For Quick Alerts
ALLOW NOTIFICATIONS  
For Daily Alerts

ನೀಲಗಿರಿ ಎಣ್ಣೆಯ ಪವರ್‌ ಫುಲ್ ಆರೋಗ್ಯಕಾರಿ ಪ್ರಯೋಜನಗಳು

|

ಹಲವಾರು ರೀತಿಯ ತೈಲಗಳನ್ನು ನಾವು ಬಳಸಿಕೊಳ್ಳುತ್ತೇವೆ. ಒಂದೊಂದು ರೀತಿಯ ತೈಲಗಳು ಹಲವಾರು ಲಾಭಗಳನ್ನು ನೀಡುವುದು. ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಆಲಿವ್ ತೈಲ ಇನ್ನು ಹಲವಾರು ಎಣ್ಣೆಗಳು ಇವೆ. ಇದರಲ್ಲಿ ನೀಲಗಿರಿ ಎಣ್ಣೆ ಕೂಡ ತನ್ನಲ್ಲಿರುವಂತಹ ಆರೋಗ್ಯ ಗುಣಗಳಿಂದಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ನೀಲಗಿರಿ ಸಾರಭೂತ ತೈಲವು ಆಸ್ಟ್ರೇಲಿಯಾದಲ್ಲಿ ಬೆಳೆಯುವ ನೀಲಗಿರಿ ಮರಗಳಿಂದ ತಯಾರಿಸಲ್ಪಡುತ್ತದೆ. ಇದು ಅತ್ಯಂತ ಜನಪ್ರಿಯ ಸಾರಭೂತ ತೈಲಗಳಲ್ಲಿ ಒಂದಾಗಿದೆ. ಈ ಮರದ ಎಲೆಗಳನ್ನು ಒಣಗಿಸಿ, ಅದನ್ನು ಪುಡಿ ಮಾಡಿ, ಬಳಿಕ ಬಟ್ಟಿ ಇಳಿಸಿಕೊಂಡು ಎಣ್ಣೆ ತೆಗೆಯಲಾಗುತ್ತದೆ.

ಇದು ತುಂಬಾ ಸಿಹಿ ಹಾಗೂ ಸುಗಂಧವನ್ನು ಹೊಂದಿದೆ. ನೀಲಗಿರಿ ಎಣ್ಣೆಯಲ್ಲಿ ಇರುವಂತಹ ಔಷಧೀಯ ಗುಣಗಳಿಂದಾಗಿ ಇದು ಇಂದು ವಿಶ್ವದೆಲ್ಲೆಡೆಯಲ್ಲಿ ತುಂಬಾ ಜನಪ್ರಿಯವಾಗಿದೆ. ನೀಲಗಿರಿ ಎಣ್ಣೆಯಲ್ಲಿ ಹಲವಾರು ರೀತಿಯ ನೀಲಗಿರಿಯಲ್ಲಿ ಸಿನೊಲ್ ಎನ್ನುವ ಒಂದು ಅಂಶವಿದೆ. ಈ ನೈಸರ್ಗಿಕದತ್ತ ಅಂಶವು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು, ನಂಜು ನಿರೋಧಕ, ಸೋಂಕು ನಿವಾರಕ ಹಾಗೂ ಕಫಹಾರಿ, ಆ್ಯಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ ಮತ್ತು ಚಿಕಿತ್ಸಕ ಗುಣ ಹೊಂದಿದೆ. ನೀಲಗಿರಿ ಎಣ್ಣೆಯನ್ನು ಹೆಚ್ಚಾಗಿ ಶೀತ ಮತ್ತು ಕಫ ಉಂಟಾದ ವೇಳೆ ಔಷಧಿಯಾಗಿ ಬಳಸಲಾಗುತ್ತದೆ. ಈ ಎಣ್ಣೆಯನ್ನು ಎದೆಗೆ ಉಜ್ಜಿಕೊಳ್ಳಬೇಕು. ಗಂಟಲು ನೋವು, ನೋವು ನಿವಾರಕಗಳಿಗೂ ಈ ಎಣ್ಣೆ ಬಳಕೆ ಮಾಡಲಾಗುತ್ತದೆ. ನೀಲಗಿರಿ ಎಣ್ಣೆಯನ್ನು ಬಳಸಲು ಇರುವ 10 ಕಾರಣಗಳನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ, ಮುಂದೆ ಓದಿ

