For Quick Alerts
ALLOW NOTIFICATIONS  
For Daily Alerts

ದಿನಕ್ಕೆಷ್ಟು ಪ್ರಮಾಣದಲ್ಲಿ ಅರಿಶಿನ ಸೇವನೆ ಆರೋಗ್ಯಕ್ಕೆ ಉತ್ತಮ?

|

ದೇಹದಲ್ಲಿ ಉರಿಯೂತ ಹೆಚ್ಚಾಗುವುದರಿಂದಲೇ ಬಹುತೇಕ ಕಾಯಿಲೆಗಳು ಬರುತ್ತವೆ ಎಂಬುದು ತಿಳಿದ ಸಂಗತಿಯಾಗಿದೆ. ಹೀಗಾಗಿ ಉರಿಯೂತ ನಿವಾರಿಸುವ ಶಕ್ತಿಯ ಅರಿಶಿನ ಇತ್ತೀಚೆಗೆ ಬಹು ಉಪಯೋಗಿ ಔಷಧಿಯಾಗಿ ಜನಪ್ರಿಯತೆ ಗಳಿಸುತ್ತಿದೆ. ತಾವು ಸೇವಿಸುವ ಬಹುತೇಕ ಆಹಾರಗಳಲ್ಲಿ ಅರಿಶಿನ ಇರುವಂತೆ ಜನ ನೋಡಿಕೊಳ್ಳುತ್ತಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಕೆಲ ಕಂಪನಿಗಳು ಅರಿಶಿನದ ಕ್ಯಾಪ್ಸೂಲ್ (ಟರ್ಮರಿಕ್ ಕ್ಯಾಪ್ಸೂಲ್) ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಹಾಲಿನೊಂದಿಗೆ ಅರಿಶಿನ ಬೆರೆಸಿ ಕುಡಿಯುವುದು ಅಥವಾ ಅರಿಶಿನ ಕ್ಯಾಪ್ಸೂಲ್ ಸೇವಿಸುವುದು ಅಥವಾ ಅಡುಗೆಯಲ್ಲಿ ಬಳಸುವ ಮೂಲಕ ಸೇವಿಸುವುದು ಹೀಗೆ ಯಾವ ವಿಧಾನದಲ್ಲಿ ಅರಿಶಿನ ಸೇವಿಸುವುದು ಮತ್ತು ದಿನಕ್ಕೆ ಎಷ್ಟು ಪ್ರಮಾಣದ ಅರಿಶಿನ ಸೇವನೆ ಆರೋಗ್ಯಕ್ಕೆ ಉತ್ತಮ ಎಂಬೆಲ್ಲ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬಹುದು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಮುಂದೆ ನೀಡಲಾಗಿದೆ.

ಅರಿಶಿನದಲ್ಲಿರುವ ಕುರ್ಕ್ಯುಮಿನ್ ಮಹತ್ವ

ಅರಿಶಿನದಲ್ಲಿರುವ ಕುರ್ಕ್ಯುಮಿನ್ ಮಹತ್ವ

ಅರಿಶಿನದಲ್ಲಿರುವ ಕುರ್ಕ್ಯುಮಿನ್ ಎಂಬ ಮೂಲಭೂತ ಅಂಶವೇ ಅರಿಶಿನದ ಔಷಧೀಯ ಗುಣಕ್ಕೆ ಪ್ರಮುಖ ಕಾರಣವಾಗಿದೆ. ಒಂದು ವೇಳೆ ಅರಿಶಿನದ ಕ್ಯಾಪ್ಸೂಲ್ ಸೇವಿಸುತ್ತಿದ್ದರೆ ಅದರಲ್ಲಿ ಕುರ್ಕ್ಯುಮಿನ್ ಪ್ರಮಾಣ ಎಷ್ಟಿದೆ ಎಂಬುದನ್ನು ಮೊದಲು ತಿಳಿಯಬೇಕು. ಅರಿಶಿನದ ಪುಡಿಯಲ್ಲಿ ಕುರ್ಕ್ಯುಮಿನ್ ಅಂಶ ಸ್ವಲ್ಪವೇ ಪ್ರಮಾಣದಲ್ಲಿ ಇರುತ್ತದೆ ಎಂಬುದು ಗೊತ್ತಿರಲಿ. ಹೀಗಾಗಿ ದೇಹದಲ್ಲಿನ ರೋಗ ನಿರೋಧಕ ಶಕ್ತಿ ವೃದ್ಧಿಸಲು ಒಬ್ಬ ವ್ಯಕ್ತಿಗೆ ಪ್ರತಿದಿನ 500 ರಿಂದ 1000 ಮಿಲಿಗ್ರಾಂ ನಷ್ಟು ಕುರ್ಕ್ಯುಮಿನ್ ಬೇಕಾಗುತ್ತದೆ.

