For Quick Alerts
ALLOW NOTIFICATIONS  
For Daily Alerts

ತೋಳು (ಭುಜ)ಗಳ ಹೆಚ್ಚುವರಿ ಕೊಬ್ಬು ಕರಗಿಸಲು ಈ ವ್ಯಾಯಾಮಗಳು ಸೂಕ್ತ

|

ಹೊಟ್ಟೆಯ ಮೇಲಿನ ಕೊಬ್ಬು ಕರಗಿಸುವುದು, ಸೊಂಟದ ಅಳತೆ ಕಡಿಮೆ ಮಾಡಿಕೊಳ್ಳುವುದು, ತೊಡೆಗಳ ಗಾತ್ರ ಕಡಿಮೆ ಮಾಡಿಕೊಳ್ಳುವುದು ಅಥವಾ ಒಟ್ಟಾರೆಯಾಗಿ ದೇಹದ ತೂಕ ಇಳಿಸಿಕೊಳ್ಳಲು ಹಲವಾರು ರೀತಿಯ ವ್ಯಾಯಾಮಗಳಿವೆ. ಇದಕ್ಕೆಲ್ಲ ಯಾವ ರೀತಿಯ ವ್ಯಾಯಾಮಗಳು ಸೂಕ್ತ ಎಂಬ ಬಗ್ಗೆ ಇಂಟರನೆಟ್‌ನಲ್ಲಿ ಸಾಕಷ್ಟು ಮಾಹಿತಿಗಳೂ ಲಭ್ಯವಿವೆ. ಆದರೆ ತೋಳು ಅಥವಾ ಭುಜದ ಬಳಿಯ ಕೊಬ್ಬು ಕರಗಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ಸಾಕಷ್ಟು ಲಭ್ಯವಿಲ್ಲ. ಸುಂದರವಾದ ನೆರಿಗೆ ಇಲ್ಲದ ತೋಳು ಹೊಂದಿರುವುದು ಉತ್ತಮ ಅಂಗ ಸೌಷ್ಠವಕ್ಕೆ ಅತಿ ಅಗತ್ಯವಾಗಿದೆ. ತೋಳುಗಳ ಹೆಚ್ಚುವರಿ ಕೊಬ್ಬು ಕರಿಗಿಸುವುದು ಹೇಗೆಂಬ ಚಿಂತೆಯಲ್ಲಿ ನೀವಿದ್ದರೆ ಇಲ್ಲಿ ತಿಳಿಸಲಾದ ಕೆಲ ಪ್ರಮುಖ ವ್ಯಾಯಾಮಗಳು ನಿಮಗೆ ಸಹಕಾರಿಯಾಗಬಲ್ಲವು. ತೋಳುಗಳ ಕೊಬ್ಬು ಕಡಿಮೆ ಮಾಡಿ ಸುಂದರ ಹಾಗೂ ಆಕರ್ಷಕ ಮಾಟ ಹೊಂದಲು 5 ವ್ಯಾಯಾಮದ ವಿಧಾನಗಳನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ. ತೋಳು (ಭುಜ)ಗಳ ಕೊಬ್ಬು ಕರಗಿಸಲು 5 ವಿಧದ ವ್ಯಾಯಾಮಗಳು

Lose arm fat

ಆರ್ಮ್ ಸರ್ಕಲ್

ಆರ್ಮ್ ಸರ್ಕಲ್ ಎಂಬುದು ಅತಿ ಸಾಮಾನ್ಯವಾದ ವ್ಯಾಯಾಮವಾಗಿದ್ದು ಬಹುತೇಕ ಸಂದರ್ಭಗಳಲ್ಲಿ ಇದನ್ನು ವಾರ್ಮ ಅಪ್ ಎಕ್ಸರಸೈಜ್ ಆಗಿ ಮಾಡಲಾಗುತ್ತದೆ. ಪ್ರತಿದಿನ ಆರ್ಮ್ ಸರ್ಕಲ್ ವ್ಯಾಯಾಮವನ್ನು ಮಾಡುತ್ತಿದ್ದರೆ ಆರಂಭದಲ್ಲಿ ತೋಳುಗಳ ಬೊಜ್ಜು ಕರಗಲಾರಂಭಿಸುತ್ತದೆ. ನಂತರ ನಿಧಾನವಾಗಿ ಟ್ರೈಸೆಪ್ಸ್, ಬೆನ್ನು, ಬೈಸೆಪ್ಸ್ ಹಾಗೂ ಭುಜಗಳಿಗೆ ಮಾಟ ಬರಲಾರಂಭಿಸಿ ಆಕರ್ಷಕ ತೋಳುಗಳು ನಿಮ್ಮದಾಗುತ್ತವೆ.