ಶೀತ ಮತ್ತು ಕಫ ಕಟ್ಟುವಿಕೆ ನಿವಾರಣೆ

ಶೀತ ಮತ್ತು ಕಫ ಕಟ್ಟುವಿಕೆ ನಿವಾರಣೆ

ನೀಲಗಿರಿ ಎಣ್ಣೆಯಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಶೀತ ಮತ್ತು ಕಫ ಕಟ್ಟಿರುವುದನ್ನು ನಿವಾರಣೆ ಮಾಡಲು ನೆರವಾಗುವುದು. ಸಿನೋಲ್ ಎನ್ನುವಂತಹ ಅಂಶವು ನೀಲಗಿರಿ ಎಣ್ಣೆಯಲ್ಲಿ ಇರುವ ಕಾರಣದಿಂದಾಗಿ ಇದು ಸೂಕ್ಷ್ಮಾಣು ವಿರೋಧಿಯಾಗಿ ಕೆಲಸ ಮಾಡಿ, ಹಲವಾರು ರೀತಿಯಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ನಿವಾರಣೆ ಮಾಡುವುದು ಎಂದು ಅಲ್ಟರ್ನೇಟೀವ್ ಮೆಡಿಸಿನ್ ರಿವಿವ್ಯೂನಲ್ಲಿ 2010ರಲ್ಲಿ ಪ್ರಕಟ ಗೊಂಡಿರುವಂತಹ ಲೇಖನವು ಹೇಳಿವೆ. ನೀಲಗಿರಿ ಎಣ್ಣೆಯ ಸುಗಂಧವನ್ನು ಮೂಗಿನ ಮೂಲಕ ಎಳೆದುಕೊಳ್ಳುವ ಮೂಲಕ ಕಫವು ತೆಳುವಾಗುವುದು ಮತ್ತು ಕಟ್ಟಿದ ಮೂಗಿನ ಸಮಸ್ಯೆಯು ನಿವಾರಣೆಯಾಗುವುದು. ಇದರಿಂದ ಶೀತ ಮತ್ತು ಜ್ವರ ಕಡಿಮೆ ಆಗುವುದು. ಇದು ಪ್ರತಿರೋಧಕ ಉತ್ತೇಜಕ, ಉರಿಯೂತ ಶಮನಕಾರಿ, ಆ್ಯಂಟಿಆಕ್ಸಿಡೆಂಡ್, ನೋವು ನಿವಾರಕ ಮತ್ತು ಸ್ಪಾಸ್ಮೋಲಿಟಿಕ್ ಗುಣಗಳು ಇವೆ ಮತ್ತು ಇದು ಶೀತ ನಿವಾರಣೆ ಮಾಡುವುದು ಮತ್ತು ವಿವಿಧ ರೀತಿಯ ಲಕ್ಷಣಗಳನ್ನು ನಿವಾರಣೆ ಮಾಡುವುದು.

•10-15 ಹನಿ ನೀಲಗಿರಿ ಎಣ್ಣೆಯನ್ನು ಒಂದು ಬಿಸಿ ನೀರಿನ ಪಾತ್ರೆಗೆ ಹಾಕಿ. ತಲೆಗೆ ಟವೆಲ್ ಹಾಕಿಕೊಳ್ಳಿ ಮತ್ತು ಇದರ ಹಬೆಯನ್ನು 5ರಿಂದ 10 ನಿಮಿಷ ಕಾಲ ತೆಗೆದುಕೊಳ್ಳಿ. ದಿನದಲ್ಲಿ 2-3 ಸಲ ನೀವು ಹೀಗೆ ಮಾಡಬೇಕು.

•ರಾತ್ರಿ ವೇಳೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಡಿಫ್ಯೂಸರ್‌ನಲ್ಲಿ ಹಾಕಿಕೊಳ್ಳಿ ಮತ್ತು ಇದನ್ನು ರಾತ್ರಿ ಮೂಗು ಕಟ್ಟಿದಾಗ ಆದಾಗ ಎಳೆದುಕೊಂಡರೆ ಆಗ ನಿಮಗೆ ಸುಖವಾಗಿ ನಿದ್ರೆ ಮಾಡಲು ನೆರವಾಗುವುದು.

