For Quick Alerts
ALLOW NOTIFICATIONS  
For Daily Alerts

ಹಸಿ ಅಥವಾ ಅರೆ ಬೇಯಿಸಿದ ಮೊಟ್ಟೆ ಸೇವನೆಯ ಆರೋಗ್ಯಕ್ಕೆ ಅಪಾಯಕಾರಿಯಂತೆ!

|

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದರಲ್ಲಿ ಇರುವಷ್ಟು ಪೋಷಕಾಂಶಗಳು ಬೇರೆ ಯಾವುದೇ ಆಹಾರದಲ್ಲೂ ಲಭ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ. ದಿನಕ್ಕೊಂದು ಮೊಟ್ಟೆ ಸೇವನೆ ಮಾಡಿದರೆ ಅದು ಆರೋಗ್ಯ ಕಾಪಾಡುವುದು ಎನ್ನುವ ಮಾತಿದೆ. ಅದರಲ್ಲೂ ಹಸಿ ಮೊಟ್ಟೆ ಸೇವಿಸಿದರೆ ಆರೋಗ್ಯವು ಉತ್ತಮವಾಗಿರುವುದು ಎಂದು ಹೇಳಲಾಗುತ್ತದೆ. ಇದರಿಂದ ಹೆಚ್ಚಿನ ಜನರು ಹಸಿ ಮೊಟ್ಟೆಯಲ್ಲಿ ಹಾಲಿಗೆ ಹಾಕಿಕೊಂಡು ಕುಡಿಯುವರು.

ಕೆಲವು ಮಂದಿ ಅರ್ಧ ಬೇಯಿಸಿದ ಮೊಟ್ಟೆಯನ್ನು ತಿನ್ನುವುದನ್ನು ತುಂಬಾ ಇಷ್ಟಪಡುವರು. ಹಸಿ ಮೊಟ್ಟೆಯ ಬಿಳಿ ಭಾಗವವನ್ನು ಕ್ರೀಮ್ ಕೇಕ್ ಮತ್ತು ಮಯೋನಿಸ್ ಗೆ ಹಾಕಲಾಗುತ್ತದೆ. ಈ ಲೇಖನದಲ್ಲಿ ಹಸಿ ಮೊಟ್ಟೆಯಲ್ಲಿ ಇರುವಂತಹ ಕೆಲವೊಂದು ಬ್ಯಾಕ್ಟೀರಿಯಾಗಳು ಆಹಾರ ವಿಷವಾಗಲು ಯಾವ ರೀತಿ ಕಾರಣವಾಗುವುದು ಎಂದು ನಾವು ನಿಮಗೆ ಹೇಳಲಿದ್ದೇವೆ. ಇದರಿಂದ ಹಸಿ ಮೊಟ್ಟೆ ಸೇವನೆ ಸಂಪೂರ್ಣವಾಗಿ ತ್ಯಜಿಸಬೇಕು ಎನ್ನುವ ಪ್ರಶ್ನೆ ಬರಬಹುದು. ಇದನ್ನು ನೀವು ಓದುತ್ತಾ ಸಾಗಿ...

ಹಸಿ ಮೊಟ್ಟೆ ಸೇವಿಸುವ ಬಹುದೊಡ್ಡ ಅಪಾಯ

ಹಸಿ ಮೊಟ್ಟೆ ಸೇವಿಸುವ ಬಹುದೊಡ್ಡ ಅಪಾಯ

ಹಸಿ ಮೊಟ್ಟೆಯಲ್ಲಿ ಕೂಡ ಬೇಯಿಸಿದ ಮೊಟ್ಟೆಯಷ್ಟೇ ಪೋಷಕಾಂಶಗಳು ಸಿಗುವುದು. ಆದರೆ ಬೇಯಿಸಿದ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾ ಎನ್ನುವ ಹಾನಿಕಾರಕ ಬ್ಯಾಕ್ಟೀರಿಯಾದ ಅಪಾಯವು ಇರುವುದಿಲ್ಲ. ಹಸಿ ಅಥವಾ ಅರೆ ಬೇಯಿಸಿದ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ ಅಪಾಯವು ಹೆಚ್ಚಾಗಿರುವುದು. ಯಾಕೆಂದರೆ ಈ ಮೊಟ್ಟೆ ಇಟ್ಟಿರುವಂತಹ ಕೋಳಿಗೆ ಈ ಬ್ಯಾಕ್ಟೀರಿಯಾದ ಸೋಂಕು ತಗುಲಿರಬಹುದು ಅಥವಾ ತುಂಬಾ ಅಸ್ವಚ್ಛವಾಗಿರುವ ಜಾಗದಲ್ಲಿ ಮೊಟ್ಟೆಯನ್ನು ಇಟ್ಟಿರಬಹುದು. ಆದರೆ ಮೊಟ್ಟೆ ಬೇಯಿಸುವ ಕಾರಣದಿಂದಾಗಿ ಎಲ್ಲಾ ರೀತಿಯ ಬ್ಯಾಕ್ಟೀರಿಯಾವು ಕೊಲ್ಲಲ್ಪಡುವುದು. ಸಾಲ್ಮೊನೆಲ್ಲಾ ತುಂಬಾ ಅಪಾಯಕಾರಿ ಮತ್ತು ಆಹಾರ ವಿಷವಾಗಲು, ಹೊಟ್ಟೆಯ ಸಮಸ್ಯೆ, ಭೇದಿ, ಹೊಟ್ಟೆ ಸೆಳೆತ ಮತ್ತು ಜ್ವರಕ್ಕೆ ಕಾರಣವಾಗಬಹುದು.

ಹಸಿ ಮೊಟ್ಟೆಯಲ್ಲಿ ಇರುವ ಪೋಷಕಾಂಶ ಮೌಲ್ಯಗಳು

ಹಸಿ ಮೊಟ್ಟೆಯಲ್ಲಿ ಇರುವ ಪೋಷಕಾಂಶ ಮೌಲ್ಯಗಳು

ಒಂದು ದೊಡ್ಡ ಮೊಟ್ಟೆಯಲ್ಲಿ ಇರುವ ಪೋಷಕಾಂಶ ಮೌಲ್ಯಗಳು

*ಕ್ಯಾಲರಿ: ಹಸಿ ಮೊಟ್ಟೆಯಲ್ಲಿ 72 ಮತ್ತು ಬೇಯಿಸಿದ ಮೊಟ್ಟೆಯಲ್ಲಿ 84 ಇರುವುದು.

*ಪ್ರೋಟೀನ್: ಹಸಿ ಮೊಟ್ಟೆಯಲ್ಲಿ 6 ಗ್ರಾಂ ಮತ್ತು ಬೇಯಿಸಿದ ಮೊಟ್ಟೆಯಲ್ಲಿ 6.4 ಗ್ರಾಂ. ಇರುವುದು.

*ಕೊಬ್ಬು: ಹಸಿ ಮೊಟ್ಟೆಯಲ್ಲಿ 5 ಗ್ರಾಂ ಮತ್ತು ಬೇಯಿಸಿದ ಮೊಟ್ಟೆಯಲ್ಲಿ 5.4 ಗ್ರಾಂ ಇದೆ.

*ಪೋಸ್ಪರಸ್: ಆರ್ ಡಿಐಯ ಶೇ.10ರಷ್ಟಿದೆ.

*ಸೆಲೆನಿಯಂ: ಆರ್ ಡಿಐಯ ಶೇ.23ರಷ್ಟಿದೆ.

*ಫಾಲಟೆ: ಆರ್ ಡಿಐಯ ಶೇ.6ರಷ್ಟಿದೆ.

