For Quick Alerts
ALLOW NOTIFICATIONS  
For Daily Alerts

ಸಂಗಾತಿಗೆ ಕಿಸ್ ಮಾಡಿದರೆ ದೀರ್ಘಾಯುಷ್ಯ ಪಡೆಯಬಹುದು!

By S.kalagi
|

ಹೆಣ್ಣು ಹಾಗೂ ಗಂಡು ಸಂಗಾತಿಗಳಿಬ್ಬರು ರೋಮಾನ್ಸ್ ಮಾಡುವುದು, ಕಾಮದ ಹೊಳೆಯಲ್ಲಿ ಮಿಂದೇಳುವುದು ಸಹಜ. ಇದೆಲ್ಲ ಪ್ರಕೃತಿ ಸಹಜವಾದ ಕ್ರಿಯೆಯಾಗಿದೆ. ಆದರೆ ಸಂಗಾತಿಯೊಂದಿಗೆ ರೋಮಾನ್ಸ್ ಮಾಡುವಾಗ ಕಿಸ್ ಮಾಡಿದಲ್ಲಿ (ಮುತ್ತು ನೀಡುವುದು) ನಿಮ್ಮ ಆಯುಷ್ಯ ಹೆಚ್ಚಾಗುತ್ತದೆ ಹಾಗೂ ರಕ್ತದೊತ್ತಡ ಕಡಿಮೆಯಾಗಿ ಇನ್ನೂ ಹಲವಾರು ಆರೋಗ್ಯ ಭಾಗ್ಯ ಲಭಿಸುತ್ತವೆ ಎಂಬುದು ನಿಮಗೆ ಗೊತ್ತೆ?

ಇದು ನಿಜ ಸಂಗತಿ. ಇತ್ತೀಚಿನ ಸಂಶೋಧನೆಗಳ ಪ್ರಕಾರ ನಿಮ್ಮ ಸಂಗಾತಿಯನ್ನು ಆಗಾಗ ಪ್ರೀತಿಯಿಂದ ಕಿಸ್ ಮಾಡಿ ಹೆಚ್ಚು ವರ್ಷ ಆರೋಗ್ಯವಾಗಿ ಬದುಕಬಹುದು ಎಂಬ ಸಂತಸದ ಸಂಗತಿ ಹೊರಬಿದ್ದಿದೆ.

ಸಂಗಾತಿಗೆ ಪ್ರೀತಿಯಿಂದ ಕಿಸ್ ಮಾಡಲು ಹಿಂಜರಿಕೆ ಬೇಡ

ಸಂಗಾತಿಗೆ ಪ್ರೀತಿಯಿಂದ ಕಿಸ್ ಮಾಡಲು ಹಿಂಜರಿಕೆ ಬೇಡ

ಸಂಗಾತಿಗೆ ಕಿಸ್ ಮಾಡುವುದರಿಂದ ಹಲವಾರು ಆರೋಗ್ಯಕರ ಲಾಭಗಳು ಸಿಗುತ್ತವೆ ಹಾಗೂ ನೀವು ನಿಮ್ಮ ವಯಸ್ಸಿಗಿಂತ ಹೆಚ್ಚು ತರುಣರಾಗಿ ಕಾಣುವಿರಿ. ಇದು ಖುಷಿಯ ವಿಚಾರ ಅಲ್ಲವೆ? ಆಶ್ಚರ್ಯವಾಗಿ ಕಂಡರೂ ಇದು ಸತ್ಯವಾಗಿದೆ. ಇತ್ತೀಚೆಗೆ ನಡೆದ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಕಿಸ್ಸಿಂಗ್‌ನಿಂದ ನಿಮ್ಮ ಆರೋಗ್ಯ ವೃದ್ಧಿಯಾಗಲಿದೆ ಎಂಬ ಸಂತಸದ ವಿಚಾರ ತಿಳಿದು ಬಂದಿದೆ. ಇನ್ನು ಕಿಸ್ ಮಾಡುವುದರಿಂದ ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧ ಮತ್ತಷ್ಟು ಹೆಚ್ಚಾಗುವುದಲ್ಲದೆ, ಆಧುನಿಕ ಜೀವನಶೈಲಿಯಿಂದ ಬರಬಹುದಾದ ಕೆಲ ಆರೋಗ್ಯ ಸಮಸ್ಯೆಗಳು ಸಹ ಪರಿಹಾರವಾಗುತ್ತವಂತೆ. ಹಾಗಾದರೆ ಮುಂದಿನ ಬಾರಿ ರೋಮಾನ್ಸ್ ಮಾಡುವಾಗ ಸುದೀರ್ಘ ಕಿಸ್ ಮಾಡಲು ಮರೆಯದಿರಿ.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಕಿಸ್ಸಿಂಗ್!

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಕಿಸ್ಸಿಂಗ್!

