For Quick Alerts
ALLOW NOTIFICATIONS  
For Daily Alerts

ದಿನವೂ ಹಾಲು ಕುಡಿಯುತ್ತಿದ್ದೀರಾ? ಈ ಅಭ್ಯಾಸ ಒಳ್ಳೆಯದೇ ಕೆಟ್ಟದ್ದೇ?

|

ಈ ವಿಶ್ವದೆಲ್ಲೆಡೆ ಎಲ್ಲಾ ಜನರು ಯಾವುದೇ ಅಳುಕಿಲ್ಲದೇ ಸೇವಿಸುವ ಆಹಾರವೆಂದರೆ ಹಾಲು. ಅತ್ಯಂತ ಪೌಷ್ಟಿಕ ಹಾಗೂ ಸುಲಭವಾಗಿ ಜೀರ್ಣವಾಗುವ ಹಾಲನ್ನು ಹಾಗೇ ಸೇವಿಸುವ ಜೊತೆಗೇ ಹಲವು ಖಾದ್ಯಗಳಲ್ಲಿಯೂ ಬಳಸಲಾಗುತ್ತದೆ. ಇದರಲ್ಲಿರುವ ಪೌಷ್ಟಿಕಾಂಶಗಳ ವೈವಿಧ್ಯತೆಯಿಂದಾಗಿ ಇದನ್ನೊಂದು ಪರಿಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರಿಗೂ ಸುಲಭವಾಗಿ ಜೀರ್ಣವಾಗುವ ಹಾಲು ಪುಟ್ಟ ಮಕ್ಕಳ ಪಾಲಿಗೆ ಜೀವನದ ಮೊದಲ ಆಹಾರವೂ ಆಗಿದೆ. ಅಷ್ಟೇ ಅಲ್ಲ, ಮಕ್ಕಳು ಬೆಳೆಯುತ್ತಾ ಹೋದಂತೆ ಮಕ್ಕಳು ನಿತ್ಯವೂ ಹಾಲನ್ನು ಕುಡಿಯುವಂತೆ ತಾಯಂದಿರು ಕಾಳಜಿ ವಹಿಸುತ್ತಾರೆ. ಅಷ್ಟೇ ಅಲ್ಲ, ಸಾಮಾನ್ಯ ಶೀತ ಕೆಮ್ಮು ಅಥವಾ ಜ್ವರ ಬಂದರೆ ನಮಗೆ ಮೊತ್ತ ಮೊದಲಾಗಿ ನೀಡಲಾಗುವ ಸಿದ್ಧೌಷಧಿ ಎಂದರೆ ಅರಿಶಿನ ಬೆರೆತ ಹಾಲು. ಈ ವಿಧಾನ ಇಂದಿನದ್ದೇನೂ ಅಲ್ಲ, ತಕ್ಷಣದ ಉಪಶಮನಕ್ಕಾಗಿ ಈ ವಿಧಾನವನ್ನು ನೂರಾರು ವರ್ಷಗಳಿಂದ ಈ ವಿಧಾನವನ್ನು ನಮ್ಮ ಪೂರ್ವಜರು ಅನುಸರಿಸುತ್ತಾ ಬಂದಿದ್ದಾರೆ.

ಹಾಲು ಶಕ್ತಿಯ ಆಗರವಾಗಿದೆ ಹಾಗೂ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಹಾಗೂ ಒಂದು ಲೋಟ ಹಾಲಿನ ಸೇವನೆಯಿಂದ ಹೊಟ್ಟೆ ಹೆಚ್ಚು ಹೊತ್ತು ತುಂಬಿದಂತಾಗಿ ಅನಗತ್ಯ ಆಹಾರ ಸೇವನೆಯಿಂದ ತಡೆದಂತಾಗುತ್ತದೆ. ಒಂದು ಲೋಟ ಹಾಲನ್ನು ಮುಂಜಾನೆಯ ಉಪಾಹಾರದೊಂದಿಗೆ ಸೇವಿಸಿದರೆ ಇಡಿಯ ದಿನ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆಗೆ ನೆರವಾಗುವ ಜೊತೆಗೇ ಇದರಲ್ಲಿರುವ ಪ್ರೋಟೀನುಗಳು ಸ್ನಾಯುಗಳನ್ನೂ ಬಲಪಡಿಸುತ್ತದೆ. ಅಲ್ಲದೇ ಉಳಿದ ಪೋಷಕಾಂಶಗಳು ದಿನದ ಚಟುವಟಿಕೆಗಳನ್ನು ನಿರಾಯಾಸವಾಗಿ ಪೂರೈಸಲು ನೆರವಾಗುತ್ತವೆ.

