For Quick Alerts
ALLOW NOTIFICATIONS  
For Daily Alerts

ಪುರುಷರು ಇಂತಹ ಆಹಾರಗಳಿಂದ ದೂರವಿರಬೇಕು! ಇಲ್ಲಾಂದ್ರೆ ವೀರ್ಯದ ಗುಣಮಟ್ಟ ಕಡಿಮೆಯಾಗಬಹುದು!

|

ಮದುವೆಯಾದ ದಂಪತಿಯ ಮುಂದೆ ಆಗಾಗ ಬರುವ ಪ್ರಶ್ನೆಯೆಂದರೆ ಮಗು ಯಾವಾಗ ಎಂದು? ಸಮಾಜದಲ್ಲಿ ಇದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಸಂಪ್ರದಾಯವೆನ್ನಬಹುದು. ಮದುವೆಯಾದ ಕೆಲವೇ ತಿಂಗಳಲ್ಲಿ ಮಹಿಳೆ ಗರ್ಭಿಣಿಯಾಗಬೇಕು. ಇಲ್ಲವೆಂದಾದರೆ ಆಕೆಯಲ್ಲಿ ಏನಾದರೂ ಸಮಸ್ಯೆಯಿದೆ ಎನ್ನುವ ಮಾತುಗಳು ಬರುತ್ತದೆ. ಆದರೆ ಸಮಸ್ಯೆ ಮಹಿಳೆಯಲ್ಲಿ ಮಾತ್ರವಲ್ಲ ಪುರುಷನಲ್ಲೂ ಇರುತ್ತದೆ. ಇದನ್ನು ಸಮಾಜ ಒಪ್ಪಿಕೊಳ್ಳುವುದಿಲ್ಲ. ದಂಪತಿಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ಗರ್ಭನಿರೋಧಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ನಡೆಸಿಯೂ ಅವರಿಗೆ ಮಕ್ಕಳಾಗದೆ ಇದ್ದರೆ ಆಗ ಬಂಜೆತನ ಕಾರಣವೆನ್ನಬಹುದು.

ಹೆಚ್ಚಿನ ಸಂದರ್ಭದಲ್ಲಿ ಬಂಜೆತನಕ್ಕೆ ಕಾರಣಗಳನ್ನು ಪತ್ತೆ ಮಾಡಲಾಗುವುದು. ಕಾರಣ ಹುಡುಕಿದ ಬಳಿಕ ಅದಕ್ಕೆ ಸರಿಯಾದ ಪರಿಹಾರ ಒದಗಿಸಲಾಗುವುದು. ಕೆಲವೊಮ್ಮೆ ಮಹಿಳೆಯರು ಗರ್ಭ ಧರಿಸಿದರೂ ಕೆಲವೇ ತಿಂಗಳಲ್ಲಿ ಅವರಿಗೆ ಗರ್ಭಪಾತವಾಗುತ್ತದೆ. ಆಧುನಿಕ ಯುಗದಲ್ಲಿ ಇದಕ್ಕೆ ಹಲವಾರು ರೀತಿಯ ಚಿಕಿತ್ಸೆಗಳು ಕೂಡ ಲಭ್ಯವಿದೆ. ಇದು ತುಂಬಾ ಪರಿಣಾಮಕಾರಿ ಕೂಡ. ಆದರೆ ಕೆಲವೊಂದು ಆಹಾರ ಪದ್ಧತಿಯಿಂದಲೂ ನಾವು ಬಂಜೆತನ ನಿವಾರಣೆ ಮಾಡಿಕೊಳ್ಳಬಹುದು. ಹೌದು ಕೆಲವೊಂದು ಆಹಾರ ಪದಾರ್ಥಳನ್ನು ಪುರುಷರು ತಮ್ಮ ಪತ್ನಿಯು ಗರ್ಭ ಧರಿಸಲು ಪ್ರಯತ್ನಿಸುತ್ತಲಿದ್ದರೆ ಆಗ ನೀವು ವೀರ್ಯ ಕೊಲ್ಲುವಂತಹ ಕೆಲವೊಂದು ಆಹಾರವನ್ನು ಕಡೆಗಣಿಸಬೇಕು. ಇದರಿಂದ ಗರ್ಭಧಾರಣೆಯು ಸುಲಭವಾಗುವುದು. ಹಾಗಾದರೆ ಇಂತಹ ಸಂದರ್ಭದಲ್ಲಿ ನೀವು ಕಡೆಗಣಿಸಬೇಕಾದ ಆಹಾರ ಪದಾರ್ಥಗಳು ಯಾವುದು ಎಂಬುದನ್ನು ಇಲ್ಲಿ ನೀಡಿದ್ದೇವೆ ಮುಂದೆ ಓದಿ.....