ಕೆಮ್ಮು ನಿವಾರಣೆ ಮಾಡುವುದು

ಕೆಮ್ಮು ನಿವಾರಣೆ ಮಾಡುವುದು

ನೀಲಗಿರಿ ಎಣ್ಣೆಯಲ್ಲಿ ಇರುವಂತಹ ಯೂಕಲಿಪ್ಟಾಲ್ ಎನ್ನುವ ಅಂಶವು ಕೆಮ್ಮು ನಿವಾರಣೆ ಮಾಡುವುದು. ಕೆಮ್ಮು ನಿವಾರಣೆ ಮಾಡುವಂತಹ ಹಲವಾರು ರೀತಿಯ ಔಷಧಿಗಳಲ್ಲಿ ನೀಲಗಿರಿ ಎಣ್ಣೆಯು ಒಂದು ಪ್ರಮುಖ ಅಂಶವನ್ನಾಗಿ ಬಳಸಲಾಗುತ್ತದೆ. ಉದಾಹರಣೆಗೆ ವಿಕ್ಸ್ ವಿಪೊರಬ್ ನಲ್ಲಿ 1.2 ಶೇಕಡದಷ್ಟು ನೀಲಗಿರಿ ಎಣ್ಣೆಯ ಅಂಶವಿದೆ. ಬೇರೆ ಬೇರೆ ರೀತಿಯ ಕೆಮ್ಮಿನ ಔಷಧಿಗಳಲ್ಲಿ ಇದರ ಪ್ರಮಾಣ ವ್ಯತ್ಯಾಸವಿರಬಹುದು. ಕೆಮ್ಮು ನಿವಾರಣೆ ಮಾಡುವ ಜತೆಗೆ ನೀಲಗಿರಿ ಎಣ್ಣೆಯು ಉಸಿರಾಟದ ಕೆಲವು ಸಮಸ್ಯೆಗಳನ್ನು ನಿವಾರಿಸುವುದು. ಇದರಲ್ಲಿ ಮುಖ್ಯವಾಗಿ ಅಸ್ತಮಾ, ಬ್ರಾಂಕೈಟಿಸ್, ದೀರ್ಘಕಾಲದ ಪ್ರತಿಬಂಧಕ ಶ್ವಾಸಕೋಶ ದ ರೋಗ (ಸಿಒಪಿಡಿ), ನ್ಯೂಮೋನಿಯಾ ಮತ್ತು ಕ್ಷಯರೋಗವನ್ನು ಇದು ಕಡಿಮೆ ಮಾಡುವುದು. ಚೀನಾದ ಜರ್ನಲ್ ಝೊಂಗ್ಗುಯು ಝೊಂಗ್ ಯೊ ಝ ಝಿಯಲ್ಲಿ 2004ರಲ್ಲಿ ಪ್ರಕಟಗೊಂಡಿರುವಂತಹ ವರದಿಯ ಪ್ರಕಾರ ನೀಲಗಿರಿ ಎಣ್ಣೆಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ದೀರ್ಘಕಾಲದ ಬ್ರಾಂಕೈಟಿಸ್ ನಿವಾರಣೆ ಮಾಡಲು ನೆರವಾಗುವುದು. ಇಲಿಗಳ ಮೇಲೆ ಇದನ್ನು ಪ್ರಯೋಗ ಮಾಡಿದಾಗ ಅದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಿ.

•ಬಿಸಿ ನೀರಿನ ಟಬ್ ಗೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಹಾಕಿ. ಟವೆಲ್ ಹಾಕಿಕೊಂಡು ನಿಮ್ಮ ಮುಖವನ್ನು ಮುಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಇದರ ಹಬೆ ಎಳೆದುಕೊಳ್ಳಿ. ದಿನದಲ್ಲಿ ಕೆಲವು ಸಲ ಹೀಗೆ ಮಾಡಿ.

•ಕೆಲವು ಹನಿ ನೀಲಗಿರಿ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಒಂದು ಚಮಚ ಪುದೀನಾ ಎಣ್ಣೆ, ತೆಂಗಿನ ಎಣ್ಣೆ ಹಾಕಿ ಮತ್ತು ದಿನದಲ್ಲಿ 2ರಿಂದ 3 ಸಲ ಇದನ್ನು ಎದೆಗೆ ಉಜ್ಜಿಕೊಳ್ಳಿ.

ಗಂಟು ಮತ್ತು ಸ್ನಾಯು ನೋವು ನಿವಾರಣೆ

ಗಂಟು ಮತ್ತು ಸ್ನಾಯು ನೋವು ನಿವಾರಣೆ

ನೀಲಗಿರಿ ಎಣ್ಣೆಯು ಗಂಟು ಮತ್ತು ಸ್ನಾಯು ನೋವಿಗೆ ಶಮನಕಾರಿಯಾಗುವುದು. ಇದರಲ್ಲಿ ಇರುವಂತಹ ನೋವು ನಿವಾರಕ ಮತ್ತು ಉರಿಯೂತ ಶಮನಕಾರಿ ಗುಣವು ಇದಕ್ಕೆ ಕಾರಣವಾಗಿದೆ. 1991ರಲ್ಲಿ ಅಮೆರಿಕದ ಜರ್ನಲ್ ಆಫ್ ಫಿಸಿಕಲ್ ಮೆಡಿಸಿನ್ ಆ್ಯಂಡ್ ರಿಹ್ಯಾಬಿಲೇಷನ್ ನಲ್ಲಿ ಪ್ರಕಟಗೊಂಡಿ ರುವಂತಹ ಅಧ್ಯಯನ ವರದಿಯೊಂದರ ಪ್ರಕಾರ ನೀಲಗಿರಿ ಎಣ್ಣೆಯು ತುಂಬಾ ಶಾರೀರಿಕ ಪ್ರತಿಕ್ರಿಯೆ ಉಂಟು ಮಾಡುವುದು ಮತ್ತು ಇದರಿಂದಾಗಿ ಇದು ನೋವು ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ಮತ್ತು ಅಭ್ಯಾಸಕ್ಕೆ ಮೊದಲು ಇದು ಅಥ್ಲೆಟಿಕ್ ಗಳಿಗೆ ತುಂಬಾ ಪರಿಣಾಮಕಾರಿ. ನೋವು ನಿವಾರಕ ಮತ್ತು ಉರಿಯೂತ ಶಮನಕಾರಿ ಔಷಧಿಗಳನ್ನು ನೀಲಗಿರಿ ಎಣ್ಣೆಯ ಅಂಶಗಳಿಂದ ತಯಾರಿಸಲಾಗುತ್ತದೆ ಎಂದು 2003ರಲ್ಲಿ ಜರ್ನಲ್ ಆಫ್ ಎಥ್ನೋಫಾರ್ಮಾಕಾಲಜಿಯಲ್ಲಿ ಬಿಡುಗಡೆಗೊಂಡಿರುವಂತಹ ವರದಿಯಲ್ಲಿ ಹೇಳಿದೆ.

