For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಅತಿಯಾಗಿ ಕಾಡುವ ಮೂತ್ರನಾಳದ ಸೋಂಕಿನ ಸಮಸ್ಯೆಗೆ ಕಾರಣಗಳು

|

ಬೇಸಿಗೆಯಲ್ಲಿ ನಾವು ಕುಡಿಯುವ ನೀರು ಹಾಗೂ ತಿನ್ನುವಂತಹ ಕೆಲವೊಂದು ಆಹಾರಗಳಿಂದಾಗಿ ಹಲವಾರು ರೀತಿಯ ಕಾಯಿಲೆಗಳು ಬರುವುದು. ಕಲುಷಿತ ನೀರು ಹಾಗೂ ಆಹಾರದಿಂದಾಗಿ ಬೇಸಿಗೆಯಲ್ಲಿ ಬರುವಂತಹ ಕಾಯಿಲೆಗಳು ತುಂಬಾ ಹೆಚ್ಚು ಎಂದು ಹೇಳಬಹುದು. ಬೇಸಿಗೆಯ ಬಿಸಿ ತಡೆಯಲು ಆಗದೆ ನಾವು ಬೀಚ್ ಗಳಿಗೆ ಹೋಗಿ ಸುತ್ತಾಡುತ್ತೇವೆ ಮತ್ತು ಅಲ್ಲಿ ಸಿಗುವ ಐಸ್ ಕ್ರೀಮ್ ತಿನ್ನುತ್ತೇವೆ. ಅದೇ ರೀತಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಹೋಗಿ ಈಜಾಡಿಕೊಂಡು ಬರುತ್ತೇವೆ. ನಮ್ಮ ಇಂತಹ ಅಭ್ಯಾಸಗಳಿಂದಾಗಿ ಕಾಯಿಲೆಗಳು ದೇಹವನ್ನು ಪ್ರವೇಶಿಸುವುದು. ಆದರೆ ಬೇಸಿಗೆಯಲ್ಲಿ ಮೂತ್ರನಾಳದ ಸೋಂಕಿನ ಸಮಸ್ಯೆ(ಯುಟಿಐ) ಕೂಡ ಅತಿಯಾಗಿ ಇರುವುದು.

ಜರ್ನಲ್ ಆಫ್ ಓಪನ್ ಫಾರಂ ಇನ್ ಫೆಕ್ಷನ್ ಡಿಸೀಸ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ, ಬೇಸಿಗೆಯಲ್ಲಿ ಯುಟಿಐ ಸಮಸ್ಯೆಗೆ ಸಿಲುಕಿ ಆಸ್ಪತ್ರೆಗೆ ದಾಖಲು ಆಗುವವರ ಸಂಖ್ಯೆಯು ಅತಿಯಾಗಿ ಇರುವುದು. ಇದು ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿ ಮೂತ್ರನಾಳದ ಸೋಂಕಿನ ಸಮಸ್ಯೆಯು ಕಂಡುಬರುವುದು. ಹದಿಹರೆಯದ ಮತ್ತು ವಯಸ್ಸಾದ ಮಹಿಳೆಯು ಯುಟಿಐ ಸಮಸ್ಯೆಗೆ ಸಿಲುಕುವರು ಎಂದು ಹೇಳಲಾಗುತ್ತದೆ.
ಆಂಟಿಬಯೋಟಿಕ್ ಪ್ರತಿರೋಧ ಒಡ್ಡುವಂತಹ ಬ್ಯಾಕ್ಟೀರಿಯಾದಿಂದ ಬರುವಂತಹ ಸೋಂಕು, ಅದರಲ್ಲೂ ಬೇಸಿಗೆ ಕಾಲದಲ್ಲಿ ಇದು ಹೆಚ್ಚಾಗಿರುವ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವವರ ಪ್ರಮಾಣವು ಅಧಿಕವಾಗಿದೆ ಎಂದು ಅಧ್ಯಯನವು ಕಂಡುಕೊಂಡಿದೆ.

 ಮೂತ್ರನಾಳದ ಸೋಂಕು ಎಂದರೆ ಏನು?

ಮೂತ್ರನಾಳದ ಸೋಂಕು ಎಂದರೆ ಏನು?

