For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಮೊಸರನ್ನು ಸೇವಿಸಿದರೆ ಆತಂಕವನ್ನು ಕಡಿಮೆಯಾಗಿಸಬಹುದು!

|

ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿರುವ ಆಹಾರವನ್ನು ಸೇವಿಸುವುದು ನಮ್ಮ ಜೀರ್ಣಾಂಗಗಳಲ್ಲಿರುವ ಬ್ಯಾಕ್ಟೀರಿಯಾಗಳನ್ನು (ನಮ್ಮ ಜಠರ ಮತ್ತು ಕರುಳುಗಳಲ್ಲಿ ಟ್ರಿಲಿಯಾಂತರ ಬ್ಯಾಕ್ಟೀರಿಯಾಗಳಿವೆ ಹಾಗೂ ನಮ್ಮ ದೇಹದ ಜೀರ್ಣಕ್ರಿಯೆ, ಜೀವ ರಾಸಾಯನಿಕ ಕ್ರಿಯೆ ಹಾಗೂ ರೋಗ ನಿರೋಧಕ ಶಕ್ತಿಗಳನ್ನು ನಿರ್ವಹಿಸುತ್ತವೆ) ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ಈ ಆಹಾರಗಳ ಸೇವನೆಯಿಂದ ಮೆದುಳಿನ ಕ್ಷಮತೆಯೂ ಹೆಚ್ಚುತ್ತದೆ, ತನ್ಮೂಲಕ ಉದ್ವೇಗವೂ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಈ ಅಹಾರಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳನ್ನು 'ಒಳ್ಳೆಯ' ಅಥವಾ 'ಆರೋಗ್ಯಸ್ನೇಹಿ' ಬ್ಯಾಕ್ಟೀರಿಯಾಗಳನ್ನು ಕರೆಯುತ್ತಾರೆ, ಏಕೆಂದರೆ ಇವು ನಮ್ಮ ಆರೋಗ್ಯಕ್ಕೆ ಮಾರಕವಾಗುವ 'ಕೆಟ್ಟ' ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡುತ್ತವೆ ಹಾಗೂ ಕರುಳುಗಳ ಒಳಗೆ ತಮ್ಮ ಬೀಡು ಬಿಡದಂತೆ ಕಾಪಾಡುತ್ತವೆ.

curd

ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಕೆಲವು ಮಾನಸಿಕ ತೊಂದರೆಗಳನ್ನು ಸರಿಪಡಿಸಲು ಕರುಳುಗಳಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವ ಮೂಲಕ ಸಾಧ್ಯವಾಗುತ್ತದೆ. ಆದರೆ ಈ ಕ್ರಮ ಸರಿ ಎನ್ನಲು ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಶಾಂಘಾಯ್ ಜಿಯಾವೋ ಟಾಂಗ್ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡ ಪ್ರಕಾರ ಕರುಳು ಮತ್ತು ಮೆದುಳಿನ ರೇಖೆ ('gut-brain axis') ಯನ್ನು ನಿಯಂತ್ರಿಸುವ ಮೂಲಕ ಮೆದುಳಿನ ಕಾರ್ಯವಿಧಾನವನ್ನೂ ನಿಯಂತ್ರಿಸಬಹುದು. ಈ ನಿರ್ಣಯಕ್ಕೆ ಬರಲು ಸಂಶೋಧಕರು ಒಟ್ಟು 1,503 ವ್ಯಕ್ತಿಗಳ ಆರೋಗ್ಯದ ಮಾಹಿತಿಗಳನ್ನು ಪರಿಗಣಿಸಿ ಇಪ್ಪತ್ತೊಂದು ಸಂಶೋಧನೆಗಳನ್ನು ನಡೆಸಿದ್ದಾರೆ.

Anxiety

ಇವುಗಳಲ್ಲಿ ಏಳು ಅಧ್ಯಯನಗಳಲ್ಲಿ ವ್ಯಕ್ತಿಗಳಿಗೆ ಒಂದು ಬಗೆಯ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇರುವ ಅಹಾರವನ್ನು ನೀಡಿದ್ದರೆ ಎರಡು ಅಧ್ಯಯನಗಳಲ್ಲಿ ಎರಡು ಬಗೆಯ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇರುವ ಅಹಾರವನ್ನು ನೀಡಲಾಗಿತ್ತು. ಐದು ಅಧ್ಯಯನಗಳಲ್ಲಿ ಕನಿಷ್ಟ ಮೂರು ಬಗೆಯ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇರುವ ಅಹಾರಗಳನ್ನು ನೀಡಲಾಗಿತ್ತು. ಒಟ್ಟು ಇಪತ್ತೊಂದರಲ್ಲಿ ಹನ್ನೊಂದು ಅಧ್ಯಯನಗಳಲ್ಲಿ ಪಾಲ್ಗೊಂಡ ವ್ಯಕ್ತಿಗಳ ಕರುಳುಗಳ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವ ಮೂಲಕ ಉದ್ವೇಗದ ಸೂಚನೆಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದುದು ಕಂಡುಬಂದಿದೆ. ಅಂದರೆ ಶೇ 52 ರಷ್ಟು ಪ್ರಕರಣಗಳಲ್ಲಿ ಧನಾತ್ಮಕ ಪರಿಣಾಮ ಕಂಡುಬಂದಿದೆ.