ಸಂಸ್ಕರಿತ ಮಾಂಸ

ಸಂಸ್ಕರಿತ ಮಾಂಸ

ಸಂಸ್ಕರಿತ ಮಾಂಸವಾಗಿರುವಂತಹ ಬಾಕೊನ್, ಹಾಟ್ ಡಾಗ್ ಮತ್ತು ಹಾಮ್ ನಂತಹ ಆಹಾರಗಳಲ್ಲಿ ಅತಿಯಾಗಿ ಸಂಸ್ಕರಣಗಳನ್ನು ಹಾಕಿರುವರು. ಇದರಿಂದ ನಿಮ್ಮ ವೀರ್ಯದ ಗಣತಿ ಮೇಲೆ ಪರಿಣಾಮ ಬೀರುವುದು. ಕೆಲವೊಂದು ಸಂಸ್ಕರಿತ ಮಾಂಸದಲ್ಲಿ ಅತಿಯಾದ ಹಾರ್ಮೋನುಗಳು ಇರುವುದು. ಇದರಿಂದ ನಿಮ್ಮ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟದ ಮೇಲೆ ಪರಿಣಾಮ ಉಂಟಾಗುವುದು.

2014ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಸಂಸ್ಕರಿತ ಮಾಂಸದ ಸೇವನೆಯೂ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಬಹುದು. ನಿಯಮಿತವಾಗಿ ಸಂಸ್ಕರಿಸಿದ ಮಾಂಸವನ್ನು ಹೆಚ್ಚಾಗಿ ಸೇವಿಸಿದ ಪುರುಷರಲ್ಲಿ ಮಿತ ಪ್ರಮಾಣದಲ್ಲಿ ಮಾಂಸ ಸೇವಿಸಿದ ಪುರುಷರಿಗಿಂತ ವೀರ್ಯಾಣುಗಳ ಸಂಖ್ಯೆ 23 ಶೇಖಡಾ ಕಡಿಮೆ ಯಾಗಿರುವುದು ಕಂಡುಬಂದಿದೆ. journal of Epidemiology ಎಂಬ ಇನ್ನೊಂದು ಅಧ್ಯಯನದಲ್ಲಿಯೂ ಕಡಿಮೆ ವೀರ್ಯಾಣುಗಳ ಸಂಖ್ಯೆಗೂ ಸಂಸ್ಕರಿತ ಮಾಂಸದ ಸೇವನೆಯೂ ನಿಕಟ ಸಂಬಂಧವಿರುವುದನ್ನು ಖಚಿತಪಡಿಸಲಾಗಿದೆ.

