For Quick Alerts
ALLOW NOTIFICATIONS  
For Daily Alerts

ಶೀಘ್ರಸ್ಖಲನಕ್ಕೆ ಒತ್ತಡವೂ ಕಾರಣವಾಗಬಹುದಂತೆ! ಅದು ಹೇಗೆ ಗೊತ್ತೇ?

|

ಸಾಮಾನ್ಯವಾಗಿ ಪ್ರೌಢ ವಯಸ್ಸಿನವರಲ್ಲಿ ಶೇ.30ರಷ್ಟು ಜನರು ಸ್ಖಲವನ್ನು ನಿಯಂತ್ರಣ ಮಾಡಲು ತೊಂದರೆ ಅನುಭವಿಸುವ ಬಗ್ಗೆ ಹೇಳಿಕೊಳ್ಳುತ್ತಾರೆ. ವಯಸ್ಸಾದ ಪುರುಷರಲ್ಲಿ ನಿಮಿರುವಿಕೆ ಸಮಸ್ಯೆಯು ಸಾಮಾನ್ಯವಾಗಿರುವುದು. ಇದು ಪ್ರಮುಖ ಅಂಶವು ಆಗಿರುವುದು. ಆದರೆ ಜೀವನದ ಪುರುಷರಿಗೆ ಹೆಚ್ಚಾಗಿ ಕಾಡುವಂತಹ ಸಮಸ್ಯೆ ಎಂದರೆ ಅದು ಶೀಘ್ರ ಸ್ಖಲನ. ಅಧ್ಯಯನಗಳು ಹೇಳುವಂತೆ ಶೀಘ್ರ ಸ್ಖಲನವು ವಯಸ್ಸಿನೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆ.

ಪುರುಷರಿಗೆ ವಯಸ್ಸಾದಂತೆ ಮತ್ತು ಟೆಸ್ಟೋಸ್ಟಿರಾನ್ ಮಟ್ಟಗಳು ವಯಸ್ಸಿನೊಂದಿಗೆ ಕುಂದಿ, ಶೀಘ್ರ ಸ್ಖಲನವು ಇದಕ್ಕೆ ಹೊಂದಿ ಕೊಳ್ಳುತ್ತದೆ. ಶೀಘ್ರ ಸ್ಖಲನವು ಉಂಟಾಗಲು ಹಲವಾರು ರೀತಿಯ ಕಾರಣಗಳು ಇವೆ. ಇದರಲ್ಲಿ ಪ್ರಮುಖವಾಗಿ ಆತಂಕ, ಅತಿಯಾದ ಕುತೂಹಲ, ಸಂಬಂಧದ ಸಮಸ್ಯೆ ಮತ್ತು ಚರ್ಮದ ಅತಿಯಾದ ಸೂಕ್ಷ್ಮತೆ. ಶೀಘ್ರ ಸ್ಖಲನವನ್ನು ತಡೆಯಲು ಮುಖ್ಯವಾಗಿ ಅದಕ್ಕೆ ಕಾರಣವೇನು ಎಂದು ತಿಳಿಯಬೇಕು ಮತ್ತ ಒತ್ತಡವು ನಿಮ್ಮ ಲೈಂಗಿಕ ಜೀವನದ ಸುಖವನ್ನು ನುಂಗಿ ಹಾಕಲು ಒತ್ತಡವು ಮುಖ್ಯ ಕಾರಣವಾಗಿರಬಹುದು. ಶೀಘ್ರ ಸ್ಖಲನವು ಜೀವನಪೂರ್ತಿ ಇರಬಹುದು ಅಥವಾ ಇದು ತಾತ್ಕಾಲಿಕವಾಗಿರಬಹುದು.