drinking milk daily

ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಕೆಲವು ಆಹಾರಗಳಲ್ಲಿವೆ ಹಾಗೂ ಹಾಲು ಇದರಲ್ಲಿ ಪ್ರಮುಖವಾಗಿದೆ. ಇದಕ್ಕೆ ಕಾರಣ ಹಾಲಿನಲ್ಲಿರುವ ಸತು ಮತ್ತು ವಿಟಮಿನ್ ಡಿ. ವಿಶೇಷವಾಗಿ ಈ ಪೋಷಕಾಂಶಗಳು ಹೃದಯದ ಆರೋಗ್ಯಕ್ಕೆ ಅಗತ್ಯವಾಗುವೆ. ಅಲ್ಲದೇ ದಿನಕ್ಕೊಂದು ಲೋಟ ಹಾಲು ಕುಡಿಯುವ ಮೂಲಕ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ಅಲ್ಲದೇ ಹಾಲಿನಲ್ಲಿರುವ ಆರೋಗ್ಯಕರ ಕೊಬ್ಬುಗಳು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ.

ಕೆಲವು ಅಧ್ಯಯನಗಳ ಪ್ರಕಾರ ಹಾಲು ಮಧುಮೇಹವನ್ನು ತಡೆಗಟ್ಟುವ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಒಂದು ವೇಳೆ ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿದ್ದರೆ ಹಾಲಿನ ಸೇವನೆಯ ಬಳಿಕ ಈ ಮಟ್ಟ ಇಳಿಯುತ್ತದೆ ಎಂದು ಕಂಡುಕೊಳ್ಳಲಾಗಿದೆ. ಹಾಲಿನಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ.

Most Read: ಹಾಲು ಸೇವನೆಯಿಂದ ಕೂಡ ದೇಹದ ತೂಕವನ್ನು ಕಡಿಮೆ ಮಾಡಲು ಸಾಧ್ಯ!

ಹಾಲಿನ ಸೇವನೆಯಿಂದ ದೇಹಕ್ಕೆ ಉತ್ತಮ ಪ್ರಮಾಣದ ನೀರು ದೊರಕುತ್ತದೆ ಹಾಗೂ ನಿರ್ಜಲೀಕರಣದಿಂದ ತಪ್ಪಿಸುತ್ತದೆ ಹಾಗೂ ಈ ಆರ್ದ್ರತೆ ತ್ವಚೆಯ ಕಾಂತಿ ಹೆಚ್ಚಿಸುತ್ತದೆ. ಆದರೆ ಹಾಲು ಇಂದು ವ್ಯಾಪಾರದ ವಸ್ತುವಾಗಿದ್ದು ಹೆಚ್ಚು ಲಾಭ ಪಡೆಯುವ ವಂಚಕರು ಹಾಲಿನಲ್ಲಿ ಅಪಾಯಕಾರಿ ವಸ್ತುಗಗಳನ್ನು ಮಿಶ್ರಣ ಮಾಡಿರುತ್ತಾರೆ. ಒಂದು ವೇಳೆ ಈ ಹಾಲನ್ನು ಕುಡಿದರೆ ಆರೋಗ್ಯ ಕೆಡುವ ಜೊತೆಗೇ ತ್ವಚೆಯಲ್ಲಿ ಮೊಡವೆಗಳು ಮೂಡಲೂ ತೊಡಗುತ್ತವೆ. ಏಕೆಂದರೆ ಹಾಲಿಗೆ ಮಿಶ್ರಣ ಮಾಡುವ ರಾಸಾಯನಿಕಗಳು ದೇಹದಲ್ಲಿ ಆಕ್ಸಿಟೋಸಿನ್ ಪ್ರಮಾಣವನ್ನು ಹೆಚ್ಚಿಸಿ ದೇಹದ ಸಮತೋಲನವನ್ನು ಏರುಪೇರುಗೊಳಿಸುತ್ತವೆ.

ಹಾಲು ಸುಲಭವಾಗಿ ಕೆಡುವ ಆಹಾರವಾಗಿರುವ ಕಾರಣ ಇದನ್ನು ದೀರ್ಘಾವಧಿಯಲ್ಲಿ ಬಳಸಲು ಇಂದು ಹಲವಾರು ವಿಧಾನಗಳನ್ನು ಅನುಸರಿಸಲಾಗುತ್ತದೆ. ಪ್ಯಾಶ್ಚರೀಕರಿಸಿ ತಣಿಸಿ ವಾಯುವಿನ ಸಂಪರ್ಕವಿಲ್ಲದಂತೆ ಪ್ಯಾಕ್ ಮಾಡಿ ವಿತರಿಸುವುದು ಒಂದು ವಿಧಾನ. ಹಾಲಿನ ನೀರಿನಂಶವನ್ನು ಆವಿಯಾಗಿಸಿ ಹಾಲಿನ ಪುಡಿಯನ್ನಾಗಿಸಿ ಅಗತ್ಯವಿದ್ದಾಗ ಇದಕ್ಕೆ ಬಿಸಿನೀರು ಬೆರೆಸಿ ಹಾಲನ್ನು ಪಡೆಯುವುದು ಇನ್ನೊಂದು ವಿಧಾನ. ಆದರೆ ಆರೋಗ್ಯದ ದೃಷ್ಟಿಯಿಂದ ಮೊದಲ ವಿಧಾನವೇ ಹೆಚ್ಚು ಸೂಕ್ತವಾಗಿದೆ. ಒಂದು ವೇಳೆ ನೀವು ಯಾವುದಾದರೂ ಔಷಧಿಯನ್ನು ಸೇವಿಸುತ್ತಿದ್ದರೆ ಅಥವಾ ವೈದ್ಯರ ನಿಗಾವಿರುವ ಆಹಾರವನ್ನು ಸೇವಿಸುತ್ತಿದ್ದು ಹಾಲು ನಿಮಗೆ ಸೂಕ್ತವಲ್ಲ ಎಂದು ಸೂಚಿಸಿದ್ದರೆ ಹಾಲು ನಿಮಗೆ ಸೂಕ್ತವಲ್ಲ! ಉಳಿದಂತೆ ಎಲ್ಲರಿಗೂ ಹಾಲು ಒಗ್ಗುತ್ತದೆ. ಹಾಲಿನಲ್ಲಿರುವ ಲ್ಯಾಕ್ಟೋಸ್ ಒಂದು ಅದ್ಭುತ ಕಾರ್ಬೋಹೈಡ್ರೇಟ್ ಆಗಿದೆ ಹಾಗೂ ಇದು ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ನೆರವಾಗುತ್ತದೆ. ಕೆಲವರು ಲ್ಯಾಕ್ಟೋಸ್ ಅಸಹಿಷ್ಣುಗಳಾಗಿರುತ್ತಾರೆ.

Most Read: ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಅಂದರೆ ಇವರ ಜೀರ್ಣಾಂಗಗಳು ಲ್ಯಾಕ್ಟೋಸ್ ಇರುವ ಯಾವುದೇ ಆಹಾರವನ್ನು ಜೀರ್ಣಗೊಳಿಸಲು ಅಸಮರ್ಥವಾಗಿರುತ್ತವೆ. ಹಾಗಾಗಿ ಇವರು ಹಾಲು ಕುಡಿದರೆ ಹೊಟ್ಟೆಯುಬ್ಬರಿಕೆ, ಅಪಾನವಾಯು ಅಜೀರ್ಣತೆ, ಹೊಟ್ಟೆಯುರಿ ಮೊದಲಾದವು ಕಾಣಿಸಿಕೊಳ್ಳುತ್ತದೆ. ಉಳಿದವರಲ್ಲಿ ಈ ಲ್ಯಾಕ್ಟೋಸ್ ಜೀರ್ಣಗೊಂಡ ಬಳಿಕ ಗ್ಯಾಲಾಕ್ಟೋಸ್ ಮತ್ತು ಗ್ಲೂಕೋಸ್ ಆಗಿ ಒಡೆಯುತ್ತವೆ. ಹಾಗಾಗಿ ಈ ವ್ಯಕ್ತಿಗಳು ಲ್ಯಾಕ್ಟೋಸ್ ರಹಿತ ಹಾಲುಗಳಾದ ಓಟ್ಸ್ ಹಾಲು, ಸೋಯಾ ಅವರೆಯ ಹಾಲು, ಬಾದಾಮಿಯ ಹಾಲು ಮೊದಲಾದವುಗಳನ್ನು ಸೇವಿಸಬಹುದು. ಈ ವ್ಯಕ್ತಿಗಳು ಇತರ ಸ್ಥಳಗಳಲ್ಲಿ ಹಾಲು ಅಥವಾ ಹಾಲಿನಿಂದ ತಯಾರಿಸಿದ ಯಾವುದೇ ಆಹಾರವನ್ನು ಸೇವಿಸಬಾರದು ಏಕೆಂದರೆ ಹೆಚ್ಚಿನವು ಹಸುವಿನ ಹಾಲಿನಿಂದಲೇ ತಯಾರಿಸಿರಲಾಗಿರುತ್ತದೆ.