*2 ಅಥವಾ 3 ಚಮಚ ನೀಲಗಿರಿ ಎಣ್ಣೆಯನ್ನು 2 ಚಮಚ ಬಿಸಿ ತೆಂಗಿನ ಎಣ್ಣೆಗೆ ಹಾಕಿ.

*ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಂಡು ಸುಮಾರು 5ರಿಂದ 10 ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ.

*ದಿನಾಲೂ 2ರಿಂದ 3 ಸಲ ಇದನ್ನು ಪುನಾರವರ್ತಿಸಿ.

ತಲೆನೋವು ಶಮನ

ತಲೆನೋವು ಶಮನ

ನೀಲಗಿರಿ ಎಣ್ಣೆಯು ತಲೆನೋವಿಗೆ ತುಂಬಾ ಪರಿಣಾಮಕಾರಿ ಯಾಗಿರುವುದು. ಸೈನಸ್ ನಿಂದಾಗಿ ಕಾಡುವಂತಹ ತಲೆನೋವಿಗೆ ಇದು ತುಂಬಾ ಒಳ್ಳೆಯದು. ಕೆಲವೊಂದು ಸಲ ಸೈನಸ್ ನ ಉರಿಯೂತದಿಂದ ತಲೆನೋವು ಕಾಡುವುದು. ಇದು ಕಟ್ಟಿರುವಂತಹ ಸೈನಸ್ ನ್ನು ಬಿಡುಗಡೆ ಮಾಡುವುದು ಮತ್ತು ತಲೆನೋವು ನಿವಾರಿಸುವುದು. ಇದು ತುಂಬಾ ಪರಿಣಾಮಕಾರಿ ನೋವು ನಿವಾರಕವಾಗಿ ಕೆಲಸ ಮಾಡುವುದು. 2013ರಲ್ಲಿ ಎವಿಡೆನ್ಸ್ ಬೇಸಡ್ ಕಾಂಪ್ಲಿಮೆಂಟರಿ ಆ್ಯಂಡ್ ಆಲ್ಟರ್ನೇಟಿವ್ ಮೆಡಿಸಿನ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ನೀಲಗಿರಿ ಎಣ್ಣೆಯನ್ನು ಮೂಗಿನ ಮೂಲಕ ಎಳೆದುಕೊಂಡರೆ ಆಗ ನೋವು ನಿವಾರಣೆ ಮತ್ತು ಉರಿಯೂತ ಕೂಡ ಶಮನವಾಗುವುದು.

•ಬಿಸಿ ನೀರಿಗೆ ಕೆಲವು ಹನಿ ನೀಲಗಿರಿ ಎಣ್ಣೆ ಹಾಕಿಕೊಳ್ಳಿ. ತಲೆಗೆ ಟವೆಲ್ ಹಾಕಿಕೊಂಡು ಮುಚ್ಚಿಕೊಳ್ಳಿ. ಈ ಹಬೆಯನ್ನು 5-10 ನಿಮಿಷ ಕಾಲ ಎಳೆದುಕೊಳ್ಳಿ. ದಿನದಲ್ಲಿ 2-3 ಸಲ ನೀವು ಹೀಗೆ ಮಾಡಿ.

•ಸ್ವಲ್ಪ ತೆಂಗಿನ ಎಣ್ಣೆ ಮತ್ತು ಕೆಲವು ಹನಿ ನೀಲಗಿರಿ ಎಣ್ಣೆ ಮಿಶ್ರಣ ಮಾಡಿಕೊಂಡು ಹಣೆಗೆ ಮಸಾಜ್ ಮಾಡಿದರೆ, ತಲೆನೋವು ನಿವಾರಣೆ ಆಗುವುದು.

ಬಾಯಿಯ ಆರೋಗ್ಯಕ್ಕೆ ಒಳ್ಳೆಯದು

ಬಾಯಿಯ ಆರೋಗ್ಯಕ್ಕೆ ಒಳ್ಳೆಯದು

ನೀಲಗಿರಿ ಎಣ್ಣೆಯು ಬಾಯಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವ ಇದು ದಂತಕುಳಿ, ಜಿಂಗೈವಿಟಿಸ್ ಮತ್ತು ದಂತಪದರ ನಿವಾರಣೆ ಮಾಡುವುದು. ಇದರಲ್ಲಿ ಇರುವಂತಹ ಸುಗಂಧವು ಉಸಿರಿನ ದುರ್ವಾಸನೆ ತಡೆಯುವುದು ಮತ್ತು ಬಾಯಿಯು ತಾಜಾವಾಗಿರಲು ನೆರವಾಗುವುದು. 2015ರಲ್ಲಿ ಜರ್ನಲ್ ಆಫ್ ದ ಇಂಟರ್ನ್ಯಾಶನಲ್ ಸೊಸೈಟಿ ಆಫ್ ಪ್ರೆವೆಂಟಿವ್ ಆ್ಯಂಡ್ ಕಮ್ಯೂನಿಟಿ ಡೆಂಟಿಸ್ಟ್ರಿಯಲ್ಲಿ ಪ್ರಕಟಗೊಂಡಿರುವಂತಹ ವರದಿಯ ಪ್ರಕಾರ ನೀಲಗಿರಿ ಎಣ್ಣೆಯು ಬಾಯಿಯ ಹಲವಾರು ಸಮಸ್ಯೆಗಳು ಬರದಂತೆ ತಡೆಯುವುದು ಅಥವಾ ಇದು ವಿವಿಧ ರೀತಿಯ ಕಾಯಿಲೆಗಳನ್ನು ನಿವಾರಣೆ ಮಾಡುವುದು. ಆದರೆ ಇದರ ಸುರಕ್ಷಿತ ಬಳಕೆ ಮತ್ತು ಪರಿಣಾಮ ಕಾರಿ ಫಲಿತಾಂಶಕ್ಕೆ ಪ್ರಯೋಗಾಲಯದಲ್ಲಿ ಇದರ ಪರೀಕ್ಷೆಯು ನಡೆಯಬೇಕಾಗಿದೆ.

*ಒಂದು ಲೋಟ ಬಿಸಿ ನೀರಿಗೆ ಎರಡು ಹನಿ ನೀಲಗಿರಿ ಎಣ್ಣೆ ಹಾಕಿ.

*ದಿನದಲ್ಲಿ ಒಂದು ಸಲ ನೀವು ಇದನ್ನು ಮೌತ್ ವಾಷ್ ಆಗಿ ಬಳಕೆ ಮಾಡಬಹುದು.

ಸೂಚನೆ: ಇದನ್ನು ಹೊಟ್ಟೆಗೆ ತೆಗೆದುಕೊಂಡ ವೇಳೆ ವಿಷಕಾರಿ ಆಗುವುದು. ಇದರಿಂದ ಮೌತ್ ವಾಷ್‌ನ್ನು ನೀವು ನುಂಗಬೇಡಿ.

ತಲೆ ಹೇನು ಕೊಲ್ಲುವುದು

ತಲೆ ಹೇನು ಕೊಲ್ಲುವುದು

ನೀಲಗಿರಿ ಎಣ್ಣೆಯು ತಲೆ ಹೇನು ಮತ್ತು ತುರಿಕೆ ನಿವಾರಣೆ ಮಾಡುವುದು. ನೈಸರ್ಗಿಕವಾಗಿ ಕೀಟನಾಶಕಾರಿ ಆಗಿರುವಂತಹ ನೀಲಗಿರಿ ಎಣ್ಣೆಯು ಹೇನು ಕೊಲ್ಲುವುದು ಮತ್ತು ಅದರ ಮೊಟ್ಟೆಗಳನ್ನು ಕೂಡ. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಹೇನು ಕೊಲ್ಲುವಂತಹ ಸ್ಪ್ರೇಗಳಲ್ಲಿ ನೀಲಗಿರಿ ಎಣ್ಣೆಯನ್ನು ಪ್ರಮುಖವಾಗಿ ಬಳಸಿಕೊಳ್ಳುವರು. 2017ರಲ್ಲಿ ಆಸ್ಟ್ರೇಲಿಯನ್ ಜರ್ನಲ್ ಆಫ್ ಡೆರ್ಮಟಾಲಜಿಯಲ್ಲಿ ಪ್ರಕಟ ಗೊಂಡಿರುವಂತಹ ವರದಿಯಲ್ಲಿ ಇದರ ಪರಿಣಾಮ, ಸುರಕ್ಷತೆ ಮತ್ತು ನೀಲಗಿರಿ ಎಣ್ಣೆಯನ್ನು ತಲೆಹೇನು ನಿವಾರಣೆಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂದು ಹೇಳಲಾಗಿದೆ. *ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಶಾಂಪೂ ಜತೆಗೆ ಹಾಕಿ ಕೊಂಡು ಮಸಾಜ್ ಮಾಡಿ. 30 ಮಿ.ಲೀ.ಶಾಂಪೂಗೆ 3 ಮಿ.ಲೀ ನೀಲಗಿರಿ ಎಣ್ಣೆ ಹಾಕಿಕೊಳ್ಳಿ. *ಈ ಶಾಂಪೂವನ್ನು ಕೂದಲಿಗೆ ಹಚ್ಚಿಕೊಳ್ಳಿ.

*10 ನಿಮಿಷ ಕಾಲ ಕೂದಲಿಗೆ ಶಾವರ್ ಕ್ಯಾಪ್ ಹಾಕಿ ಮುಚ್ಚಿಕೊಳ್ಳಿ.

*ಇದರ ಬಳಿಕ ಕ್ಯಾಪ್ ತೆಗೆಯಿರಿ. ಕೂದಲನ್ನು ತೊಳೆಯಿರಿ ಮತ್ತು ಟವೆಲ್ ನಿಂದ ಒರೆಸಿಕೊಳ್ಳಿ.

*ಇದರ ಬಳಿಕ ಬಾಚಣಿಗೆ ಬಳಸಿಕೊಂಡು ಸತ್ತ ಹೇನು ಮತ್ತು ಮೊಟ್ಟೆ ಬಾಚಿಕೊಳ್ಳಿ.

*ವಾರದಲ್ಲಿ 2-3 ಸಲ ಹೀಗೆ ಮಾಡಿ.

ಗಾಯ ಒಣಗಿಸುವುದು

ಗಾಯ ಒಣಗಿಸುವುದು

ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ನೀಲಗಿರಿ ಎಲೆಗಳನ್ನು ಬಳಸಿಕೊಂಡು ಗಾಯ ಗುಣಪಡಿಸಲಾಗುತ್ತದೆ ಮತ್ತು ಸೋಂಕು ತಡೆಯಲಾಗುತ್ತದೆ. ಸಣ್ಣ ಗಾಯಗಳಿಗೆ ಚಿಕಿತ್ಸೆಗೆ ಒಂದು ಬಾಟಲಿ ನೀಲಗಿರಿ ಎಣ್ಣೆ ಯನ್ನು ಜತೆಗೆ ಇಟ್ಟುಕೊಂಡರೆ ತುಂಬಾ ಒಳ್ಳೆಯದು, ತರುಚಿದ ಗಾಯ, ಚಾಕುವಿನ ಸಣ್ಣ ಇರಿತ ಇತ್ಯಾದಿಗಳಿಗೆ ಇದು ತುಂಬಾ ಪರಿಣಾಮಕಾರಿ. ನೀಲಗಿರಿ ಎಣ್ಣೆಯಿಂದಾಗಿ ಉರಿಯೂತ ನಿವಾರಣೆ ಮಾಡಬಹುದು ಮತ್ತು ಇದು ಗಾಯ ಶಮನವಾಗುವುದು. ಇದು ನೈಸರ್ಗಿಕ ನೋವು ನಿವಾರಕವಾಗಿಯೂ ಕೆಲಸ ಮಾಡುವುದು. •ಒಂದು ಚಮಚ ಹಸಿ, ಶುದ್ಧೀಕರಿಸದ ಆ್ಯಪಲ್ ಸೀಡರ್ ವಿನೇಗರ್ ಗೆ ಕೆಲವು ಹನಿ ನೀಲಗಿರಿ ಎಣ್ಣೆ ಹಾಕಿಕೊಳ್ಳಿ. ಇದನ್ನು ಬಾಧಿತ ಜಾಗಕ್ಕೆ ದಿನದಲ್ಲಿ ಕೆಲವು ಸಲ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ನೀವು 15 ನಿಮಿಷ ಬಳಿಕ ತೊಳೆಯಿರಿ.

•ನೀವು ಇದೇ ವೇಳೆ ನೀಲಗಿರಿ ಎಣ್ಣೆ ಅಂಶವಿರುವ ಕ್ರೀಮ್ ಬಳಸಿಕೊಳ್ಳಬಹುದು. ಇದು ಗಾಯ ನಿವಾರಣೆಗೆ ತುಂಬಾ ಪರಿಣಾಮಕಾರಿ.

