For Quick Alerts
ALLOW NOTIFICATIONS  
For Daily Alerts

ಓವರ್ ಟೈಮ್ ಕೆಲಸ ಮಾಡಿದರೆ, ಆರೋಗ್ಯದ ಮೇಲೆ ಹೀಗೆಲ್ಲಾ ಸಮಸ್ಯೆ ಬರಬಹುದು!

|

ಉದ್ಯೋಗಂ ಪುರುಷ ಲಕ್ಷಣಂ ಎಂಬುದು ಹಳೆಯ ಗಾಧೆ . ಆಗಿನಿಂದ ಪ್ರಚಲಿತವಾದ ಈ ಗಾಧೆ ಈಗಿನ ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಾದಂತೆ ಕಾಣುತ್ತಿದೆ . ಏಕೆಂದರೆ ಆಗಿನ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳು ಮನೆಯ ಹೊರಗಡೆ ಬಂದು ಕೆಲಸ ಮಾಡುವಂತಿರಲಿಲ್ಲ. ಆದರೆ ಈಗ ದುಡಿಯುವುದರಲ್ಲಿ ಗಂಡು ಹೆಣ್ಣು ಇಬ್ಬರೂ ಸಮಾನರು . ಯಾರಿಗೆ ಯಾರೂ ಕಮ್ಮಿಯಿಲ್ಲ ಎಂಬಂತೆ ಇಬ್ಬರೂ ಕಷ್ಟ ಪಟ್ಟು ದುಡಿಯುತ್ತಾರೆ . ಕಾನೂನಿನ ಪ್ರಕಾರ ಯಾವುದೇ ಸಂಸ್ಥೆಯಾದರೂ 8 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳಬಹುದು . ನಂತರ ಕೆಲಸ ಮಾಡಿದರೆ ಅದು ಓವರ್ ಟೈಮ್ ಕೆಲಸ ಎಂದು ಪರಿಗಣಿಸಲಾಗುತ್ತದೆ . ಈಗಿನ ದುಬಾರಿ ಮತ್ತು ವೇಗದ ಕಲಿಗಾಲದಲ್ಲಿ ಎಲ್ಲರಿಗೂ ಹೆಚ್ಚು ಹೆಚ್ಚು ದುಡಿಯುವ ತವಕ . ಏಕೆಂದರೆ ಸಂಸಾರದ ತಾಪತ್ರಯವಾಗಿರಬಹುದು ಅಥವಾ ಬೇರೇನೇ ಕಾರಣವಾಗಿರಬಹುದು . ದುಡಿಯುವುದು ಒಂದು ಹುಚ್ಚು . ಅವರಿಗಿಂತ ನಾವು ಹೆಚ್ಚು ದುಡಿಯಬೇಕೆಂಬ ಬಯಕೆ ಬೇರೆ . ಇದರಲ್ಲಿ ಮಾತ್ರ ಸೊರಗುವುದು ಅವರ ದೇಹದ ಆರೋಗ್ಯ .

ಪ್ರತಿದಿನದ ಬದುಕು ಸಾಗಿಸಲು ದುಡಿಮೆ ಅವಶ್ಯಕ . ಆದರೆ ದುಡಿಮೆಯೇ ಬದುಕಾಗಬಾರದು . ಏಕೆಂದರೆ ನಮ್ಮ ತನದ ಗೌರವ ಸ್ವಾಭಿಮಾನವೂ ಮುಖ್ಯ . ನಾವು ಮಾಡುವ ಕೆಲಸ ನಮಗೆ ನೆಮ್ಮದಿಯನ್ನು ಕೊಡುವಂತಿರಬೇಕು . ನಮಗೆ ಇಷ್ಟವಾಗಬೇಕು . ಅದನ್ನು ಬಿಟ್ಟು ಕೆಲಸವೇ ನಮ್ಮ ಜೀವನದಲ್ಲಿ ನಮ್ಮ ನೆಮ್ಮದಿಯನ್ನು ಹಾಳು ಮಾಡಿ ನಮ್ಮ ಸಂತೋಷವನ್ನು ಕಿತ್ತುಕೊಳ್ಳುವಂತೆ ಆಗಬಾರದು . ಈ ನಡುವೆ ಅಂತೂ ನಾವು ದುಡಿಯುವ ಯಂತ್ರವಾಗಿಬಿಟ್ಟಿದ್ದೇವೆ. ವಾರಕ್ಕೆ ಬರೋಬ್ಬರಿ 40 ರಿಂದ 50 ಗಂಟೆ ದುಡಿದರೆ ಅದು ಒಬ್ಬ ಮನುಷ್ಯನ ಮತ್ತು ಆತನ ಸಂಸಾರದ ಜೀವನ ಸಾಗಿಸುವುದಕ್ಕೆ ಬಹಳವೇ ಅನುಕೂಲ. ಅದಕ್ಕಿಂತ ಹೆಚ್ಚಾದರೆ ಕೆಲಸ ಬಿಟ್ಟು ಮಿಕ್ಕೆಲ್ಲಾ ಸುಖ ಸಂತೋಷ ನಲಿವು ಕುಟುಂಬದವರ ಜೊತೆಗಿನ ಒಡನಾಟ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಈಗ ಅಗತ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಿದರೆ ಯಾವ ರೀತಿಯ ತೊಂದರೆಗಳನ್ನು ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬುದನ್ನು ನೋಡೋಣ...

