For Quick Alerts
ALLOW NOTIFICATIONS  
For Daily Alerts

ಪುರುಷರ ಲೈಂಗಿಕ ಆರೋಗ್ಯದ ಬಗ್ಗೆ ತಿಳಿಯಬೇಕಾದ ಸಂಗತಿಗಳು

|

ಜೀವನದಲ್ಲಿ ಆರೋಗ್ಯದೊಂದಿಗೆ ಲೈಂಗಿಕ ಆರೋಗ್ಯವು ಅತೀ ಅಗತ್ಯವಾಗಿರುವುದು. ಇದೆರಡರ ಸಮ್ಮಿಲನದಿಂದಾಗಿ ಜೀವನವು ಸುಗಮವಾಗಿ ಸಾಗುವುದು. ಆದರೆ ಲೈಂಗಿಕ ಜೀವನ ಸುಖಕರವಾಗಿರುವುದು ಎಂದು ಎಲ್ಲರ ವಿಚಾರದಲ್ಲೂ ಹೇಳಲು ಆಗದು. ಯಾಕೆಂದರೆ ಹಲವಾರು ರೀತಿಯ ಲೈಂಗಿಕ ಸಮಸ್ಯೆಗಳು ಪುರುಷರನ್ನು ಕಾಡುವುದು. ಇದರಿಂದ ಅವರಿಗೆ ಲೈಂಗಿಕ ತೃಪ್ತಿ ಕೈಗೆಟುಕದು. ಈ ಲೈಂಗಿಕ ಸಮಸ್ಯೆಗಳಲ್ಲಿ ಪ್ರಮುಖವಾಗಿ ನಿಮಿರು ದೌರ್ಬಲ್ಯ, ಸ್ಖಲನದ ಸಮಸ್ಯೆ, ಬಂಜೆತನ ಮತ್ತು ಇತರ ಕೆಲವೊಂದು ಸಮಸ್ಯೆಗಳು ಇದರಲ್ಲಿ ಒಳಗೊಂಡಿದೆ. ಈ ಎಲ್ಲಾ ಲೈಂಗಿಕ ಸಮಸ್ಯೆಗಳು ಪುರುಷರಲ್ಲಿ ಸಾಮಾನ್ಯವಾಗಿರುವಂತದ್ದಾಗಿದೆ ಮತ್ತು ಇದನ್ನು ತಗ್ಗಿಸಲು ಅಥವಾ ಸಂಪೂರ್ಣವಾಗಿ ನಿವಾರಣೆ ಮಾಡಲು ಹಲವಾರು ವೈದ್ಯಕೀಯ ಚಿಕಿತ್ಸೆಗಳು ಕೂಡ ಇದೆ.

ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲೈಂಗಿಕ ಸಮಸ್ಯೆ ಎಂದರೆ ಅದು ನಿಮಿರು ದೌರ್ಬಲ್ಯ. ನಿಮಿರು ದೌರ್ಬಲ್ಯವೆಂದರೆ, ಶಿಶ್ನವು ಉದ್ರೇಕಗೊಳ್ಳದೆ ಇರುವುದು ಅಥವಾ ಲೈಂಗಿಕ ಕ್ರಿಯೆಗೆ ಬೇಕಾದಷ್ಟು ನಿಮಿರುವಿಕೆ ಆಗದೆ ಇರುವುದು. ಅಮೆರಿಕಾದ 40ರ ಮೇಲ್ಪಟ್ಟ ವಯಸ್ಸಿನ ಶೇ.50ರಷ್ಟು ಪುರುಷರಲ್ಲಿ ಈ ಸಮಸ್ಯೆಯು ಕಾಡುತ್ತದೆ. ನಿಮಿರು ದೌರ್ಬಲ್ಯ ಸಮಸ್ಯೆಯು ಸಾಮಾನ್ಯವಾಗಿ ಅತಿಯಾದ ರಕ್ತದೊತ್ತಡ ಅಥವಾ ನರದ ಸಮಸ್ಯೆಯಿಂದಾಗಿ ಕಾಡುವುದು. ಇದು ವಯಸ್ಸಾಗುತ್ತಿರುವ ಪುರುಷರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು. ನಿಮಿರು ದೌರ್ಬಲ್ಯವು ಬೆಳೆಯಲು ಇನ್ನು ಕೆಲವು ಕಾರಣಗಳೆಂದರೆ ಅದು ಪ್ರಾಸ್ಟೇಟ್ ಕ್ಯಾನ್ಸರ್ ನ ಶಸ್ತ್ರಚಿಕಿತ್ಸೆ, ಧೂಮಪಾನ, ಕೆಲವೊಂದು ಔಷಧಿಗಳು ಮತ್ತು ಆಲ್ಕೋಹಾಲ್ ಹಾಗೂ ಮಾದಕ ದ್ರವ್ಯಗಳ ವ್ಯಸನ.

ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆಯಿಂದಲೂ ನಿಮಿರು ದೌರ್ಬಲ್ಯ ಕಾಣಿಸಬಹುದು

ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆಯಿಂದಲೂ ನಿಮಿರು ದೌರ್ಬಲ್ಯ ಕಾಣಿಸಬಹುದು

ಒತ್ತಡ, ಖಿನ್ನತೆ ಅಥವಾ ಇತರ ಕೆಲವೊಂದು ಭಾವನಾತ್ಮಕ ಸಮಸ್ಯೆಗಳಿಂದಾಗಿ ಪುರುಷರಲ್ಲಿ ನಿಮಿರು ದೌರ್ಬಲ್ಯವು ಕಾಣಿಸಿಕೊಳ್ಳುವುದು ಸಹಜವಾಗಿದೆ. ತಜ್ಞರು ಹೇಳುವ ಪ್ರಕಾರ ಪುರುಷರ ಜನನೇಂದ್ರೀಯವು ಸೊಂಟದ ಕೆಳಗಡೆ ಇರುವುದಲ್ಲ, ಇದು ಭುಜದ ಮೇಲೆ ಕುಳಿತುಕೊಂಡಿರುವುದು. ಯಾವುದೇ ಮಾನಸಿಕ ಸಮಸ್ಯೆಯಿಂದಾಗಿ ನಿಮಿರು ದೌರ್ಬಲ್ಯ ಸಮಸ್ಯೆಯು ಬಂದಿರುವುದು ಪತ್ತೆ ಆಗದೆ ಇದ್ದರೆ ಆಗ ವೈದ್ಯರು ರೋಗಿಯ ಮಾನಸಿಕ ಅಥವಾ ಬಾವನಾತ್ಮಕ ಆರೋಗ್ಯದ ಬಗ್ಗೆ ಹೆಚ್ಚು ಪರಿಶೀಲನೆ ನಡೆಸುವರು. ಪುರುಷರ ಆರೋಗ್ಯ ಕೇಂದ್ರದಲ್ಲಿ ಲೈಂಗಿಕ ತಜ್ಞರ ತಂಡವೊಂದು ರೋಗಿಗಳ ಮೇಲೆ ನಿಗಾವನ್ನು ಇಡುವುದು ಮತ್ತು ಈ ವೇಳೆ ರೋಗಿಗಳು ತುಂಬಾ ಆರಾಮವಾಗಿ, ಸುಶಿಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಇರುವಂತೆ ಮಾಡುವುದು. ಇದರಿಂದಾಗಿ ರೋಗಿಗಳು ತನ್ನ ಯಾವುದೇ ಮಾನಸಿಕ ಅಥವಾ ಭಾವನಾತ್ಮಕ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಇದು ನಿಮಿರು ದೌರ್ಬಲ್ಯ ಸಮಸ್ಯೆ ನಿವಾರಣೆ ಮಾಡಲು ನೆರವಾಗುವುದು.

Most Read: ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದ ಪರಿಹಾರಗಳು

ಮೂರನೇ ಒಂದು ಭಾಗದ ಬಂಜೆತನಕ್ಕೆ ಪುರುಷರ ಬಂಜೆತನ ಕಾರಣ!

