For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ತೊಂದರೆಗಳನ್ನು ಸರಿಪಡಿಸಲು ಹೆಣಗಾಡಬೇಕಾಗಿಲ್ಲ, ಇದಕ್ಕೆ ಚಿಕಿತ್ಸೆ ಅಡುಗೆ ಮನೆಯಲ್ಲಿಯೇ ಇದೆ!

|

ಹೊಟ್ಟೆಯ ತೊಂದರೆ ಎದುರಾದರೆ ಆಗುವ ಮುಜುಗರವನ್ನು ಎದುರಿಸುವುದು ಸುಲಭವಲ್ಲ. ಹೊಟ್ಟೆಯುಬ್ಬರಿಕೆ, ಹುಳಿತೇಗು ಮೊದಲಾದವು ಮಾನಸಿಕ ನೆಮ್ಮದಿಯನ್ನೇ ಕಸಿದರೆ ಈ ತೊಂದರೆ ಇರುವಷ್ಟು ಸಮಯ ಬೇರಾವುದೇ ಆಹಾರವನ್ನು ತಿನ್ನಲಾಗದೇ ಇರುವ ಅಸಹಾಯಕತೆ ಇನ್ನೊಂದು ತೊಂದರೆಯಾಗಿದೆ. ಇದಕ್ಕೆಲ್ಲಾ ಮೂಲ ಕಾರಣ ಅಜೀರ್ಣತೆ. ಪರಿಣಾಮವಾಗಿ ಹೊಟ್ಟೆಯಲ್ಲಿ ಸೆಡೆತ, ವಾಕರಿಕೆ, ಹೊಟ್ಟೆನೋವು ಹಾಗೂ ಎದೆಯುರಿ ಮೊದಲಾದವು ಎದುರಾಗಬಹುದು.

ಆದರೆ ಈ ತೊಂದರೆ ಎದುರಾಗುತ್ತಿರುವುದು ಇದೇನೂ ಮೊದಲಲ್ಲ. ಇದಕ್ಕೆ ನಮ್ಮ ಅಡುಗೆ ಮನೆಯಲ್ಲಿಯೇ ಹಲವಾರು ಸುಲಭ ಔಷಧಿಗಳಿವೆ ಹಾಗೂ ಇವುಗಳು ಯಾವುದೇ ಅಡ್ಡಪರಿಣಾಮವಿಲ್ಲದೇ ಸಮರ್ಥವಾಗಿ ಈ ತೊಂದರೆಗಳನ್ನು ನಿವಾರಿಸುತ್ತವೆ. ಈ ತೊಂದರೆಗಳನ್ನು ನಿವಾರಿಸಲು ಮಾತ್ರೆಗಳು ಲಭ್ಯವಿದ್ದರೂ ನೈಸರ್ಗಿಕ ಪರಿಹಾರಗಳೇ ಆರೋಗ್ಯರ ದೃಷ್ಟಿಯಿಂದ ಹಾಗೂ ದೀರ್ಘಾವಧಿಯ ಸೇವನೆಗೆ ಸೂಕ್ತ ಆಯ್ಕೆಯಾಗಿವೆ. ಈ ತೊಂದರೆಗಳನ್ನು ಸಮರ್ಥವಾಗಿ ನಿವಾರಿಸಬಲ್ಲ ಏಳು ಅತ್ಯುತ್ತಮ ಮನೆಮದ್ದುಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ ನೋಡೋಣ...

ಸೇಬಿನ ಶಿರ್ಕಾ (Apple cider vinegar)

ಸೇಬಿನ ಶಿರ್ಕಾ (Apple cider vinegar)

ಹೊಟ್ಟೆಯ ತೊಂದರೆಗೆ ಅತ್ಯುತ್ತಮವಾದ ಪರಿಹಾರವಾಗಿ ಸೇಬಿನ ಶಿರ್ಕಾವನ್ನು ಬಳಬಹುದೆಂದು ಹೆಚ್ಚಿನವರಿಗೆ ಇದುವರೆಗೆ ಗೊತ್ತೇ ಇರಲಿಲ್ಲ. ಇದು ಕ್ಷಾರೀಯವಾಗಿರುವ ಕಾರಣ ಹೊಟ್ಟೆಯ ತೊಂದರೆಗಳಿಗೆ ಕಾರಣವಾಗಿರುವ ಆಮ್ಲೀಯತೆಯನ್ನು ಸಂತುಲಿತಗೊಳಿಸಿ ಈ ತೊಂದರೆಗಳನ್ನು ಇಲ್ಲವಾಗಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ದೊರಕುವ ಈ ಶಿರ್ಕಾ ಪ್ರಬಲವಾಗಿರುವ ಕಾರಣ ಇದನ್ನು ಸಾಕಷ್ಟು ನೀರಿನಲ್ಲಿ ಬೆರೆಸಿ ತಿಳಿಯಾಗಿಸಿಯೇ ಸೇವಿಸಬೇಕು.

ಶಾಖ ನೀಡುವುದು (Heating pad)

ಶಾಖ ನೀಡುವುದು (Heating pad)

ಇದು ಸಹಾ ಇನ್ನೊಂದು ಸುಲಭ ವಿಧಾನವಾಗಿದೆ. ಶಾಖ ನೀಡುವ ಉಪಕರಣವನ್ನು ಹೊಟ್ಟೆಯ ಮೇಲೆ (ಶಾಖ ಹೆಚ್ಚಿಲ್ಲದಂತೆ ನೋಡಿಕೊಳ್ಳಬೇಕು) ಹೆಚ್ಚಿನ ಒತ್ತಡವಿಲ್ಲದೇ ಇರಿಸಿಕೊಳ್ಳುವ ಮೂಲಕವೂ ಹೊಟ್ಟೆಯ ಸೆಡೆತ ಮತ್ತು ಪೆಡಸಾದ ಸ್ನಾಯುಗಳನ್ನು ಸಡಿಲಿಸಬಹುದು.

ಹೆಚ್ಚಿನ ನೀರಿನ ಸೇವನೆ

ಹೆಚ್ಚಿನ ನೀರಿನ ಸೇವನೆ

ಇದೇನೋ ದೊಡ್ಡ ಮಾಯಾವಿದ್ಯೆಯಲ್ಲ, ಎಲ್ಲರಿಗೂ ಅರ್ಥವಾಗುವ ವಿದ್ಯೆ. ಯಾವಾಗ ನಾವು ಹೆಚ್ಚು ಹೆಚ್ಚಾಗಿ ನೀರು ಕುಡಿಯುತ್ತೇವೆಯೋ ಆಗ ಕೇವಲ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ ಮಲಬದ್ದತೆಯಾಗದಂತೆಯೂ ನೋಡಿಕೊಳ್ಳಬಹುದು. ಉತ್ತಮ ಪರಿಣಾಮ ಪಡೆಯಲು ಈ ನೀರು ಉಗುರುಬೆಚ್ಚನಿದ್ದರೆ ಒಳಿತು.

ಓಮದ ಕಾಳುಗಳು

ಓಮದ ಕಾಳುಗಳು

ಪುಟ್ಟ ಜೀರಿಗೆಯಂತಿರುವ ಈ ಕಾಳುಗಳು ಅಜೀರ್ಣತೆ ಮತ್ತು ಹೊಟ್ಟೆಯುಬ್ಬರಿಕೆಗೆ ಅತ್ಯುತ್ತಮ ಪರಿಹಾರವಾಗಿವೆ. ಒಂದು ದೊಡ್ಡ ಚಮಚದಷ್ಟು ಓಮದ ಕಾಳುಗಳನ್ನು ಚಿಟಿಕೆ ಉಪ್ಪಿನ ಜೊತೆಗೆ ಉಗುರುಬೆಚ್ಚನೆಯ ನೀರಿನಲ್ಲಿ ಕಲಕಿ ಎಲ್ಲವನ್ನೂ ಕುಡಿದುಬಿಡಬೇಕು. ವಿಶೇಷವಾಗಿ ಸತತ ತೇಗು ಬರುತ್ತಿದ್ದರೆ ಈ ವಿಧಾನದಿಂದ ತಕ್ಷಣವೇ ಪರಿಹಾರ ದೊರಕುತ್ತದೆ.

Most Read: ಮಂಡಿ ನೋವು ಸಮಸ್ಯೆ ಇದ್ದವರು ಒಮ್ಮೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ

ಅಡುಗೆ ಸೋಡಾ

ಅಡುಗೆ ಸೋಡಾ

ಅರ್ಧ ಚಿಕ್ಕಚಮಚ ಅಡುಗೆ ಸೋಡಾವನ್ನು ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿದರೆ ಇದು ಮಾರುಕಟ್ಟೆಯಲ್ಲಿ ದೊರಕುವ ಆಂಟಾಸಿಡ್ ಔಷಧಿಗಳಿಗಿಂತಲೂ ಉತ್ತಮ ಪರಿಹಾರ ಒದಗಿಸುತ್ತದೆ. ಆದರೆ ಈ ಪ್ರಮಾಣ ಅರ್ಧ ಚಿಕ್ಕಚಮಕ್ಕಿಂತ ಹೆಚ್ಚಾಗಕೂಡದು. ಏಕೆಂದರೆ ಇದು ಹೆಚ್ಚಾದರೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಬಹುದು.

ಲಿಂಬೆ ಬೆರೆತ ನೀರು

ಲಿಂಬೆ ಬೆರೆತ ನೀರು

ಒಂದು ವೇಲೆ ಹೊಟ್ಟೆಯಲ್ಲಿ ಗುಡುಗುಡು ಎದುರಾಗಿದ್ದರೆ ಇದಕ್ಕೆ ಲಿಂಬೆನೀರು ಅತ್ಯುತ್ತಮ ಪರಿಹಾರವಾಗಿದೆ. ಲಿಂಬೆ ರಸ ವಾಸ್ತವ ದಲ್ಲಿ ಪಿಎಚ್ 2 ಮಟ್ಟವನ್ನು ಹೊಂದಿರುವ ಆಮ್ಲ. ಆದರೆ ಇದು ಜೀರ್ಣರಸದಲ್ಲಿ ಮಿಳಿತಗೊಂಡಾಕ್ಷಣ ಪಿಎಚ್ 7ಕ್ಕೂ ಹೆಚ್ಚಿನ ಅಂದರೆ ಕ್ಷಾರೀಯವಾಗಿ ಬದಲಾಗಿ ಬಿಡುತ್ತದೆ. ಇದೇ ಕಾರಣಕ್ಕೆ ಲಿಂಬೆ ಆಮ್ಲೀಯವಾಗಿದ್ದರೂ ಜೀರ್ಣಾಂಗಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ ಮತ್ತು ಈ ಗುಣವೇ ಹಲವಾರು ಆಮ್ಲೀಯತೆಯ ತೊಂದರೆಗಳನ್ನು ಇಲ್ಲವಾಗಿಸುತ್ತದೆ.

ಪುದೀನಾ ಬೆರೆತ ಟೀ

ಪುದೀನಾ ಬೆರೆತ ಟೀ

ಸಾಮಾನ್ಯವಾಗಿ ಪುದಿನಾ ಎಲೆಗಳನ್ನು ನಾವು ಚಟ್ನಿ ಮಾಡಲು ಅಥವಾ ಊಟದ ಬಳಿಕ ಬಾಯಿಯ ದುರ್ವಾಸನೆ ಇಲ್ಲವಾಗಿಸಲು ಮಾತ್ರವೇ ಬಳಸುತ್ತೇವೆ. ಆದರೆ, ಪುದಿನಾ ವಾಕರಿಕೆಯನ್ನು ಇಲ್ಲವಾಗಿಸಲು ಅತ್ಯುತ್ತಮವಾದ ಔಷಧಿಯಾಗಿದೆ. ಹಾಗಾಗಿ ವಾಕರಿಕೆ ಇದ್ದಾಗ ಕೊಂಚ ಪ್ರಮಾಣದಲ್ಲಿ ಪುದಿನಾ ಬೆರೆಸಿ ಕುದಿಸಿದ ಟೀ ಕುಡಿಯುವುದು ಪರಿಣಾಮಕಾರಿ. ಆದರೆ ಒಂದು ವೇಳೆ ವಾಕರಿಕೆ ಹುಳಿತೇಗಿನ ಪರಿಣಾಮವಾಗಿ ಎದುರಾಗಿದ್ದಿದ್ದರೆ ಈ ವಿಧಾನ ಪರಿಣಾಮಕಾರಿಯಲ್ಲ, ಏಕೆಂದರೆ ಪುದಿನಾ ಸೆಡೆತನಿವಾರಕ ಗುಣ ಹೊಂದಿರುವುದರಿಂದ ಇದು ಹುಳಿತೇಗನ್ನು ಹೆಚ್ಚಿಸಬಹುದು.

English summary

kitchen Ingredients that can treat an upset stomach easily

There is nothing more uncomfortable than an upset stomach. From feeling bloated to not being able to eat anything, indigestion can cause a host of problems. It can also lead to cramps, nausea, pain in the stomach and even acid reflux.Thankfully, there are a host of home remedies available, which will help you in soothing your troubled tummy without any side-effects.
X
Desktop Bottom Promotion