ಬಾಯಿಯ ಜೊಲ್ಲಿನಲ್ಲಿರುವ ಶೇ.80 ರಷ್ಟು ಬ್ಯಾಕ್ಟೀರಿಯಾಗಳು ಎಲ್ಲರ ಜೊಲ್ಲಿನಲ್ಲಿರುವ ಸಾಮಾನ್ಯ ಬ್ಯಾಕ್ಟೀರಿಯಾಗಳೇ ಆಗಿವೆ. ಇನ್ನುಳಿದ ಶೇ.20 ರಷ್ಟು ಬ್ಯಾಕ್ಟೀರಿಯಾಗಳು ಮಾತ್ರ ವಿಶಿಷ್ಟವಾಗಿರುತ್ತವೆ. ಕಿಸ್ಸಿಂಗ್‌ನಿಂದ ಬ್ಯಾಕ್ಟೀರಿಯಾಗಳ ವರ್ಗಾವಣೆಯಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಆಂತರಿಕವಾಗಿ ದೇಹ ಬಲಿಷ್ಠಗೊಂಡು ಸಾಮಾನ್ಯ ರೋಗಗಳು ಬರದಂತೆ ಸಹಕಾರಿಯಾಗುತ್ತದೆ.

ಕಿಸ್ಸಿಂಗ್‌ನಿಂದ ಬ್ಲಡ್ ಪ್ರೆಶರ್ ಸಹ ಕಡಿಮೆಯಾಗುತ್ತದೆ

ಕಿಸ್ಸಿಂಗ್‌ನಿಂದ ಬ್ಲಡ್ ಪ್ರೆಶರ್ ಸಹ ಕಡಿಮೆಯಾಗುತ್ತದೆ

ತೀವ್ರವಾದ ಭಾವುಕತೆಯ ಕಿಸ್ಸಿಂಗ್ ನಂತರ ನಿಮ್ಮ ಎದೆಬಡಿತದ ಶಬ್ದವನ್ನು ನೀವು ಹೆಚ್ಚು ಸ್ಪಷ್ಟವಾಗಿ ಕೇಳಬಲ್ಲಿರಿ. ಕಿಸ್ಸಿಂಗ್‌ನಿಂದ ಎದೆಬಡಿತ ಸಾಮಾನ್ಯ ಸ್ಥಿತಿಗೆ ಬಂದು, ರಕ್ತನಾಳಗಳಲ್ಲಿನ ಅಡ್ಡಿ ದೂರವಾಗುತ್ತವೆ. ಇದರಿಂದ ರಕ್ತದೊತ್ತಡ ಸಹಜ ಸ್ಥಿತಿಗೆ ಬರಲು ಸಹಾಯವಾಗುತ್ತದೆ. ಮುಂದಿನ ಬಾರಿ ಸಂಗಾತಿ ಒಲಿದು ಬಂದಾಗ ಸುದೀರ್ಘ ಕಿಸ್ ಮಾಡಲು ಮಾಡಿ ಆರೋಗ್ಯ ಭಾಗ್ಯ ಪಡೆದುಕೊಳ್ಳಿ.

ಶ್ವಾಸಕೋಶದ ರೋಗಗಳ ಪರಿಹಾರಕ್ಕೆ ಕಿಸ್ಸಿಂಗ್ ಉಪಕಾರಿ

ಶ್ವಾಸಕೋಶದ ರೋಗಗಳ ಪರಿಹಾರಕ್ಕೆ ಕಿಸ್ಸಿಂಗ್ ಉಪಕಾರಿ

ಒಂದು ನಿಮಿಷದಲ್ಲಿ ನೀವು ಎಷ್ಟು ಹೆಚ್ಚು ಬಾರಿ ಉಸಿರಾಡಿಸುವಿರೋ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು. ಸಾಮಾನ್ಯವಾಗಿ ನಿಮಿಷಕ್ಕೆ 20 ಬಾರಿ ನೀವು ಉಸಿರನ್ನು ಒಳಗೆ ಎಳೆದುಕೊಳ್ಳುವಿರಿ. ಆದರೆ ಕಿಸ್ ಮಾಡುವಾಗ ಮಾತ್ರ 60 ಬಾರಿ ಉಸಿರು ಒಳಗೆಳೆದು ಬಿಡುವಿರಿ. ಅಂದರೆ ಇದರಿಂದ ಶ್ವಾಸಕೋಶಕ್ಕೆ ಹೆಚ್ಚು ಪ್ರಮಾಣದ ಆಮ್ಲಜನಕ ದೊರಕಿ ಮುಂದಾಗಬಹುದಾದ ಅನಾರೋಗ್ಯದ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಸೋಂಕು ನಿವಾರಣೆಗೂ ಬೇಕು ಕಿಸ್ಸಿಂಗ್