ಬೊಕ್ಕೆ ನಿವಾರಣೆ ಮಾಡುವುದು

ಬೊಕ್ಕೆ ನಿವಾರಣೆ ಮಾಡುವುದು

ದೇಹದ ಯಾವುದೇ ಭಾಗದಲ್ಲಿ ಬೊಕ್ಕೆ ಮೂಡಿದ್ದರೆ ನೀವು ಇದನ್ನು ನೀಲಗಿರಿ ಎಣ್ಣೆಯಿಂದ ನಿವಾರಣೆ ಮಾಡಬಹುದು. ಇದರಲ್ಲಿ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಬೊಕ್ಕೆ ಉಂಟು ಮಾಡುವಂತಹ ಕೆಲವೊಂದು ಬ್ಯಾಕ್ಟೀರಿಯಾವನ್ನು ತಡೆಯುವುದು. ಇದರಿಂದ ನೀಲಗಿರಿ ಎಣ್ಣೆಯು ಮೂಲ ಸಮಸ್ಯೆ ನಿವಾರಣೆ ಮಾಡುವುದು. ಇದು ಬೇಗನೆ ಶಮನ ನೀಡುವುದು ಮತ್ತು ಸೋಂಕು ಹೆಚ್ಚದಂತೆ ತಡೆಯುವುದು.

•ಬಾಧಿತ ಜಾಗಕ್ಕೆ ನೀಲಗಿರಿ ಎಣ್ಣೆಯನ್ನು ಹಚ್ಚಿಕೊಳ್ಳಲು ಒಂದು ಹತ್ತಿ ಉಂಡೆ ಬಳಸಿಕೊಳ್ಳೀ. ಇದನ್ನು ಹಚ್ಚಿಕೊಂಡ ಬಳಿಕ 10 ನಿಮಿಷ ಕಾಲ ಅದು ಹಾಗೆ ಇರಲಿ. ಬಳಿಕ ಇದನ್ನು ಬಿಸಿ ನೀರು ಹಾಕಿ ತೊಳೆಯಿರಿ. ದಿನದಲ್ಲಿ 2-3 ಸಲ ಹೀಗೆ ಮಾಡಿ.

•ಇದೇ ವೇಳೆ 3-4 ಹನಿ ನೀಲಗಿರಿ ಎಣ್ಣೆ, ಒಂದು ಚಮಚ ಎಲ್ಮ್ ಹುಡಿ ಮತ್ತು ಒಂದು ಚಮಚ ನೀರು ಹಾಕಿ ಮಿಶ್ರಣ ಮಾಡಿ. ಇದನ್ನು ಪೇಸ್ಟ್ ಮಾಡಿಕೊಂಡು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ಇದು ಒಣಗಲಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರು ಹಾಕಿ ತೊಳೆಯಿರಿ. ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ತುರಿಕೆ ಉಂಟು ಮಾಡುವ ತಲೆಬುರುಡೆಗೆ ಪರಿಹಾರ

ತುರಿಕೆ ಉಂಟು ಮಾಡುವ ತಲೆಬುರುಡೆಗೆ ಪರಿಹಾರ

ತಲೆಬುರುಡೆಯ ತುರಿಕೆಗೆ ನೀಲಗಿರಿ ಎಣ್ಣೆಯು ತುಂಬಾ ಪರಿಣಾಮಕಾರಿ. ತಲೆಹೊಟ್ಟು ಮತ್ತು ಇತರ ಕೆಲವು ಸಮಸ್ಯೆಗಳಿಂದಾಗಿ ತಲೆಯಲ್ಲಿ ತುರಿಕೆ ಕಾಣಿಸಿಕೊಳ್ಳುವುದು. ನೀಲಗಿರಿ ಎಣ್ಣೆಯಲ್ಲಿ ಶಿಲೀಂಧ್ರ ವಿರೋಧಿ ಗುಣಗಳು ಸಮೃದ್ಧವಾಗಿದ್ದು, ಇದು ಸೋಂಕು ನಿವಾರಣೆ ಮಾಡುವುದು ಮತ್ತು ಕಲ್ಮಶವು ಅಲ್ಲಿ ಜಮೆಯಾಗದಂತೆ ತಡೆಯುವುದು.

•2 ಚಮಚ ಬಿಳಿ ವಿನೇಗರ್ ಮತ್ತು ಒಂದು ಚಮಚ ನೀಲಗಿರಿ ಎಣ್ಣೆಯನ್ನು 4 ಕಪ್ ನೀರಿಗೆ ಹಾಕಿ. ಇದನ್ನು ತಲೆಗೆ ಹಾಕಿಕೊಳ್ಳಿ ಮತ್ತು 5 ನಿಮಿಷ ಕಾಲ ಹಾಗೆ ಇರಲಿ. ಬಳಿಕ ಶಾಂಪೂ ಅಥವಾ ಕಂಡೀಷನರ್ ಹಾಕಿ ಕೂದಲು ತೊಳೆಯಿರಿ. ವಾರದಲ್ಲಿ 2-3 ಸಲ ಹೀಗೆ ಮಾಡಿ.

•4-5 ಹನಿ ನೀಲಗಿರಿ ಎಣ್ಣೆಯನ್ನು 3 ಚಮಚ ತೆಂಗಿನೆಣ್ಣೆ ಜತೆಗೆ ಮಿಶ್ರಣ ಮಾಡಿ. ಇದನ್ನು ಕೂದಲು ಮತ್ತು ತಲೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ. 30 ನಿಮಿಷ ಹಾಗೆ ಬಿಡಿ. ಇದರ ಬಳಿಕ ಕೂದಲು ತೊಳೆಯಿರಿ. ವಾರದಲ್ಲಿ 2-3 ಸಲ ಇದನ್ನು ಪುನರಾವರ್ತಿಸಿ.