ಒತ್ತಡದ ಪ್ರಭಾವ

ಒತ್ತಡದ ಪ್ರಭಾವ

ಒತ್ತಡವು ನಿಮ್ಮ ಜೀವನದಲ್ಲಿ ಇದ್ದರೆ ಆಗ ಅದರು ನಿಮ್ಮ ಲೈಂಗಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದು. ಇದು ಕೇವಲ ಸಂಬಂಧದಲ್ಲಿನ ಭಾವನಾತ್ಮಕ ಗೊಂದಲ ಮಾತ್ರವಲ್ಲದೆ ದಿನ ನಿತ್ಯವೂ ಉದ್ಯೋಗ ಹಾಗೂ ಶಾಲೆಗಳಲ್ಲಿ ಆಗುವಂತಹ ಒತ್ತಡ ದಿಂದಾಗಿ ನಿಮ್ಮ ಮನಸ್ಸು ಹಾಗೂ ದೇಹದ ಮೇಲೆ ಒತ್ತಡವು ಬೀಳಬಹುದು. ಇದರಿಂದಾಗಿ ಮೆದುಳು ಕಾರ್ಟಿಸೋಲ್, ನೊರ್ಪೈನ್ಫ್ರಿನ್, ಸಿರೊಟೋನಿನ್ ಎನ್ನುವ ಹಾರ್ಮೋನು ಬಿಡುಗಡೆ ಮಾಡಲು ಸೂಚಿಸುತ್ತದೆ ಮತ್ತು ನರ ವ್ಯವಸ್ಥೆಗೆ ಇತರ ಕೆಲವೊಂದು ಸಂಕೇತಗಳನ್ನು ಕೂಡ ಕಳುಹಿಸುತ್ತದೆ. ಎಂಡೋಕ್ರೈನ್ ದೇಹವನ್ನು ಆತಂಕದ ಸ್ಥಿತಿಯಲ್ಲಿ ಇಡುವುದು. ಇದರಿಂದಾಗಿ ಸ್ಖಲನದ ನರಗಳು ದುರ್ಬಲಗೊಳ್ಳುವುದು.

ನಿಮ್ಮ ದೇಹದ ಮೇಲೆ ಒತ್ತಡದ ಪರಿಣಾಮಗಳು

ನಿಮ್ಮ ದೇಹದ ಮೇಲೆ ಒತ್ತಡದ ಪರಿಣಾಮಗಳು

ನಿಮ್ಮ ದೇಹದ ಮೇಲೆ ಅತಿಯಾಗಿ ಒತ್ತಡ ಬೀಳುತ್ತಲಿದ್ದರೆ ಆಗ ಹೃದಯದ ಬಡಿತವು ಕಡಿಮೆಯಾಗುವುದು ಮತ್ತು ಇದರಿಂದಾಗಿ ದೇಹವು ರಕ್ತದಲ್ಲಿನ ಸಕ್ಕರೆ, ಅಡ್ರೆನಾಲಿನ್ ಮತ್ತು ರಾಸಾಯನಿಕಗಳ ಉತ್ಪತ್ತಿಯನ್ನು ಉತ್ತೇಜಿಸುವುದು. ನಿಮ್ಮ ಒತ್ತಡವು ಕೆಲಸಕ್ಕೆ ಸಂಬಂಧಿಸಿದ್ದು ಆಗಿದ್ದರೆ ಆಗ ನಿಮ್ಮ ದೇಹವು ರಕ್ತವನ್ನು ಕೆಲವೊಂದು ಪ್ರಮುಖ ಭಾಗಗಳಾಗಿರುವಂತಹ ಕೈಗಳು ಹಾಗೂ ಕಾಲುಗಳಿಗೆ ಕಳುಹಿಸುವುದು ಮತ್ತು ಒತ್ತಡದ ಮಧ್ಯೆಯು ನೀವು ಗಮನಕೇಂದ್ರೀಕರಿಸುವಂತೆ ಆಗುವುದು. ಅದಾಗ್ಯೂ, ಒತ್ತಡ ದಿಂದಾಗಿ ನಿಮಗೆ ಸೆಕ್ಸ್ ನ್ನು ಆನಂದಿಸಲು ಸಾಧ್ಯವಾಗದು, ಉತ್ತೇಜನದ ಸೂಕ್ಷ್ಮತೆಯು ಹೆಚ್ಚಾಗುವುದು, ಇದರೊಂದಿಗೆ ನೋವು ಮತ್ತು ಬಂಜೆತನವು ಹೆಚ್ಚಾಗಿ ಕಾಡಬಹುದು.