ಯುಟಿಐ ಎನ್ನುವುದು ಒಂದು ರೀತಿಯ ಸೋಂಕು ಆಗಿದ್ದು, ಇದು ಮೂತ್ರಕೋಶ, ಕಿಡ್ನಿ, ಗರ್ಭಕೋಶ ಮತ್ತು ಗರ್ಭನಾಳದ ಮೇಲೆ ಪರಿಣಾಮ ಬೀರುವುದು. ಎಸ್ಚಿಚಿಚಿ ಕೋಲಿ ಯುಟಿಐಗೆ ಕಾರಣವಾಗುವ ಜೀವಿಯಾಗಿದೆ. ಹೆಚ್ಚಾಗಿ ಮೂತ್ರನಾಳದ ಸೋಂಕು ಎನ್ನುವುದು ಕೆಳಗಿನ ಭಾಗದ ಮೇಲೆ ಪರಿಣಾಮ ಬೀರುವುದು. ಇದರಲ್ಲಿ ಮುಖ್ಯವಾಗಿ ಮೂತ್ರಕೋಶ ಮತ್ತು ಗರ್ಭಕೋಶದಲ್ಲಿ ಇದು ಕಾಣಿಸುವುದು. ಮೂತ್ರ ವಿಸರ್ಜನೆ ವೇಳೆ ಉರಿ, ಮೂತ್ರ ವಿಸರ್ಜನೆ ಮಾಡಬೇಕೆಂಬ ಒತ್ತಡ, ಮೋಡದಂತಹ ಮೂತ್ರ, ಮೂತ್ರದಲ್ಲಿ ತೀವ್ರ ವಾಸನೆ ಮತ್ತು ಶ್ರೋಣಿಯ ನೋವು. ಶೇ.50ರಿಂದ 60ರಷ್ಟು ಮಹಿಳೆಯರಿಗೆ ಜೀವನದ ಒಂದು ಹಂತದಲ್ಲಿ ಮೂತ್ರನಾಳದ ಸೋಂಕು ಕಾಣಿಸಿಕೊಳ್ಳುವುದು. ಋತುಬಂಧಕ್ಕೆ ಒಳಗಾಗಿರುವಂತಹ ಮಹಿಳೆಯರಿಗೆ ಯುಟಿಐ ಸಮಸ್ಯೆಯು ಕಾಡುವುದು ಹೆಚ್ಚು. ಯಾಕೆಂದರೆ ಇವರಲ್ಲಿ ಈಸ್ಟ್ರೋಜನ್ ಮಟ್ಟ ಕಡಿಮೆ ಇರುವುದು, ಶ್ರೋಣಿಯ ಸರಿತ, ಮಧುಮೇಹ, ಯೋನಿಯಲ್ಲಿ ಲ್ಯಾಕ್ಟೋಬಾಸಿಲ್ಲಿ ನಷ್ಟ, ಎಸೆಚಿಚಿಯಾ ಕೋಲಿ ಬ್ಯಾಕ್ಟೀರಿಯಾ ಈ ಭಾಗದಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವುದು. ಬೇಸಿಗೆಯಲ್ಲಿ ಯುಟಿಐ ಸಮಸ್ಯೆಯು ಹೆಚ್ಚಾಗಲು ಕಾರಣಗಳು ಏನು?