ಕ್ಯಾನ್ ನಲ್ಲಿರುವ ಆಹಾರ

ಕ್ಯಾನ್ ನಲ್ಲಿರುವ ಆಹಾರ

ಕ್ಯಾನ್ ನಲ್ಲಿ ಬಿಪಿಎ ಇದೆ. ಇದು ಒಂದು ರೀತಿಯಲ್ಲಿರುವ ರಾಸಾಯನಿಕ ವಾಗಿದ್ದು, ಈಸ್ಟ್ರೋಜನ್ ನಂತೆ ಇದು ಪರಿಣಾಮ ಬೀರುವುದು ಮತ್ತು ಇದು ವೀರ್ಯದ ಗಣತಿ ಮತ್ತು ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಅಂಗಾಂಗ ಮಾಂಸ

ಅಂಗಾಂಗ ಮಾಂಸ

ಲಿವರ್, ಕರುಳು ಇತ್ಯಾದಿ ಮಾಂಸವು ತುಂಬಾ ರುಚಿಕರ ವಾಗಿರಬಹುದು. ಆದರೆ ಇದು ನಿಮ್ಮ ವೀರ್ಯಕ್ಕೆ ಒಳ್ಳೆಯದಲ್ಲವೆಂದು ತಿಳಿಯಬೇಕು. ಯಾಕೆಂದರೆ ಇದು ಕ್ಯಾಡ್ಮಿಯಂ ಅಧಿಕವಾಗಿದೆ. ಇದು ವೀರ್ಯದ ಗಣತಿ ಮೇಲೆ ಪರಿಣಾಮ ಬೀರುವಂತಹ ಖನಿಜವಾಗಿದೆ.

Most Read:ಸೆಕ್ಸ್‌ಗೆ ಮುಂದಾಗುವ ಮುನ್ನ ಇರಲಿ ಜಾಗೃತಿ ; ಮಗಳಿಗೆ ತಾಯಿಯ ಭಾವುಕ ಪತ್ರ

ಆಲ್ಕೋಹಾಲ್

ಆಲ್ಕೋಹಾಲ್

ಮದ್ಯಪಾನದಿಂದ ಹೊರಬರಲು ಈಗ ಇನ್ನೊಂದು ಕಾರಣವನ್ನು ಒದಗಿಸಬಹುದು. ಮದ್ಯಪಾನ ಹೆಚ್ಚಾದಷ್ಟೂ ಇದು ವೀರ್ಯಾಣುಗಳ ಸಂಖ್ಯೆಯನ್ನು ಬಾಧಿಸುತ್ತದೆ ಎಂದು ಈಗ ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಇದಕ್ಕಾಗಿ ಮದ್ಯಪಾನಿಗಳು ಕಡಿಮೆ ಕುಡಿಯುವುದರಿಂದ ತೊಂದರೆಯಿಲ್ಲ ಎಂಬ ಸಬೂಬು ಒಡ್ಡಬಹುದು. ಆದರೆ ವಾಸ್ತವವಾಗಿ ಮದ್ಯದ ಪ್ರಮಾಣ ಎಷ್ಟೇ ಕಡಿಮೆ ಇದ್ದರೂ ಸರಿ, ಇದು ವೀರ್ಯಾಣುಗಳ ಸಂಖ್ಯೆಯ ಮೇಲೆ ನೇರವಾದ ಪ್ರಭಾವ ಬೀರುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಸಿಹಿ ಮತ್ತು ತಂಪು ಪಾನೀಯಗಳು