Most Read:ಶೀಘ್ರಸ್ಖಲನಕ್ಕೆ ಶಾಶ್ವತ ಪರಿಹಾರ; ಇವನ್ನು ಸೇವಿಸಿ

ಒತ್ತಡದಿಂದಾಗಿ ಶೀಘ್ರ ಸ್ಖಲನವು ಉಂಟಾಗುವುದು ಹೇಗೆ

ಒತ್ತಡದಿಂದಾಗಿ ಶೀಘ್ರ ಸ್ಖಲನವು ಉಂಟಾಗುವುದು ಹೇಗೆ

ಸಹಾನುಭೂತಿಯ ನರಗಳು ಮತ್ತು ಹಾರ್ಮೋನು ಅಸಮತೋಲನವು ಸ್ಖಲನಕ್ಕೆ ಪ್ರಚೋದನೆಯನ್ನು ಉಂಟು ಮಾಡುವುದು. ಈ ಪ್ರಚೋದನೆಯು ಮಾನಸಿಕ ಮತ್ತು ಪರಾಕಾಷ್ಠೆಯು ತಲುಪುವ ತನಕ ಇದು ಉತ್ತೇಜವನ್ನು ನೀಡುವಂತಹ ಸೆನ್ಸರ್ ಆಗಿರುವುದು. ಕೆಲವು ಜನರು ಬೇಗನೆ ಸ್ಖಲನ ಮಾಡಬೇಕು ಎನ್ನುವ ಪ್ರಚೋದನೆಯೊಂದಿಗೆ ಸೆಕ್ಸ್ ನಲ್ಲಿ ತೊಡಗಿಕೊಳ್ಳುವರು. ಯಾಕೆಂದರೆ ನರಗಳು ಅದಾಗಲೇ ಆಯಾಸಗೊಂಡಿರುವುದು ಮತ್ತು ಬೇಗನೆ ಕ್ಲೈಮ್ಯಾಕ್ಸ್ ಗೆ ತಯಾರಾಗುವುದು. ಶೀಘ್ರ ಸ್ಖಲನಕ್ಕೆ ಒಳಗಾಗುವಂತಹ ಜನರಲ್ಲಿ ಸ್ವಾಭಿಮಾನದ ಮತ್ತು ಆತ್ಮವಿಶ್ವಾಸದ ಕೊರತೆ ಕಾಣಿಸಿ ಕೊಳ್ಳುವುದು. ಸಂಗಾತಿಯೊಂದಿಗೆ ಸೆಕ್ಸ್ ಅಥವಾ ಅನ್ಯೋನ್ಯತೆ ಪ್ರದರ್ಶನ ವೇಳೆ ಹೆಚ್ಚಿನ ಜನರಿಗೆ ಉನ್ನತ ಮಟ್ಟದ ಆತಂಕವು ಕಾಡುತ್ತದೆ ಎಂದು ದೃಢಪಡಿಸಿಕೊಂಡಿದ್ದಾರೆ.