ಹೆಚ್ಚು ಕೆಲಸ ಮಾಡಿದರೆ ಮದ್ಯಪಾನದ ದಾಸರಾಗಬೇಕಾಗಿ ಬರಬಹುದು

ಹೆಚ್ಚು ಕೆಲಸ ಮಾಡಿದರೆ ಮದ್ಯಪಾನದ ದಾಸರಾಗಬೇಕಾಗಿ ಬರಬಹುದು

ಮೊದಲೇ ಹೇಳಿದ ಹಾಗೆ ಮನುಷ್ಯನಿಗೆ ಹೊರಗಿನ ಪ್ರಪಂಚದ ಕೆಲಸದ ದುಡಿಮೆಯು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ತನ್ನ ಮನೆಯ ತನ್ನ ಸಂಸಾರದ ಸುಖ ಸಂತೋಷ . ಯಾವ ವ್ಯಕ್ತಿ ಮನೆಯನ್ನು ಕಡೆಗಣಿಸುವಷ್ಟು ಹೊರಗೆ ದುಡಿಯುತ್ತಾನೋ ಆತನು ಖಂಡಿತ ಮತಿಭ್ರಮಣ ವ್ಯಕ್ತಿಯಾದಂತೆ ಆಗುತ್ತಾನೆ . ಅಂತಹವರು ಖಂಡಿತ ಒಂದಿಲ್ಲೊಂದು ದುಶ್ಚಟಗಳಿಗೆ ಬಲಿಯಾಗಿರುತ್ತಾರೆ . ಅದರಲ್ಲಿ ಮುಖ್ಯವಾದುದು ಮದ್ಯಪಾನ . ಈಗಂತೂ ಈ ಆಧುನಿಕ ಪ್ರಪಂಚದಲ್ಲಿ ಮದ್ಯಪಾನಕ್ಕೆ ಗಂಡು ಹೆಣ್ಣು ಎಂಬ ಭೇದ ಭಾವವಿಲ್ಲ . ಅನೇಕ ವರದಿಗಳ ಪ್ರಕಾರ ಗಂಡಸರು ವಾರಕ್ಕೆ 21 ಬಾರಿ ಮತ್ತು ಹೆಂಗಸರು ವಾರಕ್ಕೆ 14 ಬಾರಿಗಿಂತಲೂ ಹೆಚ್ಚು ಮದ್ಯಪಾನ ಮಾಡಿದ್ದೇ ಆದರೆ ಖಂಡಿತ ಅವರು ಮದ್ಯಪಾನದ ದಾಸರಾಗಿರುತ್ತಾರೆ . ಇದು ಖಂಡಿತ ಅವರ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತದೆ . ಅವರ ಜೀವನವೇ ಕೊನೆಯಾಗುವ ಪರಿಸ್ಥಿತಿಯ ಮಟ್ಟವನ್ನು ಬೇಕಾದರೂ ತಲುಪಬಹುದು .

