For Quick Alerts
ALLOW NOTIFICATIONS  
For Daily Alerts

ಋತುಚಕ್ರದ ಸ್ವಚ್ಛತಾ ದಿನ 2019- ನೀವು ತಿಳಿಯಲೇಬೇಕಾದ ಸಂಗತಿಗಳು

|

ಹಿಂದೆ ಮಹಿಳೆಯರಿಗೆ ಋತುಚಕ್ರದ ವೇಳೆ ಸರಿಯಾದ ರೀತಿಯ ಸ್ವಚ್ಛತಾ ಕ್ರಮಗಳು ತಿಳಿದಿರಲಿಲ್ಲ. ಇದರಿಂದಾಗಿ ಹಲವಾರು ರೀತಿಯ ಸಮಸ್ಯೆಗಳು ಅವರನ್ನು ಕಾಡುತ್ತಲಿತ್ತು. ಆದರೆ ಇಂದಿನ ಮುಂದುವರಿದ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಸ್ವಚ್ಛತೆ ಬಗ್ಗೆ ಸರಿಯಾಗಿ ತಿಳಿದಿದೆ. ಅದರಲ್ಲೂ ಋತುಚಕ್ರದ ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬ ಮಹಿಳೆಯು ಚೆನ್ನಾಗಿ ತಿಳಿದುಕೊಂಡಿರುವರು. ಗ್ರಾಮೀಣ ಭಾರತದಲ್ಲಿ ಮಾತ್ರ ಇಂದಿಗೂ ಹೆಚ್ಚಿನ ಮಹಿಳೆಯರು ಋತುಚಕ್ರದ ವೇಳೆ ತುಂಬಾ ಹಿಂದಿನ ಕ್ರಮಗಳನ್ನೇ ಅನುಸರಿಸಿಕೊಂಡು ಹೋಗುತ್ತಲಿದ್ದಾರೆ. ಹೀಗಾಗಿ ಅವರಿಗೆ ತುಂಬಾ ಲೈಂಗಿಕ ರೋಗಗಳು ಕಾಡುವುದು ಇದೆ. ಋತುಚಕ್ರದ ಬಗ್ಗೆ ಮಾತನಾಡಲು ಹಾಗೂ ಅದರ ಬಗ್ಗೆ ಚರ್ಚಿಸಲು ಮಹಿಳೆಯರು ಹಿಂಜರಿಯುವರು. ಇದರಿಂದಾಗಿ ಅವರ ಜನನೇಂದ್ರಿಯದ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ಋತುಚಕ್ರದ ಬಗ್ಗೆ ಇಂದಿಗೂ ಮಹಿಳೆಯರು ಚರ್ಚೆ ಮಾಡಲು ಹಿಂಜರಿಯುವ ಕಾರಣದಿಂದಾಗಿ ಸರಿಯಾದ ಸ್ವಚ್ಛತೆಯು ಅವರಿಗೆ ಸಿಗುತ್ತಿಲ್ಲ. ಋತುಚಕ್ರದ ವೇಳೆ ಮಹಿಳೆಯರ ದೇಹಕ್ಕೆ ಅತೀ ಹೆಚ್ಚಿನ ಆರೈಕೆ ಮತ್ತು ಎಚ್ಚರಿಕೆ ಬೇಕಾಗಿದೆ. ಋತುಚಕ್ರದ ವೇಳೆ ಮಹಿಳೆಯರು ಸ್ವಚ್ಛತೆಯನ್ನು ಕಡೆಗಣಿಸಿದರೆ ಆಗ ಹಲವಾರು ಸಮಸ್ಯೆಗಳು ಕಾಡಬಹುದು.

Menstrual Hygiene Day

ಋತುಚಕ್ರದ ವೇಳೆ ಸ್ವಚ್ಛತೆ ಪಾಲಿಸದರೆ ಇದ್ದರೆ ಆಗ ಶಿಲೀಂಧ್ರ ಸೋಂಕು ಕಾಡಬಹುದು. ಋತುಚಕ್ರದ ವೇಳೆ ಕೆಟ್ಟ ರೀತಿಯ ಸ್ವಚ್ಛತೆಯಿಂದಾಗಿ ಕ್ಯಾಂಡಿಡಿಯಾಸಿಸ್ ಎನ್ನುವ ಶಿಲೀಂಧ್ರವು ಸೋಂಕು ಉಂಟು ಮಾಡುವುದು. ಸ್ಯಾನಿಟರಿ ನ್ಯಾಪ್ಕಿನಿ ತೆಗೆದ ಬಳಿಕ ಮತ್ತು ಅದನ್ನು ಹಾಕಿದ ಬಳಿಕ ಸರಿಯಾಗಿ ಕೈ ತೊಳೆಯಿರಿ. ನಿಯಮಿತವಾಗಿ ನೀವು ಸ್ಯಾನಿಟರಿ ನ್ಯಾಪ್ಕಿನ್ ಬದಲಾಯಿಸುತ್ತಾ ಇರಬೇಕು. ಋತುಚಕ್ರದ ವೇಳೆ ಸರಿಯಾದ ಸ್ವಚ್ಛತೆ ಪಾಲಿಸದೆ ಇದ್ದರೆ ಆಗ ವಿವಿಧ ರೀತಿಯ ಚರ್ಮದ ಸಮಸ್ಯೆಗಳು ಕಾಡುವುದು. ಮಹಿಳೆಯರು ಎದುರಿಸುವಂತಹ ಕೆಲವೊಂದು ಚರ್ಮದ ಸಮಸ್ಯೆಗಳೆಂದರೆ ಅದು ಚರ್ಮದ ಊತ, ದದ್ದು, ಕೆಂಪಾಗುವುದು, ಗಾಯ ಮತ್ತು ಬೊಕ್ಕೆಗಳು ಬರುವುದು.

