For Quick Alerts
ALLOW NOTIFICATIONS  
For Daily Alerts

ಟೈಫಾಯ್ಡ್‌ ಜ್ವರ ಗುಣಪಡಿಸುವ ಪವರ್‌ಫುಲ್ ಮನೆಮದ್ದುಗಳು

|

ಟೈಪಾಯ್ಡ್ ಅಥವಾ ಟೈಪಾಯ್ಡ್ ಜ್ವರವು ಸಾಲ್ಮೊನೆಲ್ಲಾ ಟೈಫಿ ಎನ್ನುವ ಬ್ಯಾಕ್ಟೀರಿಯಾದಿಂದ ಬರುವುದು. ಕಲುಷಿತ ನೀರು ಅಥವಾ ಆಹಾರ ಸೇವನೆ ಮಾಡಿದ ವೇಳೆ ಈ ಜ್ವರವು ಕಾಡುವುದು. ಟೈಫಾಯ್ಡ್ ಬಂದರೆ ಆಗ ತೀವ್ರ ಜ್ವರ ಹಾಗೂ ಜಠರಕರುಳಿನ ಸಮಸ್ಯೆಯು ಕಾಣಿಸುವುದು. ದೇಹದಲ್ಲಿ ಬೊಕ್ಕೆ ಮೂಡುವುದರಿಂದ ಹಿಡಿದು ಹಸಿವು ಕಡಿಮೆ ಆಗುವ ತನಕ ಇದರ ಕೆಲವೊಂದು ಲಕ್ಷಣಗಳಾಗಿವೆ. ಕೆಲವೊಂದು ಜನರಿಗೆ ತೀವ್ರ ಜ್ವರದೊಂದಿಗೆ ಗುಲಾಬಿ ಬಣ್ಣದ ಕಲೆ ಹಾಗೂ ಚರ್ಮದಲ್ಲಿ ದದ್ದು ಕಾಣಿಸಬಹುದು. ಸ್ವಚ್ಛತೆ ಇಲ್ಲದೆ ಇರುವುದು ಮತ್ತು ಅಸ್ವಚ್ಛ ಪರಿಸರದಲ್ಲಿ ವಾಸಿಸುವುದು ಇದಕ್ಕೆ ಪ್ರಮುಖ ಕಾರಣಗಳು.

ಟೈಫಾಯ್ಡ್ ಬಂದರೆ ಆಗ 104 ಫ್ಯಾರ್ಹನ್ ಹೀಟ್ ನಷ್ಟು ಜ್ವರವು ಇರುವುದು. ಇದು ತಗ್ಗದೆ ಇದ್ದರೆ ಆಗ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಟೈಫಾಯ್ಡ್ ಗೆ ಇರುವಂತಹ ಇಂಜೆಕ್ಷನ್ ನಿಂದಾಗಿ ವರ್ಷಗಳ ಕಾಲ ಇದರ ಸೋಂಕು ಬರದಂತೆ ತಡೆಯುವುದು. ಆದರೆ ನಾವು ತುಂಬಾ ಆರೋಗ್ಯಕಾರಿ ಹಾಗೂ ಪೋಷಕಾಂಶಗಳು ಇರುವಂತಹ ಆಹಾರ ಸೇವನೆ ಮಾಡುವುದು ಕೂಡ ಅತೀ ಅಗತ್ಯವಾಗಿ ಇರುವುದು. ಇದರಿಂದ ಮತ್ತೆ ಸೋಂಕು ಬಾಧಿಸದು. ಟೈಫಾಯ್ಡ್ ನಿಂದ ಬಳಲುತ್ತಿರುವ ರೋಗಿಗಳಿಗೆ ಹಲವಾರು ರೀತಿಯ ಔಷಧಿಗಳು ಲಭ್ಯವಿದೆ. ಆದರೆ ಟೈಫಾಯ್ಡ್ ಗೆ ಕೆಲವೊಂದು ಮನೆಮದ್ದುಗಳು ಕೂಡ ತುಂಬಾ ಪರಿಣಾಮಕಾರಿ ಆಗಿ ಇರುವುದು. ಇಲ್ಲಿ ಟೈಫಾಯ್ಡ್ ಗೆ ಕೆಲವು ಮನೆಮದ್ದುಗಳನ್ನು ನೀಡಲಾಗಿದೆ. ಇದನ್ನು ನೀವು ತಿಳಿಯಿರಿ....

