For Quick Alerts
ALLOW NOTIFICATIONS  
For Daily Alerts

ಅಧ್ಯಯನದ ವರದಿ: ಬೊಜ್ಜು ದೇಹದ ಸಮಸ್ಯೆ ಗ್ರಾಮೀಣ ಭಾಗದಲ್ಲೇ ಹೆಚ್ಚು!

|

ಬೊಜ್ಜು ದೇಹ ಎನ್ನುವುದು ಇಂದಿನ ದಿನಗಳಲ್ಲಿ ವಿಶ್ವದೆಲ್ಲೆಡೆಯಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿರುವುದು. ಜೀವನಶೈಲಿ ಬದಲಾವಣೆ ಮತ್ತು ಕೆಲವೊಂದು ಆಹಾರ ಕ್ರಮಗಳು ಬೊಜ್ಜು ದೇಹಕ್ಕೆ ಪ್ರಮುಖ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಬೊಜ್ಜು ದೇಹದ ಸಮಸ್ಯೆಯು ಇಂದಿನ ದಿನಗಳಲ್ಲಿ ಅತೀ ದೊಡ್ಡ ಮಟ್ಟದ ಆರೋಗ್ಯ ಸವಾಲಾಗಿದೆ. ಬೊಜ್ಜು ಎನ್ನುವುದು ತೀವ್ರವಾಗಿ ಹೆಚ್ಚಾಗುತ್ತಲೇ ಇದೆ ಮತ್ತು ಕೆಲವೊಂದು ಕಾಯಿಲೆಗಳಿಗೆ ಬೊಜ್ಜು ಪ್ರಮುಖ ಕಾರಣವಾಗಿದೆ. ದೀರ್ಘಕಾಲಿನ ಕಾಯಿಲೆ ಇರುವಂತಹ ಜನರಲ್ಲಿ ಬೊಜ್ಜು ದೇಹವು ಆರೋಗ್ಯ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವುದು.

ವಿಶ್ವದ ವಿವಿಧ ಭಾಗಗಳ್ಲಲಿ ಬೊಜ್ಜಿನ ಸಮಸ್ಯೆ ಬಗ್ಗೆ ಅಧ್ಯಯನವನ್ನು ಮಾಡಲಾಯಿತು. ಈ ಅಧ್ಯಯನದಿಂದ ಆಘಾತಕಾರಿ ಅಂಶವೊಂದು ಹೊರಬಿದ್ದಿದೆ. ಅದೇನೆಂದರೆ ಬೊಜ್ಜು ದೇಹದ ಸಮಸ್ಯೆಯು ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿದೆ. 1985ರಿಂದ 2017ರ ತನಕ ಸುಮಾರು 200 ದೇಶಗಳಿಂದ ಸಂಗ್ರಹಿಸಿಕೊಂಡಿರುವ ಅಂಕಿಅಂಶಗಳ ಪ್ರಕಾರ ನಗರ ಹಾಗು ಗ್ರಾಮೀಣ ಭಾಗದ ಸುಮಾರು 112 ಮಿಲಿಯನ್ ವಯಸ್ಕರ ತೂಕ ಹಾಗೂ ಎತ್ತರವನ್ನು ಪರಿಶೀಲಿಸಲಾಗಿದೆ.

Global Obesity Rising Faster in Rural Areas Says Study

ಈ ಅಧ್ಯಯನಕ್ಕೆ ಸುಮಾರು 1000ಕ್ಕೂ ಹೆಚ್ಚು ಅಧ್ಯಯನಗಳು ದೇಣಿಗೆ ನೀಡಿವೆ. 1985ರಿಂದ 2017ರ ತನಕ ನಡೆಸಿರುವಂತಹ ಅಧ್ಯಯನದ ಪ್ರಕಾರ ಬಿಎಂಐ ಪ್ರತೀ ಮಹಿಳೆಯಲ್ಲಿ 2.0ಕೆಜಿ/ಎಂ2 ಮತ್ತು ಪುರುಷರಲ್ಲಿ 2.2ಕೆಜಿ/ಎಂ2 ವಿಶ್ವದಾದ್ಯಂತ ಹೆಚ್ಚಾಗಿದೆ. ಹಿಂದಿಗೆ ಹೋಲಿಕೆ ಮಾಡಿದರೆ ಇಂದಿನ ದಿನಗಳಲ್ಲಿ ಜನರು ಸುಮಾರು 5-6 ಕೆಜಿ ಹೆಚ್ಚಿಗೆ ಭಾರ ಹೊಂದಿರುವರು.

