳಿಸುವುದು. ಅದರಲ್ಲೂ ಊಟಕ್ಕೆ ಮೊದಲು ಅಥವಾ ಊಟದ ವೇಳೆ ಆಲ್ಕೋಹಾಲ್ ಸೇವಿಸಿದರೆ ಹೀಗೆ ಆಗುವುದು. ಆಲ್ಕೋಹಾಲ್ ಮಿತಗೊಳಿಸಿ ಅಥವಾ ಸಂಪೂರ್ಣವಾಗಿ ತ್ಯಜಿಸಿ.

ಥೈರಾಯ್ಡ್ ಅತಿಯಾಗಿ ಕ್ರಿಯಾತ್ಮಕವಾಗಿ ಇರುವುದು
ಅತಿಯಾಗಿ ಥೈರಾಯ್ಡ್ ಕ್ರಿಯಾತ್ಮಕವಾಗಿ ಇರುವುದು ಅಥವಾ ಹೈಪರ್ ಥೈರಾಯ್ಡಿಸಮ್ ನ ಮುಖ್ಯ ಲಕ್ಷಣವೆಂದರೆ ಹಸಿವು ಹೆಚ್ಚಾಗುವುದು. ಜರ್ನಲ್ ಆಫ್ ಥೈರಾಯ್ಡ್ ರಿಸರ್ಚ್ ನಲ್ಲಿ ಪ್ರಕಟಗೊಂಡಿರುವಂತಹ ವರದಿಗಳ ಪ್ರಕಾರ ಹೈಪರ್ ಥೈರಾಯ್ಡಿಸಮ್ ನಿಂದ ಶಕ್ತಿ ಮಟ್ಟವು ಹೆಚ್ಚು ವ್ಯಯವಾಗುವುದು ಮತ್ತು ಇದರಿಂದ ದೇಹದ ತೂಕ ಕೂಡ ಹೆಚ್ಚಳವಾಗುವುದು.

ಅತಿಯಾದ ಒತ್ತಡ
ಹಸಿವು ಹೆಚ್ಚಾಗಲು ಮತ್ತೊಂದು ಕಾರಣವೆಂದರೆ ಅದು ಒತ್ತಡ. ಅತಿಯಾದ ಒತ್ತಡದಿಂದಾಗಿ ಕಾರ್ಟಿಸಾಲ್ ಮಟ್ಟವು ಹೆಚ್ಚಾಗುವುದು ಮತ್ತು ಇದು ಹಸಿವು ಮತ್ತು ಆಹಾರದ ಬಯಕೆ ಹೆಚ್ಚು ಮಾಡುವುದು ಎಂದು ಹೇಳಲಾಗುತ್ತದೆ.



Click it and Unblock the Notifications