ಸಿಹಿ ಮತ್ತು ತಂಪು ಪಾನೀಯಗಳು

ಸಾಮಾನ್ಯವಾಗಿ ಬುರುಗನ್ನುಕ್ಕಿಸುವ ಪಾನೀಯಗಳಿಗೆ ಕೋಲಾ ಕ೦ಪನಿಗಳು ಕೆಫೀನ್ ಅನ್ನು ಸೇರಿಸುತ್ತವೆ. ಹೀಗಾದಾಗ, ಜನರು ಈ ಲಘುಪಾನೀಯಗಳ ದಾಸರಾಗುವ೦ತಾಗುತ್ತದೆ. ಒಮ್ಮೆ ಈ ಲಘುಪಾನೀಯಗಳ ಕುಡಿತದ ಚಟಕ್ಕೆ ಬಿದ್ದಲ್ಲಿ, ಇದೊ೦ದು ಬಿಡಲಾಗದ ಅಭ್ಯಾಸವೇ ಆಗಿಬಿಡುತ್ತದೆ. ಇನ್ನು ಇಂತಹ ತಂಪು ಪಾನೀಯಗಳು ಶರೀರದಿ೦ದ ಕ್ಯಾಲ್ಸಿಯ೦ ಹೊರಹೋಗುವ೦ತೆ ಮಾಡುತ್ತವೆ. ಈ ಕ್ಯಾಲ್ಸಿಯ೦ ಮೂತ್ರಪಿ೦ಡಗಳಲ್ಲಿ ಸ೦ಚಯ ಗೊ೦ಡು ಮೂತ್ರಪಿ೦ಡಗಳಲ್ಲಿ ಹರಳುಗಳು೦ಟಾಗುವ೦ತೆ ಆಗುತ್ತದೆ. ಇ೦ತಹ ಪರಿಸ್ಥಿತಿಯಲ್ಲಿ ಮೂತ್ರಪಿ೦ಡಗಳು ತೀವ್ರವಾಗಿ ನೋಯತೊಡಗುತ್ತವೆ. ಅಷ್ಟೇ ಏಕೆ ವೀರ್ಯಣುಗಳ ಸಮಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಅಲ್ಲದೆ ಅತಿಯಾಗಿ ಸಕ್ಕರೆ ಸೇವನೆ ಮಾಡುವುದರಿಂದ ತೂಕ ಹೆಚ್ಚಳ ಆಗುವುದು ಮತ್ತು ಹೃದಯದ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಇದರಿಂದ ವೀರ್ಯದ ಗಣತಿ ಕೂಡ ಕಡಿಮೆ ಆಗುವುದು ಮತ್ತು ವೀರ್ಯದ ಗುಣಮಟ್ಟ ಕೂಡ. ಇದರಿಂದಾಗಿ ಸಕ್ಕರೆ ಸೇವನೆಯನ್ನು ನೀವು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬೇಕು.

ಸೋಯಾಬೀನ್ ಉತ್ಪನ್ನಗಳು

ಸೋಯಾಬೀನ್ ಉತ್ಪನ್ನಗಳು

ಸೋಯಾ ತುಂಬಾ ಆರೋಗ್ಯಕರ ಮತ್ತು ರುಚಿಕರ. ಆದರೆ ನಿಮ್ಮ ಪತ್ನಿಯು ಗರ್ಭಧರಿಸಬೇಕೆಂದು ಬಯಸಿದ್ದರೆ ಆಗ ನೀವು ಸೋಯಾ ಉತ್ಪನ್ನಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಅಧಿಕ ಸೋಯಾ ಸಾಸ್ ಮತ್ತು ಸೋಯಾ ಸಂಬಂಧಿತ ಆಹಾರಗಳು ದೇಹದಲ್ಲಿ ಈಸ್ಟ್ರೋಜನ್ ಬೀರುವಂತಹ ಪ್ರಭಾವವನ್ನು ಅನುಕರಣೆ ಮಾಡುವುದು. ಇದರಿಂದಾಗಿ ದೇಹದಲ್ಲಿ ವೀರ್ಯದ ಗಣತಿಯು ಕಡಿಮೆ ಆಗುವುದು.

Most Read:ಬೆಡ್‌ರೂಮ್‌ನ ಹಾಸಿಗೆಯಲ್ಲಿ ಬಲಿಷ್ಠರಾಗಬೇಕಾದರೆ ಈ ಕ್ರಮಗಳನ್ನು ಅನುಸರಿಸಿ!