ಸಾಕಷ್ಟು ದ್ರವಾಹಾರ ಸೇವಿಸಿ

ಸಾಕಷ್ಟು ದ್ರವಾಹಾರ ಸೇವಿಸಿ

ಟೈಫಾಯ್ಡ್ ನಿಂದಾಗಿ ದೇಹವು ನಿರ್ಜಲೀಕರಣಕ್ಕೆ ಒಳಗಾಗುವುದು ಸಹಜವಾಗಿದೆ. ಇದರಿಂದ ರೋಗಿಗಳು ಯಾವಾಗಲೂ ದ್ರವಾಹಾರವನ್ನು ಸೇವಿಸುತ್ತಲೇ ಇರಬೇಕು. ದ್ರವಾಹಾರ ಎಂದರೆ ನೀರು, ತಾಜಾ ಹಣ್ಣಿನ ಜ್ಯೂಸ್, ಗಿಡಮೂಲಿಕೆ ಚಹಾ ಇತ್ಯಾದಿ. ನೀರನ್ನು ಜೀವಜಲವೆಂದು ಕರೆಯಲಾಗುತ್ತದೆ. ಇದು ನಿರ್ಜಲೀಕರಣ ವನ್ನು ತಡೆಯುವುದು ಮತ್ತು ಆರೋಗ್ಯಕಾರಿ ಮತ್ತು ಕಾಯಿಲೆ ಇಲ್ಲದೆ ಇರುವ ಜೀವನ ಸಾಗಿಸಲು ನೀರು ತುಂಬಾ ಪ್ರಾಮುಖ್ಯ ಹಾಗೂ ಅತೀ ಮುಖ್ಯವಾಗಿದೆ. ಟೈಫಾಯ್ಡ್ ನಿಂದಾಗಿ ಭೇದಿ ಕೂಡ ಉಂಟಾಗಬಹುದು. ಇದರಿಂದ ತಾಜಾ ಹಣ್ಣಿನ ಜ್ಯೂಸ್ ಸೇವಿಸಿ ವಿಷ ಹಾಗೂ ದೇಹದಲ್ಲಿ ಇರುವಂತಹ ಕಲ್ಮಶವನ್ನು ಹೊರಗೆ ಹಾಕಬೇಕು. ಪ್ರತಿರೋಧಕ ಶಕ್ತಿ ಹೆಚ್ಚಿಸಲು ಇದು ಬೇಕಾದ ಪೋಷಕಾಂಶಗಳನ್ನು ಕೂಡ ನೀಡುವುದು ಮತ್ತು ಬ್ಯಾಕ್ಟೀರಿಯಾದ ಸೋಂಕು ತಡೆಯುವುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ನಮಗೆ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದೇ ರೀತಿ ಇದು ಟೈಫಾಯ್ಡ್ ನ್ನು ನಿವಾರಣೆ ಮಾಡಲು ತುಂಬಾ ಲಾಭಕಾರಿ ಯಾಗಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಮತ್ತು ರಕ್ತವನ್ನು ಶುದ್ಧೀಕರಿಸುವ ಗುಣ ಇದೆ. ಇದು ಕಿಡ್ನಿಯು ಬೇಡದ ಕಲ್ಮಶವನ್ನು ಹೊರಗೆ ಹಾಕಲು ನೆರವಾಗುವುದು. ಇದರಿಂದ ದೇಹವು ಶುದ್ಧವಾಗುವುದು. ಅದಾಗ್ಯೂ, ಇದು ತುಂಬಾ ಪರಿಣಾಕಾರಿಯಾಗಿ ಇರಬೇಕಾದರೆ ಆಗ ಅರೆ ಬೇಯಿಸಿ ಅಥವಾ ಹಸಿಯಾಗಿ ತಿನ್ನಬೇಕು. ಗುಣಮುಖವಾಗುವ ಪ್ರಕ್ರಿಯೆಗೆ ವೇಗ ನೀಡುವುದು ಮತ್ತು ಪ್ರತಿರೋಧಕ ವ್ಯವಸ್ಥೆಗೆ ಬಲ ನೀಡುವ ಕಾರಣದಿಂದಾಗಿ ಇದು ತುಂಬಾ ಪರಿಣಾಮಕಾರಿ. ಟೈಫಾಯ್ಡ್ ಗೆ ಇದು ತುಂಬಾ ಪರಿಣಾಮಕಾರಿ ಮನೆಮದ್ದು.

Most Read: ಸಾಮಾನ್ಯ ಜ್ವರಕ್ಕೆಲ್ಲಾ ಮನೆಮದ್ದಿರುವಾಗ ವೈದ್ಯರ ಹಂಗೇಕೆ?