*ವಿಟಮಿನ್ ಎ: ಆರ್ ಡಿಐಯ ಶೇ. 5ರಷ್ಟಿದೆ.

*ವಿಟಮಿನ್ ಬಿ2(ರಿಬೊಫ್ಲಾವಿನ್): ಆರ್ ಡಿಐಯ ಶೇ.14ರಷ್ಟಿದೆ.

Most Read: ದಿನಕ್ಕೊಂದು ಮೊಟ್ಟೆ ತಿನ್ನುವವರು ಓದಲೇಬೇಕಾದ ಲೇಖನವಿದು...

ಬಯೋಟಿನ್ ಹೀರುವಿಕೆ ತಡೆಯುವುದು

ಬಯೋಟಿನ್ ಹೀರುವಿಕೆ ತಡೆಯುವುದು

ಹಸಿ ಮೊಟ್ಟೆ ಸೇವನೆಯು ಬಯೋಟಿನ್ ಕೊರತೆಗೆ ಸಂಬಂಧಿಸಿದ್ದಾಗಿದೆ. ಬಯೊಟಿನ್(ನೀರು ಹೀರುವ ವಿಟಮಿನ್ ಬಿ) ಮತ್ತು ಹಸಿ ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೋಟೀನ್ ಅವಿಡಿನ್ ಇದೆ. ಬಯೋಟಿನ್ ನ್ನು ಅವಿಡಿನ್ ಬಂಧಿಸುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಬಯೋಟಿನ್ ಹೀರಿಕೊಳ್ಳದಂತೆ ತಡೆಯುವುದು. ಮೊಟ್ಟೆ ಬೇಯಿಸುವ ಪರಿಣಾಂ ಇದು ಅವಿಡಿನ್ ನ ಬಂಧಿಸುವ ಕಾರ್ಯವನ್ನು ಧ್ವಂಸ ಮಾಡುವುದು. ಅದಾಗ್ಯೂ, ಅತಿಯಾಗಿ ಹಸಿ ಮೊಟ್ಟೆಯನ್ನು ಸೇವಿಸಿದರೆ ಮಾತ್ರ ಆಗ ಕೊರತೆ ಕಂಡುಬರುವುದು.

ಹಸಿ ಮೊಟ್ಟೆಯಲ್ಲಿ ಹೆಚ್ಚಿನ ಪೋಷಕಾಂಶಗಳು ಇದೆ

ಹಸಿ ಮೊಟ್ಟೆಯಲ್ಲಿ ಹೆಚ್ಚಿನ ಪೋಷಕಾಂಶಗಳು ಇದೆ

ಅತಿಯಾಗಿ ಬೇಯಿಸಿದ ಮೊಟ್ಟೆಗಳಲ್ಲಿ ಗ್ಲೈಕೋಟಾಕ್ಸಿನ್ ಗಳು ಎನ್ನುವ ಅಂಶವು ಇರುವುದು. ಇದು ಮಧುಮೇಹ ಮತ್ತು ಇತರ ಕೆಲವೊಂದು ದೀರ್ಘಕಾಲಿಕ ಕಾಯಿಲೆಗಳ ಸಮಸ್ಯೆಯನ್ನು ಹೆಚ್ಚು ಮಾಡುವುದು. ಗ್ಲೈಕೋಟಾಕ್ಸಿನ್ ಗಳು ಆಹಾರವನ್ನು ಅತಿಯಾಗಿ ಬೇಯಸಿದ ಪರಿಣಾಮ ಅಥವಾ ಹೆಚ್ಚು ಉಷ್ಣತೆಯಲ್ಲಿ ಬೇಯಿಸಿದರೆ ಕಂಡುಬರುವುದು. ಇದರಿಂದ ಹಸಿ ಮೊಟ್ಟೆಯಲ್ಲಿ ಯಾವುದೇ ಗ್ಲೈಕೋಟಾಕ್ಸಿನ್ ಗಳು ಇರುವುದಿಲ್ಲ. ಗ್ಲೈಕೋಟಾಕ್ಸಿನ್ ಗಳು ಇಲ್ಲದೆ ಇರುವ ಪರಿಣಾಂ ಹಸಿ ಮೊಟ್ಟೆ ತುಂಬಾ ಆರೋಗ್ಯಕಾರಿ. ಇದು ಬೇಯಿಸಿದ ಮೊಟ್ಟೆಗಿಂತ ಹೆಚ್ಚು ಪೋಷಕಾಂಶಗಳನ್ನು ಇಟ್ಟುಕೊಳ್ಳುವುದು. ಕಡಿಮೆ ಉಷ್ಣತೆಯಲ್ಲಿ ಮೊಟ್ಟೆ ಬೇಯಿಸುವುದು ಒಳ್ಳೆಯ ವಿಧಾನ.