curd

Most Read: ಆತಂಕವನ್ನು ಪರಿಹರಿಸುವ ಸ್ವಾಭಾವಿಕ ಮಾರ್ಗಗಳು

ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇರುವ ಅಹಾರಗಳನ್ನು ಅನಾರೋಗ್ಯದ ಚಿಕಿತ್ಸೆಗೆ ಪೂರಕವಾದ ಆಹಾರದಂತೆ ಪರಿಗಣಿಸಿ ನೀಡಿದಾಗ ಇವರಲ್ಲಿ ಮೂರರಲ್ಲೊಂದು ಭಾಗ (ಶೇ 36)ರಷ್ಟು ವ್ಯಕ್ತಿಗಳಲ್ಲಿ ಉದ್ವೇಗದ ಸೂಚನೆಗಳು ಕಡಿಮೆಯಾಗಿರುವುದು ಕಂಡುಬಂದಿದೆ. ಉಳಿದ ಏಳರಲ್ಲಿ ಆರು ಅಧ್ಯಯನಗಳಲ್ಲಿ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾ ಇಲ್ಲದ ಆಹಾರಗಳನ್ನು ಅನಾರೋಗ್ಯದ ಚಿಕಿತ್ಸೆಗೆ ಪೂರಕವಾದ ಆಹಾರದಂತೆ ಸೇವಿಸಲು ನೀಡಿದಾಗ ಇವರಲ್ಲಿ 86 ಶೇಖಡಾ ವ್ಯಕ್ತಿಗಳಲ್ಲಿ ಚಿಕಿತ್ಸೆ ಹೆಚ್ಚು ಫಲಕಾರಿಯಾಗಿದ್ದುದು ಕಂಡುಬಂದಿದೆ. ಆ ಪ್ರಕಾರ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇಲ್ಲದ ಆಹಾರಗಳ ಸ್ನೇವನೆ ಹೆಚ್ಚು ಫಲಕಾರಿಯಾಗಿದೆ.

curd

ಹೆಚ್ಚಿನ ಅಧ್ಯಯನಗಳಲ್ಲಿ ಗಂಭೀರವಾದ ಸೂಚನೆಗಳೇನೂ ಕಂಡುಬಂದಿಲ್ಲ ಹಾಗೂ ನಾಲ್ಕು ಅಧ್ಯಯನಗಳಲ್ಲಿ ವರದಿ ಮಾಡಲ್ಪಟ್ಟ ಪ್ರಕಾರ ಅಲ್ಪ ಮಟ್ಟಿಗಿನ ತೊಂದರೆ ಕಾಣಿಸಿಕೊಂಡಿತ್ತು. ಇವುಗಳೆಂದರೆ ಬಾಯಿ ಒಣಗುವುದು ಮತ್ತು ಅತಿಸಾರ. "ಉದ್ಯ್ವೇಗದ ಲಕ್ಷಣಗಳನ್ನು ತೋರುವ ವ್ಯಕ್ತಿಗಳು ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇರುವ ಅಹಾರಗಳನ್ನು ಸೇವಿಸುವ ಮೂಲಕ ಕರುಳುಗಳಲ್ಲಿರುವ ಸೂಕ್ಷ್ಮ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲು ಸಾಧ್ಯವಾಗುತದೆ ಹಾಗೂ ಈ ಆಹಾರಳ ಜೊತೆಗೆ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇಲ್ಲದ ಆಹಾರಗಳು ಮತ್ತು ಹೆಚ್ಚುವರಿ ಆಹಾರಗಳನ್ನೂ ಸೇವಿಸಬೇಕಾಗುತ್ತದೆ" ಎಂದು ಜೆನೆರಲ್ ಸೈಖಿಯಾಟ್ರಿ ಎಂಬ ಮಾಧ್ಯಮ ವರದಿ ಮಾಡಿದೆ.

ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಇರುವ ಆಹಾರಗಳನ್ನು ಚಿಕಿತ್ಸೆಯ ರೂಪದಲ್ಲಿ ಸೇವಿಸುವ ಜೊತೆಗೇ "ಈ ಲಕ್ಷಣಗಳನ್ನು ಕಡಿಮೆಗೊಳಿಸಲು ಕರುಳುಗಳಲ್ಲಿರುವ ಸಸ್ಯಜನ್ಯ ಆಹಾರಗಳನ್ನೂ ಪರಿಗಣಿಸಬಹುದು" ಎಂದು ಸಂಶೋಧಕರು ತಿಳಿಸಿದ್ದಾರೆ.

English summary

Having curd every day can help reduce anxiety

Having probiotics can not only regulate gut bacteria (trillions of microorganisms in the gut, which perform key functions in the immune system and metabolism) but also improve brain function and thus, reduce anxiety, find researchers. Probiotics are living organisms found naturally in some foods that are also known as "good" or "friendly" bacteria because they fight against harmful bacteria and prevent them from settling in the gut.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more