ಓವರ್ ಟೈಮ್ ಕೆಲಸ ಮಾಡುತ್ತಿದ್ದರೆ ನೀವು ನಿಮ್ಮ ಬೆನ್ನು ಮತ್ತು ಕತ್ತು ನೋವಿಗೆ ಆಹ್ವಾನ ಕೊಟ್ಟಂತೆ

ಓವರ್ ಟೈಮ್ ಕೆಲಸ ಮಾಡುತ್ತಿದ್ದರೆ ನೀವು ನಿಮ್ಮ ಬೆನ್ನು ಮತ್ತು ಕತ್ತು ನೋವಿಗೆ ಆಹ್ವಾನ ಕೊಟ್ಟಂತೆ

ಈಗಿನ ಹಲವಾರು ಸಂಸ್ಥೆಗಳಲ್ಲಿ ಕಾರ್ಮಿಕರ ಕುಟುಂಬದ ಪ್ರಾಮುಖ್ಯತೆಯನ್ನು ಗಮನಿಸಿ ವಾರದಲ್ಲಿ 5 ದಿನ ಕೆಲಸ ಮತ್ತು 2 ದಿನ ರಜೆ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ . ಆದರೆ ಈ 5 ದಿನ ಕೆಲಸದ ದಿನಗಳಲ್ಲಿ ಓವರ್ ಟೈಮ್ ಕೆಲಸ ಎಂಬ ಆಪ್ಷನ್ ಕೂಡ ಇದೆ . ಇದು ಕಡ್ಡಾಯವೇನೂ ಅಲ್ಲದಿದ್ದರೂ ಇಷ್ಟವಿರುವವರು ಮಾಡಬಹುದು . ಆದರೆ ಧನ ದಾಹಿಗಳಾದ ಹಲವಾರು ಜನ ವಾರದ 5 ದಿನವೂ ಈ ಓವರ್ ಟೈಮ್ ಕೆಲಸ ಮಾಡಲು ಒಪ್ಪಿ ಯಾವಾಗಲೂ ಆಫೀಸನ್ನು ಮನೆ ಎಂದುಕೊಂಡು ದುಡಿದು ದುಡಿದು ಸುಸ್ತಾಗುತ್ತಾರೆ . ಆದರೆ ವಾರದಲ್ಲಿ ಒಂದು ಅಥವಾ ಎರಡು ದಿನ ಓವರ್ ಟೈಮ್ ಕೆಲಸ ಮಾಡಿದರೆ ಯಾವುದೇ ತೊಂದರೆ ಇರುವುದಿಲ್ಲ . ಅದು ಬಿಟ್ಟು ಈ ರೀತಿ ವಾರದ ಎಲ್ಲಾ ದಿನಗಳೂ ದುಡ್ಡಿಗೆ ಆಸೆ ಪಟ್ಟು ಅತಿಯಾದ ಕೆಲಸಕ್ಕೆ ನಿಮ್ಮನ್ನು ನೀವೇ ಬಳಸಿಕೊಂಡರೆ ನಿಮ್ಮ ಕತ್ತು ನೋವು ಮತ್ತು ಬೆನ್ನು ನೋವಿಗೆ ದುಡಿದ ಹಣವನ್ನೆಲ್ಲಾ ಖರ್ಚು ಮಾಡಬೇಕಾಗಿ ಬರುವುದಂತೂ ಗ್ಯಾರಂಟಿ . ಈ ರೀತಿಯ ಅತಿಯಾದ ಕೆಲಸದಿಂದ ಸಾಮಾನ್ಯವಾಗಿ ಹೆಂಗಸರಿಗೆ ಕತ್ತು ನೋವು ಕಾಡಿದರೆ ಗಂಡಸರಿಗೆ ಬೆನ್ನು ಹಾಗು ಸೊಂಟ ನೋವು ಕಾಡುತ್ತದೆ .

ನಿಮ್ಮ ಕೆಲಸದಲ್ಲಿ ನೀವು ಬ್ಯುಸಿ ,ಆದರೆ ಇದ್ದಕ್ಕಿದ್ದಂತೆ ಸಂಬಂಧದಲ್ಲಿ ಬಿರುಕು ಮೂಡುವುದಂತೂ ಖಚಿತ !!

ನಿಮ್ಮ ಕೆಲಸದಲ್ಲಿ ನೀವು ಬ್ಯುಸಿ ,ಆದರೆ ಇದ್ದಕ್ಕಿದ್ದಂತೆ ಸಂಬಂಧದಲ್ಲಿ ಬಿರುಕು ಮೂಡುವುದಂತೂ ಖಚಿತ !!