Most Read: ಇದೆಲ್ಲಾ ದೇಹದಲ್ಲಿ ಬೊಜ್ಜು ಕಾಣಿಸಿಕೊಳ್ಳುವ ಲಕ್ಷಣಗಳು! ನಿರ್ಲಕ್ಷಿಸಬೇಡಿ..

ಈ ಅಧ್ಯಯನಗಳಿಂದ ಕಂಡುಕೊಂಡಿರುವಂತಹ ಪ್ರಮುಖ ವಿಚಾರವೆಂದರೆ ಗ್ರಾಮೀಣ ಭಾಗದಲ್ಲಿ ಬೊಜ್ಜಿನ ಸಮಸ್ಯೆಯು ಹೆಚ್ಚಾಗಿ ಕಾಡುತ್ತಲಿದೆ. ಶೇ.80ರಷ್ಟು ಮಂದಿ ಗ್ರಾಮೀಣ ಭಾಗದ ಜನರಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತಿದೆ. ನಗರದಲ್ಲಿ ವಾಸಿಸುತ್ತಿರುವಂತಹ ಜನರು ಜಗತ್ತಿನಾದ್ಯಂತ ಬೊಜ್ಜು ದೇಹದ ಸಮಸ್ಯೆಯನ್ನು ಹೆಚ್ಚಿಸುತ್ತಿದ್ದಾರೆ ಎನ್ನುವ ಮಾತನ್ನು ಈ ಅಧ್ಯಯನವು ಅಲ್ಲಗಳೆದಿದೆ. ಈ ಜಾಗತಿಕ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಬೇಕು ಎನ್ನುವ ಬಗ್ಗೆ ನಾವು ಚಿಂತೆ ಮಾಡಬೇಕು ಎಂದು ಹಿರಿಯ ಲೇಖಕ ಮಜಿದ್ ಇಜ್ಜಟಿ ತಿಳಿಸಿದ್ದಾರೆ.

Most Read: ಮಕ್ಕಳ ಸ್ಥೂಲಕಾಯವನ್ನು ಕಡಿಮೆ ಮಾಡಬೇಕೆ?

ಬೊಜ್ಜು ನಿವಾರಣೆ ಮಾಡಲು ಕೆಲವು ವಿಧಾನಗಳು

ತೂಕ ಕಳೆದುಕೊಳ್ಳಲು ನೀವು ಉಪವಾಸ ಮಾಡಬೇಕು. ಇದು ನಿಮಗೆ ನೆರವಾಗದು ಮತ್ತು ತೂಕ ಹೆಚ್ಚಳವಾಗುವುದು.
ಸಮತೋಲಿತ ಆಹಾರ ಸೇವನೆ ಮಾಡಿ ಮತ್ತು ಇದರಿಂದ ಸರಿಯಾದ ಪೋಷಕಾಂಶಗಳು ನಿಮಗೆ ಸಿಗುವುದು.
*ನಿಯಮಿತವಾಗಿ ವ್ಯಾಯಾಮ ಮಾಡಿಕೊಳ್ಳಿ.
*ಸಕ್ಕರೆ ಪ್ರಮಾಣ ಕಡಿಮೆ ಮಾಡಿ.
*ನಾರಿನಾಂಶವನ್ನು ಹೆಚ್ಚು ಸೇವಿಸಿ.
*ದೀರ್ಘಕಾಲ ಕುಳಿತುಕೊಳ್ಳುವುದನ್ನು ಕಡೆಗಣಿಸಿ.

English summary

Global Obesity Rising Faster in Rural Areas Says Study

Obesity is increasing globally. The lifestyle and the diet followed nowadays can be blamed for this condition. The World Health Organisation has marked it as one of the biggest health challenges. Obesity is increasing rapidly. Obesity alone is a common cause of several severe diseases. It can also worsen the health condition of a person with a chronic disease.
X
Desktop Bottom Promotion