Most Read: ಹಾಲು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಈ ಸಂಗತಿಗಳು ತಿಳಿದಿರಲಿ...

ಈ ಎಲ್ಲಾ ವಿಷಯಗಳಿಂದ ಹಾಲು ಎಷ್ಟರ ಮಟ್ಟಿಗೆ ಸುರಕ್ಷಿತ ಆಹಾರ ಎಂದು ಸ್ಪಷ್ಟವಾಗುತ್ತದೆ. ಯಾರಿಗೆ ಲ್ಯಾಕ್ಟೋಸ್ ಸಹಿಸಲು ಸಾಧ್ಯವಿಲ್ಲವೋ ಆ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ನಿತ್ಯವೂ ಹಾಲನ್ನು ಯಾವುದೇ ಭಯವಿಲ್ಲದೇ ಸೇವಿಸಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಹಾಲನ್ನು ನಿತ್ಯವೂ ಸೇವಿಸಬಹುದು, ಆದರೆ ಇದಕ್ಕೊಂದು ಮಿತಿ ಇರುವುದು ಅಗತ್ಯ. ಆರೋಗ್ಯಕರ ಮಿತಿ ಎಂದರೆ ದಿನಕ್ಕೊಂದು ಲೋಟ. ಹಾಲು ತಾಜಾ ಆಗಿದ್ದು ಒಮ್ಮೆ ಬಿಸಿ ಮಾಡಿ ಆರಿಸಿದ ವಿಧಾನ ಅತ್ಯುತ್ತಮ ಆಯ್ಕೆಯಾಗಿದೆ.

ಆದರೆ ಎಲ್ಲರಿಗೂ ಈ ಸೌಲಭ್ಯ ಸಿಗುವುದು ಸಾಧ್ಯವಿಲ್ಲದ ಕಾರಣ ಕೆನೆಸಹಿತ ಪ್ಯಾಕ್ ಮಾಡಲಾದ, ಪ್ಯಾಶ್ಚರೀಕರಿಸಿದ ತಾಜಾ ಹಾಲು ಉತ್ತಮ ಆಯ್ಕೆಯಾಗಿದೆ. ಆದರೆ ಈ ಹಾಲನ್ನು ಒಂದು ಅಥವಾ ಎರಡು ದಿನಕ್ಕಿಂತ ಹೆಚ್ಚು ಕಾಲ ಉಳಿಸಿಕೊಳ್ಳಬಾರದು. ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ಉಳಿಸಿಡುವಂತೆ ಸಂರಕ್ಷಿಸಲಾದ ಯು.ಎಚ್. ಟಿ (ಅಲ್ಟ್ರಾ ಹೀಟ್ ಟ್ರೀಟ್ಮೆಂಟ್) ಹಾಲು, ಸ್ಕಿಮ್ಡ್ ಅಥವಾ ಹಾಲಿನ ಪುಡಿಯನ್ನು ನೀರಿಗೆ ಬೆರೆಸಿ ತಯಾರಿಸಿದ ಹಾಲು ಪ್ಯಾಕೆಟ್ಟುಗಳಲ್ಲಿ ದೊರಕುತ್ತವೆ. ಈ ಹಾಲುಗಳು ಅನಿವಾರ್ಯ ಸಂದರ್ಭಕ್ಕೆ ಉಚಿತವೇ ಹೊರತು ನಿತ್ಯ ಬಳಕೆಗೆ ತಾಜಾ ಹಾಲೇ ಉತ್ತಮ. ನಿತ್ಯವೂ ಒಂದು ಲೋಟ ಹಾಲು ಕುಡಿಯುವುದು ಆರೋಗ್ಯಕರ. ಒಂದು ವೇಳೆ ಸ್ಥೂಲಕಾಯ, ತೂಕ ಇಳಿಕೆ ಮೊದಲಾದ ಗುರಿಗಳಿಗೆ ಈ ಹಾಲು ಅಡ್ಡಿಯಾಗುತ್ತದೆ ಎಂದಿದ್ದಲ್ಲಿ ಕೆನೆರಹಿತ ಉತ್ಪನ್ನಗಳನ್ನು ಬಳಸಬಹುದು.

English summary

Is drinking milk daily a good or a bad habit

Milk is a staple food in any cuisine and is widely consumed by everyone across the globe. Due to the presence of a variety of nutrients, it is considered a whole meal in itself. The childhood memory of your mother forcing you to gulp a full glass of milk every day must be still fresh in your mind. Not only that, whenever we get a fever or cold, our granny always recommends a glass of hot milk with turmeric as a tried and tested remedy to get fast relief.
X
Desktop Bottom Promotion