ಮೂರನೇ ಒಂದು ಭಾಗದ ಬಂಜೆತನಕ್ಕೆ ಪುರುಷರ ಬಂಜೆತನ ಕಾರಣ!

ಪುರುಷರಲ್ಲಿ ಬಂಜೆತನ ಕಾಡಲು ಹಲವಾರು ರೀತಿಯ ಕಾರಣಗಳು ಇದೆ. ಇದರಲ್ಲಿ ಮುಖ್ಯವಾಗಿ ವೀರ್ಯದ ಉತ್ಪಾದನೆ, ಅಂಗರಚನಾ ವೈಪರೀತ್ಯಗಳು, ವೃಷಣ ಆಘಾತ ಮತ್ತು ಅನುವಂಶಿಕ ಅಥವಾ ಪ್ರತಿರಕ್ಷೆಯ ರೋಗಗಳು ಇದರಲ್ಲಿ ಕೆಲವು. ಬಂಜೆತನಕ್ಕೆ ನಿಖರ ಕಾರಣ ತಿಳಿಯಲು ದೈಹಿಕ ಪರಿಕ್ಷೆ, ಪ್ರಯೋಗಾಲಯದ ಪರಿಖ್ಷೆ, ವೀರ್ಯ ವಿಶ್ಲೇಷಣೆ ಮುಂತಾದ ಪರಿಕ್ಷೆಗಳನ್ನು ನಡೆಸಬೇಕಾಗುತ್ತದೆ. ಪುರುಷರ ಆರೋಗ್ಯ ಕೇಂದ್ರದಲ್ಲಿ ಇರುವಂತಹ ವೈದ್ಯರು, ಅದೇ ರೀತಿಯಾಗಿ ಬಿಡಬ್ಲ್ಯೂಎಚ್ ಸೆಂಟರ್ ಫಾರ್ ಇನ್ ಫರ್ಟಿಲಿಟಿ ಆ್ಯಂಡ್ ರಿಪ್ರಾಡಕ್ಟಿವ್ ಸರ್ಜರಿಯ ತಜ್ಞರು ಬಂಜೆತನಕ್ಕೆ ಕಾರಣ ಪತ್ತೆ ಮಾಡಿ, ಚಿಕಿತ್ಸೆ ನೀಡುವಲ್ಲಿ ತುಂಬಾ ನಿಪುಣರು.

ಸಣ್ಣ ಆಘಾತದಿಂದಾಗಿ ಪೆರೋನಿಸ್ ಕಾಯಿಲೆಯು ಬಂದಿರಬಹುದು

ಸಣ್ಣ ಆಘಾತದಿಂದಾಗಿ ಪೆರೋನಿಸ್ ಕಾಯಿಲೆಯು ಬಂದಿರಬಹುದು

ಅಂಗಾಂಶಗಳಿಗೆ ಯಾವುದೇ ಗಾಯವಾದಾಗ ಅಥವಾ ಶಿಶ್ನದ ನಿಮಿರುವಿಕೆಯ ಅಂಗಾಂಶದಲ್ಲಿ ಪದರವು ರಚನೆಯಾದ ವೇಳೆ ಪೆರೋನಿಸ್ ಕಾಯಿಲೆಯು ಕಾಣಿಸಿಕೊಳ್ಳುವುದು. ಪದರ ನಿರ್ಮಾಣಕ್ಕೆ ನಿಖರ ಕಾರಣ ಏನು ಎಂದು ಇದುವರೆಗೆ ತಿಳಿದುಬಂದಿಲ್ಲ. ಆದರೆ ಪೆರೋನಿಸ್ ಕಾಯಿಲೆಯಿಂದ ಬಳಲುತ್ತಾ ಇರುವಂತಹ ಪುರುಷರು ಸಣ್ಣ ಆಘಾತದಿಂದಾಗಿ ಅವರ ಶಿಶ್ನದಲ್ಲಿ ರಕ್ತಸ್ರಾವವು ಕಾಣಿಸುವುದು. ಈ ಪದರವು ಹಾನಿಕಾರ ಮತ್ತು ಕ್ಯಾನ್ಸರ್ ಕಾರಕವಲ್ಲದೆ ಇದ್ದರೂ ಇದು ಶಿಶ್ನವು ಮೇಲೆ ಮತ್ತು ಕೆಳಗಡೆ ಹೋಗುವ ಮೇಲೆ ಪರಿಣಾಮ ಬೀರುವುದು. ಪದರವು ಯಾವ ಭಾಗದಲ್ಲಿ ನಿರ್ಮಾಣವಾಗಿದೆ ಎನ್ನುವುದು ಕೂಡ ಇಲ್ಲಿ ಮುಖ್ಯವಾಗಿರುವುದು. ಪೆರೋನಿಸ್ ಕಾಯಿಲೆ ಇರುವಂತಹ ಪುರುಷರಲ್ಲಿ ನಿಮಿರುವಿಕೆ ವೇಳೆ ನೋವು ಕಾಣಿಸಿಕೊಳ್ಳುವುದು ಅಥವಾ ಒಳನುಗ್ಗುವಿಕೆಗೆ ತುಂಬಾ ಕಷ್ಟವಾಗಬಹುದು. ಪೆರೋನಿಸ್ ಕಾಯಿಲೆ ಪತ್ತೆ ಮಾಡಲು ವೈದ್ಯರು ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಿಕೊಳ್ಳಲು ಹೇಳುವರು. ಇದರಿಂದ ನಿಮಿರು ದೌರ್ಬಲ್ಯಕ್ಕೆ ಸರಿಯಾದ ಕಾರಣ ತಿಳಿದುಬರುವುದು. ಹೆಚ್ಚಿನ ಪ್ರಕರಣಗಳಲ್ಲಿ, ಪೆರೋನಿಸ್ ಕಾಣಿಸಿಕೊಂಡ ವ್ಯಕ್ತಿಯಲ್ಲಿ ಸ್ವಲ್ಪ ಮಟ್ಟಿನ ನೋವು ಕಾಣಿಸುವುದು ಮತ್ತು ಇದು 6-12 ತಿಂಗಳಲ್ಲಿ ನಿವಾರಣೆ ಆಗುವುದು. ಇದರ ಬಳಿಕ ರೋಗಿಯು ತನ್ನ ಆರೋಗ್ಯಕರ ಲೈಂಗಿಕ ಜೀವನದಲ್ಲಿ ತೊಡಗಿಕೊಳ್ಳಬಹುದು. ಕ್ರಮಬದ್ಧವಾಗಿರುವಂತಹ ಚಿಕಿತ್ಸೆಯಿಂದಾಗಿ ಪದರವನ್ನು ನಿವಾರಣೆ ಮಾಡಬಹುದು.

Most Read: ಪುರುಷರಿಗಿಂತ ಮಹಿಳೆಯರಿಗೆಯೇ ಸೆಕ್ಸ್‌ನಲ್ಲಿ ಆಸಕ್ತಿ ಜಾಸ್ತಿಯಂತೆ! ಇದಕ್ಕೆ ಕಾರಣಗಳು ಇಲ್ಲಿದೆ ನೋಡಿ

ಸಂತಾನಹರಣವು ಪರಿಣಾಮಕಾರಿಯಾಗಿದೆ. ಆದರೆ ಇದನ್ನು ಶಾಶ್ವತವಾಗಿ ಸಂತಾನ ನಿಯತ್ರಣವೆಂದು ಪರಿಗಣಿಸಬೇಕು

ಸಂತಾನಹರಣವು ಪರಿಣಾಮಕಾರಿಯಾಗಿದೆ. ಆದರೆ ಇದನ್ನು ಶಾಶ್ವತವಾಗಿ ಸಂತಾನ ನಿಯತ್ರಣವೆಂದು ಪರಿಗಣಿಸಬೇಕು

ಸಂತಾನಹರಣ ಚಿಕಿತ್ಸೆಯು ತುಂಬಾ ಸರಳ, ಕಡಿಮೆ ಶಸ್ತ್ರಚಿಕಿತ್ಸೆ ಕ್ರಮವನ್ನು ಹೊಂದಿರುವುದು. ಇದನ್ನು ಗರ್ಭಧಾರಣೆ ತಡೆಯಲು ಪುರುಷರು ಶಾಶ್ವತವಾಗಿ ಮಾಡಿಸಿಕೊಳ್ಳುವ ಚಿಕಿತ್ಸೆಯಾಗಿದೆ. 30 ನಿಮಿಷಗಳ ಶಸ್ತ್ರಚಿಕಿತ್ಸೆ ವೇಳೆ ತಜ್ಞ ವೈದ್ಯರು ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಗೆ ಹೋಗುವಂತಹ ವೀರ್ಯದ ನಾಳವನ್ನು ತುಂಡು ಮಾಡುವರು. ಸಂತಾಹರಣ ಚಿಕಿತ್ಸೆಯಿಂದಾಗಿ ಪುರುಷರ ಆರೋಗ್ಯದ ಮೇಲೆ ಯಾವುದೇ ಪರಿಣಾಮವಾಗದು. ಈ ಚಿಕಿತ್ಸೆಯು ಗರ್ಭಧಾರಣೆ ತಡೆಯಲು ತುಂಬಾ ಪರಿಣಾಮಕಾರಿ ಆಗಿರುವುದು. ಸಂತಾನಹರಣಕ್ಕೆ ಇದು ಶಾಶ್ವತ ಚಿಕಿತ್ಸೆಯಾಗಿದೆ. ಯಾಕೆಂದರೆ ಇದನ್ನು ಅಷ್ಟು ಸುಲಭವಾಗಿ ಮತ್ತೆ ಜೋಡಿಸಲು ಸಾಧ್ಯವಾಗದು.

ಕೆಳಗಿನ ಭಾಗದಲ್ಲಿ ಇರುವಂತಹ ಸಮಸ್ಯೆಯು ಬೇರೆ ಅನಾರೋಗ್ಯದ ಲಕ್ಷಣಗಳು ಆಗಿರಬಹುದು

ಕೆಳಗಿನ ಭಾಗದಲ್ಲಿ ಇರುವಂತಹ ಸಮಸ್ಯೆಯು ಬೇರೆ ಅನಾರೋಗ್ಯದ ಲಕ್ಷಣಗಳು ಆಗಿರಬಹುದು

ಶಿಶ್ನಗಳು ನಿಮಗೆ ಏನೋ ಹೇಳಲು ಬಯಸುತ್ತಿದೆ. ಅದನ್ನು ನೀವು ಕೇಳಬೇಕು. ನೀವು ಇದನ್ನು ಸ್ವೀಕರಿಸಲು ತಯಾರಾಗಿ ಇದ್ದೀರೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಆದರೆ ತಿಂಗಳಿಗೆ ಎರಡು ಸಲಕ್ಕಿಂತ ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದೆ ಇದ್ದರೆ ಆಗ ನಿಮ್ಮ ಹೃದಯದಲ್ಲಿ ಏನೋ ಸಮಸ್ಯೆಯಿದೆ ಎಂದು ಆಸ್ಟ್ರಿಯಾದ ಅಧ್ಯಯನವೊಂದು ಹೇಳಿದೆ. ಈ ಅಧ್ಯಯನದ ಪ್ರಕಾರ 10 ವರ್ಷದ ಒಳಗಡೆ ಹೃದಯದ ಕಾಯಿಲೆಯು ಕಾಡುವಂತಹ ಸಾಧ್ಯತೆಯು ಶೇ.65ರಷ್ಟು ಅಧಿಕವಾಗಿರುವುದು. ಇದು ನಿಮಿರು ದೌರ್ಬಲ್ಯ ಇಲ್ಲದೆ ಇರುವ ಪುರುಷರಕ್ಕಿಂತ ನಿಮಿರು ದೌರ್ಬಲ್ಯವು ಮಧ್ಯಮ ಹಾಗೂ ತೀವ್ರವಾಗಿ ಇರುವಂತಹ ವ್ಯಕ್ತಿಗಳಲ್ಲಿ ಹೆಚ್ಚಾಗಿ ಇರುವುದು. ಶಿಶ್ನದಲ್ಲಿ ಇರುವಂತಹ ರಕ್ತನಾಳಗಳು ತುಂಬಾ ಸಣ್ಣದಾಗಿರುವುದ ಮತ್ತು ಅದು ಹೃದಯ ಮತ್ತು ಮೆದುಳಿಗಿಂತ ಮೊದಲೇ ಹಿಗ್ಗಲು ಆರಂಭಿಸುವುದು ಎಂದು ವೈದ್ಯರು ಹೇಳುತ್ತಾರೆ. ನಿಮಿರು ದೌರ್ಬಲ್ಯವಿದ್ದರೆ ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿಯಾಗಿ.

ಲೈಂಗಿಕ ಸಮಸ್ಯೆ ಅಥವಾ ಯಾವುದೇ ಲೈಂಗಿಕ ಅಸಮರ್ಥತೆ

ಲೈಂಗಿಕ ಸಮಸ್ಯೆ ಅಥವಾ ಯಾವುದೇ ಲೈಂಗಿಕ ಅಸಮರ್ಥತೆ

ಲೈಂಗಿಕ ಸಮಸ್ಯೆ ಅಥವಾ ಯಾವುದೇ ಲೈಂಗಿಕ ಅಸಮರ್ಥತೆಯಿಂದಾಗಿ ಪುರುಷರಿಗೆ ಅಥವಾ ದಂಪತಿಗೆ ಲೈಂಗಿಕ ಜೀವನವನ್ನು ಸರಿಯಾಗಿ ಆನಂದಿಸಲು ಸಾಧ್ಯವಾಗದೆ ಇರಬಹುದು. ಇದರಿಂದ ಅವರಿಗೆ ಲೈಂಗಿಕ ತೃಪ್ತಿಯು ಸಿಗದೆ ಇರುವುದು. ಲೈಂಗಿಕ ಪ್ರತಿಕ್ರಿಯೆ ಆವರ್ತನ ಎನ್ನುವುದು ನಾಲ್ಕು ಹಂತಗಳನ್ನು ಒಳಗೊಂಡಿದೆ. ಇದರಲ್ಲಿ ಮೊದಲು ಉತ್ಸಾಹ, ಪ್ರಸ್ಥಭೂಮಿ, ಪರಾಕಾಷ್ಠೆ ಮತ್ತು ನಿರ್ಣಯ. ಸಂಶೋಧನೆಗಳು ಹೇಳುವ ಪ್ರಕಾರವಾಗಿ ಲೈಂಗಿಕ ಅಸಮರ್ಥತೆಯು ಸಾಮಾನ್ಯ(ಶೇ.43ರಷ್ಟು ಮಹಿಳೆಯರು ಮತ್ತು ಶೇ.31ರಷ್ಟು ಪುರುಷರು ತಮಗೆ ತೊಂದರೆ ಇದೆ ಎಂದು ಹೇಳಿರುವರು). ಆದರೆ ಈ ಬಗ್ಗೆ ಯಾರು ಕೂಡ ಮುಕ್ತವಾಗಿ ಚರ್ಚೆ ಮಾಡಲು ಬಯಸುವುದಿಲ್ಲ. ಒಳ್ಳೆಯ ಸುದ್ದಿಯೆಂದರೆ, ಹೆಚ್ಚಿನ ಲೈಂಗಿಕ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಇದರಿಂದಾಗಿ ನಿಮ್ಮ ಸಮಸ್ಯೆಯನ್ನು ಸಂಗಾತಿ ಅಥವಾ ವೈದ್ಯರೊಂದಿಗೆ ಹಂಚಿಕೊಳ್ಳುವುದು ಅತೀ ಅಗತ್ಯವಾಗಿರುವುದು.

English summary

Men’s Sexual Health:Things You Need to Know

There are a number of sexual health issues among men that can interfere with a satisfying sex life, including erectile dysfunction, problems with ejaculation, infertility and others. The following sexual health problems are common among men and are routinely evaluated and treated at the Men’s Health Center at Brigham and Women’s Faulkner Hospital, which was recently established to meet a growing demand to address male reproduction and sexual health concerns.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more