ಸ್ವಚ್ಛತೆಯು ಸರಿಯಾಗಿ ಇಲ್ಲದೆ ಇದ್ದರೆ ಆಗ ಬ್ಯಾಕ್ಟೀರಿಯಾವು ಗರ್ಭಕೋಶಕ್ಕೆ ತಲುಪಬಹುದು. ಇದರಿಂದಾಗಿ ಮೂತ್ರನಾಳದ ಸೋಂಕಿನ ಸಮಸ್ಯೆ ಕಾಡಬಹುದು. ಇದು ಮುಂದುವರಿದು ಹಾಗೆ ಕಿಡ್ನಿ ವೈಫಲ್ಯವು ಉಂಟಾಗಬಹುದು. ಋತುಚಕ್ರದ ವೇಳೆ ಸರಿಯಾದ ಸ್ವಚ್ಛತೆ ಅನುಸರಿಸದೆ ಇದ್ದರೆ ಆಗ ಕಾಡುವಂತಹ ಅತೀ ದೊಡ್ಡ ಸಮಸ್ಯೆಯಿಂದರೆ ಗರ್ಭಕಂಠದ ಕ್ಯಾನ್ಸರ್. ಗರ್ಭಕಂಠದ ಕ್ಯಾನ್ಸರ್ ಗರ್ಭಕೋಶದ ತುಂಬಾ ಕೆಳಭಾಗದಲ್ಲಿ ಗಡ್ಡೆಗಳು ಬೆಳೆಯುವ ಮೂಲಕ ಉಂಟಾಗುವುದು. ಸ್ವಚ್ಛತೆಯು ಸರಿಯಾಗಿ ಇಲ್ಲದೆ ಇದ್ದರೆ ಆಗ ಗರ್ಭಕಂಠದ ಕ್ಯಾನ್ಸರ್ ನ ಅಪಾಯವು ಅತಿಯಾಗಿ ಇರುವುದು. ಸುಮಾರು 1,32,000 ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಂಡಿದೆ ಮತ್ತು ಇದಕ್ಕೆ ಪ್ರಮುಖ ಕಾರಣವೆಂದರೆ ಅದು ಸ್ವಚ್ಛತೆ ಸರಿಯಾಗಿ ಇಲ್ಲದೆ ಇರುವುದು. ಸ್ವಚ್ಛತೆ ಸರಿಯಾಗಿ ಇಲ್ಲದೆ ಇದ್ದರೆ ಆಗ ಯೋನಿಯ ಪಿಎಚ್ ಮಟ್ಟದ ಮೇಲೆ ಕೂಡ ಪರಿಣಾಮ ಬೀರುವುದು. ಇದು ಯೋನಿಯ ಪಿಎಚ್ ಮಟ್ಟವನ್ನು ವೃದ್ಧಿಸುವುದು. ಇದರಿಂದಾಗಿ ಅನಾರೋಗ್ಯಕರ ಬ್ಯಾಕ್ಟೀರಿಯಾ ಬೆಳವಣಿಗೆ ಆಗುವುದು.