 ಅಧ್ಯಯನವೊಂದರ ಪ್ರಕಾರ

ಅಧ್ಯಯನವೊಂದರ ಪ್ರಕಾರ

ಇತ್ತೀಚೆಗೆ ಮಹಿಳಾ ಸಂಗಾತಿಗಳ ಬಗ್ಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ಶೀಘ್ರ ಸ್ಖಲನವು ಸಂಬಂಧದ ಮೇಲೆ ಪರಿಣಾಮ ಭಿರುವುದು. ಇದರಿಂದಾಗಿ ವಿಚ್ಛೇದನ, ಸಂಬಂಧದ ಗುಣಮಟ್ಟ ಮತ್ತು ಮಹಿಳಾ ಸಂಗಾತಿಗಳಲ್ಲಿ ಲೈಂಗಿಕ ತೃಪ್ತಿಯ ಕೊರತೆ ಕಾಣಿಸುವುದು. ಇದರಿಂದಾಗಿಯೇ ಕೆಲವೊಂದು ವಿಚ್ಛೇದನಕ್ಕೆ ಕಾರಣವಾಗಿದೆ ಎಂದು ಕೆಲವು ಮಹಿಳೆಯರು ದೃಢಪಡಿಸಿ ಕೊಂಡಿದ್ದಾರೆ. ವನದಲ್ಲಿ ಪುರುಷರಲ್ಲಿ ಕಾಣಿಸುವಂತಹ ಸಮಸ್ಯೆಯೆಂದರೆ ಅದು ಶೀಘ್ರ ಸ್ಖಲನ. ಪ್ರೌಢ ವಯಸ್ಸಿನವರಲ್ಲಿ ಶೇ.30ರಷ್ಟು ಜನರು ಸ್ಖಲವನ್ನು ನಿಯಂತ್ರಣ ಮಾಡಲು ತೊಂದರೆ ಅನುಭವಿಸುವ ಬಗ್ಗೆ ಹೇಳಿಕೊಳ್ಳುತ್ತಾರೆ. ವಯಸ್ಸಾದ ಪುರುಷರಲ್ಲಿ ನಿಮಿರುವಿಕೆ ಸಮಸ್ಯೆಯು ಸಾಮಾನ್ಯವಾಗಿರುವುದು. ಇದು ಪ್ರಮುಖ ಅಂಶವು ಆಗಿರುವುದು. ಆದರೆ ಜೀವನದ ಪುರುಷರಿಗೆ ಹೆಚ್ಚಾಗಿ ಕಾಡುವಂತಹ ಸಮಸ್ಯೆ ಎಂದರೆ ಅದು ಶೀಘ್ರ ಸ್ಖಲನ. ಶೀಘ್ರ ಸ್ಖಲನದಿಂದಾಗಿ ಪುರುಷರ ಸ್ವತಂತ್ರದ ಮೇಲೆ ಪರಿಣಾಮ ಬೀರಿದೆ.

ಶೀಘ್ರ ವೀರ್ಯ ಸ್ಖಲನ ನಿಯಂತ್ರಣಕ್ಕೆ ಪರಿಹಾರಗಳು

ಶೀಘ್ರ ವೀರ್ಯ ಸ್ಖಲನ ನಿಯಂತ್ರಣಕ್ಕೆ ಪರಿಹಾರಗಳು

ಶೀಘ್ರ ವೀರ್ಯ ಸ್ಖಲನವನ್ನು ನಿವಾರಿಸುವಲ್ಲಿ ಕೆಲವೊಂದು ವ್ಯಾಯಾಮಗಳು ಸಹ ನಿಮ್ಮ ನೆರವಿಗೆ ಬರುತ್ತವೆ. ಅದರಲ್ಲೂ ಕೆಗೆಲ್ ವ್ಯಾಯಾಮವು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಅಂದರೆ ಪೆಲ್ವಿಕ್ ಸ್ನಾಯುಗಳನ್ನು ಶಕ್ತಿಶಾಲಿಗೊಳಿಸುತ್ತದೆ. ಈ ಸ್ನಾಯುಗಳು ನಿಮ್ಮ ಜನನಾಂಗದ ನಿಮಿರುವಿಕೆ ಮತ್ತು ಸ್ಖಲನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಇದೊಂದು ಸುಲಭವಾದ ವ್ಯಾಯಾಮವಾಗಿದ್ದು, ಎಲ್ಲಿ ಬೇಕಾದರು ಇದನ್ನು ಮಾಡಬಹುದಾಗಿದೆ. ಈ ವ್ಯಾಯಾಮ ಮಾಡಲು ಮೊದಲು ನೇರವಾಗಿ ನಿಲ್ಲಿ. ನಂತರ ನಿಮ್ಮ ಸ್ನಾಯುಗಳನ್ನು ನಿಮ್ಮ ಪೃಷ್ಠದ ಭಾಗದತ್ತ ಎಳೆದುಕೊಳ್ಳಿ. ಇದರಿಂದಾಗಿ ನಿಮ್ಮ ಕಿಬ್ಬೊಟ್ಟೆಯ ಭಾಗವು ಸದೃಢಗೊಳ್ಳುತ್ತದೆ ಹಾಗು ಶೀಘ್ರ ವೀರ್ಯ ಸ್ಖಲನ ಸಮಸ್ಯೆಯಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಅತ್ಯುತ್ತಮವಾದ ಫಲಿತಾಂಶವನ್ನು ನಿಮ್ಮದಾಗಿಸಿ ಕೊಳ್ಳಲು ಈ ವ್ಯಾಯಾಮವನ್ನು ದಿನಕ್ಕೆ 15-20 ಬಾರಿ ಮಾಡಿ