Most Read:ಬ್ರೇಕ್ ಫಾಸ್ಟ್‌ಗೆ ಮೊಟ್ಟೆ ಹಾಗೂ ಹಾಲು ಆರೋಗ್ಯಕ್ಕೆ ಒಳ್ಳೆಯದೇ?

ಅಪಾಯ ಕಡಿಮೆ ಮಾಡುವುದು ಹೇಗೆ

ಅಪಾಯ ಕಡಿಮೆ ಮಾಡುವುದು ಹೇಗೆ

ಹಸಿ ಮೊಟ್ಟೆ ಸೇವನೆ ಮಾಡುವಾಗ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಆದರೆ ಇದನ್ನು ಕಡಿಮೆ ಮಾಡಲು ಕೆಲವೊಂದು ಸರಳ ವಿಧಾನಗಳು ಇವೆ.

ಅವಧಿ ಮೀರಿದ ಮೊಟ್ಟೆಗಳನ್ನು ಯಾವತ್ತೂ ಖರೀದಿಸಬೇಡಿ.

ಕೊಳಕು ಮತ್ತು ಒಡೆದಿರುವ ಮೊಟ್ಟೆ ಬಳಸಬೇಡಿ.

ಅಪಾಯ ಕಡಿಮೆ ಮಾಡಲು ಪ್ರಿಡ್ಜ್‌ನಲ್ಲಿ ಮೊಟ್ಟೆಗಳನ್ನು ಇಡಿ.

ನಿರ್ಣಯ

ನಿರ್ಣಯ

ಮಕ್ಕಳು, ವಯೋವೃದ್ಧರು ಮತ್ತು ಗರ್ಭಿಣಿ ಮಹಿಳೆಯರು ಹಸಿ ಮೊಟ್ಟೆ ಸೇವನೆ ಮಾಡುವುದನ್ನು ಕಡೆಗಣಿಸಬೇಕು. ಹಸಿ ಮೊಟ್ಟೆಯು ಶೇ.100ರಷ್ಟು ಸುರಕ್ಷಿತವಲ್ಲ ಎಂದು ಯಾರೂ ಹೇಳುವಂತಿಲ್ಲ. ಹಸಿ ಮೊಟ್ಟೆಯು ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರುವಂತಹ ಸಾಧ್ಯತೆಯು ಇರುವುದು. ಶಿತಲೀಕರಿಸಲ್ಪಟ್ಟಿರುವ ಮೊಟ್ಟೆ ಖರೀದಿ ಮಾಡುವುದರಿಂದ ಈ ಅಪಾಯ ತಪ್ಪಿಸಬಹುದು.

English summary

Is it risky to eat raw or semi-cooked eggs?

Raw eggs are considered healthy and hence many people add them to milk and consume. Some people also have a taste for runny yolk and love to have half cooked eggs. In fact, uncooked egg whites are part of cream cakes and mayonnaise. But we may be exposing ourselves to dangerous bacteria that may cause food poisoning. But then, should one give up eating raw eggs completely
X
Desktop Bottom Promotion