Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 10 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ನಿಯಮಿತ ಲೈಂಗಿಕ ಕ್ರಿಯಾಶೀಲತೆ ಮಹಿಳೆಯರನ್ನು ಸ್ಥೂಲಕಾಯರನ್ನಾಗಿಸುತ್ತದೆಯೇ?
ಅನಾಮಧೇಯ ಪತ್ರದ ಮೂಲಕ ವೈದ್ಯರಿಗೊಂದು ಪ್ರಶ್ನೆ ಕೇಳಲಾಗುತ್ತದೆ. ಪ್ರಶ್ನೆ ಹೀಗಿದೆ: ನಾನು ಕೇಳಲ್ಪಟ್ಟ ಪ್ರಕಾರ, ಓರ್ವ ಮಹಿಳೆ ಲೈಂಗಿಕ ಜೀವನವನ್ನು ಪ್ರಾರಂಭಿಸಿ ನಿಯಮಿತ ರೂಪದಲ್ಲಿ ಮುಂದುವರೆಯುತ್ತಿದ್ದರೆ ಆಕೆಯ ವಕ್ಷಸ್ಥಳ ಮತ್ತು ನಿತಂಬಗಳು ಅತಿ ಹೆಚ್ಚು ತೂಕವನ್ನು ಪಡೆಯುತ್ತವೆ, ಇದು ನಿಜವೇ? ನಾನು ಇನ್ನೇನು ವಿವಾಹವಾಗುವ ಹಂತದಲ್ಲಿದ್ದೇನೆ, ದಯವಿಟ್ಟು ಸಲಹೆ ಮಾಡಿ..
ಈ ಪ್ರಶ್ನೆಗೆ ಪ್ರಸೂತಿತಜ್ಞೆರು ಹೀಗೆ ವಿವರಿಸುತ್ತಾರೆ; ಲೈಂಗಿಕ ಜೀವನಕ್ಕೆ ಕಾಲಿಟ್ಟ ಬಳಿಕ ಮಹಿಳೆಯರ ಸ್ತನ ಮತ್ತು ನಿತಂಬಗಳು ಗಾತ್ರದಲ್ಲಿ ಹೆಚ್ಚುತ್ತವೆ ಎಂಬುದು ಸಾಮಾನ್ಯ ನಂಬಿಕೆಯಾಗಿದೆ. ಆದರೆ ಇದೊಂದು ಅಪ್ಪಟ ಮಿಥ್ಯೆಯಾಗಿದೆ. ಮಹಿಳೆಯೊಬ್ಬಳು ಲೈಂಗಿಕ ಜೀವನ ಪ್ರಾರಂಭಿಸಿದಾಕ್ಷಣ ಆಕೆಯ ನಿತಂಬ, ಸ್ತನಗಳು ಏಕಾಗಿ ಗಾತ್ರವನ್ನು ಹೆಚ್ಚಿಸಿಕೊಳ್ಳಬೇಕು ಅಥವಾ ವಿರೂಪಗೊಳ್ಳಬೇಕು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.
ಸ್ಖಲನಗೊಂಡ ವೀರ್ಯಾಣುಗಳು ಯಾವುದೇ ಕಾರಣಕ್ಕೆ ಮಹಿಳೆಯ ರಕ್ತದಲ್ಲಿ ಬೆರೆಯುವುದಿಲ್ಲ ಅಥವಾ ಜೀರ್ಣಗೊಳ್ಳುವುದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ಸುಮಾರು ಎರಡರಿಂದ ಮೂರು ಮಿಲಿ ಲೀಟರ್ ನಷ್ಟು ವೀರ್ಯ (ಪ್ರತಿ ಸ್ಖಲನದ ಸರಾಸರಿ) ಹೊಟ್ಟೆಗೆ ಹೋದರೂ ಇದರಲ್ಲಿ ಕೇವಲ ಹದಿನೈದು ಕ್ಯಾಲೋರಿಗಳಿರುತ್ತವಷ್ಟೇ, ಸ್ಥೂಲಕಾಯವಾಗಿಸಲು ಈ ಪ್ರಮಾಣ ಏನೇನೂ ಸಾಲದು.
ವಿವಾಹದ ಬಳಿಕ ಕೆಲವು ವ್ಯಕ್ತಿಗಳು ಸ್ಥೂಲಕಾಯವನ್ನೇಕೆ ಪಡೆಯುತ್ತಾರೆ ಎಂಬುದಕ್ಕೆ ಕೆಲವು ಅಧ್ಯಯನಗಳು ನಡೆದಿವೆ. ಆದರೆ ಈ ಅಧ್ಯಯನಗಳ ಪ್ರಮಾಣೀಕೃತವಾಗಿರದ ವರದಿಯ ಪ್ರಕಾರ ವಿವಾಹದ ಬಳಿಕ ಕೇವಲ ಮಹಿಳೆಯರಲ್ಲ, ಪುರುಷರೂ ಸ್ಥೂಲಕಾಯ ಪಡೆಯುತ್ತಾರೆ. ಹಾಗಾಗಿ ಸ್ಥೂಲಕಾಯ ಪಡೆಯುವುದಕ್ಕೆ ಲೈಂಗಿಕ ಜೀವನವಾಗಲೀ ವ್ಯಕ್ತಿಯ ಲಿಂಗವಾಗಲೀ ಕಾರಣವಾಗುವುದಿಲ್ಲ.
ವಾಸ್ತವದಲ್ಲಿ ವಿವಾಹಬಂಧನಕ್ಕೆ ಒಳಪಟ್ಟ ಬಳಿಕ ಒಂದು ಸಂಬಂಧಕ್ಕೆ ಒಳಪಟ್ಟ, ಪತ್ನಿ ಅಥವಾ ಪತಿಯ ಪಟ್ಟ ಪಡೆದ ಹೆಮ್ಮೆ, ತನ್ಮೂಲಕ ಸಮಾಜದಲ್ಲಿ ಲಭಿಸಿದ ಗೌರವ, ಕುಟುಂಬವಲಯದಲ್ಲಿ ಹೆಚ್ಚಿನ ಆತ್ಮೀಯತೆ, ಸಂಬಂಧವೊಂದರಲ್ಲಿ ಬಂಧನಕ್ಕೊಳಗಾದ ಬಳಿಕ ಹೆಚ್ಚಿದ ಸುರಕ್ಷತಾ ಭಾವನೆ ಮೊದಲಾದವು ನೆಮ್ಮದಿಗೆ ಕಾರಣವಾಗಿದ್ದು ತನ್ಮೂಲಕ ಮಾನಸಿಕ ನಿರಾಳತೆ ಹಾಗೂ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಅಲ್ಲದೇ ಅಧ್ಯಯನಗಳ ಮೂಲಕ ಕಂಡುಕೊಂಡಂತೆ ಒಂಟಿಯಾಗಿರುವ ವ್ಯಕ್ತಿಗಳು ಸಂಬಂಧದಲ್ಲಿರುವ ವ್ಯಕ್ತಿಗಳಿಗಿಂತ ಕಡಿಮೆ ಆಹಾರ ಸೇವಿಸುತ್ತಾರೆ. ಹಾಗಾಗಿ, ಒಂದು ವೇಳೆ ನೀವು ವಿವಾಹದ ಬಳಿಕ ಸ್ಥೂಲಕಾಯ ಪಡೆಯದೇ ಇರಲು ಇಂದಿನಿಂದಲೇ ನಿಯಮಿತವಾಗಿ ವ್ಯಾಯಾಮ ಮಾಡಿ ಹಾಗೂ ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸತೊಡಗಿ.