For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವುದರಿಂದ ಇಂತಹ 10 ಕಾಯಿಲೆಗಳು ನಿವಾರಣೆಯಾಗುವುದು!

|

ಲೈಂಗಿಕ ಕ್ರಿಯೆ ಎನ್ನುವುದು ಕೇವಲ ದೈಹಿಕ ಸುಖ ಮಾತ್ರವಲ್ಲದೆ, ಮಾನಸಿಕವಾಗಿಯು ಇದು ಮನುಷ್ಯನನ್ನು ಬಲಪಡಿಸುವುದು ಎಂದು ಹಲವಾರು ಸಂಶೋಧನಾ ವರದಿಗಳು ಹೇಳಿವೆ. ಲೈಂಗಿಕ ಕ್ರಿಯೆಯಿಂದ ಆರೋಗ್ಯ ಲಾಭಗಳು ಸಿಗುವುದು ಎಂದು ನಮಗೆಲ್ಲರಿಗೂ ತಿಳಿದಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಲೈಂಗಿಕ ಕ್ರಿಯೆಯಿಂದ ಲಭ್ಯವಾಗುವುದು. ಆದರೆ ಕೆಲವೊಂದು ರೋಗಗಳನ್ನು ನಿವಾರಣೆ ಮಾಡಲು ಲೈಂಗಿಕ ಕ್ರಿಯೆಯು ನಿಮಗೆ ನೆರವಾಗಲಿದೆ ಎಂದು ತಿಳಿದಿದೆಯಾ? ಈ ಲೇಖನದಲ್ಲಿ ಲೈಂಗಿಕ ಕ್ರಿಯೆಯಿಂದಾಗಿ ನಿವಾರಣೆ ಮಾಡಬಲ್ಲ 10 ರೋಗಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಪ್ರತಿನಿತ್ಯವು ಸೆಕ್ಸ್ ನಡೆಸುವ ಕಾರಣದಿಂದಾಗಿ ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನೆರವಾಗುವುದು. ಇದು ರಕ್ತ ಸಂಚಾರ ಸುಗಮಗೊಳಿಸುವುದು ಮತ್ತು ಪ್ರತಿರೋಧಕ ವ್ಯವಸ್ಥೆಯನ್ನು ಇದರಿಂದಾಗಿ ದೇಹವು ಕಾರ್ಯನಿರ್ವಹಿಸುವಂತಹ ಸ್ಥಿತಿಯು ಸುಧಾರಣೆ ಆಗುವುದು. ಸಂಗಾತಿ ಜತೆಗೆ ಸೆಕ್ಸ್ ನಡೆಸುವ ಮೂಲಕವಾಗಿ ನೀವು ಯಾವ ರೀತಿಯ ರೋಗಗಳನ್ನು ನಿವಾರಣೆ ಮಾಡಬಹುದು ಎಂದು ನಾವು ಇಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಖಂಡಿತವಾಗಿಯೂ ಇದು ನಿಮಗೆ ಪರಿಣಾಮಕಾರಿಯಗಿ ಇರಲಿದೆ. ನೀವು ಲೈಂಗಿಕ ಕ್ರಿಯೆ ವೇಳೆ ದೈಹಿಕ ಸುಖ ಪಡೆಯುವಿರಿ. ಇದರೊಂದಿಗೆ ಮಾನಸಿಕ ಆರೋಗ್ಯವು ಉತ್ತಮವಾದರೆ ಆಗ ಅದಕ್ಕಿಂತ ದೊಡ್ಡ ಮಟ್ಟದ ಲಾಭ ನಿಮಗೆ ಇನ್ನೇನು ಬೇಕು ಅಲ್ಲವೇ? ಲೈಂಗಿಕ ಆರೋಗ್ಯವು ಆರೋಗ್ಯವಾಗಿದ್ದರೆ ಆಗ ಮಾನಸಿಕವಾಗಿ ಸಂತೋಷ ಸಿಗುವುದು. ಆದರೆ ಇತ್ತೀಚೆಗೆ ನಡೆಸಿರುವಂತಹ ಕೆಲವೊಂದು ಸಂಶೋಧನೆಗಳ ಪ್ರಕಾರ ಮಾನಸಿಕ ಆರೋಗ್ಯದ ಜತೆಗೆ ದೈಹಿಕ ಆರೋಗ್ಯವು ಸಿಗುವುದು. ಲೈಂಗಿಕ ಆರೋಗ್ಯದಿಂದ ಸಿಗುವಂತಹ ಕೆಲವು ಲಾಭಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ. ನಿಯಮಿತವಾಗಿ ಸೆಕ್ಸ್ ನಡೆಸುವ ಪರಿಣಾವಾಗಿ ಹೃದಯಾಘಾತ, ಕ್ಯಾನ್ಸರ್, ನಿಮಿರು ದೌರ್ಬಲ್ಯ ಸಮಸ್ಯೆಯು ಕಡಿಮೆ ಆಗುವುದು.

ನಿಯಮಿತವಾಗಿ ಲೈಂಗಿಕ ಕ್ರಿಯೆ

ನಿಯಮಿತವಾಗಿ ಲೈಂಗಿಕ ಕ್ರಿಯೆ

ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುವ ಪರಿಣಾಮವಾಗಿ 50ಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಇದರಿಂದ ತುಂಬಾ ಲಾಭ ಪಡೆದುಕೊಂಡಿದ್ದಾರೆ. ಆದರೆ 20-30ರ ಹರೆಯದ ವಯೋಮಾನದವರಿಗೆ ಇಂತಹ ಲಾಭವು ಸಿಗುವುದಿಲ್ಲ. ಈ ವಯಸ್ಸಿನಲ್ಲಿ ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಳ್ಳುವ ಕಾರಣದಿಂದಾಗಿ ಹದಿಹರೆಯದಲ್ಲಿ ಕಾಯಿಲೆಗಳು ಬರುವ ಸಾಧ್ಯತೆ ಇರುವುದು ಎಂದು ಸಂಶೋಧನೆಗಳು ಇವೆ. ಲೈಂಗಿಕ ಕ್ರಿಯೆಯಿಂದ ನಿವಾರಣೆ ಮಾಡಬಹುದಾದ 10 ಕಾಯಿಲೆಗ ಬಗ್ಗೆ ನೀವು ಈ ಲೇಖನವನ್ನು ಓದುತ್ತಾ ತಿಳಿಯಲು ಮುಂದಾಗಿ…

1. ಹೃದಯದ ಸಮಸ್ಯೆಗಳು

1. ಹೃದಯದ ಸಮಸ್ಯೆಗಳು

ಲೈಂಗಿಕ ಕ್ರಿಯೆಯಿಂದ ಹೃದಯದ ಕ್ರಿಯೆಯು ಉತ್ತಮವಾಗುವುದು. ಇದು ಹೃದಯಾಘಾತ ಮತ್ತು ಹೃದಯಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಇದರಿಂದಾಗಿ ಲೈಂಗಿಕ ಕ್ರಿಯೆಯಿಂದ ನಿವಾರಣೆ ಆಗುವಂತಹ ಕಾಯಿಲೆಗಳಲ್ಲಿ ಇದು ಅಗ್ರ ಸ್ಥಾನ ಪಡೆದುಕೊಂಡಿದೆ.

2. ತಲೆನೋವು

2. ತಲೆನೋವು

ಲೈಂಗಿಕ ಕ್ರಿಯೆ ವೇಳೆ ಆಕ್ಸಿಟಾಸಿನ್ ಎನ್ನುವಂತಹ ಹಾರ್ಮೋನು ಬಿಡುಗಡೆ ಆಗುವುದು ಮತ್ತು ಇದು ಎಂಡ್ರೋಫಿನ್ಸ್ ನ್ನು ಬಿಡುಗಡೆ ಮಾಡುವುದು. ಇದರಿಂದ ದೇಹಕ್ಕೆ ಆರಾಮ ಸಿಗುವುದು ಮತ್ತು ಇದರಿಂದ ತಲೆನೋವಿನಿಂದ ಶಮನ ಸಿಗುವುದು.

3. ಖಿನ್ನತೆಗೆ ಪರಿಹಾರ

3. ಖಿನ್ನತೆಗೆ ಪರಿಹಾರ

ಲೈಂಗಿಕ ಕ್ರಿಯೆಯನ್ನು ಖಿನ್ನತೆ ನಿವಾರಿಸಲು ಅತ್ಯುತ್ತಮ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ ಮತ್ತು ಇದು ಆತ್ಮವಿಶ್ವಾಸವನ್ನು ಕೂಡ ಹೆಚ್ಚಿಸುವುದು.

4. ನಿದ್ರಾಹೀನತೆ

4. ನಿದ್ರಾಹೀನತೆ

ನಿಮಗೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರದಿದ್ದರೆ ಆಗ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ, ತಕ್ಷಣವೇ ನೀವು ನಿದ್ರೆಗೆ ಜಾರುವಿರಿ ಮತ್ತು ಎಲ್ಲಾ ಒತ್ತಡ ನಿವಾರಣೆ ಆಗುವುದು.

5. ಮೂತ್ರ ಅಸಂಯಮ

5. ಮೂತ್ರ ಅಸಂಯಮ

ಈ ಕಾಯಿಲೆಯನ್ನು ಕೂಡ ಲೈಂಗಿಕ ಕ್ರಿಯೆಯಿಂದ ನಿವಾರಣೆ ಮಾಡಬಹುದು. ಅನ್ಯೋನ್ಯತೆಯು ಮೂತ್ರದ ಅಸಂಯಮ ನಿವಾರಣೆ ಮಾಡುವುದು. ಇದು ಶ್ರೋಣಿಯನ್ನು ಬಲಪಡಿಸುವುದು ಮತ್ತು ಮೂತ್ರದ ಸೋರಿಕೆಯನ್ನು ಇದು ಪರಿಣಾಮಕಾರಿಯಾಗಿ ತಡೆಯುವುದು.

6. ಶೀತಜ್ವರ

6. ಶೀತಜ್ವರ

ಲೈಂಗಿಕ ಕ್ರಿಯೆಯಿಂದ ಸಿಗುವಂತಹ ಆರೋಗ್ಯ ಲಾಭಗಳು ಹಲವಾರು. ಇದರಲ್ಲಿ ಶೀತಜ್ವರದ ನಿವಾರಣೆ ಕೂಡ ಒಂದಾಗಿದೆ. ನಿಮಗೆ ಶೀತಜ್ವರವು ಕಾಡುತ್ತಲಿದ್ದರೆ ಆಗ ನೀವು ಲೈಂಗಿಕ ಕ್ರಿಯೆ ಮೂಲಕ ಇದರ ನಿವಾರಣೆ ಮಾಡಬಹುದು. ಇದು ತುಂಬಾ ವಿಚಿತ್ರವಾಗಿ ಕಾಣಿಸಬಹುದು. ಆದರೆ ಇದು ನಿಜ. ಯಾಕೆಂದರೆ ಲೈಂಗಿಕ ಕ್ರಿಯೆ ವೇಳೆ ಆ್ಯಂಟಿಬಯೋಟಿಕ್ ಗಣತಿ ಹೆಚ್ಚಾಗುವುದು ಮತ್ತು ಪ್ರತಿರೋಧಕ ವ್ಯವಸ್ಥೆ ಬಲಗೊಳ್ಳುವುದು. ಇದರಿಂದ ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕು ನಿವಾರಣೆ ಆಗುವುದು.

7. ಸ್ನಾಯುಗಳ ಮೇಲೆ ಅತಿಯಾದ ಭಾರ

7. ಸ್ನಾಯುಗಳ ಮೇಲೆ ಅತಿಯಾದ ಭಾರ

ಸ್ನಾಯುಗಳು ಹಾಗೂ ಗಂಟುಗಳ ಮೇಲೆ ಬೀರುವಂತಹ ಅತಿಯಾದ ಭಾರವನ್ನು ನಿವಾರಣೆ ಮಾಡುವುದು ಲೈಂಗಿಕ ಕ್ರಿಯೆಯಿಂದ ಸಾಧ್ಯವಿದೆ. ಲೈಂಗಿಕ ಕ್ರಿಯೆಯಿಂದಾಗಿ ಸ್ನಾಯುಗಳು ಆರಾಮಗೊಳ್ಳುವುದು ಮತ್ತು ಸ್ನಾಯುಗಳು ಮತ್ತು ಗಂಟು ನೋವು ನಿವಾರಣೆ ಆಗುವುದು.

8. ಕಾಂತಿಯುತ ಚರ್ಮ

8. ಕಾಂತಿಯುತ ಚರ್ಮ

ಲೈಂಗಿಕ ಕ್ರಿಯೆಯಿಂದ ಸಿಗುವಂತಹ ಲಾಭಗಳು ಇಲ್ಲಿ ಕೊನೆಗೊಳ್ಳುವುದಿಲ್ಲ. ನಿಮಗೆ ಕಾಂತಿಯುತ ಚರ್ಮ ಬೇಕಾಗಿದ್ದರೆ ಸೆಕ್ಸ್ ನಲ್ಲಿ ತೊಡಗಿಕೊಳ್ಳಿ. ನೀವು ಕಾಂತಿಯುತ ಚರ್ಮಕ್ಕಾಗಿ ಪ್ರತಿನಿತ್ಯ ಸೆಕ್ಸ್ ನಲ್ಲಿ ಪಾಲ್ಗೊಳ್ಳಿ. ಲೈಂಗಿಕ ಕ್ರಿಯೆ ವೇಳೆ ದೇಹದಲ್ಲಿರುವ ವಿಷಕಾರಿ ಅಂಶವು ಹೊರಗೆ ಹೋಗುವುದು ಮತ್ತು ಚರ್ಮದ ಸ್ಥಿತಿಯು ಉತ್ತಮವಾಗುವುದು.

9. ಪ್ರಾಸ್ಟೇಟ್

9. ಪ್ರಾಸ್ಟೇಟ್

ಲೈಂಗಿಕ ಕ್ರಿಯೆಯಿಂದ ಸಿಗುವಂತಹ ಅತ್ಯುತ್ತಮ ಲಾಭಗಳಲ್ಲಿ ಇದು ಪ್ರಾಮುಖ್ಯವಾದದ್ದು. ದಿನನಿತ್ಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಆಗ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯವು ಕಡಿಮೆ ಆಗುವುದು. ಇದು ಗಡ್ಡೆಗಳಿಂದ ರಕ್ಷಿಸುವುದು ಮತ್ತು ರಕ್ಷಣಾತ್ಮವಾದ ಪದರವನ್ನು ನಿರ್ಮಾಣ ಮಾಡುವುದು.

10. ಸ್ತನ ಕ್ಯಾನ್ಸರ್

10. ಸ್ತನ ಕ್ಯಾನ್ಸರ್

ಮಹಿಳೆಯರಿಗೆ ಇದು ತುಂಬಾ ಶುಭ ಸುದ್ದಿಯಾಗಿದೆ. ಯಾಕೆಂದರೆ ಲೈಂಗಿಕ ಕ್ರಿಯೆಯಿಂದ ನಿವಾರಣೆ ಮಾಡಬಹುದಾದ ಅತೀ ಪ್ರಮುಖ ರೋಗವೆಂದರೆ ಅದು ಸ್ತನ ಕ್ಯಾನ್ಸರ್. ಸ್ತನಗಳನ್ನು ಉತ್ತೇಜಿಸುವ ಕಾರಣದಿಂದಾಗಿ ಆಕ್ಸಿಟಾಸಿನ್ ಬಿಡುಗಡೆ ಆಗುವುದು. ಇದು ಸ್ತನ ಕ್ಯಾನ್ಸರ್ ಬೆಳವಣಿಗೆ ಆಗುವುದನ್ನು ತಡೆಯುವುದು. ಇನ್ನು ನೀವು ಕಾಯುತ್ತಿರುವುದು ಯಾಕೆ? ತಕ್ಷಣವೇ ಸಂಗಾತಿ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ.

English summary

Making Love Daily Can Help You To Cure These 10 Diseases

Many people are aware of the health benefits of sex, but did you know lovemaking provides countless physical and mental health benefits? Did you know that getting intimate can also help you cure some diseases? Today we're going to present 10 diseases which can be cured by having sex. Practicing it often has many benefits for your physical and mental health - it will boost your circulation and strengthen your immune system besides improving the way your body works. Continue reading below to learn what diseases can be treated by making love to your partner.
X
Desktop Bottom Promotion