ಪುಲ್ ಅಪ್ಸ್

ಪುಲ್ ಅಪ್ಸ್ ಅಥವಾ ಕೈಗಳಿಂದ ಭಾರ ಎತ್ತಿ ಇಳಿಸುವ ವ್ಯಾಯಾಮ ನಮಗೆಲ್ಲ ಗೊತ್ತೇ ಇದೆ. ಇದರಲ್ಲಿ ಹಲವಾರು ಸಣ್ಣ ಹಾಗೂ ದೊಡ್ಡ ಸ್ನಾಯುಗಳ ಮೇಲೆ ಪರಿಣಾಮವಾಗುತ್ತದೆ. ಪುಲ್ ಅಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಸಂದುಗಳು ಕೆಲಸ ಮಾಡುವುದರಿಂದ ಇದನ್ನು ಮಲ್ಟಿ ಜಾಯಿಂಟ್ ಎಕ್ಸರಸೈಜ್ ಎಂದು ಕರೆಯುತ್ತಾರೆ. ಆದರೆ ಪುಲ್ ಅಪ್ಸ್‌ನಿಂದ ಬೈಸೆಪ್ಸ್ ಹಾಗೂ ಭುಜಗಳ ಮೇಲೆ ಹೆಚ್ಚು ಭಾರ ಬೀಳುವುದರಿಂದ ಈ ವ್ಯಾಯಾಮವು ತೋಳುಗಳ ಬೊಜ್ಜು ಕಡಿಮೆ ಮಾಡಿ ಸುಂದರ ಆಕಾರ ಮೂಡಿಸಲು ಉತ್ತಮವಾಗಿದೆ.

ಬರ್ಪೀಸ್

ಬರ್ಪೀಸ್ ಎಂಬುದು ನೆಲದ ಮೇಲೆ ಕುಳಿತು, ಬಾಗಿ ನಂತರ ಎದ್ದು ನಿಂತು ಮಾಡುವ, ಬಹುವಿಧದಲ್ಲಿ ದೇಹದ ಸಾಮರ್ಥ್ಯ ಹೆಚ್ಚಿಸುವ ವ್ಯಾಯಾಮದ ವಿಧಾನವಾಗಿದೆ. ಭುಜ, ಎದೆ, ತೊಡೆ, ಸೊಂಟ ಹೀಗೆ ದೇಹದ ವಿವಿಧ ಭಾಗಗಳಿಗೆ ಈ ವ್ಯಾಯಾಮ ಪ್ರಯೋಜನಕಾರಿಯಾಗಿದೆ. ಇದು ಕೇವಲ ಅಥ್ಲೀಟ್‌ಗಳಿಗೆ ಮಾತ್ರ ಸೀಮಿತವಾಗಿರದೆ ಎಲ್ಲರೂ ಮಾಡಬಹುದಾದ ವ್ಯಾಯಾಮವಾಗಿದೆ. ಬರ್ಪೀಸ್‌ನಿಂದ ಹೆಚ್ಚುವರಿ ಕೊಬ್ಬನ್ನು ಕರಗಿಸಿ ಒಟ್ಟಾರೆಯಾಗಿ ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಾಧ್ಯ.

ಪುಶ್ ಅಪ್ಸ್

ದೇಹದ ಬಹಳಷ್ಟು ಸ್ನಾಯುಗಳಿಗೆ ಏಕಕಾಲಕ್ಕೆ ವ್ಯಾಯಾಮ ನೀಡುವ ಪುಶ್ ಅಪ್ಸ್ ವಿಧಾನ ಅತ್ಯಂತ ಶ್ರೇಷ್ಠ ವ್ಯಾಯಾಮವಾಗಿದೆ. ಹೊಟ್ಟೆ, ಸೊಂಟ ಹಾಗೂ ದೇಹದ ಕೆಳಗಿನ ಭಾಗ ಮಾತ್ರವಲ್ಲದೆ ಭುಜಗಳಿಗೂ ಇದು ಸೂಕ್ತವಾಗಿದೆ. ಶರೀರ ಫಿಟ್ ಆಗಲು ಹಾಗೂ ಆಕರ್ಷಕವಾಗಲು ಪುಶ್ ಅಪ್ಸ್ ಪ್ರಯೋಜನಕಾರಿಯಾಗಿವೆ.

ಜಂಪಿಂಗ್ ಜಾಕ್ಸ್

ಸ್ಟಾರ್ ಜಂಪ್ಸ್ ಎಂದೂ ಕರೆಯಲಾಗುವ ಜಂಪಿಂಗ್ ಜಾಕ್ಸ್ ವ್ಯಾಯಾಮವು ಸಂಪೂರ್ಣ ಶರೀರಕ್ಕೆ ಉಪಯುಕ್ತವಾಗಿದೆ. ಈ ವಿಧಾನದಲ್ಲಿ ಇಡೀ ಶರೀರಕ್ಕೆ ವ್ಯಾಯಾಮದ ಪ್ರಭಾವ ಬೀರುವುದರಿಂದ ಹೃದಯ ಬಡಿತದ ವೇಗವು ಸಹಜ ಸ್ಥಿತಿಗೆ ಬರುತ್ತದೆ. ಭುಜಗಳು ಹಾಗೂ ಕಾಲುಗಳೆರಡೂ ಈ ವ್ಯಾಯಾಮದಲ್ಲಿ ಚಲನೆಗೆ ಒಳಗಾಗುವುದರಿಂದ ಇದು ತೋಳುಗಳ ಹೆಚ್ಚುವರಿ ಕೊಬ್ಬು ಕರಗಿಸಿ ಸುಂದರ ಭುಜಗಳ ಆಕಾರ ಮೂಡಿಸಲು ಪ್ರಯೋಜನಕಾರಿಯಾಗಿದೆ.

English summary

Lose arm fat with these 5 quick exercises!

It's easy when it comes to making abs, reducing belly fat, thigh fat or lose weight in general. It's easy because the internet is choked with exercises for these. But what about arm fat? Aren't jiggle-free arms what everyone wants? Are you also struggling with that stubborn arm flab? Here’s help, as we bring to you 5 exercises, practising which daily will not only reduce that fat but will also give you toned, sexy and shapely arms.
Story first published: Thursday, February 7, 2019, 16:56 [IST]
X
Desktop Bottom Promotion