ನಿರ್ಜಲೀಕರಣ

ನಿರ್ಜಲೀಕರಣ

ನಿರ್ಜಲೀಕರಣವು ಬೇಸಿಗೆಯಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ ಮತ್ತು ಇದು ಈ ಋತುವಿನಲ್ಲಿ ಯುಟಿಐ ಸಮಸ್ಯೆಯನ್ನು ಹೆಚ್ಚು ಮಾಡಲು ಪ್ರಮುಖ ಕಾರಣ. ಹದಿಹರೆಯದವರು ಹೆಚ್ಚಿನ ಸಮಯವನ್ನು ಬಿಸಿಲಿಗೆ ಕಳೆಯುವ ಕಾರಣದಿಂದಾಗಿ ಅವರಲ್ಲಿ ನಿರ್ಜಲೀಕರಣದ ಸಮಸ್ಯೆಯು ಕಾಡುವುದು ಹೆಚ್ಚು. ಸಣ್ಣ ಗರ್ಭಕೋಶ ಇರುವಂತಹ ಮಹಿಳೆಯರಲ್ಲಿ ಈ ಬ್ಯಾಕ್ಟೀರಿಯಾವು ಯೋನಿ ಮತ್ತು ಗುದನಾಳದಿಂದ ಬೇಗನೆ ಅದು ಮೂತ್ರಕೋಶಕ್ಕೆ ತಲುಪುವುದು. ಹೆಚ್ಚು ನೀರು ಕುಡಿಯುವ ಮೂಲಕ ಮೂತ್ರನಾಳದಲ್ಲಿ ಇರುವಂತಹ ಬ್ಯಾಕ್ಟೀರಿಯಾವನ್ನು ಹೊರಗೆ ಹಾಕಬಹುದು. ಜಮಾ ಇಂಟರ್ನಲ್ ಮೆಡಿಸಿನ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ, ದಿನಕ್ಕೆ 1.5 ಲೀಟರ್ ನೀರು ಕುಡಿಯುವಂತಹ ಮಹಿಳೆಯರು ಯುಟಿಐ ಸಮಸ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡಿಕೊಳ್ಳಬಹುದು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದರೆ ಆಗ ಬ್ಯಾಕ್ಟೀರಿಯಾವು ಹೊರಗೆ ಎಸೆಯಲ್ಪಡುವಂತಹ ಸಾಧ್ಯತೆಯು ಹೆಚ್ಚಾಗುವುದು ಮತ್ತು ಯೋನಿಯಿಂದ ಇದು ಮೂತ್ರನಾಳಕ್ಕೆ ತಲುಪುವಂತಹ ಸಾಧ್ಯತೆಯು ಕಡಿಮೆ ಇರುವುದು. ಮೂತ್ರಕೋಶದ ಪದರಗಳ ಕೋಶಗಳಿಗೆ ಅಂಟಿಕೊಳ್ಳುವ ಬ್ಯಾಕ್ಟೀರಿಯಾದ ಸಂಖ್ಯೆಯು ಕಡಿಮೆ ಆಗುವುದು. ಸೂಚನೆ: ಕಾರ್ಬೊನೇಟೆಡ್ ಪಾನೀಯ, ಚಾ ಮತ್ತು ಕಾಫಿ ಸೇವನೆಯಿಂದಾಗಿ ನಿರ್ಜಲೀಕರಣ ಹೆಚ್ಚಾಗುವುದು.

ವಿಮಾನದಲ್ಲಿ ಪ್ರಯಾಣ

ವಿಮಾನದಲ್ಲಿ ಪ್ರಯಾಣ

ವಿಮಾನದಲ್ಲಿ ಪ್ರಯಾಣಿಸುವ ವೇಳೆ ಅಲ್ಲಿ ಕಾರ್ಬೊನೇಟೆಡ್ ಪಾನೀಯ ಮತ್ತು ಮದ್ಯಪಾನ ಮಾಡುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಇದರಿಂದ ನೀರನ್ನು ಕಡಿಮೆ ಕುಡಿಯುವರು. ಆಲ್ಕೋಹಾಲ್ ಮತ್ತು ಕಾರ್ಬೊನೇಟೆಡ್ ಪಾನೀಯದಲ್ಲಿ ಸಕ್ಕರೆ ಹಹೆಚ್ಚಾಗಿದೆ ಮತ್ತು ಇದು ಮೂತ್ರನಾಳದಲ್ಲಿನ ಪಿಎಚ್ ಸಮತೋಲನ ಹೆಚ್ಚು ಮಾಡುವುದು. ಇದರಿಂದ ಬ್ಯಾಕ್ಟೀರಿಯಾ ಸಂಖ್ಯೆಯು ಹೆಚ್ಚಾಗುವುದು. ವಿಮಾನದೊಳಗಡೆ ಪ್ರಯಾಣಿಸುವ ವೇಳೆ ನಿರ್ಜಲೀಕರಣವು ಉಂಟಾಗುವುದು. ಇದರಿಂದಾಗಿ ಯಾವಾಗಲೂ ವಿಮಾನ ಪ್ರಯಾಣದ ವೇಳೆ ನೀರು ಹೆಚ್ಚು ಕುಡಿಯಿರಿ.