ಕೊಬ್ಬಿರುವ ಹಾಲು ಮತ್ತು ಹಾಲಿನ ಉತ್ಪನ್ನಗಳು

ಕೊಬ್ಬಿರುವ ಹಾಲು ಮತ್ತು ಹಾಲಿನ ಉತ್ಪನ್ನಗಳು

ಹಸುಗಳು ಆಹಾರವನ್ನು ತಿನ್ನುವಾಗ ಅದರೊಂದಿಗೆ ಕೆಲವೊಂದು ಸಲ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಕೂಡ ಸೇವನೆ ಮಾಡಬಹುದು. ಇದರಿಂದಾಗಿ ಅದು ಹಸುವಿನ ದೇಹದಲ್ಲಿ ಕೊಬ್ಬು ಉಂಟು ಮಾಡಬಹುದು ಮತ್ತು ಇದು ಹಾಲಿನಲ್ಲೂ ಸೇರಿಕೊಳ್ಳ ಬಹುದು. ಈ ರಾಸಾಯನಿಕಗಳು ವೀರ್ಯದಲ್ಲಿ ಸಮಸ್ಯೆ ಉಂಟು ಮಾಡುವುದು. ಇದು ಪ್ರಮುಖವಾಗಿ ವೀರ್ಯದ ಗಣತಿ ಹಾಗೂ ಗುಣಮಟ್ಟ ತಗ್ಗಿಸುವುದು. ಇದರಿಂದ ನೀವು ಮಗುವನ್ನು ಪಡೆಯಬೇಕೆಂದು ಬಯಸುತ್ತಲಿದ್ದರೆ ಆಗ ನೀವು ಇಂತಹ ಹಾಲು ಮತ್ತು ಅದರ ಉತ್ಪನ್ನದ ಸೇವನೆಯನ್ನು ಕಡಿಮೆ ಮಾಡಿಕೊಳ್ಳಿ.

ಕೀಟನಾಶಕ ಮತ್ತು ಸಂಸ್ಕರಣ ಬಳಸಿರುವಂತಹ ಹಣ್ಣು ಮತ್ತು ತರಕಾರಿಗಳು

ಕೀಟನಾಶಕ ಮತ್ತು ಸಂಸ್ಕರಣ ಬಳಸಿರುವಂತಹ ಹಣ್ಣು ಮತ್ತು ತರಕಾರಿಗಳು

ತರಕಾರಿ ಹಾಗೂ ಹಣ್ಣುಗಳನ್ನು ಕೀಟಗಳಿಂದ ರಕ್ಷಿಸಲು ಮತ್ತು ತಾಜಾವಾಗಿಡಲು ಕೆಲವೊಂದು ರಾಸಾಯನಿಕ, ಕೀಟನಾಶಗಳನ್ನು ಬಳಸಿಕೊಳ್ಳುವರು. ಆದರೆ ಇದು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದು. ಕೆಲವೊಂದು ಕೀಟನಾಶಕಗಳು ಪುರುಷರಲ್ಲಿ ಫಲವತ್ತತೆ ಸಮಸ್ಯೆ ಉಂಟು ಮಾಡುವುದು. ಇದರಿಂದ ನೀವು ಆದಷ್ಟು ಮಟ್ಟಿಗೆ ಸಾವಯವ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವನೆ ಮಾಡಿದರೆ ಅದು ತುಂಬಾ ಒಳ್ಳೆಯದು. ರಾಸಾಯನಿಕ ಬಳಕೆ ಮಾಡದೆ ಇರುವಂತಹ ಹಣ್ಣು ಹಾಗೂ ತರಕಾರಿಗಳು ಮಾರುಕಟ್ಟೆಯಲ್ಲಿ ಸಿಕ್ಕಿದರೆ ಅದನ್ನು ನೀವು ಖರೀದಿ ಮಾಡಿ ಸೇವಿಸಿ.

English summary

Foods that can kill sperm in a man

The incidence of infertility is increasing at an alarming rate, especially in men. Now genetics can't be blamed for everything. Unhealthy habits like drinking and smoking are to blame but little do people know that food can also be blamed here. Yes, gentlemen, if you thought that your diet has nothing to do with your fertility, you are mistaken. Your diet can create havoc in your sex life and your dream of becoming a dad someday.
X
Desktop Bottom Promotion