ಕೆಲವು ಆರೋಗ್ಯಕರ ಕ್ರಮಗಳು

*ಋತುಚಕ್ರದ ವೇಳೆ ಸರಿಯಾದ ಸ್ವಚ್ಛತಾ ಕ್ರಮ ತೆಗೆದುಕೊಳ್ಳದೆ ಇದ್ದರೆ ಆಗ ಮಹಿಳೆಯರ ದೇಹದ ಮೇಲೆ ಅದು ಪರಿಣಾಮ ಬೀರುವುದು. ಇದರಿಂದಾಗಿ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಹೋಗುವುದು ತುಂಬಾ ಅಗತ್ಯವಾಗಿದೆ. ಋತುಚಕ್ರದ ವೇಳೆ ಯೋನಿಯ ಆರೋಗ್ಯಕ್ಕಾಗಿ ನೀವು ಪಾಲಿಸಬೇಕಾದ ಕೆಲವೊಂದು ವಿಧಾನಗಳು ಇಲ್ಲಿವೆ.
*4-6 ಗಂಟೆಗೊಮ್ಮೆ ಸ್ಯಾನಿಟರ್ ಪ್ಯಾಡ್ ನ್ನು ಬದಲಾಯಿಸುತ್ತಾ ಇರಬೇಕು. ನೀವು ಸ್ಯಾನಿಟರ್ ಪ್ಯಾಡ್ ಅಥವಾ ಟ್ಯಾಂಪಾನ್ ಬಳಸುತ್ತಿದ್ದರೂ ಇದನ್ನು ಬದಲಾಯಿಸಿಕೊಳ್ಳಿ. ಇದರಿಂದಾಗಿ ಬ್ಯಾಕ್ಟೀರಿಯಾ ಮತ್ತು ಸೋಂಕು ನೆಲೆಸುವುದನ್ನು ತಡೆಯಬಹುದು. ಮನೆಯಿಂದ ಹೊರಗಡೆ ಹೋಗುವ ವೇಳೆ ನೀವು ಒಂದು ನ್ಯಾಪ್ಕಿನ್ ಹಿಡಿದುಕೊಳ್ಳಿ. ಯಾಕೆಂದರೆ ಅಗತ್ಯವೆನಿಸಿದಾಗ ನೀವು ಇದನ್ನು ಬದಲಾಯಿಸಿಕೊಳ್ಳಬಹುದು.
*ಋತುಚಕ್ರದ ವೇಳೆ ನೀವು ಸರಿಯಾಗಿ ಸ್ವಚ್ಛತೆ ಕಾಪಾಡಿಕೊಳ್ಳಿ. ನಿಮ್ಮ ಯೋನಿಯ ಭಾಗವನ್ನು ಸರಿಯಾಗಿ ಸ್ವಚ್ಛತೆಯಿಂದ ಇರಿಸಿಕೊಳ್ಳಿ. *ಋತುಚಕ್ರದ ವೇಳೆ ನೀವು ಸ್ನಾನ ಮಾಡುವುದನ್ನು ತಪ್ಪಿಸಬಾರದು.
*ಸ್ಯಾನಿಟರಿಯನ್ನು ನೀವು ಬೇಕಾದಂತೆ ಬಳಸಿಕೊಳ್ಳುವಂತೆ ಇಟ್ಟುಕೊಳ್ಳಬೇಕು.
*ಸ್ಯಾನಿಟರಿಯನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕವಾಗಿ ನೀವು ಬ್ಯಾಕ್ಟೀರಿಯಾ ಹರಡದಂತೆ ತಡೆಯಬಹುದು. *ಸ್ಯಾನಿಟರಿಯನ್ನು ಸರಿಯಾದ ರೀತಿಯಲ್ಲಿ ಕಟ್ಟಿದ ಬಳಿಕ ಇದನ್ನು ವಿಲೇವಾರಿ ಮಾಡಿ.
*ಸ್ಯಾನಿಟರಿ ನ್ಯಾಪ್ಕಿನ್ ತೆಗೆಯುವ ಹಾಗೂ ಹಾಕುವ ವೇಳೆ ಸರಿಯಾಗಿ ಕೈಗಳನ್ನು ತೊಳೆಯಿರಿ.
*ಋತುಚಕ್ರ ಎನ್ನುವುದು ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದು ಪ್ರತೀ ತಿಂಗಳು ಮಹಿಳೆಗೆ ಆಗುವುದು. ಇದರ ಬಗ್ಗೆ ತುಂಬಾ ನಾಚಿಕೆ ಮತ್ತು *ಮುಜುಗರ ಪಟ್ಟುಕೊಳ್ಳಬೇಕಾಗಿಲ್ಲ. ಪ್ರತೀ ಮಹಿಳೆ ಕೂಡ ತನ್ನ ಜೀವನದಲ್ಲಿ ಇದನ್ನು ಎದುರಿಸಲೇಬೇಕು ಮತ್ತು ಋತುಚಕ್ರದ ಸಮಯದಲ್ಲಿ ನಿಮ್ಮ ಆರೈಕೆ ಮಾಡಿಕೊಳ್ಳಲು ಮರೆಯಬೇಡಿ.

English summary

Menstrual Hygiene Day 2019: Things You need to know

Menstrual hygiene is a big concern, especially in India. The presence of stigma around menstruation makes it difficult for women all across the country to maintain proper hygiene during their menstruation. Women feel shy or embarrassed talking about menstruation and often end up compromising their vaginal health. The taboos that revolve around menstruation act as a huge hindrance towards achieving proper menstrual hygiene.
X
Desktop Bottom Promotion