ಹಸಿ ಬೆಳ್ಳುಳ್ಳಿ

ಹಸಿ ಬೆಳ್ಳುಳ್ಳಿ

ಹಸಿ ಬೆಳ್ಳುಳ್ಳಿಯು ಗಂಡಸರಲ್ಲಿ ಶೀಘ್ರ ವೀರ್ಯ ಸ್ಖಲನ ಹಾಗು ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ. 3-4 ಬೆಳ್ಳುಳ್ಳಿಯ ತುಣುಕುಗಳನ್ನು ಜಗಿಯುವುದರಿಂದ ಶೀಘ್ರ ವೀರ್ಯ ಸ್ಖಲನದ ಸಮಸ್ಯೆಯಲ್ಲಿ ಗಣನೀಯವಾದ ಪರಿಹಾರವನ್ನು ನೀವು ಕಾಣಬಹುದಾಗಿದೆ. ಇದರ ಜೊತೆಗೆ ನಿಮ್ಮ ಆರೋಗ್ಯವು ಸಹ ಸುಧಾರಿಸುತ್ತದೆ. ಬೆಳ್ಳುಳ್ಳಿಯನ್ನು ಶುದ್ಧವಾದ ಹಸುವಿನ ತುಪ್ಪದಲ್ಲಿ ಕರಿದು ಸಹ ಬಳಸಬಹುದು. ಏಕೆಂದರೆ ತುಪ್ಪದಲ್ಲಿ ಕರಿದ ನಂತರವು ಬೆಳ್ಳುಳ್ಳಿಯಲ್ಲಿರುವ ಕಾಮೋತ್ತೇಜಕ ಗುಣಗಳು ಅದರಿಂದ ಹೋಗಲಾರವು. ಬೆಳ್ಳುಳ್ಳಿಯು ಜನನಾಂಗದ ನಿಮಿರುವುಕೆ ಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸುತ್ತದೆ ಮತ್ತು ಶೀಘ್ರ ವೀರ್ಯಸ್ಖಲನದ ಸಮಸ್ಯೆಯನ್ನು ದೂರಮಾಡುತ್ತದೆ.

Most Read:ಪುರುಷರೇ ಎಚ್ಚರ, ನಿಮಗೂ ಇಂತಹ ಸಮಸ್ಯೆ ಇರಬಹುದು!