ಕೀಟನಾಶಕವಾಗಿ ಬಳಸಿಕೊಳ್ಳಬಹುದು

ಕೀಟನಾಶಕವಾಗಿ ಬಳಸಿಕೊಳ್ಳಬಹುದು

ನೀಲಗಿರಿ ಎಣ್ಣೆಯನ್ನು ಹೆಚ್ಚಾಗಿ ಕೀಟನಾಶಕವಾಗಿ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ ಇರುವಂತಹ ಸುಗಂಧವು ನೈಸರ್ಗಿಕವಾಗಿ ಕೀಟನಾಶಕವಾಗಿ ಕಾರ್ಯನಿರ್ವಹಿಸುವುದು ಮತ್ತು ಮನೆಯಲ್ಲಿ ಸೊಳ್ಳೆ, ನೊಣ ಮತ್ತು ಇತರ ಕೀಟಗಳಿಂದ ಮುಕ್ತಿ ನೀಡುವುದು. ಇದನ್ನು ಬಳಸುವುದು ತುಂಬಾ ಸುರಕ್ಷಿತ ಮತ್ತು ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರದು.

•½ ಕಪ್ ಬಿಸಿ ನೀರಿನ್ನು ಸ್ಪ್ರೇ ಬಾಟಲಿಗೆ ಹಾಕಿ. ಇದಕ್ಕೆ 20-25 ಹನಿ ನೀಲಗಿರಿ ಎಣ್ಣೆ ಹಾಕಿ. ಬಾಟಲಿಯನ್ನು ಸರಿಯಾಗಿ ಅಲ್ಲಾಡಿಸಿ. ಕೀಟನಾಶಕ ಕೊಲ್ಲಲು ಇದನ್ನು ಬಳಸಿರಿ.

•ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಒಂದು ಡಿಫ್ಯೂಸರ್ ನಲ್ಲಿ ಹಾಕಿಡಿ ಮತ್ತು ಇದನ್ನು ಕೀಟಗಳು ಇರುವಂತಹ ಜಾಗದಲ್ಲಿ ಇದನ್ನು ಇಟ್ಟುಬಿಡಿ. ಸೂಚನೆ:

• ಬೇರೆಲ್ಲಾ ಸಾರಭೂತ ತೈಲದಂತೆ ಇದನ್ನು ಬಳಸುವ ಮೊದಲು ನೀವು ಚರ್ಮದ ಅಲರ್ಜಿ ಉಂಟು ಮಾಡುವುದೇ ಎಂದು ಪರೀಕ್ಷಿಸಿ. •6 ವರ್ಷ ಕೆಳಗಿನ ಮಕ್ಕಳಿಗೆ ನೀಲಗಿರಿ ಎಣ್ಣೆಯನ್ನು ಮತ್ತು ಅದರಿಂದ ಮಾಡಿದ ಉತ್ಪನ್ನಗಳನ್ನು ಬಳಸಬಾರದು.

•ನಿಮಗೆ ಕಿಡ್ನಿ ಸಮಸ್ಯೆ, ಯಕೃತ್ ಸಮಸ್ಯೆ ಅಥವಾ ರಕ್ತದೊತ್ತಡ ಕಡಿಮೆ ಆಗುವ ಸಮಸ್ಯೆಯಿದ್ದರೆ ಆಗ ವೈದ್ಯರ ಸಲಹೆ ಪಡೆದ ಬಳಿಕ ನೀವು ಇದನ್ನು ಬಳಕೆ ಮಾಡಿ.

•ನೀಲಗಿರಿ ಎಣ್ಣೆಯನ್ನು ಗರ್ಭಿಣಿಯರು ಮತ್ತು ಬಾಣಂತಿಯರು ಬಳಕೆ ಮಾಡಬಾರದು.

•ಬಾಯಿಯ ಸ್ವಚ್ಛತೆಗೆ ಇದನ್ನು ಬಳಕೆ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಇದು ಅತಿಯಾಗಿ ಬಳಕೆ ಮಾಡಿದರೆ ತುಂಬಾ ವಿಷಕಾರಿ.

English summary

Power full health benefits of eucalyptus oil

Eucalyptus essential oil, derived from the Australian native eucalyptus tree, is one of the most popular essential oils. The tree’s oval-shaped leaves are dried, crushed and distilled to release the essential oil, which is a colorless liquid with a strong sweet and woody scent. Eucalyptus oil is popular today worldwide, due to its medicinal properties.
Story first published: Wednesday, April 10, 2019, 17:49 [IST]
X
Desktop Bottom Promotion