ಈಗ ತಾನೆ ತಯಾರಿಸಿದ ಒಂದು ಟೀಸ್ಪೂನ್ ತಾಜಾ ಅರಿಶಿನ ಪುಡಿಯಲ್ಲಿ ಅಂದಾಜು 200 ಮಿಲಿಗ್ರಾಂ ಕುರ್ಕ್ಯುಮಿನ್ ಇರುತ್ತದೆ. ಅರಿಶಿನದ ಗುಣಮಟ್ಟ ಆಧರಿಸಿ ಕುರ್ಕ್ಯುಮಿನ್ ಅಂಶ ಹೆಚ್ಚು ಕಡಿಮೆಯಾಗಬಹುದು. ದೇಹಕ್ಕೆ ಬೇಕಾದಷ್ಟು ಕುರ್ಕ್ಯುಮಿನ್ ಪೂರೈಸಲು ಕ್ಯಾಪ್ಸೂಲ್‌ಗಳ ಸೇವನೆ ಮಾಡಬಹುದು. ಆದರೆ ಕುರ್ಕ್ಯುಮಿನ್ ಸೇವನೆಗೆ ಇದೊಂದೇ ಮಾರ್ಗವಲ್ಲ. ದಿನದಲ್ಲಿ ಸೇವಿಸುವ ಕಾಫಿ, ತಿಂಡಿಗಳಲ್ಲಿಯೂ ಅರಿಶಿನವನ್ನು ಬಳಸುವ ಮೂಲಕ ಕುರ್ಕ್ಯುಮಿನ್ ಸೇವಿಸಬಹುದು.

Most Read: ದಿನಕ್ಕೊಂದು ಲೋಟ ಅರಿಶಿನ ಬೆರೆಸಿದ ನೀರು-ಆಯಸ್ಸು ನೂರು!

ಉರಿಯೂತವನ್ನು ದೂರವಿಡಬಹುದು

ಉರಿಯೂತವನ್ನು ದೂರವಿಡಬಹುದು

ಒಂದು ನಿರ್ದಿಷ್ಟ ಪ್ರಮಾಣದ ಅರಿಶಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಬಹುದು. ಆದರೆ ಇಷ್ಟರಿಂದಲೇ ಆರೋಗ್ಯ ಸಮಸ್ಯೆಗಳು ಬಗೆಹರಿಯಲಾರವು. ದಿನಕ್ಕೆ ಒಟ್ಟು 500 ಮಿಲಿಗ್ರಾಂ ಕುರ್ಕ್ಯುಮಿನ್ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಿ ಉರಿಯೂತವನ್ನು ದೂರವಿಡಬಹುದು.

ಕುರ್ಕ್ಯುಮಿನ್ ಜೊತೆಗೆ ಈ ವಸ್ತು ಸೇರಿಸಿ

ಕುರ್ಕ್ಯುಮಿನ್ ಜೊತೆಗೆ ಈ ವಸ್ತು ಸೇರಿಸಿ

ಕುರ್ಕ್ಯುಮಿನ್ ಒಂದು ಶಕ್ತಿಶಾಲಿ ಔಷಧವಾದರೂ ಇದೊಂದನ್ನೇ ಸೇವಿಸುವುದರಿಂದ ಕೆಲ ಬಾರಿ ಯಾವುದೇ ಪರಿಣಾಮಗಳು ಕಂಡು ಬರುವುದಿಲ್ಲ. ಹೀಗಾದಾಗ ಇದನ್ನು ಕಪ್ಪು ಮೆಣಸಿನ ಪುಡಿ (ಬ್ಲ್ಯಾಕ್ ಪೆಪ್ಪರ್) ಯೊಂದಿಗೆ ಸೇರಿಸಿ ಸೇವಿಸಬೇಕು. ಮೆಣಸಿನ ಪುಡಿಯನ್ನು ಕುರ್ಕ್ಯುಮಿನ್ ಜೊತೆ ಸೇರಿಸಿ ಸೇವಿಸಿದಾಗ ಕುರ್ಕ್ಯುಮಿನ್‌ನಲ್ಲಿರುವ ರೋಗ ನಿರೋಧಕ ಅಂಶಗಳನ್ನು ಹೀರಿಕೊಳ್ಳುವ ಕ್ರಿಯೆ ಸುಲಭವಾಗುತ್ತದೆ. ಇದೇ ಕಾರಣದಿಂದ ಬಹುತೇಕ ಅರಿಶಿನ ಕ್ಯಾಪ್ಸೂಲ್‌ಗಳಲ್ಲಿ ಪೆಪ್ಪರ್ ಅನ್ನು ಮಿಕ್ಸ್ ಮಾಡಿರುತ್ತಾರೆ.