ಲೈಂಗಿಕ ಚಟುವಟಿಕೆ

ಲೈಂಗಿಕ ಚಟುವಟಿಕೆ

ಲೈಂಗಿಕ ಚಟುವಟಿಕೆಯು ಮಹಿಳೆಯರಲ್ಲಿ ಯುಟಿಐ ಬರಲು ಮತ್ತೊಂದು ಕಾರಣವಾಗಿದೆ. ಅದರಲ್ಲೂ ಹದಿಹರೆಯದವರಲ್ಲಿ ಇದು ಹೆಚ್ಚಾಗಿರುವುದು. ಯುರೋಲಜಿ ಕೇರ್ ಫೌಂಡೇಶನ್ ಪ್ರಕಾರ, ಬೇಸಿಗೆ ಕಾಲದಲ್ಲಿ ಅಧಿಕ ಪ್ರಮಾಣದಲ್ಲಿ ಲೈಂಗಿಕ ಚಟುವಟಿಕೆಯು ನಡೆಯುವುದು. ಇದರಿಂದಾಗಿ ಮಹಿಳೆಯರಲ್ಲಿ ಯುಟಿಐ ಬರುವಂತಹ ಸಾಧ್ಯತೆಯು ಕೂಡ ಹೆಚ್ಚು. ಲೈಂಗಿಕ ಚಟುವಟಿಕೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಆಗ ಬ್ಯಾಕ್ಟೀರಿಯಾವನ್ನು ಹೊರಗೆ ಹಾಕಬಹುದು.

ಈಜುವುದು

ಈಜುವುದು

ಬೇಸಿಗೆ ಕಾಲದಲ್ಲಿ ಯುಟಿಐ ಹಬ್ಬಲು ಮತ್ತೊಂದು ಪ್ರಮುಖ ಕಾರಣವೆಂದರೆ ಅದು ಈಜು ಕೊಳಗಳು. ಈಜು ಕೊಳಗಳು ಬ್ಯಾಕ್ಟೀರಿಯಾ ಉತ್ಪಾದನೆಯ ಕೇಂದ್ರವಾಗಿದ್ದು, ಈ ನೀರಿನಲ್ಲಿ ಮೂತ್ರ, ಕಡಿಮೆ ಮಟ್ಟದ ಕ್ಲೋರಿನ್ ಮತ್ತು ಈಜಿದ ಬಳಿಕ ಇಲ್ಲಿ ಸ್ನಾನ ಮಾಡುವ ಕಾರಣದಿಂದಾಗಿ ಇಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗುವುದು ಎಂದು ಯುರಾಲಜಿ ಕೇರ್ ಫೌಂಡೇಶನ್ ಹೇಳಿದೆ.

ತೇವಾಂಶ ಮತ್ತು ಒದ್ದೆಯಾಗಿರುವಂತಹ ಜಾಗದಲ್ಲಿ ಬ್ಯಾಕ್ಟೀರಿಯಾವು ಬೇಗನೆ ಬೆಳೆಯುವುದು. ಇದರಿಂದ ಈಜಿದ ಬಳಿಕ ನೀವು ಬೇಗನೆ ಬಟ್ಟೆ ಬದಲಾಯಿಸಿ.

ಬೇಸಿಗೆಯಲ್ಲಿ ಯುಟಿಐ ತಡೆಯಲು ಕೆಲವು ಸಲಹೆಗಳು

ಬೇಸಿಗೆಯಲ್ಲಿ ಯುಟಿಐ ತಡೆಯಲು ಕೆಲವು ಸಲಹೆಗಳು

•ಯೋನಿ ಭಾಗದಲ್ಲಿ ಬ್ಯಾಕ್ಟೀರಿಯಾವು ನಿಲ್ಲದಂತೆ ಮಾಡಲು ಎದುರು ಹಾಗೂ ಹಿಂದಿನ ಭಾಗವನ್ನು ಸರಿಯಾಗಿ ಒರೆಸಿಕೊಳ್ಳಿ.

•ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಬ್ಯಾಕ್ಟೀರಿಯಾ ಹೊರಗೆ ಹೋಗುವುದು.

•ಈಜುಕೊಳದಿಂದ ಹೊರಗೆ ಬಂದ ಕೂಡಲೇ ನೀವು ಬಟ್ಟೆ ಬದಲಾಯಿಸಿಕೊಳ್ಳಿ.

•ನೀವು ನಿಯಮಿತವಾಗಿ ನೀರು ಕುಡಿಯುವ ಮೂಲಕ ಬೇಸಿಗೆಯಲ್ಲಿ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ.

English summary

Reasons Why UTI Cases Are High In Summer

The summer season is synonymous with beaches, ice cream, and swimming pools. But the summer season is also the peak season for urinary tract infections (UTIs). According to a study published in the Journal of Open Forum Infectious Diseases, there is an increase in hospitalizations for UTIs during the summer season and it's much higher in women than men. Mostly younger and elderly women are affected by UTI.
X
Desktop Bottom Promotion