ಹಸಿ ಈರುಳ್ಳಿ

ಹಸಿ ಈರುಳ್ಳಿ

ಶೀಘ್ರಸ್ಖಲನದ ತೊಂದರೆಯನ್ನು ನಿವಾರಿಸಲು ಆಹಾರಕ್ರಮದಲ್ಲಿಯೂ ಆಯುರ್ವೇದದ ಕಟ್ಟುಪಾಡುಗಳಿಗೆ ಒಳಪಡುವಂತಹ ಕೆಲವಾರು ಬದಲಾವಣೆಗಳು ಅಗತ್ಯವಾಗಿವೆ. ನಿತ್ಯದ ಆಹಾರದಲ್ಲಿ ಸಾಕಷ್ಟು ಧಾನ್ಯಗಳು, ಬಾಳೆಹಣ್ಣು, ಒಣಫಲಗಳು, ಹಸಿಯಾಗಿ ಸೇವಿಸಬಹುದಾದ ಸೊಪ್ಪುಗಳು, ಮೃದ್ವಂಗಿ, ಮೆಂತೆಸೊಪ್ಪು, ಹಸಿಈರುಳ್ಳಿ ಹಾಗೂ ಸೆಲೆರಿ ಎಲೆಗಳು ಮೊದಲಾವುಗಳನ್ನು ಸೇವಿಸಬೇಕು. ಜೇನು ಅಗತ್ಯವಾಗಿದ್ದು ನಿತ್ಯವೂ ಕೊಂಚ ಪ್ರಮಾಣದಲ್ಲಿ ಸೇವಿಸಬೇಕು. ಆದರೆ ಕೆಲವು ಆಹಾರಗಳನ್ನು ಅನಿವಾರ್ಯವಾಗಿಯಾದರೂ ಸರಿ, ವರ್ಜಿಸಬೇಕು. ಕಾಫಿ, ಟೀ, ಮದ್ಯ, ಸಂಸ್ಕರಿಸಿದ ಆಹಾರ, ಅತಿ ಹೆಚ್ಚಿನ ಪ್ರಮಾಣದ ಬಿಳಿ ಸಕ್ಕರೆ ಇರುವ ಆಹಾರಗಳು, ಮೈದಾ ಮತ್ತು ಪೋಷಕಾಂಶಗಳನ್ನು ನಿವಾರಿಸಿ ತಯಾರಿಸಿದ ಸಿದ್ದ ಆಹಾರಗಳನ್ನು ವರ್ಜಿಸಬೇಕು.

ಬಿಸಿ ಹಾಲು

ಬಿಸಿ ಹಾಲು

ಆಯುರ್ವೇದದ ಪ್ರಕಾರ ಲೈಂಗಿಕ ಆರೋಗ್ಯಕ್ಕೆ ಬಿಸಿ ಹಾಲು ಅತ್ಯುತ್ತಮವಾಗಿದ್ದು ಇದರೊಂದಿಗೆ ಕೊಂಚ ಕೇಸರಿಯನ್ನು ಬೆರೆಸಿ ಜೊತೆಗೇ ಬಾದಾಮಿಯೊಂದನ್ನು ಪುಡಿಮಾಡಿ ಕಲಕಿ ಕುಡಿಯುವುದು ಉತ್ತಮವಾಗಿದೆ. ಬಾದಾಮಿಯನ್ನು ಒಂದು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಮರುದಿನ ತೇದಿ ಹಾಲಿನೊಂದಿಗೆ ಬೆರೆಸಿ ಕುಡಿದರೆ ಅತ್ಯುತ್ತಮ ಪರಿಣಾಮ ದೊರಕುತ್ತದೆ. ಈ ಹಾಲಿಗೆ ಕೊಂಚ ಏಲಕ್ಕಿ ಮತ್ತು ಹಸಿಶುಂಠಿಯನ್ನೂ ಬೆರೆಸಿ ಸೇವಿಸಬಹುದು.

English summary

how stress causes premature ejaculation

Ejaculation can be considered premature if it happens within 1 minute of penetration or if you are unable to control your ejaculation. There are several reasons that can contribute to premature ejaculation like performance anxiety, excessive excitement, relationship issues and hypersensitivity of the skin. To treat premature ejaculation, it is important to determine the cause and stress that can be a potent reason that is preventing you from 'lasting' long. Premature ejaculation can be life-long or acquired.
Story first published: Monday, January 28, 2019, 17:33 [IST]
X
Desktop Bottom Promotion