ನಕಲಿ ಅರಿಶಿನ ಉತ್ಪನ್ನಗಳಿಂದ ಎಚ್ಚರಿಕೆ ಇರಲಿ

ನಕಲಿ ಅರಿಶಿನ ಉತ್ಪನ್ನಗಳಿಂದ ಎಚ್ಚರಿಕೆ ಇರಲಿ

ಅರಿಶಿನದ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆಯೇ ಹಲವಾರು ಕಂಪನಿಗಳು ಅರಿಶಿನದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿವೆ. ಆದರೆ ಈ ಎಲ್ಲ ಉತ್ಪನ್ನಗಳು ನಿಜವಾದ ಅರಿಶಿನದಿಂದ ತಯಾರಿಸಿದವು ಆಗಿರುವುದಿಲ್ಲ ಎಂಬುದು ಗೊತ್ತಿರಲಿ. ಉದಾಹರಣೆಗೆ ಚಾಕೊಲೇಟ್ ರೀತಿಯ ಆರೋಗ್ಯಕರ ಅರಿಶಿನದ ಬಾರ್. ಇಂಥ ಕೆಲ ಉತ್ಪನ್ನಗಳಲ್ಲಿ 20 ಗ್ರಾಂ ಸಕ್ಕರೆ ಹಾಗೂ ಸಿಕ್ಕಾಪಟ್ಟೆ ಕೃತಕ ಸಂರಕ್ಷಕಗಳನ್ನು ಬಳಸಲಾಗಿರುತ್ತದೆ. ಇವುಗಳೊಂದಿಗೆ ಒಂಚೂರು ಅರಿಶಿನದ ಪ್ರಮಾಣವನ್ನು ಸೇರಿಸಲಾಗಿರುತ್ತದೆ. ಈ ಉತ್ಪನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ.

Most Read: ಅರಿಶಿನ ಹಾಕಿ ಕುದಿಸಿದ ನೀರು ಕುಡಿದರೆ, ಲಿವರ್-ಮೆದುಳಿಗೆ ಬಹಳ ಒಳ್ಳೆಯದು

ಸರಿಯಾದ ಪ್ರಮಾಣದಲ್ಲಿ ಅರಿಶಿನದ ಸೇವನೆ ಮಾಡಿ

ಸರಿಯಾದ ಪ್ರಮಾಣದಲ್ಲಿ ಅರಿಶಿನದ ಸೇವನೆ ಮಾಡಿ

ದೇಹದಲ್ಲಿ ಉರಿಯೂತ ನಿವಾರಿಸುವ ಬದಲು ಉರಿಯೂತ ಹೆಚ್ಚಿಸುವ ಸಕ್ಕರೆಯ ಅಂಶದಿಂದ ಅರಿಶಿನದ ಉತ್ತಮ ಗುಣಗಳ ಲಾಭ ದೇಹಕ್ಕೆ ಸಿಗದಂತಾಗುತ್ತದೆ. ಅಂದರೆ ಆರೋಗ್ಯಕರ ಟರ್ಮರಿಕ್ ಬಾರ್ ಹೆಸರಲ್ಲಿ ಕೆಲವು ಕಂಪನಿಗಳು ಸಕ್ಕರೆಯಿಂದ ತುಂಬಿದ ಅನಾರೋಗ್ಯಕರ ಟರ್ಮರಿಕ್ ಬಾರ್‌ಗಳನ್ನು ಮಾರುತ್ತಿವೆ. ಒಟ್ಟಾರೆಯಾಗಿ ಅರಿಶಿನದಲ್ಲಿರುವ ಕುರ್ಕ್ಯುಮಿನ್ ಮಾತ್ರವಲ್ಲದೆ ಇನ್ನೂ ಹಲವಾರು ಅಂಶಗಳು ಆರೋಗ್ಯಕ್ಕೆ ಪೂರಕವಾಗಿವೆ. ಸರಿಯಾದ ಪ್ರಮಾಣದಲ್ಲಿ ಅರಿಶಿನದ ಸೇವನೆ ಮಾಡುತ್ತಿದ್ದಲ್ಲಿ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

English summary

How much turmeric can you consume in a day?

The active ingredient in turmeric is curcumin – it’s where the superpower lies. So, if you are consuming a turmeric capsule you need to check the amount of curcumin it has. The noticeable thing is curcuminoids only comprise a small part of turmeric. So, in order to get the anti-inflammatory effect, one needs to get 500 to 1,000 milligrams of curcumin per day.
Story first published: Friday, January 25, 2019, 12:31 [IST]
X
Desktop Bottom Promotion