ಕುಂಬಾರನಿಗೆ ವರುಷ ಕಟ್ಟಿಗೆಗೆ ನಿಮಿಷ ಎಂಬಂತೆ ಸಂಬಂಧ ಎನ್ನುವುದು ಬೆಸೆಯಬೇಕಾದರೆ ಬಹಳ ಸಮಯವೇ ಹಿಡಿಯುತ್ತದೆ . ಅದೇ ಸಂಬಂಧ ಹಾಳಾಗಬೇಕಾದರೆ ಕೇವಲ ನಿಮಿಷಗಳೇ ಸಾಕು . ಈ ವಿಷಯಕ್ಕೆ ಹೋಲಿಸಿಕೊಂಡರೆ ಹೆಚ್ಚಿನ ಕೆಲಸ ಮಾಡುವವರು ಸಂಬಂಧಗಳನ್ನು ಉಳಿಸಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ ಎನ್ನುತ್ತದೆ ಸಂಶೋಧನೆ . ಏಕೆಂದರೆ ಅವರಲ್ಲಿರುವ ಮಾನಸಿಕ ಒತ್ತಡ , ಸಮಯದ ಅಭಾವ , ಖಿನ್ನತೆ ಹೀಗೆ ಹಲವಾರು ಕಾರಣಗಳಿಂದ ಆದಷ್ಟು ಒಬ್ಬಂಟಿಯಾಗಿ ಇರಲು ಬಯಸುತ್ತಾರೆ . ಇದರಿಂದ ಬಂಧು ಬಳಗ ದೂರಾಗಿ ಸಂಬಂಧಗಳು ಹದಗೆಡುತ್ತವೆಯಲ್ಲದೆ ಮತ್ತೇನು ?

Most Read: ನೀವು ತಿಳಿದಿರುವ ಕೆಲವೊಂದು ಆರೋಗ್ಯ ಸಲಹೆಗಳು ಸುಳ್ಳಾಗಿರಬಹುದು!

ನಿಮ್ಮ ಹೃದಯವು ನಿಮ್ಮ ಜೊತೆಯಲ್ಲಿಯೇ ಹೆಚ್ಚಾಗಿ ಕೆಲಸ ಮಾಡುತ್ತದೆ ಎಂಬುದನ್ನು ಮರೆಯಬೇಡಿ

ನಿಮ್ಮ ಹೃದಯವು ನಿಮ್ಮ ಜೊತೆಯಲ್ಲಿಯೇ ಹೆಚ್ಚಾಗಿ ಕೆಲಸ ಮಾಡುತ್ತದೆ ಎಂಬುದನ್ನು ಮರೆಯಬೇಡಿ

ಹೃದಯ ದೇವರು ನಮಗೆ ಕೊಟ್ಟಿರುವ ಒಂದು ವರದಾನವೇ ಸರಿ . ಮನುಷ್ಯ ಹುಟ್ಟಿದಾಗ ಕೆಲಸ ಶುರು ಮಾಡುವ ಹೃದಯ ನಂತರದ ಕೆಲಸ ನಿಲ್ಲಿಸುವುದು ಅವನು ಸತ್ತಾಗಲೇ . ಅವನು ನಿದ್ದೆ ಮಾಡುತ್ತಿರುವಾಗಲೂ ಅದು ತನ್ನ ಕೆಲಸ ಮಾಡುತ್ತಿರುತ್ತದೆ . ಸದಾ ಸಾಮಾನ್ಯವಾಗಿ ಕೆಲಸ ನಿರ್ವಹಿಸುವ ಹೃದಯ , ಮನುಷ್ಯ ಸ್ವಲ್ಪ ಒತ್ತಡದಿಂದ ಕೆಲಸ ಮಾಡಲು ಶುರು ಮಾಡಿದಾಗ ತನ್ನ ಬಡಿತದ ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ . ಇದರಿಂದ ರಕ್ತದೊತ್ತಡ , ಹೃದಯಾಘಾತ ಇಂತಹ ಸಮಸ್ಯೆಗಳು ಎದುರಾಗಬಹುದು . ಒತ್ತಡ ಹೆಚ್ಚಾದಂತೆಲ್ಲ " ಕಾರ್ಟಿಸೋಲ್ " ಎಂಬ ಹಾರ್ಮೋನು ದೇಹದಲ್ಲಿ ಉತ್ಪತ್ತಿಯಾಗಿ ಬಿಡುಗಡೆಗೊಳ್ಳುತ್ತದೆ . ಇದರಿಂದ ಹೃದಯಕ್ಕೆ ಯಾವ ಮಟ್ಟದಲ್ಲಿ ತೊಂದರೆ ಆಗುತ್ತದೆ ಎಂದರೆ ಮನುಷ್ಯನಿಗೆ ಮಧುಮೇಹ , ಕ್ಯಾನ್ಸರ್ ನಂತಹ ಖಾಯಿಲೆಗಳು ಶುರುವಾಗಿ ಕೊನೆಗೆ ಲಕ್ವಾ ಕೂಡ ಹೊಡೆಯಬಹುದು .