ಸೋಂಕು ನಿವಾರಣೆಗೂ ಬೇಕು ಕಿಸ್ಸಿಂಗ್

30 ನಿಮಿಷಗಳ ಕಾಲ ಕಿಸ್ ಮಾಡುವುದರಿಂದ ಧೂಳಿನಿಂದ ಉಂಟಾಗುವ ಅಲರ್ಜಿ ಹಾಗೂ ಜ್ವರವನ್ನು ಬಾರದಂತೆ ತಡೆಗಟ್ಟಬಹುದು ಎಂಬುದು ಗೊತ್ತೆ? ಹೌದು... ಧೂಳಿನಿಂದ ಉಂಟಾಗುವ ಅಲರ್ಜಿಯನ್ನು ಕಡಿಮೆ ಮಾಡಲು ಕಿಸ್ಸಿಂಗ್ ಉಪಯುಕ್ತವಾಗಿದೆ. ಆಗಾಗ ಸೀನುವುದು ಅಥವಾ ಕಣ್ಣುಗಳಲ್ಲಿ ನೀರಾಡುವ ಸಮಸ್ಯೆಗೆ ಕಾರಣವಾಗುವ ರಕ್ತದಲ್ಲಿನ ಇಮ್ಯು ನೊಗ್ಲೊಬುಲಿನ್-ಇ- ಆಂಟಿ ಬಾಡೀಸ್ ಅಂಶಗಳನ್ನು ಕಡಿಮೆ ಮಾಡಲು ಕಿಸ್ಸಿಂಗ್ ಸಹಕಾರಿಯಾಗಿದೆ.

ನಿಮ್ಮ ಸಾಮರ್ಥ್ಯ ಹೆಚ್ಚಳಕ್ಕೂ ಬೇಕು ಕಿಸ್ಸಿಂಗ್

ನಿಮ್ಮ ಸಾಮರ್ಥ್ಯ ಹೆಚ್ಚಳಕ್ಕೂ ಬೇಕು ಕಿಸ್ಸಿಂಗ್

ಬೆಳಗಿನ ಜಾವದಲ್ಲಿ ಕಿಸ್ಸಿಂಗ್ ಮಾಡುವುದರಿಂದ ನಿಮ್ಮ ಆತ್ಮವಿಶ್ವಾಸ ಶೇ.50 ರಷ್ಟು ವೃದ್ಧಿಯಾಗಿ ದಿನವಿಡೀ ಕೆಲಸದಲ್ಲಿ ಏಕಾಗ್ರತೆ ಉತ್ತಮವಾಗುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಸಂಗಾತಿಯೊಂದಿಗೆ ತೀವ್ರ ಭಾವುಕತೆಯ ಒಂದು ಕಿಸ್ಸಿಂಗ್ ಅವಧಿ ನಡೆಸಲು ಹಿಂಜರಿಯದಿರಿ. ಇದರಿಂದ ನಿಮ್ಮ ದಿನ ಉತ್ತಮ ವಾಗುವುದು ಮಾತ್ರವಲ್ಲದೆ ಸಂಗಾತಿಯೊಂದಿಗಿನ ಭಾವನಾತ್ಮಕ ಸಂಬಂಧ ಗಟ್ಟಿಯಾಗುತ್ತದೆ.

ತಲೆನೋವಿಗೆ ಪರಿಹಾರ ಕಿಸ್ಸಿಂಗ್

ತಲೆನೋವಿಗೆ ಪರಿಹಾರ ಕಿಸ್ಸಿಂಗ್

ತೀವ್ರವಾದ ತಲೆನೋವಿನಿಂದ ಬಳಲುತ್ತಿದ್ದಾಗ ನಿಮ್ಮ ಸಂಗಾತಿಯ ಒಂದು ಕಿಸ್ ನಿಮಗೆ ಸಾಕಷ್ಟು ಆರಾಮ ನೀಡಬಲ್ಲದು. ಕಿಸ್ಸಿಂಗ್ ರಕ್ತನಾಳಗಳಲ್ಲಿ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಅಲ್ಲದೆ ಹೆಣ್ಣು ಮಕ್ಕಳಲ್ಲಿ ಋತುಚಕ್ರದ ಅವಧಿಯ ನೋವನ್ನು ಸಹ ಕಿಸ್ಸಿಂಗ್ ಕಡಿಮೆ ಮಾಡುತ್ತದೆಯಂತೆ. ಬಹುಶಃ ಇದೇ ಕಾರಣಕ್ಕೆ ಋತುಚಕ್ರದ ಅವಧಿಯಲ್ಲಿ ಹೆಣ್ಣು ಮಕ್ಕಳಿಗೆ ತಮ್ಮ ಸಂಗಾತಿಯ ಸಾಮೀಪ್ಯ ಬಯಕೆ ಹೆಚ್ಚಾಗುತ್ತದೆ. ಹಾಗಾದರೆ ಕಿಸ್ ಮಾಡಿ ನೋವು ಪರಿಹರಿಸಿ ನಿರಾಳರಾಗಿ.

English summary

kissing a partner can make you live longer!

Kissing brings health benefits along with making you look younger and protecting you from lifestyle diseases- sounds like good news. Studies suggest that kissing helps in building a healthy you and we are only talking science here. Kissing not only strengthens the bond with your partner, but it also makes you healthy and reduces the chances of several lifestyle diseases as well. So, next time, make your kissing session last longer!
X
Desktop Bottom Promotion