ತುಳಸಿ

ತುಳಸಿ

ಉರಿಯೂತವನ್ನು ಕಡಿಮೆ ಮಾಡಿಕೊಂಡು ಗಂಟು ನೋವಿಗೆ ಶಮನ ನೀಡುವಂತಹ ತುಳಸಿಯು ಟೈಫಾಯ್ಡ್ ಜ್ವರಕ್ಕೆ ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಇದನ್ನು ಹಲವಾರು ಆಯುರ್ವೇದ ಔಷಧಿಗಳಲ್ಲೂ ಬಳಕೆ ಮಾಡಲಾಗುತ್ತದೆ. ಮಲೇರಿಯಾದಂತಹ ಹಲವಾರು ಕಾಯಿಲೆಗಳಿಗೆ ಇದು ತುಂಬಾ ಪರಿಣಾಮಕಾರಿ. ಇದನ್ನು ಚಾಗೆ ಹಾಕಿ ಕುಡಿಯಬಹುದು ಅಥವಾ ಬಿಸಿ ನೀರಿಗೆ ಹಾಕಿ ಕುಡಿಯಬಹುದು ಅಥವಾ ಟೈಫಾಯ್ಡ್ ನಿಂದ ಬಳಲುತ್ತಿರುವ ವ್ಯಕ್ತಿ ಜೇನುತುಪ್ಪದ ಜತೆಗೆ ಸೇವಿಸಬಹುದು. ಇದನ್ನು ಶುಂಠಿ ರಸ ಅಥವಾ ಕರಿಮೆಣಸಿನ ಹುಡಿ ಜತೆಗೆ ಸೇರಿಸಿದರೆ ಆಗ ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ತುಳಸಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಟೈಫಾಯ್ಡ್ ನಿಂದ ಆಗಿರುವ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್ ಆಮ್ಲೀಯ ಗುಣ ಹೊಂದಿದೆ ಮತ್ತು ಟೈಫಾಯ್ಡ್ ಗೆ ಇದು ತುಂಬಾ ಪರಿಣಾಮಕಾರಿ ಮನೆಮದ್ದು. ಇದು ದೇಹದ ಉಷ್ಣತೆಯನ್ನು ಹೊರಗೆ ಹಾಕುವ ಕಾರಣದಿಂದಾಗಿ ಟೈಫಾಯ್ಡ್ ಇರುವ ವ್ಯಕ್ತಿಯಲ್ಲಿ ಜ್ವರ ಕಡಿಮೆ ಮಾಡುವುದು. ಅನಾರೋಗ್ಯಕ್ಕೆ ಒಳಗಾಗುವ ವ್ಯಕ್ತಿಗೆ ಬೇಕಾಗುವಂತಹ ಕೆಲವೊಂದು ಪ್ರಮುಖ ಖನಿಜಾಂಶಗಳು ಇದರಲ್ಲಿ ಇದೆ ಮತ್ತು ಭೇದಿಯಿಂದ ಕಳೆದುಕೊಳ್ಳುವಂತಹ ಪೋಷಕಾಂಶಗಳನ್ನು ಇದು ಸರಿ ದೂಗಿಸುವುದು.

Most Read:ಟೈಫಾಯ್ಡ್ ಡಯಟ್: ಈ ಸಮಯದಲ್ಲಿ ತಿನ್ನಬೇಕಾದ ಹಾಗೂ ತಿನ್ನಬಾರದ ಆಹಾರಗಳು

ತಂಪು ಶಾಖ

ತಂಪು ಶಾಖ

ಟೈಫಾಯ್ಡ್ ನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಕೆಲವು ದಿನಗಳ ಕಾಲ ಜ್ವರವು ಕಾಣಿಸಿಕೊಳ್ಳಬಹುದು. ಇದರಿಂದಾಗಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ತಂಪು ಶಾಖ ನೀಡುವ ಮೂಲಕವಾಗಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಭಹುದು. ತಂಪು ನೀರಿನಲ್ಲಿ ಮುಳುಗಿಸಿದ ಬಟ್ಟೆಯನ್ನು ಹಣೆ, ಪಾದ ಮತ್ತು ಕೈಗಳಿಗೆ ಇಡಬೇಕು. ಇದಕ್ಕೆ ಬಳಸುವಂತಹ ನೀರು ಅತಿಯಾಗಿ ತಂಪಾಗಿರಬಾರದು ಮತ್ತು ಬಟ್ಟೆಯನ್ನು ಬದಲಾಯಿಸುತ್ತಲಿದ್ದರೆ ಆಗ ಒಳ್ಳೆಯ ಫಲಿತಾಂಶ ಸಿಗುವುದು.

English summary

PowerFull Home Remedies For Typhoid Fever

Typhoid or typhoid fever is caused by salmonella typhi bacteria. This bacterial infection causes high fever and gastrointestinal problems. People usually get typhoid through the consumption of contaminated water or food. The symptoms can range from body ache to the loss of appetite. Some people might also get a skin rash or pink spots with the fever. Major reasons responsible for typhoid can be poor sanitation and unhygienic conditions.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X