ಹೆಚ್ಚು ಸಮಯ ಕೆಲಸ ಮಾಡಿದಂತೆಲ್ಲ ನಿಮ್ಮ ಕೆಲಸದ ಕಾರ್ಯಕ್ಷಮತೆ ಕುಗ್ಗುತ್ತಾ ಹೋಗುತ್ತದೆ

ಹೆಚ್ಚು ಸಮಯ ಕೆಲಸ ಮಾಡಿದಂತೆಲ್ಲ ನಿಮ್ಮ ಕೆಲಸದ ಕಾರ್ಯಕ್ಷಮತೆ ಕುಗ್ಗುತ್ತಾ ಹೋಗುತ್ತದೆ

ಖಂಡಿತ ಹೌದು . ಇದು " ಸ್ಟಾನ್ ಫೋರ್ಡ್ ರಿಸರ್ಚ್ ಫೌಂಡೇಶನ್ " ನ ವರದಿ ಯಿಂದ ಬಯಲಾದ ಸತ್ಯ . ಯಾವ ಮನುಷ್ಯ 70 ಗಂಟೆಗೂ ಹೆಚ್ಚು ದುಡಿಯುತ್ತಾನೆ ಅವನ ಕಾರ್ಯಕ್ಷಮತೆ 56 ಗಂಟೆ ದುಡಿಯುವ ಮನುಷ್ಯನಿಗಿಂತಲೂ ಕಡಿಮೆ ಇರುತ್ತದೆ . ಇದಕ್ಕೆ ಕಾರಣ ಅವನಿಗೆ ಉಂಟಾಗುವ ಮಾನಸಿಕ ಒತ್ತಡ . ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕಾದರೂ , ನಮ್ಮ ಮೆದುಳು ರಿಲಾಕ್ಸ್ ಆಗಿರಬೇಕು . ಅತಿಯಾದ ಒತ್ತಡದಿಂದ ಮಾಡುವ ಯಾವುದೇ ಕೆಲಸವೂ ಅಷ್ಟು ದಕ್ಷತೆಯನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ.

Most Read: ರಾತ್ರಿ ಪಾಳಿ ಕೆಲಸದವರಿಗೆ ಆರೋಗ್ಯ ಸಲಹೆಗಳು

ನಿದ್ದೆ ಕಡಿಮೆ ಆದಷ್ಟೂ ನಿಮಗೆ ಇಡೀ ದಿನ ಸುಸ್ತು ಕಾಡುವುದಂತೂ ಸತ್ಯ

ನಿದ್ದೆ ಕಡಿಮೆ ಆದಷ್ಟೂ ನಿಮಗೆ ಇಡೀ ದಿನ ಸುಸ್ತು ಕಾಡುವುದಂತೂ ಸತ್ಯ

ಮನುಷ್ಯ ಎಂದು ಹುಟ್ಟಿದ ಮೇಲೆ ದುಡಿದು ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯ ಇದ್ದೇ ಇದೆ . ಆದರೆ ಅದು ಮಿತಿಯಲ್ಲಿದ್ದರೆ ಚೆನ್ನ . ಏಕೆಂದರೆ ಅತಿಯಾದ ದೇಹದ ದುಡಿಮೆ ದೇಹಕ್ಕೇ ಹಾನಿಕರ. ಏಕೆಂದರೆ ಯಾವುದೇ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಅವನ ದೇಹದ ಎಲ್ಲಾ ಅಂಗಗಳೂ ಭಾಗಗಳೂ ಅವನ ಸಹಾಯಕ್ಕೆ ನಿಂತಿರುತ್ತವೆ . ನಮ್ಮ ದೇಹ ಎಷ್ಟು ದುಡಿಯುತ್ತದೋ ಅಷ್ಟೂ ಅದಕ್ಕೆ ವಿಶ್ರಾಂತಿ ಅಗತ್ಯವಿರುತ್ತದೆ . ಆದ್ದರಿಂದಲೇ ಬೆಳಗ್ಗಿನಿಂದ ದುಡಿದು ಬಂದ ವ್ಯಕ್ತಿ ರಾತ್ರಿ ಕನಿಷ್ಠ 8 ಗಂಟೆಯಾದರೂ ನಿದ್ದೆ ಮಾಡಬೇಕು . ಹೀಗೆಂದು ನಾವು ಹೇಳುತ್ತಿಲ್ಲ . ವೈದ್ಯಲೋಕ ಇದರ ಬಗ್ಗೆ ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಲೇ ಬಂದಿದೆ . ಇದು ಕಡಿಮೆ ಆದಂತೆಲ್ಲಾ ನಮ್ಮ ದೇಹಕ್ಕೆ ಇನ್ನಿಲ್ಲದ ಖಾಯಿಲೆಗಳು ಅಂಟಿಕೊಳ್ಳುತ್ತಾ ಹೋಗುತ್ತವೆ . ನಿಮಗೆ ತಿಳಿದಿರಲಿ. ಅತಿಯಾದ ಕೆಲಸದ ಒತ್ತಡದಿಂದ ಯಾವ ವ್ಯಕ್ತಿ ನಿದ್ದೆ ಕಡಿಮೆ ಮಾಡುತ್ತಾನೋ ಅವನು ತಾನಾಗಿಯೇ ಹೃದಯ ಸಂಬಂಧಿ ಮತ್ತು ಟೈಪ್ - 2 ಡಯಾಬಿಟಿಸ್‌ಗೆ ಆಹ್ವಾನ ಕೊಡುತ್ತಾನೆ.ಆದ್ದರಿಂದ ನಮ್ಮ ಸಲಹೆ ಇಷ್ಟೇ . ನೀವು ಯಾವುದೇ ಕೆಲಸ ಮಾಡುತ್ತಿದ್ದರೂ ಅಥವಾ ಮಾಡಲು ಬಯಸಿದರೂ ಆ ಕೆಲಸವನ್ನು ಇಷ್ಟ ಪಟ್ಟು ಮಾಡಿ . ಬದಲಿಗೆ ಕಷ್ಟ ಪಟ್ಟು ಅದರಿಂದ ಕಷ್ಟ ಅನುಭವಿಸಬೇಡಿ . ಏಕೆಂದರೆ ಕೆಲಸ ಕೆಲಸ ಎಂದು ನಿಮ್ಮ ದೇಹದ ಆರೋಗ್ಯವನ್ನು ಕಡೆಗಣಿಸಬೇಡಿ . ನಿಮ್ಮನ್ನೇ ನಂಬಿಕೊಂಡು ನಿಮ್ಮ ಕುಟುಂಬ ಜೀವಿಸುತ್ತಿರುತ್ತದೆ . ಕೆಲಸದ ಮದ್ಯೆ ನಿಮ್ಮ ಕುಟುಂಬದವರೊಂದಿಗೂ ಸ್ವಲ್ಪ ಸಮಯ ಕಳೆದು ಆನಂದ ಅನುಭವಿಸುವುದನ್ನು ರೂಡಿ ಮಾಡಿಕೊಳ್ಳಿ . ಇದರಿಂದ ನಿಮ್ಮ ಒತ್ತಡವೂ ಕಡಿಮೆ ಆಗಿ ಮನಸ್ಸಿಗೆ ವಿಶ್ರಾಂತಿ ಸಿಕ್ಕಂತೆ ಆಗಿ ಮತ್ತೆ ಕೆಲಸ ಮಾಡಲು ಹೊಸ ಉಮ್ಮಸ್ಸು ಪ್ರೇರಣೆ ಸಿಕ್ಕಂತಾಗುತ್ತದೆ .

English summary

How Working Overtime can Affect Your Health

It is really important to work for living. But sometimes do feel like work is eating your life, no joy, no happiness, you have become a work machine, you are not the only one. It is said that working 40 to 50 hours a week is more than enough. But blaming working hours will be unfair. Other factors like length of your commute, outside responsibility, work environment, feelings of appreciation and job satisfaction can play the key role. But have you ever wondered what will happen if you own work starts consuming your health and your life?
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X